ಪ್ರಚಲಿತ

ನಲ್ವತ್ತೆಂಟು ವರ್ಷಗಳಿಂದ ದೇಶ ಮತ್ತು ಮೂವತ್ತು ವರ್ಷಗಳಿಂದ ತನ್ನ ಸ್ವಕ್ಷೇತ್ರ ಅಮೇಥಿಯ ವಿಕಾಸವನ್ನು ಮಾಡಲಾಗದ ನೆಹರೂ ಪರಿವಾರ ಇನ್ನು ಮುಂದೆ ದೇಶದ ವಿಕಾಸ ಮಾಡುತ್ತಾರಂತೆ!!

ಮುರೂ ಬಿಟ್ಟವ ಊರಿಗೆ ದೊಡ್ಡವ. ಈ ಗಾದೆ ಮಾತು ನೆಹರೂ ಪರಿವಾರದವರನ್ನೇ ಉದ್ದೇಶಿಸಿ ಹೇಳಿದ್ದೇನೋ ಅನ್ನುವಂತಾಗಿದೆ. ಅರುವತ್ತು ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ನಲ್ವತ್ತೆಂಟು ವರ್ಷ ಬರಿಯ ನೆಹರೂ ಪರಿವಾರವೇ ಈ ದೇಶವನ್ನಾಳಿದೆ. ಭಾರತದ ಪ್ರಧಾನಮಂತ್ರಿ ಗಾದಿ ತನ್ನ ಪರಿವಾರದ “ಸಿಂಹಾಸನ”, ತಾವು ರಾಜ ಪರಿವಾರದವರು, ಈ ದೇಶವನ್ನು ಆಳುವ ಹಕ್ಕು ತಮ್ಮ ಪರಿವಾರಕಷ್ಟೇ ಮೀಸಲು ಎನ್ನುವುದು ನೆಹರೂ ಪರಿವಾರದ ವಾದ. ನಲ್ವತ್ತೆಂಟು ವರ್ಷ ದೇಶವನ್ನಾಳಿದ ಮತ್ತು ಮೂವತ್ತು ವರ್ಷ ಅಮೇಥಿಯಿಂದ ಸ್ಪರ್ಧಿಸಿದ ನೆಹರೂ ಕುಟುಂಬ, ತಥಾಕಥಿತ ರಾಜ ಪರಿವಾರ ದೇಶಕ್ಕೆ ಹಾಗೂ ಅಮೇಥಿಗೆ ಕಪ್ಪೆ ಚಿಪ್ಪನ್ನಲ್ಲದೆ ಬೇರೆನನ್ನೂ ಕೊಟ್ಟಿಲ್ಲ.

1947-1964 ರವರೆಗಿನ ಹದಿನೇಳು ವರ್ಷ ಸ್ವತಃ ಜವಾಹರ್ ಲಾಲ್ ನೆಹರೂ ಕುರ್ಚಿಯಲ್ಲಿ ಕುಳಿತಿದ್ದರು. ಸ್ವಾತಂತ್ರ್ಯಾ ನಂತರದ ಇತಿಹಾಸದಲ್ಲಿ ಜವಾಹರ್ ಲಾಲ್ ನೆಹರೂರವರಷ್ಟು ಸುಧೀರ್ಘ ಕಾಲ ಯಾರೂ ಆಡಳಿತ ನಡೆಸಿಲ್ಲ. ನೆಹರೂರವರಿಗೆ ದೇಶದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದಿದ್ದರೆ, ಇವತ್ತು ದೊಡ್ಡಣ್ಣನ ಸ್ಥಾನದಲ್ಲಿ ಭಾರತವಿರುವಷ್ಟು ಅಭಿವೃದ್ದಿ ಮಾಡುತ್ತಿದ್ದರು. ಆದರೆ ಅವರಿಗೆ ಭಾರತದ ಮೇಲೆ ಪ್ರೀತಿಯೇ ಇರಲಿಲ್ಲ. ಹುಟ್ಟಾ ಮುಸಲ್ಮಾನನಾದ ಅವರಿಗೆ ಪ್ರೀತಿ ಇದ್ದದ್ದು ಪಾಕಿಸ್ತಾನದ ಮೇಲೆ. ಇನ್ನು ಅವರ ಮುಂದಿನ ಪೀಳಿಗೆಯ ಇಂದಿರಾ ಗಾಂಧಿ ಪ್ರಧಾನಮಂತ್ರಿ ಗದ್ದುಗೆಯಲ್ಲಿ ಕೂತಿದ್ದು ಬರೊಬ್ಬರಿ ಹದಿನಾರು ವರ್ಷ.

