ಪ್ರಚಲಿತ

ರಾಮುಲು ಸೋಲಿಸಲು ಸಿಎಂ ಜೊತೆ ಹೋದ ಸತೀಶ್ ಜಾರಕಿಹೊಳಿಯನ್ನು ಜಾಡಿಸಿದ ವಾಲ್ಮಿಕಿ ಸಮುದಾಯ!! ತೀರಾ ಮುಖಭಂಗ ಅನುಭವಿಸಿದ ಸಿಎಂ ಹಾಗೂ ಜಾರಕಿಹೊಳಿ!!

ರಾಜ್ಯದಲ್ಲಿ ಚುನಾವಣಾ ಕಾರ್ಯ ರಂಗೇರುತ್ತಿದ್ದು ಈಗಾಗಲೇ 22 ರಾಜ್ಯಗಳಲ್ಲಿ ಗೆದ್ದಿರುವ ಬಿಜೆಪಿ ಕರ್ನಾಟಕದಲ್ಲೂ ತಾನೇ ಗೆಲುವಿನ ಗದ್ದುಗೆಯನ್ನು ಏರಬೇಕು ಎಂದು ಪಣತೊಟ್ಟು ನಿಂತಿದೆ!! ಈಗಾಗಲೇ ಬಾದಾಮಿ ಕ್ಷೇತ್ರದಲ್ಲಿ ಶ್ರೀರಾಮುಲು ಸ್ಪರ್ಧಿಸುತ್ತಿದ್ದು ಕಾಂಗ್ರೆಸ್‍ನಿಂದ ಸಿಎಂ ಸಿದ್ದರಾಮಯ್ಯನವರು ಕಣಕ್ಕಿಳಿದಿದ್ದಾರೆ!! ಇದೀಗ ಇಡೀ ರಾಜ್ಯದ ಕಣ್ಣು ಬಾದಾಮಿ ವಿಧಾನಸಭಾ ಕ್ಷೇತ್ರದ ಮೇಲಿದೆ!! ಇದಾಗಲೇ ಸಿಎಂ ಸಿದ್ದರಾಮಯ್ಯನವರಿಗೆ ಶ್ರೀರಾಮುಲು ಬಾದಾಮಿಯಲ್ಲಿ ಸ್ಪರ್ಧಿಸುತ್ತಿರುವ ವಿಚಾರ ಕೇಳುತ್ತಿದ್ದಂತೆಯೇ ನಡುಕ ಶುರುವಾಗಿದೆ!! ಅದಲ್ಲದೆ ಚುನಾವಣಾ ಪ್ರಚಾರಕ್ಕೆ ಹೋದಲ್ಲೆಲ್ಲಾ ಕಾಂಗ್ರೆಸ್ ತೀವ್ರ ಮುಖಭಂಗಕ್ಕೀಡಾಡುತ್ತಿದೆ!!

ವಾಲ್ಮಿಕಿ ಸಮುದಾಯದ ಓಲೈಕೆಗೆ ಸತೀಶ್ ಜಾರಕಿಹೊಳಿ ನಿಯೋಜನೆ!!

ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಪ್ರತಿಕೂಲ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬಾದಾಮಿಯಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುತ್ತಿದ್ದಾರೆ, ಅಲ್ಲಿನ ವಾಲ್ಮೀಕಿ ಸಮುದಾಯದ ಮುಖಂಡರ ಓಲೈಕೆಗಾಗಿ ಸತೀಶ್ ಜಾರಕಿಹೊಳಿ ಅವರನ್ನು ನಿಯೋಜಿಸಿದ್ದರು. ಆದರೆ, ಅವರಿಗೆ ಈಗ ಹಿನ್ನಡೆ ಉಂಟಾಗಿದೆ. ಬಾದಾಮಿಯಲ್ಲಿ ವಾಲ್ಮೀಕಿ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಆ ಮತಗಳನ್ನೂ ಪಡೆಯುವ ಮೂಲಕ ಜಯ ಸಾಧಿಸಲು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ವಾಲ್ಮೀಕಿ ಸಮುದಾಯದ ನಾಯಕ ಶ್ರೀರಾಮುಲು ಅವರನ್ನೇ ಬಿಜೆಪಿ ಕಣಕ್ಕಿಳಿಸಿರುವುದರಿಂದ ಕಾಂಗ್ರೆಸ್ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿದೆ. ಹೀಗಾಗಿಯೇ ಸಮುದಾಯವನ್ನು ತನ್ನತ್ತ ಸೆಳೆದುಕೊಳ್ಳಲು ಅದೇ ಸಮುದಾಯದ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಅವರನ್ನು ಸಿಎಂ ಬಾದಾಮಿಗೆ ನಿಯೋಜಿಸಿದ್ದರು. ಆದರೆ ವಾಲ್ಮೀಕಿ ಸಮುದಾಯದ ಸ್ಥಳೀಯ ನಾಯಕರು ಸತೀಶ್ ಜಾರಕಿಹೊಳಿ ಅವರ ಮಾತಿಗೆ ಮನ್ನಣೆ ನೀಡುತ್ತಿಲ್ಲ ಎನ್ನಲಾಗಿದೆ.

ಜಾರಕಿಹೊಳಿಗೆ ಭಾರೀ ಅವಮಾನ!!

ಸಿದ್ದರಾಮಯ್ಯನವರು ಈಗಾಗಲೇ ಬಾದಾಮಿ ಕ್ಷೇತ್ರದಲ್ಲಿ ಶ್ರೀರಾಮುಲು ವಿರುದ್ಧ ಸ್ಪರ್ಥಿಸಲು ತಯಾರಾಗಿದ್ದಾರೆ!! ಸಿದ್ದರಾಮಯ್ಯ ಮತ್ತು ಅವರ ಟೀಮ್‍ಗೆ ಈಗಾಲೇ ಇಲ್ಲಿ ಗೆಲುವು ಕನಸಿನ ಮಾತೆಂದು ತಿಳಿದಿದೆ!! ಆದರೂ ಶತಾಯ ಗತಾಯ ಪ್ರಯತ್ನದಲ್ಲಿ ತೊಡಗಿದ್ದಾರೆ!! ಕಾಂಗ್ರೆಸ್‍ಗೆ ಬೆಂಬಲ ನೀಡಿ ಸಿಎಂ ಸಿದ್ದರಾಮಯ್ಯನವರನ್ನು ಗೆಲ್ಲಿಸಿ ಎಂದು ಕೋರಿರುವ ಸತೀಶ್ ಜಾರಕಿಹೊಳಿ ಮನವಿಯನ್ನು ಅಲ್ಲಿನ ನಾಯಕರು ತಿರಸ್ಕರಿಸಿದ್ದು “ಈ ಬಾರಿ ನಮ್ಮನ್ನ ಬಿಟ್ಟು ಬಿಡಿ. ಸಿದ್ದರಾಮಯ್ಯ ಅವರನ್ನು ಗೆಲ್ಲಿಸಲು ಸಾಧ್ಯವಿಲ್ಲ. ನಮಗೆ ಸಿಎಂ ಬೇಡ, ನಮ್ಮವರನ್ನು ಉಪಮುಖ್ಯಮಂತ್ರಿ ಮಾಡಿಕೊಳ್ಳಲು ಶ್ರೀರಾಮುಲು ಅವರನ್ನು ಗೆಲ್ಲಿಸಲು ನಾವು ನಿರ್ಧರಿಸಿದ್ದೇವೆ,” ಎಂದು ನೇರವಾಗಿಯೇ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಸತೀಶ್ ಜಾರಕಿಹೊಳಿ ಅವರಿಗೆ ಬಾದಾಮಿಯಲ್ಲಿ ಭಾರೀ ಅವಮಾನವೇ ಆಗಿದೆ ಎಂದು ಹೇಳಬಹುದು!!.

