ಪ್ರಚಲಿತ

ಹಲವು ವರ್ಷಗಳ ಬಳಿಕ ಕಾಶ್ಮೀರದಲ್ಲಿ ಮಾತೆ ಶಾರದೆಗೆ ನವರಾತ್ರಿ ಪೂಜೆ

‘ನಮಸ್ತೇ‌ ಶಾರದಾ ದೇವಿ, ಕಾಶ್ಮೀರ ಪುರ ವಾಸಿನಿ’ ಎಂಬ ದೇವಿ ಸ್ತುತಿಯನ್ನು ನಾವು ಸಣ್ಣವರಿದ್ದಾಗಿಂದಲೇ ಕೇಳುತ್ತಿದ್ದೇವೆ. ಅಂದರೆ ಕಾಶ್ಮೀರದಲ್ಲಿ ನೆಲೆಸಿರುವ ಶಾರದಾ ಮಾತೆಗೆ ನಮಿಸುತ್ತೇವೆ ಎಂದಾಗಿದೆ. ಆದರೆ ನಿಜಾರ್ಥದಲ್ಲಿ ಕಾಶ್ಮೀರ ಪುರ ವಾಸಿನಿಗೆ ಕಾಶ್ಮೀರದಲ್ಲಿಯೇ ಶಾರದಾ ಪೂಜೆ ಈ ವರೆಗೆ ಸಲ್ಲುತ್ತಿರಲಿಲ್ಲ ಎನ್ನುವುದು ದುರಂತ.‌ ತನ್ನ ಸ್ವ ಸ್ಥಾನದಲ್ಲಿಯೇ ‌ಶಾರದಮ್ಮ ಪೂಜೆ ಪಡೆಯುವಂತಾಗಬೇಕಾದರೆ ಪ್ರಧಾನಿ ಸ್ಥಾನಕ್ಕೆ ನರೇಂದ್ರ ಮೋದಿ ಅವರು ಬರಬೇಕಾಗಿ ಬಂತು ಎನ್ನುವುದು ಸತ್ಯ.

ಹೌದು, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಈವರೆಗೆ ಕಾಶ್ಮೀರದಲ್ಲಿ ನವರಾತ್ರಿ ಸಮಯದಲ್ಲಿ ಮಾತೆ ಶಾರದೆಗೆ ಪೂಜೆ ಸಲ್ಲುತ್ತಿರಲಿಲ್ಲ ಎನ್ನುವುದು ನೋವಿನ ಸಂಗತಿ. ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ಎಂಬಂತೆ ಕಾಶ್ಮೀರದ ಟೀತ್ವಾಲ್‌ನಲ್ಲಿರುವ ಪುರಾತನ ಶಾರದಾ ಪೀಠದಲ್ಲಿ ನವರಾತ್ರಿ ಆಚರಣೆ ನಡೆದಿದೆ. ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಈ ಘಟನೆ ಕೋಟ್ಯಂತರ ಭಾರತೀಯರಿಗೆ ಸಂತಸವನ್ನುಂಟು ಮಾಡಿದೆ ಎನ್ನುವುದು ಸತ್ಯ.

ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಟ್ವೀಟ್ ಮಾಡಿದ್ದು, 1947 ರ ಬಳಿಕ ಇದೇ ಪ್ರಥಮ ಬಾರಿಗೆ ಈ ವರ್ಷ ಕಾಶ್ಮೀರದ ಐತಿಹಾಸಿಕ ಶಾರದಾ ದೇಗುಲದಲ್ಲಿ ನವರಾತ್ರಿ ಪೂಜೆಗಳು ನಡೆಯುತ್ತಿವೆ. ಇದು ಆಧ್ಯಾತ್ಮ ಕ್ಕೆ ಸಂಬಂಧಿಸಿದ ಹಾಗೆ ಮಹತ್ವದ ವಿಷಯವಾಗಿದೆ. ಈ ವರ್ಷದ ಚೈತ್ರ ನವರಾತ್ರಿ ಪೂಜೆಯನ್ನು ಆಚರಿಸಲಾಗಿದೆ. ಹಾಗೆಯೇ ದೇವಾಲಯದಲ್ಲಿ ಶಾರದಾ ನವರಾತ್ರಿ ಪೂಜೆಯ ಮಂತ್ರಗಳು ಮೊಳಗುವಂತಾಗಿದೆ. ಈ ದೇವಾಲಯದ ಜೀರ್ಣೋದ್ಧಾರದ ಬಳಿಕ ಈ ವರ್ಷದ ಮಾರ್ಚ್ ತಿಂಗಳ ಇಪ್ಪತ್ತಮೂರರಂದು ದೇಗುಲವನ್ನು ತೆರೆಯುವ ಅದೃಷ್ಟ ನನಗೆ ದೊರೆಯಿತು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಹಾಗೆಯೇ ಇದು ಕಣಿವೆ ರಾಜ್ಯ ಕಾಶ್ಮೀರದಲ್ಲಿ ಶಾಂತಿ ನೆಲೆಸುತ್ತಿದೆ ಎನ್ನುವುದನ್ನು ಸೂಚಿಸುತ್ತಿದೆ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ವಿಷಯಗಳು ಮರುಜೀವ ಪಡೆಯುತ್ತಿವೆ ಎಂಬುದಕ್ಕೆ ಸಾಕ್ಷಿಯಂತಿದೆ ಎಂದು ಶಾ‌ಹಕ್ಷ ವ್ಯಕ್ತಪಡಿಸಿದ್ದಾರೆ.

ಹದಿನೆಂಟು ಶಕ್ತಿ ಪೀಠಗಳಲ್ಲಿ ಈ ದೇವಾಲಯ ಸಹ ಒಂದಾಗಿದೆ. ಇದನ್ನು ಸತಿಯ ಬಲಗೈ ಬಿದ್ದ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ ಎಂದೂ ಹೇಳಲಾಗುತ್ತದೆ. ಇದು ಹಿಂದೂ ಮತ್ತು ಬೌದ್ಧ ದೇವಾಲಯದ ವಿಶ್ವವಿದ್ಯಾಲಯವಾಗಿಯೂ ಪ್ರಾಮುಖ್ಯತೆ ಪಡೆದಿತ್ತು. ಜೊತೆಗೆ ಭಾರತ, ಟಿಬೆಟ್, ಚೀನಾ, ನೇಪಾಳ, ಥೈಲ್ಯಾಂಡ್, ಬೂತಾನ್ ಸೇರಿದಂತೆ ಇನ್ನೂ ಅನೇಕ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ವಿದ್ಯಾದಾನ ಸಹ ಮಾಡಿದ ಹಿನ್ನೆಲೆ ಹೊಂದಿದೆ.

Tags

Related Articles

Close