ಬಹುಶ ಇಂದಿರಾ ಗಾಂಧಿಯ ಕೊಲೆ ನಡೆಯದಿರುತ್ತಿದ್ದರೆ ಇನ್ನೂ ಹಲವು ವರ್ಷ ಆಕೆಯೇ ಭಾರತವನ್ನಾಳುತ್ತಿದ್ದರು. ಹದಿನಾರು ವರ್ಷ ಭಾರತದ ಪ್ರಧಾನಮಂತ್ರಿಯಾಗಿದ್ದ ಮೇಲೂ ಇಂದಿರಾ ಗಾಂಧಿ ದೇಶದ ವಿಕಾಸ ಮಾಡಲಾಗಲಿಲ್ಲ. ಮನಸ್ಸು ಮಾಡಿದ್ದರೆ ಇಂದಿರಾ ಗಾಂಧಿ ಭಾರತವನ್ನು ಸೂಪರ್ ಪವರ್ ರಾಷ್ಟ್ರವನ್ನಾಗಿ ಮಾಡಬಹುದಾಗಿತ್ತು. ಆದರೆ ತನ್ನ ಪ್ರೇಮ ಪ್ರಕರಣ, ಗೂಢಾಚಾರಿಕೆ ಮತ್ತು ಹಣ ದೋಚುವುದರಲ್ಲೇ ನಿರತರಾಗಿದ್ದರಿಂದ ದೇಶದ ಅಭಿವೃದ್ದಿ ಮಾಡಲು ಅವರಿಗೆ ಪುರುಸೊತ್ತಿರಲಿಲ್ಲ.

ಇಂದಿರಾ ಗಾಂಧಿಯ ಮರಣಾನಂತರ ಗದ್ದುಗೆ ಏರಿ ಕುಳಿತರು ಅವರ ಮಗ ರಾಜೀವ್ ಗಾಂಧಿ. ಐದು ವರ್ಷದ ತಮ್ಮ ಆಡಳಿತಾವಧಿಯಲ್ಲಿ ತಮ್ಮ ಹಿರಿಯರಿಂದಾದ ತಪ್ಪುಗಳನ್ನು ತಿದ್ದಿ ದೇಶದ ಅಭಿವೃದ್ದಿಗೆ ಭಾಷ್ಯ ಬರೆಯಬಹುದಿತ್ತು. ಮೊದ ಮೊದಲು ತನ್ನ ಪೂರ್ವಜರಂತೇ ಹಗರಣ ನಿರತರಾಗಿದ್ದ ರಾಜೀವ್ ಗೆ ಜ್ಞಾನೋದಯವಾಗಿ ಇನ್ನೇನು ದೇಶದಲ್ಲಿ ಅಭಿವೃದ್ದಿ ಕಾರ್ಯ ನಡೆಸುವುದರಲ್ಲಿದ್ದರೇನೋ ಆದರೆ ವಿಧಿ ಬಿಡಲಿಲ್ಲ. ದೇಶದ ಜನರು ರಾಜೀವ್ ಗಾಂಧಿಯಿಂದ ನಿರೀಕ್ಷೆಯಿಟ್ಟು ಕೊಂಡು ಅಭಿವೃದ್ದಿಯ ಕನಸು ಕಾಣುತ್ತಿರುವಾಗಲೇ ಅವರ ಹತ್ಯೆಯಾಯಿತು.

