ಪ್ರಚಲಿತ

ರಾಹುಲ್ ಗಾಂಧಿಗೆ ಭಾರೀ ಅವಮಾನ! ರಾಹುಲ್ ಯಾತ್ರೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ನಾಯಕರು! ಕರಾವಳಿಯಲ್ಲಿ ನಡೆಯುತ್ತಾ ಬಿಜೆಪಿ ಮ್ಯಾಜಿಕ್?!

ಕಾಂಗ್ರೆಸ್ ನ ಯುವರಾಜ ರಾಹುಲ್ ಗಾಂಧಿಗೆ ಪಕ್ಷದ ಅಧ್ಯಕ್ಷ ಸ್ಥಾನ ಏನೋ ಸಿಕ್ಕಿ ಬಿಟ್ಟಿತು. ಆದರೆ ಪಕ್ಷವನ್ನು ಸಾರಥಿ ಸ್ಥಾನದಲ್ಲಿ ಕೂತು ಮುಂದುವರಿಸಿಕೊಂಡು ಹೋಗಬೇಕಾಗಿದ್ದ ರಾಹುಲ್ ಗಾಂಧಿಗೆ ಯಾವುದೇ ಅರ್ಹತೆ ಇಲ್ಲ ಎಂಬೂದು ಸದ್ಯ ದೇಶದ ಜನತಡಗೆ ತಿಳಿದಾಗಿದೆ. ಪ್ರಧಾನಿ ಮೋದಿಯವರ ವರ್ಚಸ್ಸಿನ ಮುಂದೆ ರಾಹುಲ್ ಗಾಂಧಿಯ ಯಾವುದೇ ರೀತಿಯ ತಂತ್ರವೂ ಫಲಿಸುತ್ತಿಲ್ಲ. ಸದ್ಯ ಈ ವಿಚಾರ ಸ್ವತಃ ಕಾಂಗ್ರೆಸ್ ಮುಖಂಡರಿಗೇ ತಿಳಿದಿದ್ದು, ರಾಹುಲ್ ಗಾಂಧಿಯಿಂದ ದೂರ ಸರಿಯುವ ಪ್ರಯತ್ನ ಮಾಡುತ್ತಿದ್ದಾರೆ.

ಕರಾವಳಿಯಲ್ಲಿ ರಾಹುಲ್ ಯಾತ್ರೆ..!

ಈಗಾಗಲೇ ಎಲ್ಲಾ ರಾಜ್ಯಗಳಲ್ಲೂ ಭಾರೀ ಪ್ರಚಾರ ಕಾರ್ಯಕ್ಕೆ ತೆರಳಿ ಪಕ್ಷದ ಗೆಲುವಿಗೆ ಕಾರಣವಾಗಬೇಕಾಗಿದ್ದ ರಾಹುಲ್ , ಸ್ವತಃ ತಮ್ಮ ಪ್ರಚಾರದಿಂದ ಪಕ್ಷದ ಸೋಲಿಗೆ ಕಾರಣ ಎಂಬೂದು ಸ್ವತಃ ಕಾಂಗ್ರೆಸ್ಸಿಗರೇ ಒಪ್ಪಿಕೊಂಡಿದ್ದಾರೆ. ಆದರೂ ಮುಖಂಡರನ್ನು ತನ್ನ ಅಧಿಕಾರದ ಬಲದಿಂದ ಉಪಯೋಗಿಸುತ್ತಿರುವ ರಾಹುಲ್ ಗೆ ಸದ್ಯ ಕರಾವಳಿ ಜಿಲ್ಲೆಗಳಲ್ಲಿ ಸಾಥ್ ನೀಡಲು ಹಿಂಜರಿದಿದ್ದಾರೆ. ಉಡುಪಿ ಮತ್ತುಮಂಗಳೂರಿನಲ್ಲಿ ಕಾಂಗ್ರೆಸ್ ಜನಾಶಿರ್ವಾದ ಯಾತ್ರೆ ಕೈಗೊಂಡಿರುವ ರಾಹುಲ್ ಗೆ ಇದೀಗ ಕ್ಷೇತ್ರದ ಕಾಂಗ್ರೆಸ್ ನಾಯಕರು ಯಾವುದೇ ಬೆಂಬಲ ನೀಡದೆ ಸಮಾವೇಶದಿಂದ ದೂರ ಸರಿಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಸತ್ಯಾಂಶ ಹೊರಬಿದ್ದಿದೆ. ರಾಹುಲ್ ಗಾಂಧಿ ಹೋದಲ್ಲೆಲ್ಲಾ ಕಾಂಗ್ರೆಸ್ ಗೆ ಸೋಲಾಗಿರುವುದರಿಂದ
ಉಡುಪಿ ಜಿಲ್ಲೆಯಲ್ಲೂ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದಲೇ ಶಾಸಕರು ಮುಖಂಡರು ಸೇರಿದಂತೆ ಸ್ಥಳೀಯ ನಾಯಕರು ರಾಹುಲ್ ಆಗಮನಕ್ಕೆ ಅಸಮಧಾನ ವ್ಯಕ್ತಪಡಿಸಿದ್ದಾರೆ.

