ಪ್ರಚಲಿತ

ಮೋದಿ ಮಾರ್ಕ್ಸ್ ಕಾರ್ಡ್ ಬಹಿರಂಗಪಡಿಸಿದ ರಮ್ಯಾ.! ಯಾವುದಕ್ಕೆ ಎಷ್ಟು ಮಾರ್ಕ್ ಗೊತ್ತಾ.?!

ನರೇಂದ್ರ ಮೋದಿ ಪ್ರಧಾನಿಯಾಗುತ್ತಿದ್ದಂತೆ ತಾವು ಯಾರೆಂದೇ ತಿಳಿಯದವರು ಮೋದಿ ಹೆಸರು ಹೇಳಿ ತಮ್ಮ ಇಮೇಜ್ ಹೆಚ್ಚಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದರೆ ತಪ್ಪಾಗದು.! ಅದ್ಯಾವ ಮಟ್ಟಿಗೆ ಕಾಂಗ್ರೆಸ್ ಗೆ ತಲೆನೋವಾಗಿದೆ ಎಂದರೆ ಪ್ರತಿಯೊಂದು ವಿಚಾರಕ್ಕೂ ನರೇಂದ್ರ ಮೋದಿಯವರನ್ನು ಮಧ್ಯೆ ಎಳೆದು ತಾವು ಹೇಳಬೇಕೆಂದಿದ್ದ ವಿಚಾರವನ್ನು ಹೈಲೈಟ್ ಮಾಡಲು ಯತ್ನಿಸುತ್ತಾರೆ. ಕಾಂಗ್ರೆಸ್ ನಲ್ಲಿ ಮೂಲೆಗುಂಪಾದವರೂ ಕೂಡಾ ಮೋದಿ ಹೆಸರೇಳಿಕೊಂಡು ಇದೀಗ ತಮ್ಮ ರಾಜಕೀಯ ಜೀವನ ವೃದ್ದಿಸಲು ಹರಸಾಹಸಪಡುತ್ತಿದ್ದಾರೆ.!

ಕಾಂಗ್ರೆಸ್ ನ ರಾಜ್ಯ ರಾಜಕಾರಣದಲ್ಲಿ ಸದ್ಯ ಒಂದಲ್ಲಾ ಒಂದು ವಿವಾದಾತ್ಮಕ ವಿಚಾರದಲ್ಲಿ ಸುದ್ದಯಲ್ಲಿರುವ ನಟಿ ಹಾಗೂ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಜವಾಬ್ದಾರಿ ಹೊತ್ತಿರುವ ರಮ್ಯಾ ಪದೇ ಪದೇ ಪ್ರಧಾನಿ ಮೋದಿಯವರ ಬಗ್ಗೆ ಏನಾದರೊಂದು ವಿಷಯದಲ್ಲಿ ಹೇಳಿಕೆ ನೀಡಿ ತನ್ನ ಪ್ರಚಾರ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.!

ಮೋದಿ ಮಾರ್ಕ್ಸ್ ಕಾರ್ಡ್ ಲಭ್ಯ ಎಂದ ರಮ್ಯಾ..!

ಕಾಂಗ್ರೆಸ್ ಗೆ ಸದ್ಯ ಪ್ರಚಾರ ಮಾಡಲು ಯಾವುದೇ ವಿಷಯ ಸಿಗುವಂತಿಲ್ಲ. ರಾಜ್ಯದ ಅಭಿವೃದ್ಧಿಯಲ್ಲಿ ಶೂನ್ಯ ಕೊಡುಗೆ ನೀಡಿದ ಕಾಂಗ್ರೆಸ್ ಇದೀಗ ಚುನಾವಣಾ ಹೊಸ್ತಿಲಲ್ಲಿ ಮೋದಿ ಬಗ್ಗೆ ಅಪಪ್ರಚಾರ ಮಾಡಿ ರಾಜ್ಯದ ಜನತೆಯ ದಿಕ್ಕುತಪ್ಪಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಇದೀಗ ನರೇಂದ್ರ ಮೋದಿಯವರ ಅಂಕ ಪಟ್ಟಿ ಲಭ್ಯವಾಗಿದೆ ಎಂದು ತಮ್ಮ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿರುವ ರಮ್ಯಾ ನಕಲಿ ಅಂಕ ಪಟ್ಟಿ ಹರಿಯಬಿಟ್ಟಿದ್ದಾಳೆ. ಟ್ವಿಟ್ಟರ್ ನಲ್ಲಿ ಏನಾದರೊಂದು ಬರೆದು ಪದೇ ಪದೇ ಟೀಕೆಗೆ ಒಳಗಾಗುತ್ತಿರುವ ರಮ್ಯಾ ಇದೀಗ ಮೋದಿ ಅಂಕ ಪಟ್ಟಿಯ ವಿಚಾರದಲ್ಲೂ ವಿವಾದಕ್ಕೆ ಮತ್ತು ಟೀಕೆಗೆ ಗುರಿಯಾಗಿದ್ದಾರೆ.

