ಪ್ರಚಲಿತ

ರೋಹಿತ್ ವೇಮುಲ ವಿಚಾರವಾಗಿ ಸಹಾಯಕ್ಕೆ ಧಾವಿಸಿದ ಮುಸ್ಲಿಂ ಲೀಗ್ ನ ಅಸಲಿ ಮುಖ ಬಯಲು!! ಕೊನೆಗೂ ಸಿಡಿದೆದ್ದ ರೋಹಿತ್ ವೇಮುಲನ ಹೆತ್ತಬ್ಬೆ!!

ಕಳೆದ ವರ್ಷ ದೇಶದಾದ್ಯಂತ ಕೋಲಾಹಲವೆಬ್ಬಿಸಿದ್ದ ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಪ್ರಕರಣವು ದಿನೇ ದಿನೇ ಒಂದೊಂದು ಹೊಸ ತಿರುವು ಪಡೆದುಕೊಂಡು, ಇದನ್ನೇ ವಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡರಲ್ಲದೇ ನರೇಂದ್ರ ಮೋದಿಯ ವಿರುದ್ಧ ಟೀಕಾ ಪ್ರಹಾರಗಳನ್ನು ಹರಿಸಿದ್ದರು. ಆದರೆ, ದಲಿತ ವಿದ್ಯಾರ್ಥಿ ಎನ್ನುವ ಒಂದೇ ಒಂದು ಕಾರಣಕ್ಕಾಗಿ ಸುದ್ದಿಯಾಗಿದ್ದ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನ ತಾಯಿ ರಾಧಿಕಾ ವೇಮುಲ ಅವರಿಗೆ ಮುಸ್ಲಿಂ ಲೀಗ್ ಸೇರಿದಂತೆ ಕೆಲವು ಪಕ್ಷಗಳು ಹಣ ನೀಡುವುದಾಗಿ ಹೇಳಿ ವಂಚಿಸಿರುವ ಆರೋಪ ಇದೀಗ ಕೇಳಿಬಂದಿದೆ.

ಹೌದು… ರೋಹಿತ್ ವೇಮುಲ ವಿಚಾರವಾಗಿ ದೇಶದಲ್ಲಿ ಹಲವರು ಮೋದಿ ಅವರ ವಿರುದ್ಧ ಮಾತನಾಡುತ್ತಿರುವಾಗಲೇ, ಮಧ್ಯಸ್ಥಿಕೆ ವಹಿಸಿದ್ದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷವು, “ರೋಹಿತ್ ವೇಮುಲ ಬಡವನಾಗಿದ್ದು, ಆತನೇ ಕುಟುಂಬಕ್ಕೆ ಆಧಾರನಾಗಿದ್ದ. ಹಾಗಾಗಿ ನಾವು ಕುಟುಂಬಸ್ಥರಿಗೆ ಮನೆಯೊಂದನ್ನು ಕಟ್ಟಿಸಿಕೊಡುತ್ತೇವೆ” ಎಂದು ಹೇಳಿದ್ದರು. ಆದರೆ ಭರವಸೆ ನೀಡಿ ಎರಡು ವರ್ಷವಾಗಿದ್ದರೂ ಕೂಡ ಇದುವರೆಗೆ ಮನೆ ಕಟ್ಟಿಸುವ ಜಾಗವಾಗಲಿ, ಮನೆಯ ಕಾಮಗಾರಿಯಾಗಲಿ ನಡೆದಿಲ್ಲ. ಹಾಗಾಗಿ ಈ ಕುರಿತಂತೆ ರೋಹಿತ್ ವೇಮುಲ ತಾಯಿ ರಾಧಿಕಾ ಅವರೇ ಪ್ರತಿಕ್ರಿಯಿಸಿದ್ದು, ಮುಸ್ಲಿಂ ಲೀಗ್ ಇದುವರೆಗೂ ಯಾವುದೇ ಮನೆ ಕಟ್ಟಿಸಿಕೊಟ್ಟಿಲ್ಲ ಎಂದು ಹೇಳಿದ್ದಾರೆ.

Image result for rohit vemula

“ಸ್ವಂತದ್ದೊಂದು ಮನೆ ಕಟ್ಟಿಸಲು ಹಾಗೂ ಬಡ ದಲಿತ ವಿದ್ಯಾರ್ಥಿಗಳಿಗೆ ಸಹಾಯ ಮಾಡ ಬಯಸಿರುವ ತಮಗೆ 20 ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ ಮುಸ್ಲಿಂ ಲೀಗ್‍ನವರು ಈಗ ಸುಮ್ಮನಾಗಿದ್ದಾರೆ” ಎಂದು ಖುದ್ದು ರಾಧಿಕಾ ವೇಮುಲ ಅವರು ಆರೋಪಿಸುವ ಮೂಲಕ ಮುಸ್ಲಿಂ ಲೀಗ್ ನ ಅಸಲಿ ಮುಖವನ್ನು ಬಯಲಿಗೆಳೆದಿದ್ದಾರೆ!! ವೇಮುಲ ಆತ್ಮಹತ್ಯೆ ಮಾಡಿಕೊಂಡ ಬಳಿಕ ಮುಸ್ಲಿಂ ಲೀಗ್ ಪಕ್ಷದವರು ಆಗಮಿಸಿ ನಮಗೆ ಮನೆ ಕಟ್ಟಿಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾರೂ ಪತ್ತೆ ಇಲ್ಲ. ನಾವು ಇಂದಿಗೂ ಬಾಡಿಗೆ ಮನೆಯಲ್ಲಿಯೇ ವಾಸಿಸುತ್ತಿದ್ದು, ರಾಜಕೀಯ ಲಾಭಕ್ಕೋಸ್ಕರ ಮುಸ್ಲಿಂ ಲೀಗ್ ಹೀಗೆ ಮಾಡಿದೆ ಎಂದು ದೂರಿದ್ದಾರೆ.

