ಪ್ರಚಲಿತ

ನರೇಂದ್ರ ಮೋದಿಯವರ ಕಾರ್ಯವೈಖರಿಯನ್ನು ತೆಗಳುವ ಬರದಲ್ಲಿ ಪೇಚಿಗೆ ಸಿಲುಕಿಕೊಂಡ ದಿಗ್ವಿಜಯ್ ಸಿಂಗ್!! ಸುದ್ದಿ ಸಂಸ್ಥೆಯಿಂದ ಬಯಲಾಯಿತು ಅಸಲಿ ಕಹಾನಿ!!

ಪ್ರಧಾನಿ ನರೇಂದ್ರ ಮೋದಿಯವರನ್ನು ತೆಗಳುವ ಬರದಲ್ಲಿ ಕಾಂಗ್ರೆಸ್ಸಿಗರು ಮಾಡುವ ಕೆಲ ಅವಾಂತರಗಳನ್ನು ನೋಡಿದಾಗ ಇವರಿಗೆ ಅದೇನು ಹೇಳಬೇಕೋ ನಾ ಕಾಣೆ!! ಪ್ರತಿ ಬಾರಿ ಒಂದಲ್ಲ ಒಂದು ಎಡವಟ್ಟುಗಳನ್ನು ಮಾಡುತ್ತಾ ನರೇಂದ್ರ ಮೋದಿಯವರ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ಭಾಷಣ ಬಿಗಿಯುತ್ತಿದ್ದವರ ಸಾಲಿಗೆ ಇದೀಗ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಕೂಡ ಸೇರಿದ್ದಾರೆ!!

ರಾಜಕಾರಣದಲ್ಲಿ, ವೈಯಕ್ತಿಕ ಜೀವನದಲ್ಲಿ ವಿವಾದಗಳಿಂದ ಸುದ್ದಿ ಮಾಡುತ್ತಿದ್ದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು ಕ್ಷಮೆ ಕೂಡಾ ಕೇಳಿದ್ದಾರೆ. ಹೌದು… ಭೋಪಾಲ್ ನಗರದ ಮೆಟ್ರೋ ಸೇತುವೆ ಚಿತ್ರ ಎಂದು ಫೇಕ್ ಫೋಟೋವನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್  ಇದೀಗ ಸುದ್ದಿ ಸಂಸ್ಥೆಯ ಕೈಗೆ ಸಿಕ್ಕಿಬೀಳುವ ಮೂಲಕ ಇದೀಗ ಸುದ್ದಿಯಾಗಿದ್ದಾರೆ.

ಕೆಲವು ದಿನಗಳ ಹಿಂದೆ ರೈಲ್ವೆ ಇಲಾಖೆಯನ್ನು ಗುರಿ ಮಾಡಿ ಟ್ವೀಟ್ ಮಾಡಿದ್ದ ಶಬಾನಾ ಆಜ್ಮಿ ಮಲೇಶಿಯಾದ ವಿಡಿಯೋವೊಂದನ್ನು ಬಳಸಿ ನಂತರ ಕ್ಷಮೆ ಕೇಳಿದ್ದರು. ಆದರೆ ಇದೀಗ ದಿಗ್ವಿಜಯ್ ಸಿಂಗ್ ಸರದಿ.

