ಪ್ರಚಲಿತ

ರಮ್ಯಾಳಿಗೆ ಬೆಂಬಿಡದೆ ಕಾಡುತ್ತಿರುವ ನವರಸ ನಾಯಕ!! ಫೇಕ್ ರಮ್ಯಾಳನ್ನು ಮತ್ತೆ ಬಗ್ಗು ಬಡಿದ ಜಗ್ಗೇಶ್!!

ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕಾಂಗ್ರೆಸ್ ಸರ್ಕಾರ ಅದೇನೇನೂ ಗಿಮಿಕ್ಸ್ ಗಳನ್ನು ಮಾಡ ಹೊರಟಿದೆಯೋ ಗೊತ್ತಾಗುತ್ತಿಲ್ಲ. ಯಾಕೆಂದರೆ ಈಗಾಗಲೇ ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾಗಿರುವ ಮಾಜಿ ಸಂಸದೆ ರಮ್ಯಾ, ತಾನೇ ಮಹಾನ್ ಬುದ್ದಿವಂತೆ ಎಂದು ಬಿಂಬಿಸಲು ಹೋಗಿ ತಾನೇ ಫಜೀತಿಗೆ ಸಿಕ್ಕಿಹಾಕಿಕೊಳ್ಳುತ್ತಿದ್ದು, ಪ್ರಧಾನಿ ಮೋದಿ ವಿರುದ್ಧದ ಟ್ವೀಟ್ ಗಳ ಮೂಲಕ ತನ್ನ ನಾಲಗೆಯನ್ನು ಹರಿಯಬಿಟ್ಟಿದ್ದರು. ಈ ಕುರಿತು ನವರಸ ನಾಯಕ ಜಗ್ಗೇಶ್, ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಮಧ್ಯೆಯ ಟ್ವಿಟ್ಟರ್ ವಾರ್ ಮುಂದುವರಿದಿದೆ.

ಹೌದು….. ಇತ್ತೀಚೆಗಷ್ಟೇ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ನಡೆದ ಸಮಾವೇಶವನ್ನು ಉದ್ದೇಶಿಸಿ ನಡೆಸಿದ ಭಾಷಣದಲ್ಲಿ ರೈತರು ತಮ್ಮ ಟಾಪ್ ಆದ್ಯತೆ ಎಂದು ಮೋದಿ ಹೇಳಿದ್ದರು. ಟಾಪ್ ಎಂದರೆ ಟೊಮೆಟೋ, ಈರುಳ್ಳಿ, ಪೆÇಟಾಟ್ಯೋ ಎಂದು ವಾಖ್ಯಾನಿಸಿದ್ದರು. ಇದನ್ನೇ ಉಲ್ಲೇಖಿಸಿದ ರಮ್ಯಾ ಟಾಪ್ ನನ್ನು ಉಲ್ಟಾ ಬರೆದು ಪಾಟ್ ಮಾಡಿದ್ದರು. ಪಾಟ್ ಎಂದರೆ ಮಾದಕ ದ್ರವ್ಯ. ಮರಿಜುನಾ ಮಾದಕ ದ್ರವ್ಯ ಗಿಡಕ್ಕೆ ಪಾಟ್ ಎನ್ನುವ ಹೆಸರೂ ಇದೆ!! ಆದರೆ ಮೋದಿ ಭಾಷಣದ ಬಳಿಕ ಟಿಟ್ವರ್ ನಲ್ಲಿ ಕಾಂಗ್ರೆಸ್-ಬಿಜೆಪಿ ನಡುವಿನ ವಾರ್ ತೀವ್ರಗೊಂಡಿದೆ. ಹಾಗಾಗಿ, ನಶೆಯಲ್ಲಿದ್ದಾಗ ಹೀಗೆಲ್ಲಾ ಆಗುತ್ತೆ ಎಂದು ಕೇಳುವ ಮೂಲಕ ನಟಿ, ಮಾಜಿ ಸಂಸದೆ ರಮ್ಯಾ ಪ್ರಧಾನಿ ಮೋದಿಯ ಕಾಲೆಳೆದಿದ್ದು, ಇದಕ್ಕೆ ನಟ ಜಗ್ಗೇಶ್ ರಮ್ಯಾ ವಿರುದ್ಧ ಕಿಡಿಕಾರಿದ್ದರು.

