ಪ್ರಚಲಿತ

ರಾಹುಲ್‌ಗೆ ‘ಆರ್ ಎಸ್ ಎಸ್’ ಕಂಟಕ: ಏನಿದು ರಾಗಾ ಹೊಸ ವಿವಾದ

ಪಾಪಿ ಪಾತಾಳಕ್ಕೆ ಹೋದರೂ ಮೊಣಕಾಲುದ್ದ ನೀರು ಎಂಬಂತೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಹೋದಲ್ಲೆಲ್ಲಾ ಸಂಕಷ್ಟಗಳೇ ಎದುರಾಗುತ್ತಿದ್ದು, ಅವರ ಪರಿಸ್ಥಿತಿ ಸಾರ್ವಜನಿಕ ವಲಯದಲ್ಲಿ ನಗೆಪಾಟಿಲಿಗೀಡಾಗಿದೆ ಎಂದರೆ ತಪ್ಪಾಗಲಾರದು.

ರಾಹುಲ್ ಗಾಂಧಿ ರಾಜಕೀಯ ಜೀವನದಲ್ಲಿ ಮತ್ತೊಂದು ಸಂಕಷ್ಟ ಎದುರಾಗಿದೆ. ಭಾರತವನ್ನು ಒಗ್ಗೂಡಿಸುತ್ತೇವೆ ಎಂದು ಹೇಳಿ ಅವರು ನಡೆಸಿದ ‘ಭಾರತ್ ಜೋಡೋ’ ಯಾತ್ರೆಯಲ್ಲಿ ಅವರು ಆರ್ ಎಸ್‌ ಎಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಅನ್ನು ‘೨೧ ನೇ ಶತಮಾನದ ಕೌರವರು ಎಂದು ಹೇಳಿದ್ದರು. ಅವರ ಈ ಹೇಳಿಕೆಯೂ ಸಹ ಇದೀಗ ಅವರಿಗೆ ಮತ್ತೊಮ್ಮೆ ಭಾರತದ ಕಾನೂನಿನ ಪರಿಚಯ ಮಾಡಿಕೊಡುವಂತೆ ಕಾಣುತ್ತಿದೆ. ಆರ್ ಎಸ್ ಎಸ್ ಕುರಿತ ಈ ಹೇಳಿಕೆಗೆ ಹರಿದ್ವಾರದ ನ್ಯಾಯಾಲಯದಲ್ಲಿ ಪಪ್ಪು ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

ಭಾರತೀಯ ದಂಡ ಸಂಹಿತೆ ೪೯೯ ಮತ್ತು ೫೦೦ ಸೆಕ್ಷನ್‌ಗಳ ಅಡಿಯಲ್ಲಿ, ಸ್ವಯಂಸೇವಕ ಕಮಲ್ ಭಡೋರಿಯಾ ಎಂಬವರು ವಕೀಲ ಅರುಣ್ ಭಡೋರಿಯಾ ಅವರ ಮೂಲಕ ರಾಗಾ ವಿರುದ್ಧ ದೂರು ದಾಖಲಿಸಿದ್ದಾರೆ. ಎ.೧೨ ರಂದು ನ್ಯಾಯಾಲಯವು ಈ ದೂರ ದಿನ ವಿಚಾರಣೆಯನ್ನು ನಡೆಸಲಿರುವುದಾಗಿ ಅರುಣ್ ತಿಳಿಸಿದ್ದಾರೆ. ಈ ದಂಡ ಸಂಹಿತೆ ಪ್ರಕಾರ ತಪ್ಪು ಸಾಬೀತಾದಲ್ಲಿ ರಾಗಾ ಮತ್ತೆ ೨ ವರ್ಷಗಳ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯೂ ಇದೆ.

ಒಟ್ಟಿನಲ್ಲಿ ಹೋದಲ್ಲೆಲ್ಲಾ ವಿವಾದಗಳನ್ನೇ ಮೈಮೇಲೆಳೆದುಕೊಳ್ಳುತ್ತಿರುವ ರಾಗಾ ವಿರುದ್ಧ ಕಾಂಗ್ರೆಸ್ ಸೊಲ್ಲೆತ್ತದಿರುವುದು ವಿಪರ್ಯಾಸವೇ ಸರಿ. ಕಾಂಗ್ರೆಸ್ ಗುರು ನಕಲಿ ಗಾಂಧಿ ಕುಟುಂಬಕ್ಕೆ ದಾಸರಾಗಿದ್ದು, ಅವರು ತಮ್ಮ ಪಕ್ಷದ ನಾಯಕರು ತಪ್ಪು ಮಾಡಿದರೂ ಅದನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇಂತಹ ಪಕ್ಷ ಅಧಿಕಾರಕ್ಕೆ ಬಂದರೆ ದೇಶ ಹಾಳಾಗುತ್ತದೆ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ.

Tags

Related Articles

Close