ತಮ್ಮ ಟ್ವಿಟ್ಟರ್ ಖಾತೆಯಿಂದ ಫೋಟೋವೊಂದನ್ನು ಶನಿವಾರ ಟ್ವೀಟ್ ಮಾಡಿದ್ದ ಅವರು, ಇದು ಮಧ್ಯಪ್ರದೇಶದ ಭೋಪಾಲ್ ನ ಸುಭಾಷ್ ನಗರದ ಬಳಿ ನಿರ್ಮಾಣ ಹಂತದಲ್ಲಿರುವ ರೈಲೈ ಬ್ರಿಜ್ಜ್, ಇದರ ಮೇಲಿರುವ ಬಿರುಕುಗಳು ಸೇತುವೆ ನಿರ್ಮಾಣದ ಗುಣಮಟ್ಟವನ್ನು ಸಾರಿ ಹೇಳುತ್ತಿವೆ. ವಾರಣಾಸಿಯಲ್ಲಿ ಅವಘಡವಾಗಿ ಜನರು ಪ್ರಾಣ ಕಳೆದುಕೊಂಡರೋ ಅದು ಇಲ್ಲಿ ಆಗದಿದ್ದರೆ ಸಾಕು, ಎಂದು ಟ್ವೀಟ್  ಮಾಡಿ ಮಧ್ಯ ಪ್ರದೇಶ ಸರಕಾರಕ್ಕೆ ಬಿಸಿ ಮುಟ್ಟಿಸುವ ಪ್ರಯತ್ನ ಮಾಡಿದ್ದರು. ಆದರೆ ಮಾಧ್ಯಮ ಸಂಸ್ಥೆಯೊಂದು ಈ ಫೋಟೋದ ಅಸಲಿ ಕತೆಯನ್ನು ಪತ್ತೆಹಚ್ಚಿದಾಗ ಈ ಚಿತ್ರ ಪಾಕಿಸ್ತಾನದ ರಾವಲ್ಪಿಂಡಿಯದ್ದು ಎಂದು ಗೊತ್ತಾಗಿದೆ.

ಈ ಫೋಟೋ ಹಿಂದಿನ ಸತ್ಯಾಂಶವನ್ನು ಬಿಚ್ಚಿಟ್ಟ ಹಿರಿಯ ಪತ್ರಕರ್ತರೊಬ್ಬರು 2016ರ ಚಿತ್ರವನ್ನು ನೀವು ಅಪ್ಲೋಡ್ ಮಾಡಿದ್ದೀರಿ. ಪಾಕಿಸ್ತಾನದ ರಾವಲ್ಪಿಂಡಿ ಮೆಟ್ರೋ ಸೇತುವೆ ಚಿತ್ರ ಎಂದು ಮರು ಟ್ವೀಟ್ ಮಾಡಿದ್ದರು. ಅಲ್ಲದೇ ತೆಲಂಗಾಣ ಸಚಿವ, ತೆಲಂಗಾಣ ರಾಷ್ಟ್ರ ಸಮಿತಿಯ ನಾಯಕ ಕೆಟಿ ರಾಮರಾವ್ ಅವರು ಸಹ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಪತ್ರಕರ್ತರ ಸ್ಪಷ್ಟನೆ ಕೇಳುತ್ತಿದಂತೆ ಎಚ್ಚೆತ್ತ ದಿಗ್ವಿಜಯ್ ಸಿಂಗ್ ಅವರು ತನ್ನ ಸ್ನೇಹಿತ ಕಳುಹಿಸಿದ ಚಿತ್ರವನ್ನು ತಾನು ಟ್ವೀಟ್ ಮಾಡಿದ್ದು, ಈ ಕುರಿತು ಮಾಹಿತಿ ಪಡೆದಿರಲಿಲ್ಲ ಎಂದು ಕ್ಷಮೆ ಕೇಳಿದ್ದಾರೆ.

ಒಂದಂತೂ ನಿಜ!! ಕಾಂಗ್ರೆಸ್ಸಿಗರಿಗೆ ನರೇಂದ್ರ ಮೋದಿಯವರನ್ನು ತೆಗಳಲು ಯಾವುದೇ ವಿಚಾರ ಸಿಗದೇ ಇದ್ದಾಗ ಈ ರೀತಿ ಎಡವಟ್ಟುಗಳನ್ನು ನಡೆಸುವುದು ಸರ್ವೇಸಾಮಾನ್ಯ ಎಂದೆನಿಸಿದೆ!! ಯಾಕೆಂದರೆ ನರೇಂದ್ರ ಮೋದಿಯವರು ಅಧಿಕಾರದ ಚುಕ್ಕಾಣಿಯನ್ನು ಹಿಡಿದಂದಿನಿಂದಲೂ ಸೈನಿಕರ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವರಿಗೆ ಅವಶ್ಯ ವಸ್ತುಗಳನ್ನು ಪೂರೈಸುವಲ್ಲಿ ಸಮರ್ಥರಾಗಿದ್ದು, ಅದರ ಪ್ರತಿಫಲವಾಗಿ ವಿಶ್ವದಲ್ಲೇ ಎರಡನೇ ಅತಿದೊಡ್ಡ ಸೇನಾಪಡೆಯನ್ನು ಹೊಂದಿರುವ ಭಾರತ ಇನ್ನಷ್ಟು ಬಲಿಷ್ಠ ರಾಷ್ಟ್ರವಾಗಲು ಸಿದ್ಧತೆಗಳನ್ನು ನಡೆಸುತ್ತಿದೆ!!