Image result for satheesh jarakiholi with cm

ಸಭೆಯಿಂದ ಹೊರನಡೆದ ಸತೀಶ್ ಜಾರಕಿಹೊಳಿ!!

ಯಾವಾಗ ಬಾದಾಮಿಯಲ್ಲಿ ಸಿದ್ದರಾಮಯ್ಯನವರಿಗೆ ಓಟು ಸಿಗಲ್ಲ ಎಂದು ತಿಳಿಯಿತೋ ಆಗ ಸತೀಶ್ ಜಾರಕಿಹೊಳಿಯವರು ಬಂದ ದಾರಿಗೆ ಸುಂಕವಿಲ್ಲ ಇಲ್ಲಿ ನಮಗೆ ಗೆಲುವಿಲ್ಲ ಸಿಎಂ ಸಿದ್ದರಾಮಯ್ಯನವರಿಗೆ ಈ ಬಾರಿ ಸೋಲೇ ಗತಿ ಎಂಬ ಮಾತು ಕೊನೆಗೂ ಸ್ಪಷ್ಟವಾಗಿ ಅರ್ಥವಾಗಿರಬಹುದು!! ಬಾದಾಮಿ ಪಟ್ಟಣ ಪಕ್ಕದ ಆಡಗಲ್ಲ ಗ್ರಾಮದ ತೋಟದಲ್ಲಿ ನಿನ್ನೆ ನಡೆದಿದ್ದ ಗೌಪ್ಯ ಸಭೆಯಲ್ಲಿ ವಾಲ್ಮೀಕಿ ಮುಖಂಡರಿಂದ ಈ ಅಭಿಪ್ರಾಯ ವ್ಯಕ್ತವಾಗಿದ್ದು, “ಮತ್ತೊಮ್ಮ ಮಾತಾಡೋಣ,” ಎಂದು ಹೇಳಿ ಸತೀಶ ಜಾರಕಿಹೊಳಿ ಸಭೆಯಿಂದ ಹೊರನಡೆದಿದ್ದಾರೆ ಎಂದು ತಿಳಿದು ಬಂದಿದೆ.

ಸಮೀಕ್ಷೆಯಲ್ಲೂ ಶ್ರೀರಾಮುಲು ಮುಂದು!!

ಅದಲ್ಲದೆ ಈಗಾಗಲೇ ಬಿಡುಗಡೆಯಗಿರುವ ಸಮೀಕ್ಷೆಯನ್ನು ನೋಡಿ ಕೂಡಾ ಸಿದ್ದರಾಮಯ್ಯನವರು ಬೆಚ್ಚಿಬಿದ್ದಿದ್ದರು.. ಈಗಾಗಲೇ ಸಮೀಕ್ಷೆಯ ಪ್ರಕಾರ ಬಾದಾಮಿಯಲ್ಲಿ ಸ್ಪರ್ಧಿಸುತ್ತಿರುವ ಶ್ರೀರಾಮುಲುರವರು ಕಠಿಣ ಸ್ಪರ್ಧೆಯ ನಡುವೆಯೂ 3500ಕ್ಕೂ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸಬಹುದು ಎಂದು ಸಮೀಕ್ಷೆಯ ಪ್ರಕಾರ ಹೇಳಲಾಗಿದೆ!! ಪ್ರಮುಖವಾಗಿ ವಾಲ್ಮೀಕಿ, ಎಸ್‍ಸಿ ಎಡಗೈ, ಲಿಂಗಾಯತ ಸಂಪ್ರದಾಯವನ್ನು ನಂಬುವ ಹಿಂದುಳಿದ ವರ್ಗಗಳು ಶ್ರೀರಾಮುಲು ಪರ ನಿಲ್ಲು ಸಾಧ್ಯತೆಗಳು ಜಾಸ್ತಿ ಇದೆ!!. ಲಿಂಗಾಯತ- ವೀರಶೈವರ ಮತಗಳು ಶ್ರೀರಾಮಲು ಮತ್ತು ಲಿಂಗಾಯತ ಜೆಡಿಎಸ್ ಅಭ್ಯರ್ಥಿ ಹನುಮಂತ ಮಾವಿನಮರದ ನಡುವೆ ಹಂಚಿಹೋಗಲಿವೆ.