ರಮ್ಯಾ ಟ್ವೀಟ್‍ಗೆ ನವರಸನಾಯಕ ಜಗ್ಗೇಶ್ ಪ್ರತಿಕ್ರಿಯಿಸಿ, ದೊಡ್ಡವರ ಬಗ್ಗೆ ಮಾತನಾಡಬೇಕಾದರೆ ಮಾತಾಡುವ ಮಂದಿಗೆ ವಯಸ್ಸು, ಅನುಭವ, ಸಾಧನೆ ಮಾಡಿ ಪಕ್ವವಾದಾಗ ಅಪಭ್ರಂಷ ಇಲ್ಲದೆ ಚರ್ಚೆ ಮಾಡಿದರೆ ಅದನ್ನು ತರ್ಕ ಎಂದು ಒಪ್ಪಿ ವಿಮರ್ಶೆ ನಿರ್ಣಯಸುತ್ತಾರೆ ಜನ. ವಿಶ್ವದ ಬಲಿಷ್ಟ ರಾಷ್ಟ್ರದ ನಾಯಕರೇ ಮೋದಿ ಅವರನ್ನು ಒಪ್ಪಿ ಮೆಚ್ಚಿದ್ದಾರೆ. ಈಕೆ ಯಾರು? ಸಾಧನೆ ಏನು? ನೆಟ್ಟಗೆ ಕನ್ನಡ ಮಾತಾಡಲು ಬರದ ಕಾಡುಪಾಪದಂತೆ ಈಕೆ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದರು.

ಆದರೆ ಇದೀಗ ನವರಸ ನಾಯಕ ಜಗ್ಗೇಶ್, ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಮಧ್ಯೆಯ ಟ್ವಿಟ್ಟರ್ ವಾರ್ ಮುಂದುವರಿದಿದೆ. ಮಂಗಳವಾರ ಮಾಜಿ ಸಂಸದೆ ರಮ್ಯಾ ಫೇಕ್ ಫೇಸ್‍ಬುಕ್ ಅಕೌಂಟ್ ಬಗ್ಗೆ ಪಾಠ ಮಾಡಿದ್ದಕ್ಕೆ ಜಗ್ಗೇಶ್ ಟೀಕೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ರಮ್ಯಾ ಕಳೆದ ವಾರ ನಕಲಿ ಖಾತೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಂಗ್ರೆಸ್
ಕಾರ್ಯಕರ್ತರಿಗೆ ಪಾಠ ಮಾಡಿದ್ದರು. ಈ ಸಂದರ್ಭದಲ್ಲಿ ಕಾರ್ಯಕರ್ತರೊಬ್ಬರು ಫೇಸ್‍ಬುಕ್ ಫೇಕ್ ಅಕೌಂಟ್ ಬಗ್ಗೆ ಕೇಳಿದ ಪ್ರಶ್ನೆಗೆ ರಮ್ಯಾ, ಒಬ್ಬರಿಗೆ ಮೂರು ನಾಲ್ಕು ಅಕೌಂಟ್ ಗಳಿದ್ದರೆ ತಪ್ಪು ಏನಿಲ್ಲ. ಆದರೆ ಫೇಕ್ ಅಕೌಂಟ್ ಬಗ್ಗೆ ಎಚ್ಚರಿಕೆ ಹೊಂದಿರಬೇಕು ಎಂದು ಉತ್ತರಿಸಿದ್ದ ಈ ಪಾಠದ ವಿಡಿಯೋ ವೈರಲ್ ಆಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿ ಟ್ವಿಟ್ಟರ್ ವಾರ್ ಆರಂಭಿಸಿರುವ ಜಗ್ಗೇಶ್, ಇದು ಫೇಕ್‍ಗಳನ್ನು ತಯಾರಿಸಿ ವೈರಲ್ ಮಾಡಿ ಬದಕೋ ಪೇಕ್‍ಗಳು!! ಇನ್ಮುಂದೆ ನಿಮ್ ಆಟ ಬಂದ್. ಮಹಾಜನತೆಗೆ ಅರಿವಾಯಿತು ಫೇಕ್ ನಾಟಕ ಕಂಪನಿ ಎಂದು ಟಾಂಗ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಕೆಲವರಿಗೆ ಮರ್ಮಕಲೆಯ ಹೆಣ್ಣಿನ ಮುಖವಾಡದ ಮಗಳು ಬೇಕಂತೆ. ಏನ್ ಕರ್ಮ ರೀ ಈ ದೇಶ ಎಂದು ನಟ ಬೇಸರ ವ್ಯಕ್ತಪಡಿಸಿದ್ದಾರೆ.