Image result for indira family

ಕೆಲ ಕಾಲದವರೆಗಾದರೂ ಪಿ.ವಿ.ನರಸಿಂಹ ರಾವ್ ಮತ್ತು ಅಟಲ್ ಜೀ ಅವರ ಸಮರ್ಥ ನಾಯಕತ್ವದಲ್ಲಿ ದೇಶ ಮುನ್ನಡೆದದ್ದೇ ಭಾಗ್ಯ. ತದನಂತರ ಬಂದರಲ್ಲ ರಾಜಮಾತೆ! ಆಹ್!! ಬರೋಬ್ಬರಿ ಹತ್ತು ವರ್ಷಗಳ ಕಾಲ ಈಕೆ “ಪರೋಕ್ಷವಾಗಿ” ಪ್ರಧಾನಮಂತ್ರಿ ಗಾದಿಯಲ್ಲಿ ಕುಳಿತಿದ್ದರು. ದೇಶದ ಅಭಿವೃದ್ದಿ ಮಾಡುವುದಿದ್ದರೆ ಎಷ್ಟು ಬೇಕಾದರೂ ಮಾಡಬಹುದಿತ್ತು. ಆದರೆ ಆಕೆ ಈ ದೇಶದವರೇ ಅಲ್ಲ, ಈ ದೇಶದ ಮೇಲೆ ಆಕೆಗೆ ಪ್ರೀತಿ-ಭಕ್ತಿ ಎಳ್ಳಷ್ಟೂ ಇಲ್ಲ. ಆಕೆ ಮಾಡಿದ್ದೆಲ್ಲ ದೇಶ ದ್ರೋಹದ ಕೆಲಸಗಳೆ. ಭಾರತವನ್ನು ಭಾಷೆ, ಜಾತಿ ಸಮುದಾಯದ ಮೇಲೆ ವಿಭಜಿಸಿ, ಕೋಟ್ಯಾಂತರ ರುಪಾಯಿ ಕೊಳ್ಳೆ ಹೊಡೆದ ಮಹಾನಾಯಕಿ ಈಕೆ. ಈಗ ತನ್ನ ಮಗನನ್ನು ಪ್ರಧಾನಮಂತ್ರಿ ಗಾದಿಗೇರಿಸಲು ಹರಸಾಹಸ ಪಡುತ್ತಿರುವ ಮಹಾಮಾತೆ.

ಇದು ದೇಶದ ಮಾತಾಯಿತು. ದೇಶ ತುಂಬಾ ದೊಡ್ಡದು ಬಹುಶ ಅಭಿವೃದ್ದಿ ಕಷ್ಟವಾಯಿತೇನೋ ಪಾಪ. ಆದರೆ ಕಳೆದ ಮೂವತ್ತು ವರ್ಷಗಳಿಂದ ತನ್ನ ಅಪ್ಪನ ಸ್ವತ್ತಿನಂತೆ ಹಕ್ಕು ಜಮಾಯಿಸಿ ಕೂತ ಚುನಾವಣಾ ಕ್ಷೇತ್ರಕ್ಕೆ ಇವರು ಕೊಟ್ಟ ಕೊಡುಗೆಯಾದರೂ ಏನು? ಮೂವತ್ತು ವರ್ಷಗಳಿಂದ ಈ ಪರಿವಾರ ಅಮೇಥಿಯಿಂದ ಸ್ಪರ್ಧಿಸಿ ಗೆಲ್ಲುತ್ತಾ ಬಂದಿದೆ. ಆದರೆ ತಮ್ಮನ್ನು ಚುನಾಯಿಸಿ ಆರಿಸಿದ ಇಲ್ಲಿಯ ಜನರಿಗೆ ಇವರು ಕೊಟ್ಟದ್ದು ಚೆಂಬು. ಒಂದು ಪುಟ್ಟ ಸಂಸದೀಯ ಕ್ಷೇತ್ರವನ್ನೂ ಅಭಿವೃದ್ದಿ ಪಡಿಸುವ ಯೋಗ್ಯತೆಯೂ ಇಲ್ಲದೆ ಹೋಯಿತೇ ಇವರಿಗೆ? ಅಲ್ಲಿನ ಕೃಷಿಕರ ಭೂಮಿಯನ್ನು ಯಾವುದೋ ಸೈಕಲ್ ಫ್ಯಾಕ್ಟರಿ ತಯಾರಿಸುತ್ತೇವೆಂದು ಯಾಮಾರಿಸಿ ಕಸಿದುಕೊಂಡ ಪರಿವಾರ ಫ್ಯಾಕ್ಟರಿಯೂ ತಯಾರಿಸಿಲ್ಲ, ರೈತರ ಭೂಮಿಯನ್ನು ವಾಪಾಸೂ ಕೊಟ್ಟಿಲ್ಲ, ದುಡ್ಡೂ ಕೊಟ್ಟಿಲ್ಲ. ಇದಪ್ಪಾ ಇವರ ರೈತ ಪ್ರೇಮ.

