ಪ್ರಚಲಿತ

ಪವರ್ ಫುಲ್ ಮಿನಿಸ್ಟರ್ ಗೆ ಮತ್ತೊಂದು ಕಂಟಕ.! ಕೋರ್ಟ್ ಆದೇಶದಿಂದ ಡಿಕೆ ಶಿವಕುಮಾರ್ ಬೆವತಿದ್ದು ಯಾಕೆ.?!

ಕಾಂಗ್ರೆಸ್‌ನ ಅಟ್ಟಹಾಸಕ್ಕೆ ಒಂದು ಕಾಲದಲ್ಲಿ ಇಡೀ ದೇಶವೇ ನಲುಗಿಹೋಗಿತ್ತು. ಆಡಳಿತ ತಮ್ಮ ಕೈಯಲ್ಲಿ ಇದೆ ಎಂಬ ಕಾರಣಕ್ಕೆ ಯಾವ ರೀತಿಯಲ್ಲೂ ಮೆರೆಯಬಹುದು ಎಂಬ ಮನೋಭಾವ ಹೊಂದಿರುವ ಕಾಂಗ್ರೆಸ್ ನಾಯಕರಿಂದ ಸಾಮಾನ್ಯ ಜನರು ತಮ್ಮ ಜೀವನ‌ ಕಳೆಯುವುದೇ ಕಷ್ಟವಾಗಿದೆ ಎಂದರೆ ತಪ್ಪಾಗದು. ಯಾಕೆಂದರೆ ತಾವು ಮಾಡಿದ ತಪ್ಪುಗಳನ್ನು ಮುಚ್ಚಿಹಾಕಲು ಅಮಾಯಕ‌ ಜನರ ಮೇಲೆ ದಬ್ಬಾಳಿಕೆ ನಡೆಸುವ ಕಾಂಗ್ರೆಸ್ ಗೆ ಇದೀಗ ತಕ್ಕ‌ ಶಿಕ್ಷೆ ದೊರಕಿದೆ. ಕರ್ನಾಟಕದ ಕಾಂಗ್ರೆಸ್ ನ ಆಡಳಿತದಿಂದ ತತ್ತರಿಸಿರುವ ರಾಜ್ಯದ ಜನತೆ ಇದೀಗ ನಿರಾಳರಾಗುವಂತಾಗಿದೆ.!

ಕಾಂಗ್ರೆಸ್ ನ‌ ಪವರ್ ಫುಲ್ ಮಿನಿಸ್ಟರ್ , ರಾಜ್ಯ ಸರಕಾರದ ಇಂಧನ ಸಚಿವರಾದ ಡಿಕೆ ಶಿವಕುಮಾರ್ ಮನೆ ಮೇಲೆ ಕಳೆದ ಬಾರಿ ಐಟಿ ಅಧಿಕಾರಿಗಳು ನಡೆಸಿದ ದಾಳಿಗೆ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಯಾಕೆಂದರೆ ಅದು ನೋಟ್ ಬ್ಯಾನ್ ಆದ ಸಂದರ್ಭ, ಇಡೀ ದೇಶವೇ ಬ್ಯಾಂಕ್ ಮುಂದೆ ಸಾಲಿನಲ್ಲಿ ನಿಂತು ಹಣ ಪಡೆಯುತ್ತಿದ್ದರು, ಆದರೆ ಕಾಂಗ್ರೆಸ್ ನ‌ ಈ ನಾಯಕ‌ ಡಿಕೆ ಶಿವಕುಮಾರ್ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿತ್ತು.‌ ದಾಖಲೆ ರಹಿತ ಅಕ್ರಮ ಆಸ್ತಿ ಸಂಪಾದನೆ ಮಾಡಿ , ಯಾವುದೇ ದಾಖಲೆ ಇಲ್ಲದೇ ಇದ್ದರಿಂದ ಎಲ್ಲವನ್ನೂ ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ದಾಳಿಯ ವೇಳೆ ಅಮಾಯಕರ ಮೇಲೆ ದಬ್ಬಾಳಿಕೆ..!

