ಪ್ರಚಲಿತ

ಪ್ರಧಾನ ಮಂತ್ರಿಯ ಬಂಗಲೆಗಿಂತಲೂ ದೊಡ್ಡದಾದ ಬಂಗಲೆಯಲ್ಲಿ ವಾಸಿಸುವ ಕೈ ಕಮಾಂಡ್ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿ ಬಂಗಲೆಗಳಲ್ಲಿ ಅಕ್ರಮವಾಗಿ ಠಿಕಾಣಿ ಹೂಡಿದೆ!!

ಕೇಂದ್ರದಲ್ಲಿಅಧಿಕಾರಕ್ಕೆ ಬಂದು ಕೇವಲ ನಾಲ್ಕೇ ವರ್ಷಗಳಾಗಿವೆ ಆದರೆ ಭಾರತೀಯ ಜನತಾ ಪಕ್ಷವು ಈಗಾಗಲೇ ನವದೆಹಲಿಯಲ್ಲಿ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿ ಹೊಸ ಪ್ರಧಾನ ಕಚೇರಿಯ ನಿರ್ಮಾಣ ಪೂರ್ಣಗೊಳಿಸಿ ಉದ್ಘಾಟನೆಯನ್ನೂ ಮಾಡಿದೆ. ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ತಮ್ಮಆಡಳಿತದ ಅವಧಿ ಮುಗಿದ ಮೇಲೆ ರಾಜಕಾರಣಿಗಳು ಸರಕಾರಿ ಬಂಗಲೆಗಳನ್ನು ತೆರವುಗೊಳಿಸಿ ಮುಂದೆ ಬರುವವರಿಗೆ ವಾಸಿಸಲು ಬಿಟ್ಟು ಕೊಡಬೇಕು. ಆದರೆ ಅರುವತ್ತು ವರ್ಷಗಳಿಂದ ಅಧಿಕಾರದ ಸವಿ ಉಂಡ ಕಾಂಗ್ರೆಸಿನ ಲೂಟಿಕೋರರು ಜಪ್ಪಯ್ಯ ಅಂದ್ರೂ ಸರಕಾರಿ ಬಂಗಲೆಗಳನ್ನು ತೆರವುಗೊಳಿಸುತ್ತಿರಲಿಲ್ಲ. ಮೋದಿ ಸರಕಾರ ಬಂದ ಮೇಲೆ ಕಮ್ಮಿ ಎಂದರೂ ಇಂತಹ 1500 ಲೂಟಿಕೋರ ಅತ್ರಿಕ್ರಮಣಕಾರಿಗಳನ್ನು ನಿರ್ದಾಕ್ಷಿಣ್ಯವಾಗಿ ಹೊರದಬ್ಬಲಾಗಿದೆ!! ಮತ್ತೆ ವಿರೋಧಿಗಳು ಸುಖಾ ಸುಮ್ಮನೆ ಮೋದಿಯನ್ನು ದ್ವೇಷಿಸುತ್ತಾರೆಯೆ? ಸರಕಾರಿ ಬಂಗಲೆ, ಸರಕಾರಿ ಕಾರು, ಸರಕಾರದ ಸವಲತ್ತು, ಕಮಿಷನ್ ವ್ಯವಹಾರ ಎಲ್ಲವನ್ನೂ ಮೋದಿ ಕಿತ್ತುಕೊಳ್ಳಲಿಲ್ಲವೆ?

