ಪ್ರಚಲಿತ

ಪ್ರತಿಪಕ್ಷಗಳ ಸಂಸದರೆಲ್ಲಾ ಒಟ್ಟಾಗಿ ನರೇಂದ್ರ ಮೋದಿ ಸರಕಾರದ ವಿರುದ್ಧ ಮಾಡಿರುವ ದೇಶವೇ ಕ್ಷಮಿಸಲಾರದಂಥಾ ಕುತಂತ್ರವೇನೆಂದು ತಿಳಿದರೆ ಬೆಚ್ಚಿಬೀಳುವಿರಿ!! 2018ರಲ್ಲೇ ಲೋಕಸಭಾ ಚುನಾವಣೆ?!

ಇಂಥದೊಂದು ಪರಿಸ್ಥಿತಿ ನಮ್ಮ ದೇಶಕ್ಕೆ ಖಂಡಿತಾ ಬರಬಾರದಿತ್ತು…! ಮೋದಿಯವರಂಥಾ ವ್ಯಕ್ತಿ ಈ ದೇಶವನ್ನು ಅಭಿವೃತ್ತಿಯತ್ತ ಮುನ್ನಡೆಸುತ್ತಿದ್ದಾರೆಂದು ಅವರಿಗೂ ಒಂದು ಅವಕಾಶ ಕೊಡೋಣ ಎಂದು ಭಾವಿಸಿದ್ದರೆ ಇಂಥಾ ಸ್ಥಿತಿ ಖಂಡಿತಾ ಬರುತ್ತಿರಲಿಲ್ಲ. ಆದರೆ ತನ್ನ ವೈಯಕ್ತಿಕ ಹಿತಾಸಕ್ತಿಯ ಮುಂದೆ ದೇಶದ ಅಭಿವೃದ್ಧಿ, ಪ್ರಜೆಗಳ ಮನಃಸ್ಥಿತಿ ಎಲ್ಲವೂ ಗೌಣ. ಸರಕಾರವನ್ನು ಪತನಗೊಳಿಸಲು ಪ್ರತಿಪಕ್ಷಗಳೆಲ್ಲಾ ಒಂದಾಗಿದ್ದಾರೆ ಅಂದರೆ.. ಇದರಿಂದ ಮೋದಿಗೆ ನಷ್ಟವಾಗುವುದೋ ಇಲ್ಲವೋ? ಆದರೆ ನೂರ ಇಪ್ಪತ್ತೈದು ಕೋಟಿ ಜನರಿಗಂತೂ ಇದು ತುಂಬಲಾರದ ನಷ್ಟ.. ಇಂಥಾ ಕುತಂತ್ರ ಹೆಣೆದ ಪಕ್ಷಗಳ ಮುಖಂಡರನ್ನು ದೇಶದ ಪ್ರಜೆಗಳು ಯಾವ ರೀತಿ ಅರ್ಥೈಸಿಕೊಳ್ಳಬಹುದು ಎಂದು ಅಂದಾಜೂ ಇರಲಾರದು… ಹೀಗೆ ಮೋದಿ ಟೀಂ ಅನ್ನು ಎದುರಿಸಲು ಹೋಗಿ ತಮ್ಮ ಗುಂಡಿಯನ್ನು ತಾವೇ ತೋಡುತ್ತಿದ್ದಾರೆ ಪ್ರತಿಪಕ್ಷಗಳು!!