ಸರಣಿ ಟ್ವೀಟ್‍ಗಳ ಮೂಲಕ ಪದ್ಮಾವತಿಗೆ ಜಗ್ಗೇಶ್ ಪರೋಕ್ಷ ಟಾಂಗ್ ನೀಡಿದ್ದು, ಫೇಕ್ ಫೇಸ್‍ಬುಕ್ ಅಕೌಂಟ್ ಬಗ್ಗೆ ಪಾಠ ಮಾಡಿದ್ದಕ್ಕೆ ಜಗ್ಗೇಶ್ ಟೀಕೆ ವ್ಯಕ್ತಪಡಿಸಿದ್ದಾರೆ. ಫೇಕ್ ಅಕೌಂಟ್‍ಗಳ ಬಗ್ಗೆ ಪಾಠ ಕಲಿಸುವ ಸಭ್ಯಸ್ಥೆಯನ್ನು ಕಣ್ಣಗಲಿಸಿ ನೋಡಿ. ಇವಳ ಪಾಠ ಕಲಿತು ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ವಾಂತಿ ಮಾಡುವವರು ಇವರೆ!. ಹೇಗೆ ತಯಾರು ಮಾಡ್ತಾರೆ ನೋಡಿ ಅರ್ಧಬೆಂದ ಮಡಿಕೆಗಳ..! ಅಂತ ರಮ್ಯಾ ಹೆಸರೇಳದೇ ಕ್ಯಾಚ್ ಆಫೀಸರ್ ಎಂದು ಜರೆದಿದ್ದಾರೆ.

ಇನ್ನು, ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮಾಡಿದ್ದ ನಟಿ ರಮ್ಯಾ ವಿರುದ್ಧ ನಟ ಗಣೇಶ್ ಪತ್ನಿ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಿಲ್ಪಾ ಗಣೇಶ್ ಗರಂ ಆಗಿದ್ದು, ರಮ್ಯಾ ಹೆಸರಲ್ಲೇ ರಮ್ ಇದೆ. ಟ್ವೀಟ್ ಮಾಡುವಾಗೆಲ್ಲ ರಮ್ಯಾ ಕುಡಿದಿರುತ್ತಾರೆ ಅನ್ಸುತ್ತೆ ಎಂದು ಟ್ವೀಟ್ ಮಾಡಿದ್ದು ಎಲ್ಲೆಡೆ ಸುದ್ದಿಯಾಗಿತ್ತು!! ಆದರೆ ಇದೀಗ ನವರಸನಾಯಕ ಜಗ್ಗೇಶ್ ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಆಗಿರುವ ರಮ್ಯಾ ವಿರುದ್ಧ ಟ್ವಿಟ್ಟರ್ ವಾರ್ ಮುಂದುವರಿಸಿದ್ದು, ಈಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ರಮ್ಯಾ ಅವರ `ಮಾದಕದ್ರವ್ಯದ ನಶೆ” ಟ್ವೀಟ್‍ನಿಂದ ಇದೀಗ ಜಗ್ಗೇಶ್-ರಮ್ಯಾ ಟ್ವೀಟ್ ವಾರ್ ತೀವ್ರ ಸ್ವರೂಪ ಪಡೆದಿದ್ದು, ನಾಲಗೆ ಹರಿಯ ಬಿಟ್ಟಿದ್ದ ರಮ್ಯಾಗೆ ಕಾದಕೆಂಡದಲ್ಲಿಟ್ಟ ಕಬ್ಬಿಣದ ಸಲಗೆಯಿಂದ ಬರೆಯನ್ನು ನೀಡಿದಂತಹ ಅನುಭವ ಆಗಿದ್ದರೂ ಆಗಿರಬಹುದು!!

– ಅಲೋಖಾ

Tags

Related Articles

Close