ಭಾಜಪ ಕೇವಲ ನಾಲ್ಕೆ ವರ್ಷಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ಬೆಲೆ ಕೊಟ್ಟು ತನ್ನದೆ ಆದ ಪ್ರಧಾನ ಕಚೇರಿಯನ್ನುನಿರ್ಮಿಸಿದೆ. ಆದರೆ ಕಾಂಗ್ರೆಸಿನ ಅಮ್ಮಿ ಜಾನ್ ಮತ್ತಾಕೆಯ ಬೇಟಾ -ಬೇಟಿ ಜಾನ್ ಇನ್ನೂ ಸರಕಾರಿ ಬಂಗಲೆಯಲ್ಲೆ ವಾಸ್ತವ್ಯ ಹೂಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೂ ತನ್ನದೇ ಆದ ಕಚೇರಿ ನಿರ್ಮಿಸಲು ದೆಹಲಿಯಲ್ಲಿ ಸ್ಥಳಾವಕಾಶವನ್ನು ನೀಡಲಾಗಿದೆ. 2009 ರಲ್ಲೇ ಡಾ. ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಅವರು ಹೊಸ ಕಚೇರಿಗಾಗಿ ಅಡಿಪಾಯವನ್ನೂ ಹಾಕಿದ್ದಾರೆ!! ಆದರೆ ಅಡಿಪಾಯ ಅಡಿಯಲ್ಲೆ ಇದೆ ಕಚೇರಿ ಮಾತ್ರ ಇನ್ನೂ ಮೇಲೆ ಏಳಲಿಲ್ಲ. ತಮ್ಮ ಸ್ವಂತ ಕಚೇರಿಯ ಗತಿಯೆ ಹೀಗಾದರೆ ಇನ್ನು ಯೋಜನೆಗಳ ಗತಿ ಅಧೋಗತಿ ಆಗುವುದರಲ್ಲಿ ಆಶ್ಚರ್ಯವಿಲ್ಲ ಬಿಡಿ. ಕಚೇರಿ ನಿರ್ಮಿಸಲು ತಮಗಾಗಿ ನೀಡಿದ ಜಾಗವನ್ನು ಹಾಗೆಯೆ ಬಿಟ್ಟು ಕಾಂಗ್ರೆಸಿನ ಪರಿವಾರ ಸರಕಾರಿ ಬಂಗಲೆಗಳಲ್ಲಿ ಠಿಕಾಣಿ ಹೂಡಿದೆ.

ಸೋನಿಯಾ ಬಂಗಲೆ: ದೇಶದಲ್ಲಿರುವ ರಾಜಕಾರಣಿಗಳ ಪೈಕಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಅತಿ ದೊಡ್ಡ ಮನೆಯಲ್ಲಿ ವಾಸಿಸುತ್ತಾರೆ. ಪ್ರಧಾನಮಂತ್ರಿಯ 7RCR ಬಂಗಲೆಗಿಂತಲೂ ದೊಡ್ಡದಿದೆ ಮೇಡಮ್ ಜಿ ಬಂಗಲೆ! ಕೇಂದ್ರ ಸಾರ್ವಜನಿಕ ಕಾರ್ಯ ಇಲಾಖೆಯ ಪ್ರಕಾರ 10 ಜನಪಥ್ ರಸ್ತೆಯಲ್ಲಿರುವ ಮೇಡಮ್ ಜಿ ಬಂಗಲೆಯ ವಿಸ್ತೀರ್ಣ 15,181 ಚದರ ಮೀಟರ್ ಇದ್ದರೆ, ಪ್ರಧಾನ ಮಂತ್ರಿಯ ಬಂಗಲೆಯ ವಿಸ್ತೀರ್ಣ 14,101 ಚದರ ಮೀಟರ್!! ಯಾವುದೆ ಹುದ್ದೆಯಲ್ಲಿಲ್ಲದ ಈಕೆಗೆ ಇಷ್ಟು ದೊಡ್ಡ ಬಂಗಲೆಯೆ? ಹಾಗಾದರೆ ಈಕೆ ಯಾರು? ಈಕೆಗೆ ಯಾಕೆ ಅಷ್ಟು ದೊಡ್ಡ ಬಂಗಲೆ ಕೊಡಲಾಗಿದೆ? ಇನ್ನು ಈ ಬಂಗಲೆಯಲ್ಲಿ ಈಕೆ ಒಬ್ಬಳೆ ಇರುವುದು. ಈಕೆಯ ಮಕ್ಕಳಿಗೆ ಪ್ರತ್ಯೇಕ ಬಂಗಲೆಗಳನ್ನು ನೀಡಲಾಗಿದೆ.