ನರೇಂದ್ರ ಮೋದಿ ಸರಕಾರವನ್ನು ಪತನಗೊಳಿಸಬೇಕೆಂದು ಇನ್ನಿಲ್ಲದಂತೆ ಪ್ರಯತ್ನ ನಡೆಸುತ್ತಿರುವ ಪ್ರತಿಪಕ್ಷಗಳ ಸದಸ್ಯರು ಒಟ್ಟಾಗಿ ಕುತಂತ್ರವೊಂದನ್ನು ಹೆಣೆದಿದ್ದಾರೆ. ಈ ಕುತಂತ್ರವನ್ನು ಇಡೀ ದೇಶವೇ ಕ್ಷಮಿಸಲಾರದು. ಅಮಿತ್ ಶಾ ಹೇಳಿದಂತೆ ನರೇಂದ್ರ ಮೋದಿ ಸರಕಾರವನ್ನು ಮಣಿಸಲು ವಿರೋಧ ಪಕ್ಷಗಳೆಲ್ಲಾ ಪ್ರಾಣಿಗಳಂತೆ ಒಟ್ಟಾಗಿವೆ ಎಂದು ಹೇಳಿರುವುದು ಇದನ್ನೇ ಉದ್ದೇಶಿಸಿ ಇರಬಹುದು. ಅವರ ಹೇಳಿಕೆಯಂತೆಯೇ ಮೋದಿ ಸರಕಾರವನ್ನು ಮಣಿಸಲು ವಿರೋಧ ಪಕ್ಷಗಳೆಲ್ಲಾ ಒಟ್ಟಾಗಿದ್ದಾರೆ. ತನ್ನ ಸ್ವಹಿತಾಸಕ್ತಿಗಾಗಿ ಪ್ರಜಾಪ್ರಭುತ್ವವನ್ನೇ ಬಲಿಕೊಡಲೂ ಪ್ರತಿಪಕ್ಷಗಳು ಸಿದ್ಧ ಎನ್ನುವುದನ್ನು ಈ ನಿದರ್ಶನ ತೋರಿಸಿಕೊಡುತ್ತಿದೆ. ದೇಶದಲ್ಲಿ ಅಸಹಿಷ್ಣುತೆ ತಾಂಡವಾಡುತ್ತಿದೆ ಎಂದೆಲ್ಲಾ ಬೊಬ್ಬಿಟ್ಟ ಪ್ರತಿಪಕ್ಷಗಳ ಸದಸ್ಯರು ಇದೀಗ ತಾವೇ ಅಸಹಿಷ್ಣುಗಳಾಗಿ ವರ್ತಿಸುತ್ತಿದ್ದಾರೆ ಎನ್ನುವುದನ್ನು ಇದು ತೋರಿಸಿಕೊಡುತ್ತದೆ.

ಹೌದು, ಕೇಂದ್ರದ ವೈಫಲ್ಯತೆಯನ್ನು ಖಂಡಿಸಿ, ದೇಶದಲ್ಲಿ ಶೀಘ್ರವೇ ಚುನಾವಣೆಗೆ ಆಗ್ರಹಿಸಿ ಪ್ರತಿಪಕ್ಷಗಳ ಸಂಸದರೆಲ್ಲಾ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಇಂಗ್ಲೀಷ್ ವಾರ್ತಾವಾಹಿನಿಯಾಗಿರುವ ರಿಪಬ್ಲಿಕ್‍ವಲ್ಡ್ ವರದಿ ಮಾಡಿದೆ. ಒಟ್ಟಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಕೇಂದ್ರ ಸರಕಾರಕ್ಕೆ ಒತ್ತಡ ತಂದು ಅವಧಿಪೂರ್ಣ ಚುನಾವಣೆ ನಡೆಸಲು ಈ ಎಲ್ಲಾ ಕುತಂತ್ರ ಇದು ಎನ್ನಲಾಗಿದೆ.  ಮೂಲಗಳ ಪ್ರಕಾರ ಆರಂಭದಲ್ಲಿ 100 ಮಂದಿ ಲೋಕಸಭಾ ಪ್ರತಿಪಕ್ಷದ ಸದಸ್ಯರು ತನ್ನ ಸ್ಥಾನಕ್ಕೆ ರಾಜೀನಾಮೆಗೆ ಮುಂದಾಗಿದ್ದಾರೆ. ಮುಖ್ಯವಾಗಿ ಕಾಂಗ್ರೆಸ್, ಚಂದ್ರಬಾಬು ನಾಯ್ಡು ಹಾಗೂ ಶರದ್ ಪವಾರ್ ಹಾಗೂ ಇನ್ನಿತರ ಪಕ್ಷದ ಸಂಸದರು ರಾಜೀನಾಮೆಗೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ವಿಚಾರದ ಮಾಹಿತಿ ಸಿಕ್ಕ ನರೇಂದ್ರ ಮೋದಿಯವರು ಚುನಾವಣೆಗೆ ಈಗಿಂದೀಗಲೇ ಸಿದ್ಧತೆ ನಡೆಸಿದ್ದಾರೆನ್ನಲಾಗಿದೆ.

