ಪ್ರಚಲಿತ

ರಮ್ಯಾಳ ವಿರುದ್ಧವೇ ತೊಡೆತಟ್ಟಿದ ರಮ್ಯ ತಾಯಿ! ಸ್ವಪಕ್ಷದ ವಿರುದ್ಧವೇ ಸ್ಪರ್ಧಿಸುತ್ತಾರಂತೆ ಕಾಂಗ್ರೆಸ್ ನಾಯಕಿ!

ಕರ್ನಾಟಕದಲ್ಲಿ ರಾಜಕೀಯ ಜಂಜಾಟ ಯಾವ ರೀತಿಯಲ್ಲಿ ರಂಗೇರುತ್ತಿದೆ ಎಂದರೆ ಇಡೀ ದೇಶವೇ ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಹಳ ಕುತೂಹಲದಿಂದ ಕಾಯುತ್ತಿದೆ. ಪಕ್ಷದ ಟಿಕೆಟ್ ಗಾಗಿ ಭಾರೀ ಪೈಪೋಟಿ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ಇದೀಗ ಸ್ವತಃ ತಮ್ಮ ಪಕ್ಷದ ವಿರುದ್ಧವೇ ಸಿಡಿದೆದ್ದು ಕಾಂಗ್ರೆಸ್ ಗೆ ಛೀಮಾರಿ ಹಾಕಲು ಸಜ್ಜಾಗಿದ್ದಾರೆ. ಪಕ್ಷದ ನಾಯಕರ ವಿರುದ್ಧ ಅಸಮಧಾನಗೊಂಡು ಸಾಲು ಸಾಲು ಕಾರ್ಯಕರ್ತರು ಕಾಂಗ್ರೆಸ್ ತೊರೆದು ಇತರ ಪಕ್ಷಗಳ ಕಡೆ ಒಲವು ತೋರಿಸುತ್ತಿದ್ದರೆ, ಇತ್ತ ರಾಜ್ಯ ಕಾಂಗ್ರೆಸ್ ನಾಯಕರ ಕುಟುಂಬಸ್ಥರೇ ಕಾಂಗ್ರೆಸ್ ವಿರುದ್ಧ ಬಂಡಾಯ ಎದ್ದಿದ್ದಾರೆ.

ಕಾಂಗ್ರೆಸ್ ವಿರುದ್ಧ ರಮ್ಯಾ ಅಮ್ಮ ಸ್ಪರ್ಧೆ..!

ಇತ್ತೀಚೆಗೆ ಕಾಂಗ್ರೆಸ್ ನಲ್ಲಿ ಭಾರೀ ಸುದ್ದಿ ಮಾಡುತ್ತಿದ್ದ ನಟಿ ರಮ್ಯಾ , ಪಕ್ಷದ ಸಾಮಾಜಿಕ ಜಾಲತಾಣದ ಜವಾಬ್ದಾರಿ ವಹಿಸಿಕೊಂಡು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಗೆ ಭಾರೀ ಹತ್ತಿರವಾಗಿದ್ದರು. ರಾಷ್ಟ್ರೀಯ ನಾಯಕನ ಜೊತೆ ಗುರುತಿಸಿಕೊಂಡರು ರಾಜ್ಯ ನಾಯಕರಿಗೆ ತಲೆನೋವಾಗಿರುವ ರಮ್ಯಾಳಿಗೆ ರಾಜ್ಯ ರಾಜಕಾರಣದಲ್ಲಿ ಯಾವುದೇ ರೀತಿಯ ಗೌರವ ಸಿಗುತ್ತಿಲ್ಲ. ಇದೇ ಕಾರಣಕ್ಕಾಗಿ ಇದೀಗ ರಮ್ಯಾಳ ತಾಯಿ ಕಾಂಗ್ರೆಸ್ ಗೆ ಸೆಡ್ಡು ಹೊಡೆದು, ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧವೇ ಕಣಕ್ಕಿಳಿಯುವುದಾಗಿ ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ನನ್ನ ಮಗಳನ್ನು ಕೇವಲ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದೆ. ರಾಜ್ಯ ರಾಜಕಾರಣದಲ್ಲಿ ತನ್ನ ಮಗಳಿಗೆ ಯಾವುದೇ ಗೌರವ ನೀಡಲಾಗುತ್ತಿಲ್ಲ. ಸೋಷಿಯಲ್ ಮೀಡಿಯಾ ಮುಖ್ಯಸ್ಥೆಯಾಗಿ ಆಯ್ಕೆಯಾಗಿದ್ದರೂ ಕೂಡಾ ತನ್ನ ಮಗಳಿಗೆ ರಾಜ್ಯದ ಕಾಂಗ್ರೆಸ್ ನಾಯಕರು ಮರ್ಯಾದೆ ನೀಡುತ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಆರೋಪಿಸಿದ ನಟಿ ರಮ್ಯಾ ತಾಯಿ ಈ ಬಾರಿ ಕಾಂಗ್ರೆಸ್ ನ ಎದುರಾಳಿಯಾಗಿ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದಾರೆ.

