ಪ್ರಚಲಿತ

ರಾಹುಲ್ ಗಾಂಧಿ ಎದುರಲ್ಲೇ ಪರಮೇಶ್ವರ್ ಗೆ ಅವಮಾನ! ಪರಮೇಶ್ವರ್ ಬೆಂಬಲಿಗರು ಮಾಡಿದ್ದೇನು ಗೊತ್ತಾ?!

ಈಗಾಗಲೇ ಹೋದಲ್ಲೆಲ್ಲಾ ಅನೇಕ ಅವಾಂತರ ಸೃಷ್ಟಿಸಿ ಪಕ್ಷದ ವರ್ಚಸ್ಸಿಗೆ ಘಾಸಿ ಮಾಡಿರುವ ರಾಹುಲ್ ಗಾಂಧಿಯ ಕರಾವಳಿ ಭೇಟಿಗೂ ಸ್ವತಃ ಪಕ್ಷದ ನಾಯಕರಿಂದಲೇ ವಿರೋಧ ವ್ಯಕ್ತವಾಗಿತ್ತು. ರಾಹುಲ್ ಆಡಿದ ಮಾತುಗಳನ್ನೇ ವಿರೋಧ ಪಕ್ಷಗಳು ಬಳಸಿಕೊಂಡು ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡುತ್ತಾರೆ ಎಂಬ ಲೆಕ್ಕಾಚಾರ ಹಾಕಿರುವ ಕಾಂಗ್ರೆಸ್ ನಾಯಕರು , ಪಕ್ಷದ ಅಧ್ಯಕ್ಷನ ಕರಾವಳಿ ಭೇಟಿಗೆ ಅಸಮಧಾನ ವ್ಯಕ್ತಪಡಿಸಿದ್ದರು. ಪಕ್ಷದ ಅಧ್ಯಕ್ಷನ ಅವಾಂತಾರಕ್ಕೆ ಬೆಚ್ಚಿ ಬಿದ್ದಿರುವ ಕಾಂಗ್ರೆಸ್ ಇದೀಗ ಕರ್ನಾಟಕದಲ್ಲಿ ಹೊಸ ನಾಟಕ ಆರಂಭಿಸಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಮುಂದಿಟ್ಟುಕೊಂಟು ಪ್ರಚಾರಕ್ಕಾಗಿ ಆಗಮಿಸಿರುವ ರಾಹುಲ್ ಕರಾವಳಿಯಲ್ಲಿ ಜನಸಾಮಾನ್ಯರಂತೆ ವರ್ತಿಸಲು ಪ್ರಯತ್ನಿಸುತ್ತಿದ್ದಾರೆ. ಹುಟ್ಟು ಗುಣ ಸುಟ್ಟರೂ ಹೋಗದು ಎಂಬ ಮಾತು ಸದ್ಯ ರಾಹುಲ್ ಗಾಂಧಿಗೆ ಹೇಳಿಮಾಡಿಸಿದಂತಿದೆ. ಯಾಕೆಂದರೆ ರಾಜಕೀಯ ಲಾಭ ಗಳಿಸುವ ಹುನ್ನಾರ ಹೂಡಿರುವ ರಾಹುಲ್ ಸದಯ ಕಣ್ಣಿಟ್ಟಿರುವುದು ಕರಾವಳಿ ಭಾಗದ ಮತದಾರರ ಮೇಲೆ.!

ತಮ್ಮ ಕಾರ್ಯಕ್ರಮಗಳಲ್ಲಿ ಹಿರಿಯ ನಾಯಕರಿಗೆ ಯಾವ ರೀತಿಯಲ್ಲಿ ಅವಮಾನ ಮಾಡಲಾಗುತ್ತದೆ ಎಂಬುದು ಕಾಂಗ್ರೆಸ್ ಸಮಾವೇಶಗಳಲ್ಲಿ ಈಗಾಗಲೇ ಬಯಲಾಗಿದೆ‌ . ಇದೇ ಘಟನೆ ಕರಾವಳಿಯಲ್ಲಿ ನಡೆದ ಕಾಂಗ್ರೆಸ್ ನ ಜನಾಶಿರ್ವಾದ ಯಾತ್ರೆಯಲ್ಲೂ ನಡೆಯಿತು.

ಸಿದ್ದರಾಮಯ್ಯನವರಿಂದ ಹಿರಿಯ ನಾಯಕನಿಗೆ ಅವಮಾನ..!

