ಪ್ರಚಲಿತ

ಯೋಗಿ ಆದಿತ್ಯನಾಥರ ನಕಲಿ ಅಶ್ಲೀಲ ಚಿತ್ರ ವೈರಲ್! ಸಿದ್ದರಾಮಯ್ಯ ಆಪ್ತೆಯಿಂದಲೇ ಕೃತ್ಯ! ಎದ್ದೇಳಿ ಸಿದ್ದರಾಮಯ್ಯ..

ಏನ್ರೀ ಇದು, ಎತ್ತ ಸಾಗುತ್ತಿದೆ ಕರ್ನಾಟಕ..! ನೇರವಾಗಿ ಹೇಳಬೇಕೆಂದರೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರಕಾರ ನಾಮಾರ್ಧ ಸರಕಾರ ಎಂದೇ ಕರೆಯಬಹುದು. ಯಾಕೆಂದರೆ ಸಿದ್ದರಾಮಯ್ಯನವರ ಸರಕಾರ ಇಂದು ರಾಜ್ಯವನ್ನೇ ಹೊತ್ತಿ ಉರಿಯುವಂತೆ ಮಾಡಿದ್ದಾರೆ. ಕಾಂಗ್ರೆಸ್ ವಿರುದ್ಧ ಸತ್ಯ ಹೇಳುವವರಿಗೆ ಸಿದ್ದರಾಮಯ್ಯನವರು ಇದೀಗ ಅಪಹರಣ ಭಾಗ್ಯ ಒದಗಿಸಿದ್ದಾರೆ.!

ಕರ್ನಾಟಕದಲ್ಲಿ ಏನಾಗುತ್ತಿದೆ ಎಂದು ಬೊಬ್ಬೆ ಇಡುತ್ತಿದ್ದ ಎಡಬಿಡಂಗಿಗಳು ಇದೀಗ ನಾಪತ್ತೆಯಾಗಿದ್ದಾರೆ. ಕರ್ನಾಟಕ ಕಾಂಗ್ರೆಸ್ ಸರಕಾರದ ವೈಫಲ್ಯವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿರುವ ಬುದ್ಧಿಜೀವಿಗಳು ನೇರವಾಗಿ ಮೋದಿ ಸರಕಾರದತ್ತ ಬೊಟ್ಟು ಮಾಡಿ ತೋರಿಸುತ್ತಿದ್ದ ಎಲ್ಲಾ ಎಡಪಂಥೀಯರು ಇತ್ತೀಚೆಗೆ ನಾಪತ್ತೆಯಾಗಿದ್ದಾರೆ.

ಯೋಗಿ ವಿರುದ್ಧ ಕೀಳು ಮಟ್ಟದ ಅಪವಾಧ..!

ಉತ್ತರ ಪ್ರದೇಶದ ಮುಖ್ಯಮಂತ್ರಿ, ಹಿಂದೂ ಫೈರ್ ಬ್ರಾಂಡ್ ಯೋಗಿ ಆದಿತ್ಯನಾಥ್ ಮೇಲೆ ಕಳೆದ ನವಂಬರ್ ತಿಂಗಳಲ್ಲಿ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಅತೀ ಕೀಳು ಮಟ್ಟದಲ್ಲಿ ಎಡಿಟ್ ಮಾಡಿ ಫೇಸ್‌ಬುಕ್‌ ನಲ್ಲಿ ಹಾಕಿಕೊಂಡಿದ್ದರು. ಈ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗಿದ್ದರೂ ಇದರ ವಿರುದ್ಧ ಯಾವುದೇ ಕ್ರಮ‌ಕೈಗೊಂಡಿರಲಿಲ್ಲ.‌ ಒಂದು ರಾಜ್ಯದ ಮುಖ್ಯಮಂತ್ರಿಯ ಬಗ್ಗೆ ಹೀನಾಯವಾಗಿ ನಿಂದಿಸಿದಗದಲ್ಲದೆ , ಅದನ್ನು ಫೇಸ್‌ಬುಕ್‌ ಗಳಲ್ಲಿ ಹರಿಯಬಿಟ್ಟಿದ್ದು , ಯಾವುದೇ ಸೈಬರ್ ಕ್ರೈಮ್ ಕೇಸ್ ದಾಖಲಾಗಲಿಲ್ಲ. ಕಾಂಗ್ರೆಸ್ ಅದ್ಯಾವ ರೀತಿಯ ರಾಜಕೀಯ ಮಾಡುತ್ತಿದೆ ಎಂದರೆ , ಪೊಲೀಸರನ್ನು‌ ತಮ್ಮ ಗುಲಾಮರಂತೆ ಬಳಸಿಕೊಂಡು ದೇಶಪ್ರೇಮಿಗಳ ವಿರುದ್ಧ ಇಲ್ಲಸಲ್ಲದ ಆರೋಪ‌ ಹೊರಿಸಿ , ಹತ್ತಿಕ್ಕುವ ಕೆಲಸ ಮಾಡುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಪ್ರಕಟಿಸಿ ಅಮಾಯಕ‌ ಜನರನ್ನು ನಂಬಿಸಿ ಮೋಸಗೊಳಿಸುವ ಕೀಳು ಮಟ್ಟದ ರಾಜಕೀಯಕ್ಕೆ ಇಳಿದಿರುವ ಕಾಂಗ್ರೆಸ್ , ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ತನ್ನ ವಿರುದ್ಧ ಧ್ವನಿ ಎತ್ತುವವರನ್ನು ಅಪಹರಣಗೊಳಿಸಿ ಹಿಂಸೆ ನೀಡುತ್ತಿದೆ.‌