 

ರಾಜೀನಾಮೆ ಯಾಕೆ ಗೊತ್ತೇ?

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದು, ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಮಹಾಭಿಯೋಗ ಹಾಗೂ ಇನ್ನಿತರ ರಾಜಕೀಯ ಕಾರಣಗಳನ್ನಿಟ್ಟುಕೊಂಡು ಕೇಂದ್ರ ಸರಕಾರಕ್ಕೆ ಒತ್ತಡ ಹೇರಿ ಇಕ್ಕಟ್ಟಿಗೆ ಸಿಲುಕುವುದು ರಾಜೀನಾಮೆಯ ಒಟ್ಟು ಉದ್ದೇಶ. ಕಾಂಗ್ರೆಸ್, ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಾರ್ಟಿ(ಟಿಡಿಪಿ) ಮತ್ತು ಶರದ್ ಪವಾರ್ ನೇತೃತ್ವದ ನಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಸಂಸತ್ ಸದಸ್ಯರು ರಾಜೀನಾಮೆ ನೀಡಲಿದ್ದಾರೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ನಾಯ್ಡು, ಪವಾರ್ ಹಾಗೂ ಕಾಂಗ್ರೆಸ್ ಪಕ್ಷದ ಹಲವು ನಾಯಕರನ್ನೊಳಗೊಂಡು ಈಗಾಗಲೇ ದೆಹಲಿಯಲ್ಲಿ ಎರಡು ದಿನಗಳ ಉನ್ನತಮಟ್ಟದ ಸಭೆಗಳನ್ನು ನಡೆಸಲಾಗಿದೆ. ಕುತೂಹಲಕರವಾದ ವಿಚಾರವೇನೆಂದರೆ ಈ ಮುಂಚೆ ವೈಎಸ್ ಜಗನ್ ಮೋಹನ್ ರಾವ್ ಟ್ವೀಟಿಸಿದ್ದ ಪ್ರಕಾರ ವೈಎಸ್‍ಆರ್‍ಪಿಸಿ ಸಂಸದರು ಈಗಾಗಲೇ ತಮ್ಮ ರಾಜೀನಾಮೆಯನ್ನು ಸಲ್ಲಿಸಲಿದ್ದು ಉಳಿದವರು ಇದನ್ನೇ ಅನುಸರಿಸಬೇಕೆಂದು ತಿಳಿಸಿದ್ದಾರೆ.. ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗುತ್ತಿರುವ ವಿಚಾರವನ್ನು ಕಾಂಗ್ರೆಸ್ ಮೂಲಗಳೂ ಕೂಡಾ ಖಚಿತಪಡಿಸಿವೆ ಎಂದು ವಾಹಿನಿ ತಿಳಿಸಿದೆ.

ಪ್ರತಿಪಕ್ಷಗಳ ಪ್ಲಾನ್ ಇದು

1. 2019ರ ಮುಂಚೆಯೇ ಚುನಾವಣೆ ನಡೆಸಲು ಅದಕ್ಕೆ ಈಗಿಂದೀಗಲೇ ತಯಾರಿ ನಡೆಸಿ ಮೋದಿ ಸರಕಾರವನ್ನು ಒಟ್ಟಾಗಿ ಸೇರಿ ಸೋಲಿಸುವುದು, ಮೋದಿ ವಿರೋಧಿ ಅಲೆಯನ್ನು ದೇಶದಲ್ಲೆಡೆ ಪಸರಿಸಲು ಈ ನಿರ್ಧಾರಕ್ಕೆ ಬಂದಿದೆ. ಮುಖ್ಯವಾಗಿ ಹಲವಾರು ಪ್ರಮುಖ ವಿಚಾರಗಳಾಗಿರುವ ಆಂಧ್ರ ಸ್ಥಾನಮಾನ, ಪಿಎನ್‍ಬಿ ಹಗರಣ, ಎಸ್‍ಸಿಎಸ್ಟಿ ಆಕ್ಟ್ ಆದೇಶ, ಕಾವೇರಿ ಜಲಹಂಚಿಕೆ ವಿವಾದ ಎಲ್ಲವನ್ನೂ ಮುಂದಿಟ್ಟು ಸರಕಾರವನ್ನು ಹಣಿಯುವುದು.