ಅಧಿಕಾರದ ಮದದಿಂದ ಮೆರೆಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಯಾವುದೇ ಹಿರಿಯರಿಗೂ ಗೌರವ ನೀಡುತ್ತಿಲ್ಲ ಎಂಬುದು ಈಗಾಗಲೇ ರಾಜ್ಯದ ಜನತೆಗೆ ತಿಳಿದಿರುವ ವಿಚಾರ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳೂರು ಪ್ರವಾಸದಲ್ಲೂ ಇದೇ ಮರುಕಳಿಸಿದೆ. ಅದೇನೆಂದರೆ ಕಾಂಗ್ರೆಸ್ ನ ಹಿರಿಯ ಮುಖಂಡ , ಮಾಜಿ ಕೇಂದ್ರ ಸಚಿವರಾಗಿದ್ದ ಜನಾರ್ಧನ ಪೂಜಾರಿ ಯವರಿಗೆ ಈ ಹಿಂದಿನಿಂದಲೂ ಒಂದಲ್ಲಾ ಒಂದು ಅವಮಾನ ಮಾಡುತ್ತಾ ಬಂದಿರುವ ಸಿದ್ದರಾಮಯ್ಯ, ತಾನೊಬ್ಬ ಮುಖ್ಯಮಂತ್ರಿ ಮುಖ್ಯಮಂತ್ರಿ ಎಂಬುವುದನ್ನು ಮರೆತು , ಸೌಜನ್ಯಕ್ಕೂ ಪೂಜಾರಿ ಜೊತೆ ಮಾತನಾಡಲಿಲ್ಲ. ಜನಾರ್ಧನ ಪೂಜಾರಿ ನೇರವಾಗಿ ಮಾತನಾಡುವ ವ್ಯಕ್ತಿ. ಅದು ತನ್ನದೇ ಪಕ್ಷದ ನಾಯಕನಾಗಿದ್ದರು ತಪ್ಪು ನಡೆದಾಗ ಅದರ ವಿರುದ್ಧ ಧ್ವನಿ ಎತ್ತುವ ಪೂಜಾರಿಯನ್ನು ಕಂಡರೆ ಕಾಂಗ್ರೆಸ್ ನಲ್ಲೇ ಅಸಮಧಾನ ಉಂಟಾಗಿದೆ. ಸಿದ್ದರಾಮಯ್ಯನವರು ಜನಾರ್ಧನ ಪೂಜಾರಿ ಯನ್ನು ದೂರ ಇಟ್ಟಿದ್ದು , ಮಂಗಳೂರಿನ ಕುದ್ರೋಳಿ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆಯೂ ಮಾತನಾಡಲಿಲ್ಲ. ಇದರಿಂದ ಬೇಸರಗೊಂಡ ಜನಾರ್ಧನ ಪೂಜಾರಿ ರಾಹುಲ್ ಗಾಂಧಿಯ ಎದುರಲ್ಲೇ ಕಣ್ಣೀರಿಟ್ಟಿದ್ದಾರೆ. ಪಕ್ಷದ ಹಿರಿಯ ನಾಯಕರಿಗೂ ಗೌರವ ನೀಡದ ಕಾಂಗ್ರೆಸ್ ಜನಸಾಮಾನ್ಯರನ್ನು ಇನ್ಯಾವ ರೀತಿಯಲ್ಲಿ ನೋಡಿಕೊಳ್ಳಬಹುದು ಎಂಬೂದೇ ಪ್ರಶ್ನೆ..!

ಪರಮೇಶ್ವರ್ ಗೆ ನೋ ಎಂಟ್ರಿ..!

ಮಂಗಳೂರು ಮತ್ತು ಉಡುಪಿಯಲ್ಲಿ ಕಾಂಗ್ರೆಸ್ ನ ಜನಾಶಿರ್ವಾದ ಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಹುಲ್ ನಿನ್ನೆ ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ತಂಗಿದ್ದರು. ಇಂದು ಸ್ಥಳೀಯ ಕಾಂಗ್ರೆಸ್ ಮುಖಂಡರ ಜೊತೆ ವಿಶೇಷ ಸಭೆ ಏರ್ಪಡಿಸಿದ್ದ ರಾಹುಲ್, ರಾಜ್ಯ ಕಾಂಗ್ರೆಸ್ ನಾಯಕರಿಗೂ ಸಭೆಯಲ್ಲಿ ಭಾಗವಹಿಸಲು ಸೂಚನೆ ನೀಡಲಾಗಿತ್ತು. ಈ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಸರ್ಕ್ಯೂಟ್ ಹೌಸ್ ಗೆ ಆಗಮಿಸಿದ ವೇಳೆಯಲ್ಲಿ ಅಲ್ಲೇ ಇದ್ದ ಎಸ್ ಪಿ ಜಿ ಸಿಬ್ಬಂದಿಗಳು ಪರಮೇಶ್ವರ್ ಅವರ ಮತ್ತು ಅವರ ಬೆಂಬಲಿಗರ ಕಾರನ್ನು ತಡೆ ಒಳ ಹೋಗದಂತೆ ತಡೆದಿದ್ದಾರೆ.