ಮಾಧ್ಯಮ ದಿಗ್ಗಜನ ಟಾರ್ಗೆಟ್..!

ಕಾಂಗ್ರೆಸ್ ನ‌ ಒಂದೊಂದೇ ಹಗರಣಗಳನ್ನು ಬಯಲಿಗೆಳೆಯುತ್ತಿದ್ದ ಪೋಸ್ಟ್ ಕಾರ್ಡ್ ಸಂಸ್ಥೆಯ ಮಾಲಕರಾದ ಮಹೇಶ್ ವಿಕ್ರಮ್ ಹೆಗ್ಡೆ ಅವರನ್ನು ಈ ಹಿಂದಿನಿಂದಲೂ ಟಾರ್ಗೆಟ್ ಮಾಡಿ ಹೊಂಚು ಹಾಕುತ್ತಿದ್ದ ವಿರೋಧಿ ಪಡೆಗಳು ಇದೀಗ ಚುನಾವಣಾ ಹೊಸ್ತಿಲಲ್ಲೇ ಮೋಸದಿಂದ ಬಂಧಿಸಿದೆ. ಯಾವುದೇ ಆರೋಪಗಳು ಇಲ್ಲದೇ ಇದ್ದರೂ , ಕಾಂಗ್ರೆಸ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಾರೆ ಎಂಬ ಕಾರಣಕ್ಕಾಗಿ ಪೊಲೀಸರನ್ನು ಬಳಸಿಕೊಂಡು ದಾಳಿ ನಡೆಸಿದೆ.

ಏನಿದು ಸ್ವಾಮಿ..! ಕಾಂಗ್ರೆಸ್ ಗೊಂದು ನ್ಯಾಯ , ಸಾಮಾನ್ಯ ಜನರಿಗೊಂದು ನ್ಯಾಯ?

ಕಾಂಗ್ರೆಸ್ ಪರವಾಗಿ ಮಾತನಾಡುವವರು , ದೇಶದ ವಿರೋಧವಾಗಿ ಏನೇ ಹೇಳಿಕೆ ನೀಡಿದರು ಅದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಹಣೆಪಟ್ಟಿ ಕಟ್ಟಿ ಅವರ ಬೆಂಬಲಕ್ಕೆ ನಿಲ್ಲಲಾಗುತ್ತದೆ. ಆದರೆ ಹಿಂದೂ ಧರ್ಮದ ಪರವಾಗಿ ಅಥವಾ ಬಲಪಂಥೀಯರ ವಹಿಸಿ ಮಾತನಾಡುವವರ ವಿರುದ್ಧ ಸೈಬರ್ ಕ್ರೈಮ್ ಕೇಸ್ ದಾಖಲಿಸಿ ಬಂಧಿಸುವ ಕೆಲಸದಲ್ಲಿ ತೊಡಗಿದ್ದಾರೆ.‌
ಇದೇ ರೀತಿ ಮುಂದುವರಿದರೆ ರಾಜ್ಯ ಯಾವ ಸ್ಥಿತಿಗೆ ತಲುಪಬಹುದು ಎಂಬುದು ಜನತೆ ಊಹಿಸಬೇಕಾಗಿದೆ..!

–ಅರ್ಜುನ್

Tags

Related Articles

Close