ಡಿಕೆ ಶಿವಕುಮಾರ್ ಮನೆಯ ಮೇಲೆ ಐಟಿ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ಅಧಿಕಾರಿಗಳ ಎದುರೇ ಸಾಕ್ಷ್ಯ ನಾಶ ಮಾಡಿ ದರ್ಪ ಮೆರೆದಿದ್ದ ಡಿಕೆಶಿ ತನ್ನ ಬೆಂಬಲಿಗರನ್ನು ಇಟ್ಟುಕೊಂಡು ಅಮಾಯಕರ ಮೇಲೂ ದಬ್ಬಾಳಿಕೆ ನಡೆಸಿದ್ದಾರೆ ಎಂಬ ಆರೋಪ‌ ಇದೀಗ ಕೇಳಿಬಂದಿದೆ. ಇದೀಗ ಇದರ ವಿರುದ್ಧ ದೂರು ನೀಡಿರುವ ನೊಂದ ಮಹಿಳೆ , ಡಿಕೆಶಿ ವಿರುದ್ಧವೂ ಅಸಮಧಾನ ವ್ಯಕ್ತಪಡಿಸಿದ್ದಾರೆ. ಐಟಿ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ದಂಗಾಗಿದ್ದ ಡಿಕೆ ಶಿವಕುಮಾರ್ ತಾನು ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದ್ದರು. ಆದರೆ ಏಕಾಏಕಿ ನಡೆದ ದಾಳಿಯಿಂದ ತಪ್ಪಿಸಿಕೊಳ್ಳಲಾಗದೆ ಪರದಾಡಿದ್ದ ಡಿಕೆಶಿ ಸಿಕ್ಕ ಸಿಕ್ಕವರ ಮೇಲೆ ತನ್ನ ಕೋಪ ಹೊರ ಹಾಕುದ್ದರು.‌ ಭಾರೀ ಮೊತ್ತದ ಅಕ್ರಮ ಆಸ್ತಿ ಹೊಂದಿದ್ದ ಪವರ್ ಮಿನಿಸ್ಟರ್ ಗೆ ಸಹಾಯ ಮಾಡಲು ರಾಜ್ಯ ಸರಕಾರವೂ ಪ್ರಯತ್ನಿಸಿತ್ತು. ಆದರೆ ಇದಕ್ಕೆ ಯಾವುದೇ ಅವಕಾಶಗಳೂ ಸಿಕ್ಕಿರಲಿಲ್ಲ. ಆದರೂ ಈ ಆರೋಪದಿಂದ ಹೊರ ಬರಲು ಪ್ರಯತ್ನಿಸಿದ್ದ ಡಿಕೆಶಿ ವಿಚಾರಣೆ ವೇಳೆ ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಕೊನೆಗೂ ಜಾಮೀನು ನೀಡಿದ ಕೋರ್ಟ್ ಕೆಲವು ಶರತ್ತುಗಳನ್ನು ವಿಧಿಸಿತ್ತು.!

ಆರೋಪಿಗಳ ವಿರುದ್ಧ ತನಿಖೆಗೆ ಆದೇಶ..!

ಡಿಕೆ ಶಿವಕುಮಾರ್ ಆಪ್ತರ ಮೇಲೆ ಮಹಿಳೆ ದೂರು ನೀಡುತ್ತಿದ್ದಂತೆ ಕೋರ್ಟ್ ತನಿಖೆಗೆ ಆದೇಶ ನೀಡಿದೆ.‌ಇದರಿಂದ ತನ್ನ ಮೇಲಿನ‌ ಆರೋಪದಿಂದ ಜಾಮೀನಿನ ಮೇಲೆ ಹೊರ ಬಂದಿರುವ ಶಿವಕುಮಾರ್ ಗೆ ಮತ್ತಷ್ಟು ಕಂಟಕ ಎದುರಾಗಿದೆ. ಕನಕ ಪುರ ನಗರ ಠಾಣೆಯ ಪಿ ಎಸ್ ಐ ಗೆ ಕೋರ್ಟ್ ಆದೇಶ ನೀಡಿದ್ದು , ಆರೋಪಿಗಳ ವಿರುದ್ಧ ಶೀಘ್ರ ತನಿಖೆಗೆ ಆದೇಶಿಸಿದೆ. ಆರೋಪಿಗಳು ಮಹಿಳೆಯನ್ನು ರೆಸಾರ್ಟ್ ನಲ್ಲಿ ಕೂಡಿ ಹಾಕಿ ಹಿಂಸೆ ನೀಡಿರುವ ವಿಚಾರವೂ ಇದೀಗ ಬಯಲಾಗಿದೆ. ತನ್ನ ತಪ್ಪುಗಳನ್ನು ಮುಚ್ಚಿಹಾಕಲು ಡಿಕೆಶಿ ಈ ರೀತಿ ಮಾಡಿರುವುದು ಇದೀಗ ಮತ್ತಷ್ಟು ಕುತೂಹಲ ಕೆರಳಿಸಿದೆ.!

ಕರ್ನಾಟಕ ರಾಜ್ಯ ಕಾಂಗ್ರೆಸ್ ಸರಕಾರದ ಪವರ್ ಫುಲ್ ಮಿನಿಸ್ಟರ್ ಎಂದೇ ಹೆಸರಾದ ಇಂಧನ‌ ಸಚಿವ ಡಿಕೆ ಶಿವಕುಮಾರ್ ಮೇಲೆ ಆರೋಪಗಳು ಕೇಳಿಬರುತ್ತಿರುವುದು ಇದೇ ಮೊದಲೇನಲ್ಲಾ. ಯಾಕೆಂದರೆ ಅಧಿಕಾರದ ಅಹಂಕಾರದಿಂದ ಮೆರೆಯುತ್ತಿರುವ ಕಾಂಗ್ರೆಸ್ ನಾಯಕರು ಅಮಾಯಕ ಜನರ ಮೇಲೆ ಹಲ್ಲೆ, ದಬ್ಬಾಳಿಕೆ ನಡೆಸಿ ರಾಜ್ಯದಲ್ಲಿ ಅಶಾಂತಿಗೆ ಕಾರಣವಾಗುತ್ತಿದ್ದಾರೆ. ಆದರೆ ಇದೀಗ ಒಂದೊಂದೇ ಆರೋಪಗಳು ಹೊರಬೀಳುತ್ತಿದ್ದು ಶಿವಕುಮಾರ್ ಗೆ ಕಂಟಕ ಮತ್ತಷ್ಟು ಹೆಚ್ಚಿದೆ.!

–ಅರ್ಜುನ್

Tags

Related Articles

Close