ಪ್ರಚಲಿತ

ಹಿಮ ಸಾಗರದ ನಡುವೆಯೂ ಗಮನಸೆಳೆದ ಸೈನಿಕರ ಯೋಗ!! ವೈರಲ್ ಆಯಿತು ಸೈನಿಕರ ವಿಡಿಯೋ!! 

ಇಂದು ವಿಶ್ವದಾದ್ಯಂತ 4 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯೋಗಾಸನಗಳನ್ನು ಮಾಡುವ ಮೂಲಕ ಆಚರಿಸಲಾಗುತ್ತಿದ್ದು, ಬೆಳಗ್ಗಿನಿಂದಲೇ ವಿಶ್ವದ ವಿವಿಧೆಡೆ ಗಣ್ಯಾತೀಗಣ್ಯರು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು ಯೋಗಾಸನಗಳನ್ನು ಮಾಡಿ ಗಮನ ಸೆಳೆದಿದ್ದಾರೆ. ಅಷ್ಟೇ ಯಾಕೆ? ಭಾರತೀಯ ಸೈನಿಕರ ಸಾಮರ್ಥ್ಯದ ಅನಾವರಣಕ್ಕೆ ಅಂತಾರಾಷ್ಟ್ರೀಯ ಯೋಗ ದಿನ ವೇದಿಕೆಯಾಗಿದ್ದು, ಬಿಸಿ ರಕ್ತವನ್ನೇ ಹೆಪ್ಪುಗಟ್ಟಿಸುವ ಹಿಮಗಡ್ಡೆಗಳ ನಡುವೆ ಭಾರತೀಯ ಸೈನಿಕರು ಯೋಗ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ.

ಹೌದು… ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗವಾಗಿದ್ದು, ಸಾವಿರಾರು ವರ್ಷಗಳಿಂದಲೂ ಭಾರತ ದೇಶದಲ್ಲಿ ಆಚರಿಸಲ್ಪಡುತ್ತಿರುವ ‘ಯೋಗವಿದ್ಯೆಯು’ ಋಷಿ ಮುನಿಗಳಾದಿ ಸಾಧಕರಿಂದ ವಿದ್ಯೆ ಮತ್ತು ಜೀವನ ಶೈಲಿಯಾಗಿ ಹರಿದು ಬಂದಿದೆ. ಹಾಗಾಗಿ ಈ ಯೊಗದ ಮೂಲಕ ನಮ್ಮೊಳಗಿರುವ ಅಂತಃಶಕ್ತಿಯನ್ನು ಜಾಗೃತಿ ಮತ್ತು ಅರಿವು ಮೂಡಿಸುವ ಕೆಲಸವನ್ನು ಯೋಗ ಮಾಡುತ್ತದೆ!! ಹಾಗಾಗಿ ಅರಿವು ಎಂದರೆ ಜ್ಞಾನ, ಜ್ಞಾನ ಎಂದರೆ ಸತ್ಯ, ಈ ಸತ್ಯ ಮಾರ್ಗದಲ್ಲಿ ನಡೆಯುವುದೇ ಯೋಗ ಎನ್ನಲಾಗುತ್ತದೆ!!

ಪ್ರಧಾನಿ ನರೇಂದ್ರ ಮೋದಿ ಅವರು ಡೆಹರಾಡೂನ್ ನ ಅರಣ್ಯ ಸಂಶೋಧನಾ ಕೇಂದ್ರದ ಆವರಣದಲ್ಲಿ 50,000 ಕ್ಕೂ ಹೆಚ್ಚು ಜನರೊಂದಿಗೆ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಯೋಗಾಸನಗಳನ್ನು ಮಾಡಿ ವಿಶ್ವದ ಗಮನ ಸೆಳೆಯುತ್ತಿರುವ ಬೆನ್ನಲ್ಲಿಯೇ ಬಿಸಿ ರಕ್ತವನ್ನೇ ಹೆಪ್ಪುಗಟ್ಟಿಸುವ ಹಿಮಗಡ್ಡೆಗಳ ನಡುವೆ ಭಾರತೀಯ ಸೈನಿಕರು ಯೋಗ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ.

ಭಾರತೀಯ ಐಟಿಬಿಪಿ ಯೋಧರು 18,000 ಮೀಟರ್ ಎತ್ತರದ ಲಡಾಕ್‍ನ ಹಿಮಗುಡ್ಡೆಗಳ ಮೇಲೆ ಸೂರ್ಯ ನಮಸ್ಕಾರಗಳನ್ನು ಮಾಡಿದ್ದಾರೆ. ಈ ಚಿತ್ರಗಳನ್ನು ಇದೀಗ ಆಯುಷ್ ಸಚಿವಾಲಯ   ಪೋಸ್ಟ್ ಮಾಡಿದೆ. ಅಷ್ಟೇ ಅಲ್ಲದೇ, ಅರುಣಾಚಲದ ಲೋಹಿತ್‍ಪುರ್‍ನಲ್ಲಿ ಐಟಿಪಿಬಿ ಯೋಧರ ತಂಡ ದಿಗಾರು ನದಿಯಲ್ಲಿ ಯೋಗಾಸನಗಳನ್ನು ಮಾಡಿ ಎಲ್ಲೆಡೆ ಸುದ್ದಿಯಾಗಿದ್ದಾರೆ!!