Image result for siddaramaiah cm

ಬಿಎಸ್ ಯಡಿಯೂರಪ್ಪನವರು ಚುನಾವಣಾ ಪೂರ್ವ ಅಭಿಯಾನವನ್ನು ಈ ಕ್ಷೇತ್ರದಲ್ಲಿ ನಡೆಸಿದರೆ ಲಿಂಗಾಯತರು ಮತ್ತು ಲಿಂಗಾಯತ ಸಂಪ್ರದಾಯವನ್ನು ನಂಬುವ ಹಿಂದುಳಿದ ವರ್ಗಗಳಿಂದ ಬೆಂಬಲಿಗರ ಸಂಖ್ಯೆ ಏರಿಕೆಯಾಗಲಿದೆ. ಅಲ್ಲದೆ, ಮಲ್ಲಿಕಾರ್ಜುನ ಖರ್ಗೆಯವರು ಎಸ್‍ಸಿಗಳಿಗೆ ಸಿದ್ದರಾಮಯ್ಯನವರನ್ನು ಬೆಂಬಲಿಸುವಂತೆ ಹೃದಯಪೂರ್ವಕವಾಗಿ ಹೇಳುತ್ತಿಲ್ಲ, ಮುಖ್ಯವಾಗಿ ಎಸ್‍ಸಿ ಬಲಗೈ ವೋಟ್‍ಗಳು ಶ್ರೀರಾಮಲು ಮತ್ತು ಮಾವಿನಮರದ ನಡುವೆ ಹಂಚಿ ಹೋಗಲಿದೆ. ಶ್ರೀ ರಾಮುಲು ಗೆಲುವಿಗೆ ತುಂಬಾ ಸಮೀಪದಲ್ಲಿದ್ದಾರೆ!!

ಮೊಳಕಾಳ್ಮೂರಲ್ಲೂ ಮೇಲುಗೈ ಸಾಧಿಸಿದ ರಾಮುಲು!!

ಅದಲ್ಲದೆ ಸಮೀಕ್ಷೆಯ ಪ್ರಕಾರ ಶ್ರೀ ರಾಮುಲುಗೆ ಮೊದಲು ಘೋಷಿಸಿದ ವಿಧಾನ ಸಭಾ ಕ್ಷೇತ್ರವಾದ ಮೊಳಕಾಳ್ಮೂರಲ್ಲೂ ಭಾರೀ ದಿಗ್ವಿಜಯ ಸಿಗುವ ಲಕ್ಷಣಗಳೂ ಕಾಣುತ್ತಿವೆ. ಮೊಳಕಾಳ್ಮೂರು ವಿಧಾನ ಸಭಾ ಕ್ಷೇತ್ರದಲ್ಲಿ ಈಗಾಗಲೇ ಹಾಲಿ ಶಾಸಕ ತಿಪ್ಪೇಸ್ವಾಮಿ ಇದ್ದರೂ ಈ ಬಾರಿ ಸಂಸದ ಶ್ರೀ ರಾಮುಲು ಅವರಿಗೆ ಪಕ್ಷ ಅವಕಾಶ ನೀಡಿದೆ. ಆರಂಭದಲ್ಲಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಭಾರೀ ಅಲ್ಲೋಲ ಕಲ್ಲೋಲ ಏರ್ಪಟ್ಟಿತ್ತಾದರೂ ಇದೀಗ ಎಲ್ಲವೂ ಸರಿ ಹೋಗಿದೆ. ಈ ಬಾರಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಲೆಯೊಂದಿಗೆ ಶ್ರೀ ರಾಮುಲು ಅಬ್ಬರವೂ ಜೊತೆಯಾಗಿದೆ. ಹೀಗಾಗಿ ಇಲ್ಲಿಯೂ ಶ್ರೀ ರಾಮುಲು ಅವರು ಗೆಲುವು ಕಾಣೋದು ನಿಶ್ಚಿತ ಎಂದೇ ಹೇಳಲಾಗುತ್ತಿದೆ.

