ಪ್ರಚಲಿತ

ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಪಾಕಿಸ್ತಾನಿ ಉಗ್ರನ ಹತ್ಯೆ

ಭಾರತಕ್ಕೆ ಬೇಕಾಗಿದ್ದ ‌ಮೋಸ್ಟ್ ವಾಂಟೆಡ್ ಉಗ್ರ ಶಾಹಿದ್ ಲತೀಫ್‌ನನ್ನು ಅಪರಿಚಿತರು ಪಾಕಿಸ್ತಾನದಲ್ಲಿ ಹತ್ಯೆ ಮಾಡಿದ್ದಾರೆ.

ಈತ ಪಠಾನ್‌ಕೋಟ್‌ ಮೇಲೆ 2016 ರಲ್ಲಿ ನಡೆದ ದಾಳಿಯ ಮಾಸ್ಟರ್ ಮೈಂಡ್ ಸಂಚುಕೋರನಾಗಿದ್ದ. ಹಾಗೆಯೇ ಈ ದಾಳಿಯನ್ನು ಸಂಯೋಜನೆ ಮಾಡಿದವರಲ್ಲಿ ಪ್ರಮುಖನಾಗಿದ್ದ. ಈತನನ್ನು ನಿನ್ನೆ ಪಾಕಿಸ್ತಾನದಲ್ಲಿ ಅಪರಿಚಿತರು ‌ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ‌ಮೂಲಗಳು ತಿಳಿಸಿವೆ.

ಅಪರಿಚಿತರು ಭಾರತದ ಮೋಸ್ಟ್‌ ವಾಂಟೆಡ್ ಉಗ್ರರ ಪಟ್ಟಿಯಲ್ಲಿದ್ದ ಭಯೋತ್ಪಾದಕರ ಹತ್ಯೆಯನ್ನು ಮುಂದುವರಿಸಿದ್ದಾರೆ. ಕೆಲ ಸಮಯದ ಹಿಂದೆ ಭಾರತಕ್ಕೆ ಬೇಕಾಗಿದ್ದ, ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿದ್ದ, ಖಲೀಸ್ತಾನಿ ಉಗ್ರರ ಪ್ರಮುಖ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ಸಹ ಅಪರಿಚಿತರು ಹತ್ಯೆ ಮಾಡಿದ್ದರು. ಇದೀಗ ಅಪರಿಚಿತರಿಂದ ಉಗ್ರವಾದಿಗಳ ಬೇಟೆ ಮುಂದುವರಿದಿದ್ದು, ಪಾಕಿಸ್ತಾನದಲ್ಲಿಯೂ ಭಾರತಕ್ಕೆ ಬೇಕಾಗಿದ್ದ ಉಗ್ರನೋರ್ವನ ಹತ್ಯೆ ನಡೆದಿದೆ.

ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ನಡೆದ ದಾಳಿಯಲ್ಲಿ ಈತನನ್ನು ವಧಿಸಲಾಗಿದೆ. ನಿಷೇಧಿತ ಉಗ್ರ ಸಂಘಟನೆ ಜೈಷ್ ಎ ಮೊಹಮ್ಮದ್ ‌ಗೆ ಈತ ಸೇರಿದವನಾಗಿದ್ದು, ಈತನಿಗೆ 41 ವರ್ಷ ವಯಸ್ಸಾಗಿತ್ತು. ಈತ ಪಠಾನ್‌ಕೋಟ್ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದು, 2016 ಜನವರಿ 2 ರಂದು ಈ ದಾಳಿ ನಡೆಸಿದ್ದ. ಆತ ಈ ದಾಳಿಗಾಗಿ ನಾಲ್ವರು ಉಗ್ರರನ್ನು ಸಿಯಾಚಿನ್‌ಗೆ ಕಳುಹಿಸಿದ್ದ. ಪಠಾನ್ ಕೋಟ್‌ನ ಸೇನಾ ನೆಲೆಯನ್ನು ಗುರಿಯಾಗಿಸಿ ಈ ಉಗ್ರ ದಾಳಿ ನಡೆಸಲಾಗಿತ್ತು.

1994 ರಲ್ಲಿ ಭಯೋತ್ಪಾದನೆ‌ಗೆ ಸಂಬಂಧಿಸಿದ ಹಾಗೆ ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವ) ಕಾಯ್ದೆಯ ಅಡಿಯಲ್ಲಿ ಈತನನ್ನು ಭಾರತ ಬಂಧಿಸಿ, ವಿಚಾರಣೆ ಸಹ ನಡೆಸಿತ್ತು. ಶಿಕ್ಷೆಯ ಬಳಿಕ ಈತನನ್ನು 2010 ರಲ್ಲಿ ವಾಘಾ ಗಡಿಯ ಮೂಲಕ ಗಡೀಪಾರು ಮಾಡಲಾಗಿತ್ತು. 1999 ರ ಇಂಡಿಯನ್ ಏರ್‌ಲೈನ್ಸ್ ವಿಮಾನ ಅಪಹರಣದಲ್ಲಿಯೂ ಈತ‌ ಪ್ರಮುಖ ಪಾತ್ರ ವಹಿಸಿದ್ದ. ಭಾರತದಿಂದ ಬಿಡುಗಡೆಯಾದ ನಂತರ ಈ ಉಗ್ರ ಪಾಕಿಸ್ತಾನದ ಜಿಹಾದಿ ಫ್ಯಾಕ್ಟರಿಗೆ ಹಿಂದಿರುಗಿದ್ದ ಎಂಬುದಾಗಿಯೂ ಮಾಹಿತಿ ಇತ್ತು. ಈತನನ್ನು ಯುಪಿಎ ಸರ್ಕಾರ ಸೌಹಾರ್ದ ಸೂಚಕದಲ್ಲಿ ಬಿಡುಗಡೆ ಮಾಡಿತ್ತು. ಆ ಸಂದರ್ಭದಲ್ಲಿ ಬಿಡುಗಡೆಯಾದ 25 ಭಯೋತ್ಪಾದಕರ ಪೈಕಿ ಶಾಹಿದ್ ಲತೀಫ್ ಕೂಡಾ ಒಬ್ಬನಾಗಿದ್ದ.

ಒಟ್ಟಿನಲ್ಲಿ ಭಾರತದ ವಿರುದ್ಧ ಸದಾ ಕಾಲ ಕತ್ತಿ ಮಸೆಯುವುದು, ಷಡ್ಯಂತ್ರ ರೂಪಿಸುವುದು, ಭಾರತದ ಶಾಂತಿ ಕದಡಲು ಸಂಚು ರೂಪಿಸುವ, ಬಹಳ ಮುಖ್ಯವಾಗಿ ಭಾರತಕ್ಕೆ ಕಂಟಕ ಪ್ರಾಯರಾದ ಉಗ್ರರ‌ ಹತ್ಯೆಯಾಗುತ್ತಿದ್ದು, ಈ ಹತ್ಯೆ ನಡೆಸುತ್ತಿರುವವರು ‌ಯಾರು ಎನ್ನುವುದೇ ಇನ್ನೂ ನಿಗೂಢ.

Tags

Related Articles

Close