ರಾಹುಲ್ ಸಮಾವೇಶದ ಸ್ಥಳ ಬದಲಾಯಿಸಲು ನಿರ್ಧಾರ..!

ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಬರುವದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಸ್ಥಳೀಯ ಮುಖಂಡರು ರಾಹುಲ್ ಸಮಾವೇಶದ ಸ್ಥಳವನ್ನು ತಮ್ಮ ಕ್ಷೇತ್ರದಿಂದ ಬೇರೆ ಕಡೆಗೆ ಸ್ಥಳಾಂತರಿಸಲು ತಯಾರಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ತಮ್ಮ ಕ್ಷೇತ್ರಗಳಲ್ಲಿ ತಮ್ಮ ಹೆಸರಿನ ಮೂಲಕವೇ ಗೆಲುವು ಕಂಡುಕೊಳ್ಳಬಹುದು, ಆದರೆ ರಾಹುಲ್ ಗಾಂಧಿ ಬಂದು ಸಮಾವೇಶ ನಡೆಸಿದರೆ ನಮಗೆ ಸೋಲು ಖಂಡಿತ ಎಂದು ಸ್ವತಃ ಕಾಂಗ್ರೆಸ್ ನಾಯಕರೇ ಒಪ್ಪಿಕೊಂಡಿದ್ದಾರೆ. ಆದ್ದರಿಂದಲೇ ರಾಹುಲ್ ಸಮಾವೇಶಕ್ಕೆ ಈಗಾಗಲೇ ನಿಗಧಿಪಡಿಸಿರುವ ಉಡುಪಿಯ ಕೆಲ ತಮ್ಮ ಕ್ಷೇತ್ರಗಳಿಂದ ಬೇರೆ ಸ್ಥಳಗಳಿಗೆ ಸ್ಥಳಾಂತರಿಸಲಿದ್ದಾರೆ.

ರಾಹುಲ್ ಗಾಂಧಿಯವರಿಗೆ ತಮ್ಮ ಈ ಹಿಂದಿನ ಕರ್ನಾಟಕ ಪ್ರವಾಸವಾದ ಹೈದರಾಬಾದ್-ಕರ್ನಾಟಕ,ಮುಂಬೈ – ಕರ್ನಾಟಕ ಭಾಗದಲ್ಲಿ ಸಿಕ್ಕ ಜನರ ಪ್ರತಿಕ್ರಿಯೆಯಿಂದ ಈ ಬಾರಿ ಮತ್ತೆ ಹಿಂದೂಗಳ ಭದ್ರಕೋಟೆ ಎನಿಸಿಕೊಂಡಿರುವ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಆದರೆ ಕಾಂಗ್ರೆಸ್ ನ ಕೆಲ ನಾಯಕರಿಗೆ ರಾಹುಲ್ ಗಾಂಧಿ ತಮ್ಮ ಕ್ಷೇತ್ರಕ್ಕೆ ಬರುವುದು ಇಷ್ಟವಿಲ್ಲದೆ ಇರುವುದರಿಂದ ರಾಹುಲ್ ಪ್ರವಾಸದ ಸ್ಥಳ ಬದಲಾಯಿಸಲು ನಿರ್ಧಾರಿಸಿದ್ದಾರೆ.!

ಶಾಸಕರಿಂದಲೂ ವಿರೋಧ..!

ರಾಹುಲ್ ಗಾಂಧಿಗೆ ಹೋದಲ್ಲೆಲ್ಲಾ ಅವಮಾನ , ವಿರೋಧ ವ್ಯಕ್ತವಾಗುವುದು ಇದೇ ಮೊದಲೇನಲ್ಲಾ. ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತಿದ್ದು, ಇದೀಗ ಸ್ವತಃ ಕಾಂಗ್ರೆಸ್ ಮುಖಂಡ, ಕ್ಷೇತ್ರದ ಶಾಸಕರಿಂದಲೇ ವಿರೋಧ ವ್ಯಕ್ತವಾಗುತ್ತಿದ್ದು , ರಾಜ್ಯ ಸರಕಾರವೂ ಕಂಗಾಲಾಗಿದೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಇತ್ತೀಚೆಗೆ ತನ್ನ ಎಲ್ಲಾ ಕಾರ್ಯಕ್ರಮಗಳಲ್ಲೂ ಕಾಂಗ್ರೆಸ್ ನಿಂದ ದೂರ ಸರಿಯುತ್ತಿದ್ದು , ಇದೀಗ ಸ್ವತಃ ಪಕ್ಷದ ಅಧ್ಯಕ್ಷನ ಆಗಮನಕ್ಕೂ ತಮ್ಮ ಬೆಂಬಲ ಇಲ್ಲ ಎಂಬ ಸೂಚನೆ ನೀಡಿದ್ದಾರೆ. ಪ್ರಮೋದ್ ಮಧ್ವರಾಜ್ ಈಗಾಗಲೇ ಬಿಜೆಪಿ ಸೇರುವ ಸುದ್ಧಿ ಎಲ್ಲೆಡೆ ಹರಡುತ್ತಿದ್ದು, ಇದೀಗ ಸಚಿವರ ಈ ನಡೆ ಇರುವ ಎಲ್ಲಾ ಅನುಮಾನಗಳಿಗೂ ಮತ್ತಷ್ಟು ಬಲ ನೀಡುವಂತೆ ಮಾಡುತ್ತಿದೆ.

