ಪ್ರಚಲಿತ

ಬಯಲಾಯ್ತು ಪೋಸ್ಟ್ ಕಾರ್ಡ್ ಸಮೀಕ್ಷೆ..! ಯಾವ ಸರ್ಕಾರ ಅಧಿಕಾರ ಹಿಡಿಯುತ್ತೆ, ಯಾರು ಮನೆಗೆ ಹೋಗುತ್ತಾರೆ..?

ದೇಶಾದ್ಯಂತ ಭಾರೀ ಚರ್ಚೆ ಗೆ ಗ್ರಾಸವಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಮುಗಿದಿದೆ. ಎರಡು ರಾಷ್ಟ್ರೀಯ ಪಕ್ಷಗಳು ಹಾಗೂ ಒಂದು ಪ್ರಾದೇಶಿಕ ಪಕ್ಷದ ಜಿದ್ದಾಜಿದ್ದಿನ ಹಣಾಹಣಿ ಮುಗಿದಿದೆ. ಈಗ ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ. ಈ ಮಧ್ಯೆ ಕೆಲ ಸಂಸ್ಥೆಗಳು ಮತದಾನೋತ್ತರ ಸಮೀಕ್ಷೆ ನಡೆಸಿದ್ದು ಇದೀಗ ಬಹುತೇಕ ಎಲ್ಲಾ ಸಮೀಕ್ಷೆಯಲ್ಲೂ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದೇ ಹೇಳುತ್ತಿದೆ.

ಪೋಸ್ಟ್ ಕಾರ್ಡ್ ಸಮೀಕ್ಷೆ ಬಹಿರಂಗ..!

ಫಲಿತಾಂಶದ ಮುಂದಿನ ದಿನ ಸಮೀಕ್ಷೆ ಬಹಿರಂಗ ಪಡಿಸುವ ಪೋಸ್ಟ್ ಕಾರ್ಡ್ ಇದೀಗ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲೂ ಪೋಸ್ಟ್ ಕಾರ್ಡ್ ಸಮೀಕ್ಷೆ ಬಹಿರಂಗ ಪಡಿಸಿದೆ. ಕಳೆದ ಬಾರಿಯ ಗುಜರಾತ್ ಚುನಾವಣಾ ಸಮೀಕ್ಷೆ ಎಲ್ಲಾ ಸಂಸ್ಥೆಯ ಚುನಾವಣಾ ಸಮೀಕ್ಷೆಗಿಂತ ನಿಖರವಾದ ಫಲಿತಾಂಶ ನೀಡಿತ್ತು. ಬಹುತೇಕ ಸಮೀಕ್ಷೆಗಳಲ್ಲಿ ಭಾರತೀಯ ಜನತಾ ಪಕ್ಷ ೧೨೦ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಮೀರುವ ಫಲಿತಾಂಶ ಇತ್ತು. ಆದರೆ ಪೋಸ್ಟ್ ಕಾರ್ಡ್ ಸುದ್ದಿ ಸಂಸ್ಥೆ ಮಾತ್ರ ೯೫ ರಿಂದ ೧೦೦ ಸ್ಥಾನಗಳನ್ನು ಪಡೆಯುತ್ತದೆ ಎಂಬ ಸಮೀಕ್ಷೆ ಬಿತ್ತರಿಸಿತ್ತು. ಅಚ್ಚರಿಯೆಂದರೆ ಅಂದು ಗುಜರಾತ್ ಭಾರತೀಯ ಜನತಾ ಪಕ್ಷ ೯೯ ಸ್ಥಾನಗಳನ್ನು ಗೆದ್ದು ಉಳಿದೆಲ್ಲಾ ಸಮೀಕ್ಷೆಗಳನ್ನು ಬುಡಮೇಲು ಮಾಡಿತ್ತು.

Image result for yeddyurappa

ಇದೀಗ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ ಎಂಬ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಗಳ ಪ್ರಕಾರ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ 104 ರಿಂದ 109 ಸ್ಥಾನಗಳನ್ನು ಗಳಿಸುತ್ತದೆ ಎಂದಿದೆ. ಇದರಲ್ಲಿ ೫ ಸ್ಥಾನಗಳು ಪ್ಲಸ್ ಅಥವಾ ಮೈನಸ್ ಕೂಡಾ ಆಗಬಹುದು.

ಐದು ಸ್ಥಾನಗಳು ಪ್ಲಸ್ ಬಂದಲ್ಲಿ ಭಾರತೀಯ ಜನತಾ ಪಕ್ಷ ಮ್ಯಾಜಿಕ್ ನಂಬರ್‌ ೧೧೩ನ್ನು ತಲುಪಲಿದೆ. ಮೈನಸ್ ಬಂದಲ್ಲಿ ೯೮ಕ್ಕೆ ಕುಸಿಯಲಿದೆ ಎಂದು ಸಮೀಕ್ಷೆ ನುಡಿದಿದೆ. ಅಂತೂ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ.