2. ಬಿಜೆಪಿಯನ್ನು ಸೋಲಿಸಲು ಅದರ ವಿರುದ್ಧವಾಗಿರುವ ಎಲ್ಲಾ ಪಕ್ಷಗಳು ಸೇರಿ ಏಕತೆಯಿಂದ ಮೋದಿ ವಿರೋಧಿಮೈತ್ರಿಕೂಟ ರಚಿಸಿಕೊಂಡು ಬಲಪ್ರದರ್ಶನ ನಡೆಸಲು ಪ್ರಯತ್ನಿಸುವುದು. ಇದಕ್ಕೆ ಪೂರಕವೆಂಬಂತೆ ಈ ವಾರ ಚಂದ್ರಬಾಬು ನಾಯ್ಡು, ಶರದ್ ಪವಾರ್, ಫಾರೂಕ್ ಅಬ್ದುಲ್ಲಾ, ಕಾಂಗ್ರೆಸ್‍ನ ಸದಸ್ಯರು ಇತರರೊಂದಿಗೆ ದೆಹಲಿಯಲ್ಲಿ ಮಾತುಕತೆ ನಡೆಸಿದ್ದಾರೆ. ಮಮತಾ ಬ್ಯಾನರ್ಜಿ ಹಾಗೂ ತೆಲಂಗಾನದ ಮುಖ್ಯಮಂತ್ರಿ ಕೆಸಿಆರ್ ಕೂಡಾ ಕೋಲ್ಕತ್ತಾದಲ್ಲಿ ಉನ್ನತಮಟ್ಟದ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಎರಡು ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷವು ಒಟ್ಟಾಗಿ ಯೋಗಿ ಆದಿತ್ಯನಾಥ್ ಹಾಗೂ ಕೇಶವ ಪ್ರಸಾದ್ ಮೌರ್ಯ ಸೇರಿದ ಸ್ಥಾನಗಳನ್ನು ಗೆದ್ದುಕೊಂಡಿದ್ದರು.

3. ಕಲಾಪ ವ್ಯರ್ಥಗೊಂಡು ತಾವೆಲ್ಲಾ ಸಂಬಳ ತೆಗೆದುಕೊಳ್ಳುವುದಿಲ್ಲ ಎಂದು ಎನ್‍ಡಿಎ ಸಂಸತ್ ಸದಸ್ಯರು ಒಮ್ಮತದ ನಿರ್ಧಾರಕ್ಕೆ ಬಂದಿದ್ದರು. ಇದಕ್ಕೆ ತಿರುಗೇಟು ನೀಡಲೆಂದು ಸದನ ಸರಿಯಾಗಿ ನಡೆಯದಿರಲು ನಾವು ಕಾರಣರಲ್ಲ, ಸರ್ಕಾರದ ನೀತಿಯೇ ಇದಕ್ಕೆ ಕಾರಣ ಎಂದು ಜನರಿಗೆ ತೋರಿಸುವ ಸಲುವಾಗಿ ಸಾಮೂಹಿಕ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾರೆ.