ತನ್ನ ಸಮುದಾಯದ ಜನತೆಯ ರಕ್ಷಣೆ ಹಾಗೂ ಕಾಂಗ್ರೆಸ್‍ನ ಆಡಳಿತ ವಿರೋಧಿ ಅಲೆ ಈ ಬಾರಿ ಶ್ರೀ ರಾಮುಲು ಅವರನ್ನು ಗೆಲುವಿನ ಪಥಕ್ಕೆ ಕೊಂಡೊಯ್ಯಲಿದೆ. ಶ್ರೀ ರಾಮುಲು ಅವರಿಗೆ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಜತೆಗೆ ಬಳ್ಳಾರಿ ಹಾಗೂ ಚಿತ್ರದುರ್ಗದ ಎರಡು ಜಿಲ್ಲೆಯಲ್ಲೂ ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸುವ ಹೊಣೆಯನ್ನು ಪಕ್ಷ ನೀಡಿದೆ. ರಾಮುಲು ಕೂಡಾ 2 ಜಿಲ್ಲೆಯಲ್ಲೂ ಕಮಲವನ್ನು ಅರಳಿಸುತ್ತೇವೆ ಎಂದು ಪಣ ತೊಟ್ಟಿದ್ದಾರೆ.

Image result for shree ramulu

ಕೇವಲ ಬಾದಾಮಿಯಲ್ಲಿ ಮಾತ್ರ ಮುಖಭಂಗ ಅನುಭವಿಸಿದ್ದಲ್ಲದೆ ಎಲ್ಲಿ ಹೋದರೂ ಕಾಂಗ್ರೆಸ್‍ವನರಿಗೆ ತೀವ್ರ ಮುಖಭಂಗವಾಗುತ್ತಿದೆ ಎಂದರೆ ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಸರಕಾರಕ್ಕೆ ಸೋಲೇ ಗತಿ ಅಂತನಿಸುತ್ತದೆ!! ಎಲ್ಲವೂ ಅಂದುಕೊಂಡಂತೆಯೇ ಆದರೆ ಭಾರತೀಯ ಜನತಾ ಪಕ್ಷದ ಸರ್ಕಾರದಲ್ಲಿ ಶ್ರೀ ರಾಮುಲುಗೆ ಉಪಮುಖ್ಯಮಂತ್ರಿ ಪಟ್ಟವನ್ನು ನೀಡಲಾಗುವುದು ಎಂದು ಹೇಳಲಾಗುತ್ತದೆ. ಯಾವ ಸಂಸದರಿಗೂ ಇಲ್ಲದ ವಿಧಾನಸಭಾ ಚುನಾವಣೆಯ ಟಿಕೆಟ್ ಭಾಗ್ಯ ಬಳ್ಳಾರಿ ದಿಗ್ಗಜ ಶ್ರೀ ರಾಮುಲುಗೆ ನೀಡಿ ಬಿಗ್ ಆಫರ್ ನೀಡಿದ್ದು…. ಮುಂದೆ ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಬದಲಾವಣೆಯ ಮ್ಯಾಜಿಕ್ ಆಗೋದು ಅಂತು ಖಂಡಿತ!!!

ಪವಿತ್ರ

Tags

Related Articles

Close