ಕೆ ಎಸ್ ಆರ್ ಟಿ ಸಿ ಚೇರ್ಮನ್ ನಿಂದಲೂ ವಿರೋಧ..!

ಕೇವಲ ಪ್ರಮೋದ್ ಮಧ್ವರಾಜ್ ಮಾತ್ರ ಅಲ್ಲದೇ, ಕಾಂಗ್ರೆಸ್ ಕಾಂಗ್ರೆಸ್ ಮುಖಂಡ ಮತ್ತು ಕೆ ಎಸ್ ಆರ್ ಟಿ ಸಿ ಯ ಚೇರ್ಮನ್ ಆದಂತಹ ಗೋಪಾಲ್ ಪೂಜಾರಿಯವರೂ ಸಹ ರಾಹುಲ್ ಗಾಂಧಿಯವರನ್ನು ಕುಂದಾಪುರ ಹಾಗೂ ಬೈಂದೂರಿನಲ್ಲಿ ಸ್ವಾಗತ ಕೋರಲು ಹಿಂದೇಟು ಹಾಕುತ್ತಿದ್ದಾರೆ ಎಂಬ ವಿಚಾರವೂ ಬಹಿರಂಗವಾಗಿದೆ. ಈ ವಿಚಾರವನ್ನು ಸ್ವತಃ ರಾಜ್ಯ ನಾಯಕರಿಗೆ ತಿಳಿಸಿದ್ದು , ಇದೀಗ ಪಕ್ಷದ ಒಳಗೊಳಗೇ ಭಾರೀ ಚರ್ಚೆಗೆ ಗ್ರಾಸವಾಗಿದೆ.

ರಾಹುಲ್ ಗಾಂಧಿಯ ಮಾತು ಇಡೀ ದೇಶದಲ್ಲೇ ಹಾಸ್ಯಕ್ಕೆ ಬಳಸಲಾಗುತ್ತದೆ. ಅದೇ ರೀತಿ ಗೋಪಾಲ್ ಪೂಜಾರಿಯವರ ಕ್ಷೇತ್ರದಲ್ಲೂ ಬಿಜೆಪಿ ಬಲಿಷ್ಠವಾಗಿದ್ದು , ರಾಹುಲ್ ಮಾತಿನಿಂದಾಗಿ ಒಂದಿಷ್ಟು ಮತಗಳು ನಮ್ಮ ಕಡೆ ವಾಲಬಹುದು ಆದರೆ ರಾಹುಲ್ ಮಾತನ್ನೇ ಬಿಜೆಪಿ ಕಾಂಗ್ರೆಸ್ ವಿರುದ್ಧ ಬಳಸಿಕೊಳ್ಳುತ್ತದೆ. ಆದ್ದರಿಂದಲೇ ರಾಹುಲ್ ತನ್ನ ಕ್ಷೇತ್ರಕ್ಕೆ ಬರುತ್ತಿರುವುದನ್ನು ಸ್ವಾಗತಿಸಲು ನಾನು ಹಿಂದೇಟು ಹಾಕುತ್ತಿದ್ದಾನೆ ಎಂದು ಗೋಪಾಲ್
ಪೂಜಾರಿ ಹೇಳಿಕೊಂಡಿದ್ದಾರೆ.

ಏನೇ ಹೇಳಿ, ಸ್ವತಃ ಪಕ್ಷದ ಅಧ್ಯಕ್ಷ , ಯುವರಾಜ ಎನಿಸಿಕೊಂಡಿರುವ ರಾಹುಲ್ ಗಾಂಧಿಗೆ ಇದೀಗ ಸ್ವತಃ ತಮ್ಮ ಪಕ್ಷದ ನಾಯಕರಿಂದಲೇ
ವಿರೋಧ ವ್ಯಕ್ತವಾಗುತ್ತಿದ್ದು ಕರಾವಳಿಯಲ್ಲಿ ಬಿಜೆಪಿಯ ಹವಾ ಎಷ್ಟರ ಮಟ್ಟಿಗೆ ಇದೆ ಎಂಬೂದು ತಿಳಿಯುತ್ತದೆ. ರಾಹುಲ್ ಮಾತಿನಿಂದಾಗಿಯೇ ಇತ್ತೀಚೆಗೆ ನಡೆದ ಎಲ್ಲಾ ರಾಜ್ಯಗಳ ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ಗೆ ಇದೀಗ ಕರ್ನಾಟಕ ಚುನಾವಣೆಯಲ್ಲೂ ಸೋಲಿನ ಭೀತಿ ಹೆಚ್ಚಾಗಿದೆ ಎಂಬೂದರಲ್ಲಿ ಸಂಶಯವಿಲ್ಲ.!

-ಅರ್ಜುನ್

Tags

Related Articles

Close