ಇದರಿಂದ ಕಂಗಾಲಾದ ಪರಮೇಶ್ವರ್ ತಾನು ಕೆಪಿಸಿಸಿ ಅಧ್ಯಕ್ಷ ಎಂದು ಹೇಳಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಎಸ್ ಪಿ ಜಿ ಸಿಬ್ಬಂದಿಗಳಿಗೆ
ಪರಮೇಶ್ವರ್ ಯಾರು ಎಂಬುದು ತಿಳಿದಿಲ್ಲ , ಆದರೆ ಪಕ್ಕದಲ್ಲೇ ಇದ್ದ ಕಾಂಗ್ರೆಸ್ ಮುಖಂಡರೂ ಇದನ್ನು ನೋಡಿಕೊಂಡು ಸುಮ್ಮನೆ ಒಳ ಹೋಗಿದ್ದಾರೆ ಎಂದು ತಿಳಿದುಬಂದಿದೆ.

ಸಿಬ್ಬಂದಿಗಳ ವಿರುದ್ಧ ಪರಮೇಶ್ವರ್ ಬೆಂಬಲಿಗರ ದಬ್ಬಾಳಿಕೆ..!

ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರ ಕಾರು ಮತ್ತು ಬೆಂಬಲಿಗರ ಕಾರನ್ನು ತಡೆಹಿಡಿದ ಎಸ್ ಪಿ ಜಿ ಸಿಬ್ಬಂದಿಗಳ ಮೇಲೆ ಪರಮೇಶ್ವರ್ ಅವರ ಬೆಂಬಲಿಗರು ದಬ್ಬಾಳಿಕೆ ನಡೆಸಿದ್ದಾರೆ. ‘ಪರಮೇಶ್ವರ್ ಯಾರು.? ಅವರ ಹುದ್ದೆ ಏನು? ಎಂದು ತಿಳಿದಿದೆಯೇ ಎಂದು ಗದರಿಸಿದ್ದಾರೆ. ಪರಮೇಶ್ವರ್ ಪಕ್ಕದಲ್ಲೇ ನಿಂತಿದ್ದರೂ ಕೂಡ ಈ ಬಗ್ಗೆ ಏನೂ ಮಾತನಾಡಲಿಲ್ಲ. ತಮ್ಮ ಬೆಂಬಲಿಗರು ಕರ್ತವ್ಯದಲ್ಲಿ ಇದ್ದ ಸಿಬ್ಬಂದಿಗಳ ಮೇಲೆ ಈ ರೀತಿ ಆಕ್ರೋಶ ವ್ಯಕ್ತಪಡಿಸುತ್ತುದ್ದರೂ ಏನೂ ಮಾತನಾಡದ ಪರಮೇಶ್ವರ್ ತಮ್ಮ ಪಾಡಿಗೆ ಕಾರಲ್ಲೇ ಕೂತಿದ್ದರು.

ಕಾಂಗ್ರೆಸ್ ನ ಪ್ರವೃತ್ತಿಯೇ ಹೀಗೆ ಎಂದು ಹೇಳಿದರೆ ತಪ್ಪಾಗದು. ಯಾಕೆಂದರೆ ತಮ್ಮ ಪಕ್ಷದ ಹಿರಿಯರಿಗೇ ಗೌರವ ನೀಡದ ಕಾಂಗ್ರೆಸ್ ದೇಶದ ಸಾಮಾನ್ಯ ಜನರನ್ನು ಯಾವ ದೃಷ್ಟಿಯಲ್ಲಿ ನೋಡಬಹುದು ಎಂಬುದು ಗಂಭೀರವಾಗಿ ಗಮನಿಸಬೇಕಾದ ವಿಚಾರ.!

–ಅರ್ಜುನ್

Tags

Related Articles

Close