ಆದರೆ ಇತ್ತೀಚೆಗಷ್ಟೇ ಕಾಂಗ್ರೆಸ್ಸಿನ ಅಧ್ಯಕ್ಷ ರಾಹುಲ್‍ಗಾಂಧಿ, ಸೈನಿಕರ ಸಮವಸ್ತ್ರ ಖರೀದಿಗೂ ಸರ್ಕಾರದ ಬಳಿ ದುಡ್ಡಿಲ್ಲ ಸೈನಿಕರೇ ತನಗೆ ಬೇಕಾದಂತಹ ಸಮವಸ್ತ್ರ, ಶೂಗಳನ್ನು ಖರೀದಿಸುತ್ತಿದ್ದಾರೆ ಎಂಬ ವದಂತಿಯನ್ನು ಹಬ್ಬಿಸಿದ್ದರು!! ಅಷ್ಟೇ ಅಲ್ಲದೆ, ಮೇಕ್ ಇನ್ ಇಂಡಿಯಾ ಎಂಬುವುದೆಲ್ಲಾ ಸುಳ್ಳು, ಮೋದಿ ಸರಕಾರ ಯಾವುದೇ ಸೈನಿಕರಿಗೆ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ!! ನಮ್ಮ ದೇಶದ ಸೈನಿಕರು ತಮ್ಮ ಬಟ್ಟೆಯನ್ನು ತಾವೇ ಖರೀದಿಸಬೇಕಾ ಎಂದು ಸುಳ್ಳು ಸುದ್ದಿಯನ್ನು ಟ್ವೀಟ್ ಮಾಡಿದ್ದರು!!

ರಾಹುಲ್ ಗಾಂಧಿಯವರನ್ನು ನೋಡಿ ದಿಗ್ವಿಜಯ್ ಸಿಂಗ್ ಅವರು ಸಹ ಮೋದಿ ವಿರೋಧಿಸಿ ಟ್ವೀಟ್ ಮಾಡಿ ಸುದ್ದಿಯಾಗಿದ್ದರು!! ಆದರೆ ಇವರಿಬ್ಬರು ಮಾಡಿರುವ ಟ್ವೀಟ್ ಸುಳ್ಳು ಎಂಬುವುದನ್ನು ಇಂಡಿಯಾ ಟುಡೇ ನಡೆಸಿರುವ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ!! ಹೀಗೆ ಪ್ರತಿಬಾರಿಯೂ ಒಂದಲ್ಲ ಒಂದು ಎಡವಟ್ಟುಗಳನ್ನು ಮಾಡುತ್ತಾ, ಭಾರತೀಯ ಜನತಾ ಪಕ್ಷವನ್ನು ತೆಗಳುವ ಭರದಲ್ಲಿ ತಮ್ಮ ಮರ್ಯಾದೆಯನ್ನು ತಾವೇ ಕಳೆದುಕೊಳ್ಳುತ್ತಿರುವುದನ್ನು ನೋಡುತ್ತಿದ್ದರೆ ಅದು ನಿಜಕ್ಕೂ ಕೂಡ ಮೂರ್ಖತನದ ಪರಮಾವಧಿಯೇ ಸರಿ!!

ಮೂಲ:https://postcard.news/fakery-caught-red-handed-senior-congress-leader-digvijay-singh-shares-a-picture-of-pakistans-faulty-flyover-and-questions-the-modi-govt-but-the-indians-ripped-him-apart/

 

– ಅಲೋಖಾ

Tags

Related Articles

Close