ಪ್ರಚಲಿತ

ಪಾಕಿಗಳನ್ನು ಭಿಕ್ಷುಕರು, ಜೇಬುಗಳ್ಳರು ಎಂದವರ್ಯಾರು ಗೊತ್ತಾ?

ಕೇವಲ ಭಾರತ ಮಾತ್ರವಲ್ಲ. ಪ್ರಪಂಚದ ಹೆಚ್ಚಿನ ರಾಷ್ಟ್ರಗಳಿಗೆ ಪಾಕಿಸ್ತಾನ ಎಂದರೆ ಅಷ್ಟಕ್ಕಷ್ಟೇ. ಕಾರಣವಿಲ್ಲದೆ ಯಾರೂ ಸಹ ಪಾಕಿಸ್ತಾನವನ್ನು ದ್ವೇಷಿಸುತ್ತಿಲ್ಲ. ಬದಲಾಗಿ ಪಾಕ್‌ನ ನೌಟಂಕಿಗಳು, ಮೋಸದಾಟ ಹೀಗೆ ಹತ್ತು ಹಲವು ಕಾರಣಗಳಿಂದ ಪ್ರಪಂಚದ ಹಲವು ರಾಷ್ಟ್ರಗಳಿಗೆ ಉಗ್ರರನ್ನು ಪೋಷಣೆ ಮಾಡುವ ಪಾಕ್ ಕಂಡರೆ ಅಷ್ಟಕ್ಕಷ್ಟೇ ಎನ್ನುವುದು ಎಲ್ಲರೂ ಬಲ್ಲ ಸತ್ಯ.

ಭಾರತದ ವಿರುದ್ಧ ಪಿತೂರಿ, ಉಗ್ರವಾದದಂತಹ ಅಪಾಯಕಾರಿ ಅಸ್ತ್ರಗಳನ್ನು ಪ್ರಯೋಗಿಸುವ ಮೂಲಕ ಪಾಕ್ ಭಾರತದ ಶತ್ರುವಾಗಿಯೇ ಇದೆ. ಭಾರತದಂತೆಯೇ ಪಾಕಿಸ್ತಾನವನ್ನು ಇಷ್ಟಪಡದ ಇನ್ನೂ ಅನೇಕ ರಾಷ್ಟ್ರಗಳು ಪ್ರಪಂಚದಲ್ಲಿವೆ ಎನ್ನುವುದನ್ನು ನೀವು ನಂಬಲೇ ಬೇಕು. ಇದಕ್ಕೆ ಪೂರಕ ಎಂಬಂತೆ ಎರಡು ಘಟನೆಗಳನ್ನು ಪ್ರಸ್ತಾಪಿಸಲೇ ಬೇಕು. ಆಗ ಪಾಕಿಸ್ತಾನ ಯಾವ ಕಾರಣಕ್ಕೆ ಜಾಗತಿಕವಾಗಿ ದ್ವೇಷಿಸಲ್ಪಡುತ್ತಿದೆ ಎನ್ನುವುದಕ್ಕೆ ಪೂರಕ ಸಾಕ್ಷ್ಯ ದೊರೆತಂತಾಗುತ್ತದೆ.

ಸದ್ಯ ಸೌದಿ ಅರೇಬಿಯಾ ಸಹ ಪಾಕ್ ವಿರುದ್ಧ ಹೇಳಿಕೆ ನೀಡಿದೆ. ಸೌದಿ ಅರೇಬಿಯಾದಲ್ಲಿರುವ ಹಜ್ ಯಾತ್ರೆಗೆ ಹಲವು ರಾಷ್ಟ್ರಗಳ ಇಸ್ಲಾಂ ಧರ್ಮೀಯರು ಭೇಟಿ ನೀಡುತ್ತಾರೆ. ಪಾಕ್‌ನಿಂದಲೂ ಹಜ್‌ಗೆ ತೆರಳುವವರಿದ್ದಾರೆ. ಪಾಕ್ ಪ್ರವಾಸಿಗರನ್ನು ಗಮನದಲ್ಲಿರಿಸಿಕೊಂಡು ಸೌದಿ ಆಜ್ಞೆಯೊಂದನ್ನು ಹೊರಡಿಸಿದೆ.

ಸೌದಿ ಅರೇಬಿಯಾವು ತನ್ನ ಸಾಗರೋತ್ತರ ಅಧಿಕಾರಿಗಳ ಸಭೆಯಲ್ಲಿ ಪಾಕಿಸ್ತಾನಕ್ಕೆ ಎಚ್ಚರಿಕೆಯೊಂದನ್ನು ನೀಡಿದೆ. ಪಾಕ್‌ನಿಂದ ಹಜ್ ಕೋಟಾದಡಿ ಬರುವವರ ಬಗ್ಗೆ ಎಚ್ಚರದಿಂದ ಇರುವಂತೆ ಸೂಚಿಸಿದೆ. ಹಜ್ ಯಾತ್ರೆಗೆ ಪಾಕ್‌ನಿಂದ ಬರುವವರಲ್ಲಿ ಹೆಚ್ಚಿನವರು ಪಿಕ್ ಪಾಕೆಟರ್ಸ್, ಭಿಕ್ಷುಕರೇ ಇದ್ದಾರೆ. ಈ ವರೆಗೆ ಹಜ್ ಯಾತ್ರೆಯಲ್ಲಿ ಬಂಧನಕ್ಕೆ ಒಳಪಟ್ಟ ಭಿಕ್ಷುಕರು, ಜೇಬುಗಳ್ಳರ ಪೈಕಿ ತೊಂಬತ್ತು ಪ್ರತಿಶತಗಳಷ್ಟು ಪಾಕಿಸ್ತಾನದ ಯಾತ್ರಿಗಳೇ ತುಂಬಿದ್ದಾರೆ ಎಂದು ಸೌದಿ ಅರೇಬಿಯಾ ತಿಳಿಸಿದೆ. ಬಂಧಿತ ಪಾಕಿಗಳು ಉಮ್ರಾ ವಿಸಾ ಹೊಂದಿದ್ದು, ಇಂತಹವರನ್ನು ಹಜ್‌ ಯಾತ್ರೆಗೆ ಕಳುಹಿಸದಂತೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.