ರಮ್ಯಾ ತಯಾರಿಸಿದ ಈ ಮಾರ್ಕ್ಸ್ ಕಾರ್ಡ್ ಕೇಸರಿ ಬಣ್ಣದ್ದಾಗಿದ್ದು ಇದರಲ್ಲಿ ಅಶೋಕ ಚಕ್ರವನ್ನೂ ಮುದ್ರೆ ಮಾಡಿದ್ದು , ಸಾಂವಿಧಾನಿಕವಾಗಿಯೂ ಭಾರೀ ಆವಮಾನ ಮಾಡಲಾಗಿದೆ. ಪದೇ ಪದೇ ಏನಾದರೊಂದು ವಿವಾದ ಸೃಷ್ಟಿಸುವ ರಮ್ಯಾ ಇದೀಗ ಮೋದಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.!

ಚುನಾವಣೆಯ ಪ್ರಚಾರಕ್ಕಾಗಿ ಸುಳ್ಳು ಪ್ರಚಾರ..!

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಯುವಜನತೆ ಹೊಂದಿಕೊಂಡಷ್ಟು ಬೇರೆ ಯಾವುದೇ ವಿದ್ಯಾಮಾನವೂ ಕೆಲಸಕ್ಕೆ ಬರುವುದಿಲ್ಲ. ಎಲ್ಲಾ ರಾಜಕೀಯ ಪಕ್ಷಗಳು ಹೆಚ್ಚಾಗಿ ಇದನ್ನೇ ಅನುಸರಿಸಿಕೊಂಡು ಬರುತ್ತಿದೆ. ಆದರೆ ತಮ್ಮ ಸಾಧನೆಗಳನ್ನು ಹೇಳಿ ಪಕ್ಷದ ಪ್ರಚಾರ ಮಾಡುವ ಬದಲು ನಟಿ ರಮ್ಯಾ ದೇಶದ ಪ್ರಧಾನಿ ಎಂಬುವುದನ್ನು ಮರೆತು ಪದೇ ಪದೇ ವಿವಾದಾತ್ಮಕವಾಗಿ ಟ್ವಿಟ್ ಮಾಡಿ ತನ್ನ ಪ್ರಚಾರ ಗಿಟ್ಟಿಸಿಕೊಳ್ಳುವ ಹುನ್ನಾರ ನಡೆಸುತ್ತಿದ್ದಾರೆ. ಆದೇ ಕಾರಣಕ್ಕಾಗಿ ವಿರೋಧ ಪಕ್ಷಗಳ ಬಗ್ಗೆ ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದು , ಕಾಂಗ್ರೆಸ್ ಗೆ ಇಂತಹ ಪ್ರಚಾರ ಅನಿವಾರ್ಯವಾಗಿದೆ. ಯಾಕೆಂದರೆ ಜನರ ಬಳೀ ಹೇಳಿಕೊಂಡು ತಿರುಗುವಂತಹ ಯಾವುದೇ ಅಭಿವೃದ್ಧಿ ಕಾರ್ಯ ಈವರೆಗೆ ನಡೆದಿಲ್ಲ. ಅದಕ್ಕಾಗಿಯೇ ಬಿಜೆಪಿ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಸುಳ್ಳು ಪ್ರಚಾರ ಮಾಡುವ ಹೀನ ಕೆಲಸಕ್ಕೆ ಕೈ ಹಾಕಿದ್ದಾರೆ.

ರಮ್ಯಾ ಫೇಕ್ ನ್ಯೂಸ್ ಬಳಕೆ ಮಾಡುತ್ತಿರುವುದು ಇದೇ ಮೊದಲೇನಲ್ಲಾ. ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಕಾರ್ಯಕರ್ತರು ಫೇಕ್ ಫೇಸ್‌ಬುಕ್‌ ಹಾಗೂ ಟ್ವಿಟ್ಟರ್ ಖಾತೆ ಹೊಂದಿರಬೇಕು ಎಂದು ಸೂಚನೆ ನೀಡಿ ಇತ್ತೀಚೆಗೆ ಭಾರೀ ಆರೋಪಕ್ಕೆ ತುತ್ತಾದ ರಮ್ಯಾ ದೇಶದ ಜನರ ಮುಂದೆ ಬೆತ್ತಲಾದ ಪ್ರಸಂಗವೂ ನಡೆದಿತ್ತು. ಯಾಕೆಂದರೆ ರಮ್ಯಾ ಮಾಡಿದ ಯಾವುದೇ ಆರೋಪಗಳು ಈವರೆಗೆ ಸಾಬೀತಾಗಿಲ್ಲ. ಅದೇ ಕಾರಣಕ್ಕಾಗಿ ಕಾಂಗ್ರೆಸ್ ನಲ್ಲಿಯೇ ರಮ್ಯಾಳಿಗೆ ನಯಾ ಪೈಸೆಯ ಮರ್ಯಾದೆ ಸಿಗುತ್ತಿಲ್ಲ ಆದ್ದರಿಂದ ಸುಳ್ಳು ಸುದ್ದಿ ಮಾಡಿ ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾಳೆ.!

-ಅರ್ಜುನ್

Tags

Related Articles

Close