ಮೂವತ್ತು ವರ್ಷಗಳಲ್ಲಿ ಅಮೇಥಿಯಲ್ಲಿ ಉದ್ಯೋಗ, ವಿದ್ಯುತ್, ವ್ಯಾಪಾರ, ಶಿಕ್ಷಣ, ರಸ್ತೆ, ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ ಯಾವೊಂದು ಸೌಲಭ್ಯವನ್ನೂ ಕೊಡಲಾಗಲಿಲ್ಲವೇ ನೆಹರೂ-ಗಾಂಧೀ ಕುಟುಂಬಕ್ಕೆ? ಒಂದು ಸಾರಿ ಮೋದೀ ಜೀ ಯವರ ವಾರಾಣಾಸಿ ಕ್ಷೇತ್ರಕ್ಕೆ ಹೋಗಿ ಬನ್ನಿ ವಿರೋಧಿಗಳೆ, ಕಳೆದ ನಾಲ್ಕೇ ವರ್ಷಗಳಲ್ಲಿ ವಾರಾಣಾಸಿಯೆಂಬ ಪುಣ್ಯ ಕ್ಷೇತ್ರ ವನ್ನು ವಿಶ್ವವೇ ಬೆರಗುಗಣ್ಣಿಂದ ನೋಡುವಂತೆ ಅಭಿವೃದ್ದಿ ಪಡಿಸಿದ್ದಾರೆ ಮೋದೀ ಜೀ. ನಲ್ವತ್ತೆಂಟು ವರ್ಷಗಳು ಭಾರತವನ್ನು ಆಳಿಯೂ ಶೌಚಾಲಯ ಕಟ್ಟಿಸುವ ಯೋಗ್ಯತೆಯೂ ಇಲ್ಲದ ಗಾಂಧಿ ಪರಿವಾರ ಇವತ್ತು ಮೋದೀ ಜೀ ಯರಿಗೆ ವಿಕಾಸದ ಬಗ್ಗೆ ಪಾಠ ಮಾಡುತ್ತಾರೆ! ಕಾಂಗ್ರೆಸಿಗರಿಗೆ ನಾಚಿಕೆ- ಮಾನ- ಮರ್ಯಾದೆಯೆಂಬುದು ಇದ್ದಿದ್ದರೆ ಇಷ್ಟು ವರ್ಷ ದೇಶದ ಜನತೆಗೆ ದ್ರೋಹ ಬಗೆದದ್ದಕ್ಕೆ ಕ್ಷಮೆ ಕೇಳುತ್ತಿದ್ದರು. ಇವರು ಕ್ಷಮೆ ಕೇಳುವುದು ಹಾಗಿರಲಿ ಮುಂದೆಯೂ ನಾವೇ ಭಾರತವನ್ನಾಳುತ್ತೇವೆ, ವಿಕಾಸ ಮಾಡುತ್ತೇವೆ ನಮಗೆ ಮತ ನೀಡಿ ಎನ್ನುತ್ತಾರಲ್ಲ ಏನನ್ನಬೇಕು ಇವರ ಭಂಡತನಕ್ಕೆ.