4. ಪ್ರಧಾನಿ ನರೇಂದ್ರ ಮೋದಿಯವರನ್ನು ಹೇಗಾದರೂ ಮಾಡಿ ಸೋಲಿಸಲೇಬೇಕು ಎಂದು ಕಟ್ಟುಬಿದ್ದ ಪ್ರತಿಪಕ್ಷಗಳು, `ಮೋದಿ ವಿರುದ್ಧ ಎಲ್ಲರೂ'(ಎಲ್ಲಾ ಪಕ್ಷದವರು ವರ್ಸಸ್ ಮೋದಿ) ಎಂಬ ಘೋಷಣಾ ವಾಕ್ಯದಲ್ಲಿ ಒಟ್ಟಾಗಿ ಸಾರ್ವತ್ರಿಕ ಚುನಾವಣೆಯನ್ನು ಎದುರಿಸುವುದು. ಸೈದ್ಧಾಂತಿಕ ಭಿನ್ನತೆ, ಪೈಪೋಟಿ ಏನಿದ್ದರೂ ಎಲ್ಲರೂ ಒಟ್ಟಾಗಿ ಸೇರಿ ಮೋದಿಯವರನ್ನು ಚುನಾವಣೆಯಲ್ಲಿ ಸೋಲಿಸುವುದು. ಮೋದಿಯವರ ಆಡಳಿತಕ್ಕೆ ಅಸಹಕಾರ ವ್ಯಕ್ತಪಡಿಸಿ ಮೋದಿ ಆಡಳಿತಕ್ಕೆ ವಿಫಲ ವ್ಯಕ್ತಿ ಎಂದು ತೋರಿಸಿ ಬಳಿಕ ದೇಶದಲ್ಲಿ ಚುನಾವಣೆ ನಡೆಯುವಂತೆ ಮಾಡುವುದು, ಇದಾದ ಬಳಿಕ ಎಲ್ಲರೂ ಸಾಮೂಹಿಕವಾಗಿ ರಾಜೀನಾಮೆ ನೀಡುವುದು ಹೀಗೆ ಪ್ರತಿಪಕ್ಷಷಗಳ ಕಾರ್ಯಸೂಚಿಯಾಗಿದೆ. ಈಚೆಗೆ ನಡೆದ ಕಲಾಪದಲ್ಲಿಯೂ ಟಿಡಿಪಿ, ಐಎಸ್‍ಆರ್‍ಸಿಪಿ ಹಾಗೂ ಕಾಂಗ್ರೆಸಿಗರು 25 ದಿನಗಳ ಕಾಲ ಕಲಾಪ ನಡೆಯದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದೂ ಕೂಡಾ ಎರಡನೇ ಬಜೆಟ್ ಅಧಿವೇಶನಕ್ಕೂ ಅಡ್ಡಗಾಲು ಹಾಕಿದ್ದರು. ವೈಎಸ್‍ಆರ್‍ಸಿಪಿಯ ಐದು ಸಂಸದರು ತಮ್ಮ ರಾಜೀನಾಮೆಯನ್ನು ಶುಕ್ರವಾರ ಸ್ಪೀಕರ್ಗ್‍ಗೆ ಸಲ್ಲಿಸಿದ್ದಾರೆ. ಐಎಸ್‍ಆರ್ ಪ್ರಮುಖ ಜಗನ್ ಮೋಹನ್ ರೆಡ್ಡಿ ತನ್ನಂತೆ ನಡೆದುಕೊಳ್ಳಬೇಕು ಎಂದು ಚಂದ್ರಬಾಬು ನಾಯ್ಡು ಅವರಿಗೆ ಸೂಚಿಸಿರುವುದು ಇಲ್ಲಿ ಸ್ಮರಿಸಬಹುದು.

ರಾಜೀನಾಮೆ ನಿರ್ಧಾರಕ್ಕೆ ಉಳಿದ ಪಕ್ಷಗಳ ಕಾರ್ಯಸೂಚಿ ಏನು ಎಂದು ಇನ್ನಷ್ಟೇ ತಿಳಿದುಬರಬೇಕಾಗಿದೆ. ಕೆಲವರು ತೃತೀಯ ಮೈತ್ರಿಕೂಟ ರಚಿಸುವ ಉದ್ದೇಶ ಹೊಂದಿದ್ದಾರೆ. ಒಟ್ಟಿನಲ್ಲಿ ಒಂದು ಸಿಂಹವನ್ನು ಸೋಲಿಸಲು ಉಳಿದ ಪ್ರಾಣಿಗಳೆಲ್ಲಾ ಒಟ್ಟಾಗಿವೆ ಎಂದೇ ಹೇಳಬಹುದು.

source: http://www.republicworld.com/india-news/politics/sensational-political-plot-opposition-may-attempt-mass-resignations-to-pressure-government-into-early-general-elections
ಚೇಕಿತಾನ

Tags

Related Articles

Close