Party Seats
BJP 104-109
Congress 80-85
JD (S) 32-37
Others 02-05
Total 222

ಇನ್ನುಳಿದಂತೆ ಕಾಂಗ್ರೆಸ್ 80 ರಿಂದ 85 ಹಾಗೂ ಜನತಾ ದಳ 32 ರಿಂದ 37 ಸ್ಥಾನಗಳನ್ನು ಬಾಚಿಕೊಳ್ಳಬಹುದು. ಇನ್ನು ಇತರೆ ಅಂದರೆ ಪಕ್ಷೇತರ ಅಭ್ಯರ್ಥಿ ಗಳು 02 ರಿಂದ 05 ಸ್ಥಾನಗಳನ್ನು ಗೆಲ್ಲಬಹುದು ಎಂಬ ಲೆಕ್ಕಾಚಾರ ವನ್ನು ಸಮೀಕ್ಷೆ ಮುಂದಿಟ್ಟಿದೆ.

ರಾಜ್ಯದ ೬೩೦೦೦ ಜನರನ್ನು ಸಂಪರ್ಕಿಸುವ ಮೂಲಕ ಪೋಸ್ಟ್ ಕಾರ್ಡ್ ಸಮೀಕ್ಷೆ ನಡೆಸಿದೆ. ಬಹುತೇಕ ಮಂದಿ ಈ ಬಾರಿ ಬಿಜೆಪಿ ಎಂದು ಹೇಳಿದ್ದರೆ ಮತ್ತೆ ಕೆಲವರು ಕುಮಾರಸ್ವಾಮಿ ಸಿಎಂ ಆಗಬೇಕೆಂದಿದ್ದಾರೆ. ಭಾರತೀಯ ಜನತಾ ಪಕ್ಷ ಸ್ವಶಕ್ತಿಯ ಮೇಲೆ ಅಧಿಕಾರಕ್ಕೆ ಬಂದರೆ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ.

ಅತಂತ್ರ ಫಲಿತಾಂಶ ಬಂದಿದ್ದೇ ಆದಲ್ಲಿ ಕಾಂಗ್ರೆಸ್ ಜೊತೆಗೆ ಜೆಡಿಎಸ್ ಸರ್ಕಾರ ರಚಿಸುವ ಪ್ರಮೇಯ ಬಹಳನೇ ಕಡಿಮೆ. ಹೀಗಾಗಿ ಭಾರತೀಯ ಜನತಾ ಪಕ್ಷದ ಜೊತೆಗೆ ಸರ್ಕಾರ ರಚಿಸುವ ಸಾಧ್ಯತೆಗಳೇ ಹೆಚ್ಚಾಗಿದೆ.

Image result for siddaramaiah

ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಈ ಬಾರಿ ಅಷ್ಟೊಂದು ಹುಮ್ಮಸ್ಸಿನಲ್ಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಾರಿ ಮತ್ತೆ ಅಧಿಕಾರಕ್ಕೆ ಬರೋದಿಲ್ಲ ಎಂಬುವುದು ಗೊತ್ತೇ ಇದೆ. ಹೀಗಾಗಿ ಚುನಾವಣೆ ನಂತರ ಸಿದ್ದರಾಮಯ್ಯ ಸಾಫ್ಟ್ ಆಗಿದ್ದಾರೆ.

Image result for kumaraswamy

ಒಟ್ಟಾರೆ ನಾಳೆ ಈ ಎಲ್ಲಾ ಕುತೂಹಲಗಳಿಗೆ ತೆರೆ ಬೀಳಲಿದ್ದಿ ಕುರ್ಚಿ ಯಾರ ಪಾಲಿಗೆ ಎಂದು ತಿಳಿಯುತ್ತಿದೆ. ಅಭ್ಯರ್ಥಿ ಗಳ ಹಣೆಬರಹ ನಾಳೆ ಸ್ಪಷ್ಟವಾಗಲಿದೆ. ಈ ಮೂಲಕ ಮುಂದಿನ ಐದು ವರ್ಷ ಯಾರು ಅಧಿಕಾರದ ಗದ್ದುಗೆಯನ್ನು ಏರುತ್ತಾರೆ ಎಂಬುವುದು ನಿರ್ಧಾರವಾಗಲಿದೆ.

-ಸುನಿಲ್ ಪಣಪಿಲ

Tags

Related Articles

Close