ಭಾರತದ ಗಡಿ ಭಾಗವಾದ ಹಿಮಾಲಯದ 18000 ಅಡಿಗಳ ಮೇಲೆ ಭಾರತೀಯ ಸೈನಿಕರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರವೇ ಆಗಿದೆ. ಅದರಲ್ಲೂ ಕೊರೆಯುವ ಚಳಿಯಿದ್ದರೂ ಕೂಡ ಸೈನಿಕರು ತಮ್ಮ ದೇಶಸೇವೆಯನ್ನು ಮಾಡುತ್ತಲೇ ಇರುತ್ತಾರೆ ಎಂದರೆ ಆ ಸೈನಿಕರಿಗೆ ಹ್ಯಾಟ್ಸಾಪ್ ಹೇಳಲೇ ಬೇಕು!! ದೇಶದಲ್ಲಿ ಏನೇ ಹಬ್ಬ ಹರಿದಿನಗಳು ಇದ್ದರೂ ಇಡೀ ದೇಶವೇ ಸಡಗರದಲ್ಲಿ ತೊಡಗಿದ್ದರೂ, ಈ ಭಾಗದಲ್ಲಿ ಇರುವ ಸೈನಿಕರು ಮಾತ್ರ ತಮ್ಮ ಕಾರ್ಯದಲ್ಲಿ ತೊಡಗಿರುತ್ತಾರೆ!!

ಹೌದು….. ಇತ್ತ ಕೊರೆವ ಚಳಿಯಲ್ಲೇ ಅರುಣಾಚಲ ಪ್ರದೇಶದ ಲೋಹಿತ್ ಪುರದಲ್ಲಿರುವ ಇಂಡೋ-ಟಿಬೆಟ್ ಗಡಿಯಲ್ಲಿನ ದಿಗರು ನದಿಯಲ್ಲಿ ಐಟಿಬಿಪಿಯ ಸುಮಾರು 20ಕ್ಕೂ ಅಧಿಕ ಯೋಧರು ನದಿ ಯೋಗ ಪ್ರದರ್ಶನ ಮಾಡಿ ಸುದ್ದಿಯಾದರಲ್ಲದೇ, ಅತ್ಯಂತ ಚಳಿಯ ನಡುವೆಯೇ ಸೈನಿಕರು ಮಾಡಿದ ಯೋಗ ವಿಶೇಷವಾಗಿತ್ತು. ಇನ್ನು, ಸಮುದ್ರ ಮಟ್ಟದಿಂದ ಬರೊಬ್ಬರಿ 18 ಸಾವಿರ ಅಡಿಗಳಷ್ಟು ಮೇಲಿರುವ ಇಂಡೋ-ಟಿಬೆಟಿಯನ್ ಗಡಿಯಲ್ಲಿ ಕರ್ತವ್ಯನಿರತರಾಗಿದ್ದ ಸುಮಾರು 30ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳು ಯೋಗ ಪ್ರದರ್ಶನ ಮಾಡಿದರು. ಅಷ್ಟೇ ಅಲ್ಲದೇ, ಈ ಐಟಿಬಿಪಿಯ ಸುಮಾರು 30ಕ್ಕೂ ಹೆಚ್ಚು ಯೋಧರು ಯೋಗ ಮಾಡುವ ವಿಡಿಯೋ ಇದೀಗ ವೈರಲ್ ಅಗಿದೆ.

ಕೊರೆಯುವ ಮೈನಸ್ 30 ಡಿಗ್ರಿ ಚಳಿಯಲ್ಲಿ ಹಿಮಾಲಯದ 18000 ಅಡಿಗಳ ಮೇಲೆ ಗಣರಾಜ್ಯೋತ್ಸವದ ದಿನ ರಾಷ್ಟ್ರ ಧ್ವಜ ಹಾರಿಸುವ ಮೂಲಕ ದೇಶದಾದ್ಯಂತ ಮೆಚ್ಚುಗೆ ಪಾತ್ರರಾಗಿದ್ದ ಇವರು ಇದೀಗ “ವಿಶ್ವ ಯೋಗ ದಿನ”ದ ಅಂಗವಾಗಿ ಯೋಗ ಮಾಡುವ ಮೂಲಕ ಇದೀಗ ವಿಶ್ವದ ಗಮನಸೆಳೆದಿದ್ದಾರೆ!!

ಮೂಲ:

http://www.kannadaprabha.com/nation/indo-tibetan-border-police-personnel-perform-surya-namaskar-in-cold-desert-of-ladakh/318562.html

– ಅಲೋಖಾ

Tags

Related Articles

Close