ಒಂದು ಪರಿವಾರದ ಪ್ರಧಾನಮಂತ್ರಿಗಳಿಗೆ ದೇಶದ ಮತ್ತು ಅಮೇಥಿಯ ಅಭಿವೃದ್ದಿ ಮಾಡಲು ನಲವತ್ತೆಂಟು ವರ್ಷ ಸಾಲಲಿಲ್ಲವೇ? ಉತ್ತರಿಸಿ ಬಾಲ ಬಡುಕರೇ. ನಲ್ವತ್ತೆಂಟು ವರ್ಷ ನಿಮ್ಮ ಕೈಯಲ್ಲೇ ಆಡಳಿತವಿತ್ತಲ್ಲ ಆಗ ಏಕೆ ರೈತರ, ಯುವಕರ, ಮಹಿಳೆಯರ, ದಲಿತರ ಕಲ್ಯಾಣಕ್ಕಾಗಿ ದುಡಿಯಲಿಲ್ಲ? ಉತ್ತರಿಸಿ ರಾಜ ಪರಿವಾರದ ಹಿಂಬಾಲಕರೇ. ಒಡೆದು ಆಳುವುದೇ ಧ್ಯೇಯವಾಗಿರುವ ನಿಮ್ಮ ಪಕ್ಷದ ರಾಜಮಾತೆಯ ಕುಲೋಧ್ಬವ ಮಂದ ಬುದ್ದಿ ರಾಜಕುಮಾರನ ಕೈಯಲ್ಲಿ ದೇಶದ ಚುಕ್ಕಾಣಿಯನ್ನು ಮತ್ತೆ ಕೊಟ್ಟು ನೀವು ಮಾಡುವ “ಕಲ್ಯಾಣ”ಗಳನ್ನು ನೋಡಬೇಕೆ ನಾವುಗಳು? ನಲ್ವತ್ತೆಂಟು ವರ್ಷ ನಿಮ್ಮ ನೆಹರೂ ಪರಿವಾರ ಕಡೆದು ಕಟ್ಟೆ ಹಾಕಿದ್ದನ್ನು ನೋಡಿದ್ದೇವಲ್ಲ ಅಷ್ಟಾಗಿಯೂ ಇನ್ನೂ ನಿಮ್ಮ ಮೇಲೆ ನಂಬಿಕೆ ಇಟ್ಟು ನಿಮಗೆ ಮತ ನೀಡಬೇಕೆ? ಯಾವ ಮುಖ ಇಟ್ಟು ಕೊಂಡು ಮತ ಕೇಳಲು ಬರುತ್ತೀರಿ ಗುಲಾಮರೆ? ಹೇಳಿ ದೇಶದ ಜನರಿಗೆ ಉತ್ತರ ಕೊಡಿ. ಮೊದಲು ನಲ್ವತ್ತೆಂಟು ವರ್ಷಗಳ ನಿಮ್ಮ ಆಡಳಿತದ ಲೆಕ್ಕ ಕೊಡಿ, ಮತ್ತೆ ಮೋದೀ ಜೀ ಯವರ ನಾಲ್ಕು ವರ್ಷದ ಆಡಳಿತದ ಲೆಕ್ಕ ಕೇಳಿ. ಯಾವ ಲೆಕ್ಕಕ್ಕೂ ನಾವು ತಯಾರಿದ್ದೇವೆ ಏಕೆಂದರೆ ಮೋದೀಜಿ ಯವರ ಬಳಿ ಪೈಸೆ ಪೈಸೆಯ ಲೆಕ್ಕೆವಿದೆ. ನಿಮ್ಮ ದುರಾಡಳಿತದ ಲೆಕ್ಕ ಕೊಡಿ ಬನ್ನಿ ಕಾಂಗ್ರೆಸ್ ವೀರರೇ ಬನ್ನಿ.

-ಶಾರ್ವರಿ

Tags

Related Articles

Close