ಅಷ್ಟೇ ಅಲ್ಲದೇ, “ಮುಸ್ಲಿಂ ಲೀಗ್‍ನವರು ರೋಹಿತ್ ಸಾವನ್ನಪ್ಪಿದ ನಂತರ ನನ್ನನ್ನು ಕೇರಳದಲ್ಲಿ ಪಕ್ಷದ ಪ್ರಚಾರಕ್ಕೆ ವ್ಯಾಪಕವಾಗಿ ಬಳಸಿಕೊಂಡರು. ಆದರೆ ನಾನು, ನನ್ನ ಸೊಸೆ ಮಗು ಹೆತ್ತ ಸಂದರ್ಭದಲ್ಲಿ ಊರಿಗೆ ಹೋಗಲು ಇಚ್ಛಿಸಿದರೂ ನನ್ನನ್ನು ಬಿಡದೇ ತಮ್ಮ ಪ್ರಚಾರ ಕಾರ್ಯಗಳಲ್ಲಿ ಭಾಷಣ ಮಾಡಿಸಿದರು. 20 ಲಕ್ಷ ರೂಪಾಯಿ ಮೌಲ್ಯದ ಚೆಕ್ ನೀಡುವುದಾಗಿ ಅನೇಕ ದಿನಗಳಿಂದ ಸತಾಯಿಸಿದರು. ಆದರೆ ಆ ಪಕ್ಷದ ಮುಖಂಡ ಸಿ.ಕೆ. ಸುಬೈರ್ ಅವರು ಹಣ ಕೊಡುವುದಾಗಿ ನೀಡಿದ ಭರವಸೆಯನ್ನು ಈಡೇರಿಸದೇ ಸುಮ್ಮನಾಗಿ ಬಿಟ್ಟಿದ್ದಾರೆ” ಎಂದು ಹೇಳಿದ್ದಾರೆ!!

ವಿಪರ್ಯಾಸ ವೆಂದರೆ, ರೋಹಿತ್ ವೇಮುಲ ಸತ್ತ ಬಳಿಕ ಕರ್ನಾಟಕದಲ್ಲಿ ಆತ ನನ್ನ ಮಗ, ನನ್ನ ಸಹೋದರ ಎಂದರು. ದೇಶಾದ್ಯಂತ ವೇಮುಲನನ್ನು ಬೆಂಬಲಿಸಿ ಪ್ರತಿಭಟನೆಗಳು ನಡೆದವು. ಆತ ದಲಿತ ಎಂಬ ಕಾರಣಕ್ಕಾಗಿ ಇನ್ನಿಲ್ಲದ ಆರೋಪ ಮಾಡಿದರು. ಆದರೆ ಈಗ ರೋಹಿತ್ ವೇಮುಲ ತಾಯಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೂ ಯಾವ  ಹೋರಾಟಗಾರನೂ ಬೆಂಬಲಕ್ಕೆ ನಿಂತಿಲ್ಲ ಎನ್ನುವುದೇ ಬೇಸರದ ಸಂಗತಿ!!

Related image

ಆದರೆ, ವೇಮುಲ ಆತ್ಮಹತ್ಯೆ ಪ್ರಕರಣ ದೇಶಾದ್ಯಂತ ಸುದ್ದಿಯಾಗುತ್ತಿದ್ದಂತೆ, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈ ಕುರಿತು ಸಮಿತಿಯೊಂದನ್ನು ರಚಿಸಿ, ತನಿಖೆಗೆ ಆದೇಶ ನೀಡಿತ್ತು. ಗುಂಟೂರು ಕಲೆಕ್ಟರ್ ನೇತೃತ್ವದ ಸಮಿತಿಯು ವೇಮುಲ ಕುಟುಂಬದ ಜಾತಿ, ಕಸುಬು ಮತ್ತಿತರ ಅಗತ್ಯ ಮಾಹಿತಿ ಕಲೆಹಾಕಿತ್ತು. ಅಷ್ಟೇ ಅಲ್ಲದೇ, ವೇಮುಲ ಕುಟುಂಬ ದಲಿತ ಜಾತಿಗೆ ಸೇರಿಲ್ಲ, ಇತರ ಹಿಂದುಳಿದ ವರ್ಗದಲ್ಲಿ ಬರುವ ವಡ್ಡರ ಜಾತಿಗೆ ಸೇರಿದೆ ಎಂದು ವರದಿ ನೀಡಿದೆ!!

ಆದರೂ ದಲಿತ ವಿದ್ಯಾರ್ಥಿ ಎಂದು ಎಲ್ಲೆಡೆ ಸುದ್ದಿ ಹಬ್ಬಿಸಿರುವ ವಿಪಕ್ಷಗಳು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಧಿಕಾ ವೇಮುಲ ಅವರಿಗೆ ಇನ್ನಿಲ್ಲದ ಆಸೆಯನ್ನು ಹುಟ್ಟಿಸಿ ಇದೀಗ ಮೋಸ ಮಾಡುತ್ತಿದ್ದಾರೆ ಎಂದರೆ ವಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಏನು ಬೇಕಾದರೂ ಕೂಡ ಮಾಡಲು ಸಿದ್ಧ ಎನ್ನುವುದಕ್ಕೆ ಇದು ಒಂದು ನಿದರ್ಶನ.

ಮೂಲ:
https://indianexpress.com/article/india/rohith-vemula-suicide-case-family-mother-radhika-vemula-indian-union-muslim-league-5222577/

-ಅಲೋಖಾ

Tags

Related Articles

Close