ಪ್ರಚಲಿತ

ವೋಟ್ ಹಾಕದೇ ಮುಖ್ಯಮಂತ್ರಿ ಆಗುತ್ತಾರಂತೆ ಸಿದ್ದರಾಮಯ್ಯ..! ಎರಡೆರಡು ಕ್ಷೇತ್ರದಿಂದ ಸ್ಪರ್ಧಿಸಿ ಕೆಟ್ಟರಾ ಸಿಎಂ..?

ರಾಜ್ಯ ವಿಧಾನಸಭಾ ಚುನಾವಣೆ‌ ನಿನ್ನೆಯಷ್ಟೇ ಮುಗಿದಿದೆ. ಭಾರೀ ರಂಗೇರಿಸಿದ್ದ ಈ ಬಾರಿಯ ಚುನಾವಣೆ ಭರ್ಜರಿಯಾಗಿ ನಡೆದಿದ್ದು, ಇತಿಹಾಸದಲ್ಲೇ ಅತೀ ಹೆಚ್ಚು ಮತದಾನ ಈ ಬಾರಿ ನಡೆದಿದೆ. ಎಲ್ಲಾ ರಾಜಕೀಯ ಪಕ್ಷಗಳಿಗೂ ಪೈಪೋಟಿ ಇರುವುದರಿಂದ ರಾಜ್ಯದ ಜನತೆ ಯಾರ ಪರವಾಗಿ ಇದ್ದಾರೆ ಎಂಬುದು ಫಲಿತಾಂಶ ಬಂದ ದಿನ ತಿಳಿಯುತ್ತದೆ. ಅದೇ ರೀತಿ ಎರಡೆರಡು ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿಎಂ ಸಿದ್ದರಾಮಯ್ಯನವರು ಮತ ಚಲಾಯಿಸದೇ ತಾನು ಗೆಲ್ಲುತ್ತೇನೆ , ಮುಂದಿನ ಮುಖ್ಯಮಂತ್ರಿ ಆಗುತ್ತೇನೆ ಎಂದು ಬೀಗುತ್ತಿದ್ದಾರೆ..!

ಸಿದ್ದರಾಮಯ್ಯನವರಿಗಿಲ್ಲ ವೋಟ್..!

ಸಿದ್ದರಾಮಯ್ಯನವರು ತಾನೊಬ್ಬ ರಾಜ್ಯದ ಮುಖ್ಯಮಂತ್ರಿ ಆಗಿ ಎಲ್ಲರಿಗೂ ಮಾದರಿಯಾಗಬೇಕಿತ್ತು. ಆದರೆ ಹಾಗಾಗಲಿಲ್ಲ , ಸಿದ್ದರಾಮಯ್ಯನವರು ಬಾದಾಮಿ ಮತ್ತು ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿದ ಸಿದ್ದರಾಮಯ್ಯನವರಿಗೆ ಬಾದಾಮಿಯಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಲಾಗಲಿಲ್ಲ.‌ ಯಾಕೆಂದರೆ ಸಿದ್ದರಾಮಯ್ಯನವರಿಗೆ ವರಯಣಾ ಕ್ಷೇತ್ರದಲ್ಲಿ ಮತ ಚಲಾಯಿಸಲು ಅವಕಾಶ ಇರುವುದರಿಂದ ತಾನು ಸ್ಪರ್ಧಿಸಿದ ಎರಡೂ ಕ್ಷೇತ್ರಗಳಲ್ಲಿ ಮತ ಚಲಾಯಿಸಲಾಗಲಿಲ್ಲ. ತನ್ನ ತವರು ಕ್ಷೇತ್ರವನ್ನು ತಮ್ಮ ಮಗನಿಗೆ ನೀಡಿ , ತಾನು ಬೇರೆ ಎರಡು ಕ್ಷೇತ್ರದಿಂದ ಸ್ಪರ್ಧಿಸಿರುವ ಸಿದ್ದರಾಮಯ್ಯನವರು ಮತ ಚಲಾವಣೆಯಿಂದ ವಂಚಿತರಾಗಿದ್ದಾರೆ..!

ಪರಂ ಎಚ್‌ಡಿ‌ಕೆ ಗೂ ಇಲ್ಲ ವೋಟ್..!?

ಜೆಡಿಎಸ್ ನಿಂದ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕುಮಾರಸ್ವಾಮಿ ಅವರಿಗೂ ತಮ್ಮ ಎರಡೂ ಕ್ಷೇತ್ರದಿಂದ ಮತ ವಂಚಿತರಾಗಿದ್ದಾರೆ. ಯಾಕೆಂದರೆ ಕುಮಾರಸ್ವಾಮಿ ಅವರ ಹೆಸರು ಬಿಡದಿ ಸಮೀಪದ ಕೇತುಗಾನಹಳ್ಳಿ ಗ್ರಾಮದ ನತಗಟ್ಟೆಯಲ್ಲಿ ಇರುವುದರಿಂದ ಇವರೂ ಕೂಡ ತಾವು ಸ್ಪರ್ಧಿಸಿರುವ ಕ್ಷೇತ್ರದಲ್ಲಿ ಮತ ಚಲಾಯಿಸಲಾಗಲಿಲ್ಲ.

ಇನ್ನು ಪರಮೇಶ್ವರ್ ಕೂಡಾ ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಅವರು ತಮ್ಮ ಮತ ಚಲಾವಣೆಯ ಹಕ್ಕನ್ನು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗೊಲ್ಲಹಳ್ಳಿ ಸರ್ಕಾರಿ ಶಾಲೆಯಲ್ಲಿ ಚಲಾಯಿಸಿದ್ದಾರೆ.

ಇದರ ಮಧ್ಯೆ ಮೊಳಕಾಲ್ಮೂರು ಕ್ಷೇತ್ರಗಳ ಕಣಕ್ಕಿಳಿದಿದ್ದ ಬಿಜೆಪಿ ಅಭ್ಯರ್ಥಿ ಶ್ರೀ ರಾಮುಲು ಅವರು ತಮ್ಮ ಸ್ವಂತೂರಿನಲ್ಲೇ ಮತ ಚಲಾಯಿಸಿ ಮೆರೆದಿದ್ದಾರೆ..!

–ಅರ್ಜುನ್

Tags

Related Articles

Close