ರಾಹುಲ್ ಗಾಂಧಿ ಬಂಗಲೆ: ಮೇಡಮ್ ಜಿ ಕುಲೋದ್ಭವ ರಾಹುಲನಿಗೆಂದೆ ಪ್ರತ್ಯೇಕ ಬಂಗಲೆ ನೀಡಲಾಗಿದೆ. ಈತನಿಗೆ 12-ತುಘಲಕ್ ಲೇನಿನಲ್ಲಿ 5,022.58 ಚದರ ಮೀ ವಿಸ್ತೀರ್ಣದಲ್ಲಿ ಹರಡಿರುವ ಬೃಹತ್ ಬಂಗಲೆ ನೀಡಲಾಗಿದೆ. ಸರಕಾರದ ಯಾವುದೆ ನಿರ್ದಿಷ್ಟ ಅಧಿಕಾರದಲ್ಲಿರದ ಈತನಿಗೆ ಇಷ್ಟು ದೊಡ್ದ ಬಂಗಲೆ ಕೊಟ್ಟಿದ್ದು ಯಾಕೆ?

ಪ್ರಿಯಾಂಕಾ ಗಾಂಧಿ ಬಂಗಲೆ: ಇನ್ನು ಪ್ರಿಯಾಂಕಾ ಗಾಂಧಿಗೆ 35 ಲೋಧಿ ಎಸ್ಟೇಟ್ ನಲ್ಲಿ 2,765.18ಚದರ ಮೀಟರ್ ವಿಸ್ತೀರ್ಣದ ಬಂಗಲೆ ನೀಡಲಾಗಿದೆ. ಈಕೆ ದೇಶದ ಸಾಮಾನ್ಯ ನಾಗರಿಕಳು. ಆಕೆ ಸರಕಾರ ಬಿಡಿ, ಕಾಂಗ್ರೆಸಿನಲ್ಲೂ ಯಾವುದೆ ಹುದ್ದೆಯನ್ನು ಹೊಂದಿಲ್ಲ, ಆದರೂ ಆಕೆಗೆ ಪ್ರತ್ಯೇಕವಾಗಿ ಬಂಗಲೆಯನ್ನು ನೀಡಲಾಗಿದೆ. ಅಮ್ಮ-ಮಕ್ಕಳಿಗೆ ಪ್ರತ್ಯೇಕ ಬಂಗಲೆ ನೀಡುವ ಉದ್ದೇಶ ಎನು? ಯಾರ ಅಪ್ಪನ ಆಸ್ತಿ ಎಂದು ಈ ರೀತಿ ಬಂಗಲೆಗಳನ್ನು ಅಮ್ಮ-ಮಕ್ಕಳಿಗೆ ಹಂಚಿರುವುದು? ಅಧಿಕಾರದಲ್ಲಿ ಇರದವರಿಗೆ ಏಕೆ ಸರಕಾರಿ ಬಂಗಲೆ? ಹಾಗಾದರೆ ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ಬೆಲೆ ಇಲ್ಲವೆ? ಇದುವಾ ಕಾಂಗ್ರೆಸಿಗರು ನ್ಯಾಯಾಲಯಕ್ಕೆ ಕೊಡುವ ಗೌರವ? ನ್ಯಾಯಾಲಯದ ಆದೇಶದನ್ವಯ ಈ ಬಂಗಲೆಗಳನ್ನು ತೆರವುಗೊಳಿಸುವುದು ಯಾವಾಗ?