Related image

೩೦ ವರ್ಷಗಳಿಂದ ಕಾಂಗ್ರೆಸ್ ಗಾಗಿ ದುಡಿದಿದ್ದೇನೆ..!

೧೯೮೦ ರ ದಶಕದಲ್ಲಿ ಕೇವಲ ೨ ರೂಪಾಯಿ ಕೊಟ್ಟು ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದ ನಾನು ಕಳೆದ ೩೦ ವರ್ಷಗಳಿಂದಲೂ ಕಾಂಗ್ರೆಸ್ ಗಾಗಿ ದುಡಿದಿದ್ದೇನೆ‌. ಮನೆ ಮನೆಗೆ ಭೇಟಿ ನೀಡಿ ಪಕ್ಷದ ಕ್ಯಾಂಪೇನ್ ಮಾಡಿದ್ದೇನೆ , ಆದರೆ ಕಾಂಗ್ರೆಸ್ ನಮಗಾಗಿ ಏನೂ ಮಾಡಿಲ್ಲ ಎಂದು ಗಂಭೀರವಾಗಿ ಆರೋಪಿಸಿದ ರಮ್ಯಾಳ ತಾಯಿ , ಕಾಂಗ್ರೆಸ್ ನಮ್ಮನ್ನು ಕೇವಲ ಗುಲಾಮರಂತೆ ದುಡಿಸಿಕೊಂಡು ನಮ್ಮನ್ನು ಕಡೆಗಣಿಸಿದೆ ಎಂದು ಅಸಮಧಾನಗೊಂಡು ಹೇಳಿದರು. ರಾಜ್ಯ ಕಾಂಗ್ರೆಸ್ ನಾಯಕರು ನಮ್ಮನ್ನು ಪಕ್ಷದಿಂದಲೇ ಕಡೆಗಣಿಸಿದ್ದಾರೆ ಎಂದು ರಾಜ್ಯ ನಾಯಕರ ವಿರುದ್ಧ ವಾಗ್ದಾಳಿ
ನಡೆಸಿದರು.!

ರಮ್ಯಾಳ ಸೋಲಿಗೆ ಕಾಂಗ್ರೆಸ್ ಕಾರಣ..!

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ನಟಿ ರಮ್ಯಾ ಗೆಲ್ಲುವ ವಿಶ್ವಾಸ ವ್ಯಕ್ತವಾಗಿತ್ತು. ಆದರೆ ಸ್ವತಃ ಕಾಂಗ್ರೆಸಿಗರೇ ನನ್ನ ಮಗಳನ್ನು ಸೋಲಿಸಿದ್ದಾರೆ ಎಂದು ನಟಿ ರಮ್ಯಾ ತಾಯಿ ಆರೋಪಿಸಿದ್ದಾರೆ. ನಾನು ಟಿಕೆಟ್ ಗಾಗಿ ಅನೇಕ ಬಾರಿ ಪ್ರಯತ್ನಿಸಿದ್ದೇನೆ , ಆದರೆ ಕಾಂಗ್ರೆಸ್ ನಿಂದ ನನಗೆ ಈವರೆಗೂ ಟಿಕೆಟ್ ನೀಡಲಿಲ್ಲ. ಪಕ್ಷಕ್ಕಾಗಿ ದುಡಿದ ನಮ್ಮಂತವರಿಗೆ ಕಾಂಗ್ರೆಸ್ ನಲ್ಲಿ ಬೆಲೆಯೇ ಇಲ್ಲದಂತಾಗಿದೆ. ಈ ಬಾರಿಯೂ ಕಾಂಗ್ರೆಸ್ ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದೆ, ಆದರೆ ನಟ ಅಂಬರೀಶ್ ಈ ಬಾರಿ ಸ್ಪರ್ಧಿಸುವುದರಿಂದ ನಾನು ಹೆಚ್ಚು ಆಸಕ್ತಿ ತೋರಿಸಲಿಲ್ಲ. ಆದರೆ ಈ ಬಾರಿ ಕಾಂಗ್ರೆಸ್ ಗೆ ವಿರುದ್ಧವಾಗಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.!

ಮಗಳು ರಮ್ಯಾ ಕಾಂಗ್ರೆಸ್ ಪಕ್ಷದಲ್ಲಿ ಮೆರೆಯುತ್ತಿದ್ದರೆ, ಇತ್ತ ತಾಯಿ ಕಾಂಗ್ರೆಸ್ ಗೆ ವಿರುದ್ಧವಾಗಿ ಸಿಡಿದೆದ್ದಿದ್ದಾರೆ. ಇವೆಲ್ಲವನ್ನೂ ಗಮನಿಸುವಾಗ ಕಾಂಗ್ರೆಸ್ ಗೆ ಈ ಬಾರಿ ಸೋಲಿನ ಭೀತಿ ಮತ್ತೆ ಹೆಚ್ಚುತ್ತಿದ್ದು , ಸ್ವತಃ ಕಾಂಗ್ರೆಸ್ ನಾಯಕರೇ ತಮ್ಮ ಪಕ್ಷದ ವಿರುದ್ಧ ಬಂಡಾಯ ಏಳುತ್ತಿದ್ದಾರೆ.!

-ಅರ್ಜುನ್

Tags

Related Articles

Close