ಸೌದಿ ಅರೇಬಿಯಾದ ಜೈಲುಗಳು ಪಾಕಿಸ್ತಾನದ ಕೈದಿಗಳಿಂದ ತುಂಬಿವೆ. ಮಕ್ಕಾದ ಮಸ್ಜಿದ್ ಅಲ್ ಹರಾಮ್ ಸಮೀಪದಲ್ಲಿರುವ ಎಲ್ಲಾ ಪಿಕ್ ಪಾಕೆಟರ್ಸ್ ಪಾಕಿಸ್ತಾನದವರೇ ಆಗಿದ್ದಾರೆ ಎಂದು ಸೌದಿ ಅರೇಬಿಯಾ ಪಾಕ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಪಾಕ್‌ನ ಈ ದುಷ್ಟರು ಉಮ್ರಾ ವಿಸಾದಲ್ಲಿ ಹೋಗುತ್ತಾರೆ. ಅರಬ್ ವಿಸಾ‌ದಲ್ಲಿ ಹೋಗುವುದಿಲ್ಲ. ಈ ಬಗೆಗೂ ಸೌದಿ ಅರೇಬಿಯಾ ಅಸಮಾಧಾನ ವ್ಯಕ್ತಪಡಿಸಿದೆ.

ಇನ್ನೊಂದು ಘಟನೆಯಲ್ಲಿ, ಅಫ್ಘಾನಿಸ್ತಾನ ಸಹ ಪಾಕ್ ವಿರುದ್ಧ ತನ್ನ ಆಕ್ರೋಶ ಹೊರ ಹಾಕಿದೆ. ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುವ ಪಾಕಿಸ್ತಾನವು ತಾನೇ ಭಯೋತ್ಪಾದನೆಯ ಬಲಿಪಶುವಿನಂತೆ ಆಟವಾಡುವ ಮೂಲಕ ದ್ವಂದ್ವ ನೀತಿಯನ್ನು ಅನುಸರಿಸುತ್ತಿರುವುದಾಗಿ ವಿಶ್ವಸಂಸ್ಥೆಯಲ್ಲಿ ಅಫ್ಘಾನಿಸ್ತಾನದ ಕಾಯಂ ಪ್ರತಿನಿಧಿ ಪಾಕ್ ವಿರುದ್ಧ ಕಿಡಿ ಕಾರಿದ್ದಾರೆ. ಒಂದು ಕಡೆ ಭಯೋತ್ಪಾದನೆಗೆ‌ ಸಂಬಂಧಿಸಿದ ಹಾಗೆ ತಾನೇ ಬಲಿಪಶುವಾಗಿರುವುದಾಗಿ ಪಾಕ್ ಹೇಳಿ ಕೊಳ್ಳುತ್ತಿದೆ. ಆದರೆ ಇನ್ನೊಂದು ಕಡೆ ಭಯೋತ್ಪಾದಕರ ಪರವಾಗಿಯೇ ಪಾಕ್ ಲಾಭಿ ನಡೆಸುತ್ತಿದೆ ಎಂದು ಅಫ್ಘಾನ್ ಆರೋಪಿಸಿದೆ.

ಒಟ್ಟಿನಲ್ಲಿ ತನ್ನ ಸಮಾಜ ದ್ರೋಹಿ ನಿಲುವುಗಳ ಮೂಲಕವೇ ಭಾರತ ಮತ್ತು ಇತರ ರಾಷ್ಟ್ರಗಳಿಗೂ ಪಾಕಿಸ್ತಾನವನ್ನು ಕಂಡರಾಗದು ಎಂಬಂತಹ ಸ್ಥಿತಿ ನಿರ್ಮಾಣ ಆಗಿದೆ. ಮುಸ್ಲಿಂ ರಾಷ್ಟ್ರಗಳು ಸಹ ಪಾಕ್ ವಿರುದ್ಧ ಅಸಮಾಧಾನ ಹೊರಹಾಕಿರುವುದು, ಅದರ ದುರುಳತನ, ಮೋಸಕ್ಕೆ ಹಿಡಿದ ಕೈಗನ್ನಡಿ ಎನ್ನುವುದರಲ್ಲಿ ಸಂದೇಹವಿಲ್ಲ.

Tags

Related Articles

Close