ಇನ್ನು ಈ ಎಲ್ಲಾ ಬಂಗಲೆಗಳ ಖರ್ಚು ತುಂಬಿಸುವವರು ಸಾಮಾನ್ಯ ನಾಗರಿಕರು. ಜನರು ಕಟ್ಟುವ ತೆರಿಗೆಯಿಂದಲೆ ಈ ಬಂಗಲೆಗಳ ನಿರ್ವಹಣೆ ನಡೆಸಲಾಗುತ್ತದೆ. ದೇಶವನ್ನು ಕೊಳ್ಳೆ ಹೊಡೆದು ಹಣವನ್ನು ವಿದೇಶಿ ಬ್ಯಾಂಕಿನಲ್ಲಿಟ್ಟವರ ಬಂಗಲೆಗಳ ಖರ್ಚನ್ನೂ ಒದಗಿಸುವ ಗ್ರಹಚಾರ ಶ್ರೀ ಸಾಮಾನ್ಯನಿಗೆ! ಲೂಟಿಕೋರರಿಗೆ SPG ಭದ್ರತೆ ಬೇರೆ ಕೇಡು! ಇವರು ಸತ್ತರೆ ಇವರ ಸಮಾಧಿಗೂ ದೆಹಲಿಯ ಆಯಕಟ್ಟಿನ ಜಾಗದಲ್ಲಿ ಸ್ಥಳ ನೀಡಬೇಕು ಮತ್ತೆ ಸತ್ತವರಿಗೂ ಭದ್ರತೆ ಒದಗಿಸಬೇಕು. ಅದೇನು ಕರ್ಮವೋ ಭಾರತೀಯರದ್ದು, ಮುಗಲ-ಇಟಲಿ ಸಂತಾನಗಳನ್ನು ಬದುಕಿರುವಾಗಲೂ ಸಾಕಬೇಕು ಸತ್ತ ಮೇಲೂ ಇವರ ಹೆಣ ಕಾಯಲು ಹಣ ಸುರಿಯಬೇಕು!

ಮೋದಿ ಅಧಿಕಾರ ಸ್ವೀಕರಿಸಿದ ನಾಲ್ಕು ವರ್ಷಗಳಲ್ಲಿ 1500 ಲೂಟಿಕೋರರನ್ನು ಬಂಗಲೆಗಳಿಂದ ಹೊರದಬ್ಬಿ ಬೀದಿಗೆ ತಳ್ಳಿದ್ದಾರೆ. ಕಾಡಿನಲ್ಲಿ ನರಿಗಳು ಊಳಿಡುವಂತೆ ಒಂದೇ ರಾಗದಲ್ಲಿ ಇವರೆಲ್ಲ ಮೋದಿ ವಿರೋಧಿ ಘೋಷಣೆ ಕೂಗುವ ಮರ್ಮ ಈಗಲಾದರೂ ಗೊತ್ತಾಯಿತೆ? ಮೋದಿ ವಿದೇಶದಿಂದ ಕಪ್ಪು ಹಣ ತಂದಿಲ್ಲ ಎನ್ನುವುದು ಮಾತ್ರ ಕಾಣುವ ‘ಕಳ್ಳಕಣ್ಣಿ’ನವರಿಗೆ ಮೋದಿ ದೇಶದೊಳಗೆ ಹಲವಾರು ಕೋಟಿ ರುಪಾಯಿಗಳನ್ನು ಉಳಿಸಿರುವುದು ಕಾಣುವುದಿಲ್ಲ. ಹಾಗೆ ನೋಡಿದರೆ ಜನರಿಗೆ ಬರಬೇಕಾಗಿದ್ದ 15 ಲಕ್ಷ ರುಪಾಯಿಗಳು ಯಾವತ್ತೋ ಸಂದಾಯವಾಗಿವೆ. ಕಳ್ಳ-ಸುಳ್ಳ-ಮಳ್ಳರಿಗೆ ಇನ್ನೂ 15 ಲಕ್ಷದ ಆಸೆ ಹೋಗಿಲ್ಲ.

-ಶಾರ್ವರಿ

Tags

Related Articles

Close