ಪ್ರಚಲಿತ

ಅಮೆರಿಕಾದ ಐಕಾನಿಕ್ ಟೈಮ್ಸ್ ಸ್ಕ್ವೇರ್‌ನಲ್ಲೂ ಕಾಣಬಹುದು ಶ್ರೀರಾಮ ಪ್ರತಿಷ್ಠೆಯ ನೇರಪ್ರಸಾರ

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರಭು ರಾಮಲಲ್ಲಾನ ಪ್ರತಿಷ್ಠಾಪನೆ ನಡೆಯುತ್ತಿರುವುದು ಕೇವಲ ಭಾರತೀಯರಿಗೆ ಮಾತ್ರವಲ್ಲ, ಜಗತ್ತಿನ ನಾನಾ ಮೂಲೆಗಳಲ್ಲಿ ವ್ಯಾಪಿಸಿರುವ ಶ್ರೀರಾಮ ಭಕ್ತರಿಗೂ ಹಬ್ಬ, ಸಂಂಭ್ರಮವೇ ಸರಿ.

ಅದೆಷ್ಟೋ ವರ್ಷಗಳಿಂದ ಶ್ರೀರಾಮನನ್ನು ಆತನ ಜನ್ಮಭೂಮಿಯ ಭವ್ಯ ಮಂದಿರದಲ್ಲಿ ಕಾಣಬೇಕೆಂದು ಬಯಸಿದ ಅದೆಷ್ಟೋ ಜನರು ಇಡೀ ವಿಶ್ವದಲ್ಲಿದ್ದಾರೆ. ಹಲವು ಕೋಟಿ ಜನರ ಮನೋಭಿಲಾಶೆಯಂತೆ ಈ ವರ್ಷದ ಜನವರಿ 22 ರಂದು ಶ್ರೀರಾಮ ಅಯೋಧ್ಯೆಯ ತನ್ನ ಪುಣ್ಯ ಜನ್ಮಭೂಮಿಯಲ್ಲಿ ನಿರ್ಮಾಣವಾದ ಭವ್ಯ ರಾಷ್ಟ್ರ ಮಂದಿರದೊಳದೆ ವಿರಾಜಮಾನನಾಗಿ, ಲೋಕವನ್ನು ಹರಸಲಿದ್ದಾನೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ‌ಯ ಅವಿರತ ಶ್ರಮ, ಪ್ರಯತ್ನದ ಕಾರಣದಿಂದಲೇ ಪ್ರಭು ಶ್ರೀರಾಮನ ಜನ್ಮಭೂಮಿ ಅಲ್ಪಸಂಖ್ಯಾತರಿಂದ ಮತ್ತೆ ಹಿಂದೂಗಳಿಗೆ, ಶ್ರೀರಾಮನಿಗೆ ಸೇರುವಂತಾಯಿತು. 2014 ರಲ್ಲಿ ಕೇಂದ್ರದಲ್ಲಿ ಬಿಜೆಪಿ ಆಡಳಿತ ಹಿಡಿದರೆ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನಿಗೆ ಭವ್ಯ ಮಂದಿರ ನಿರ್ಮಾಣ ಮಾಡುತ್ತೇವೆ ಎನ್ನುವ ಐತಿಹಾಸಿಕ ಪ್ರತಿಜ್ಞೆಯೊಂದನ್ನು ಪ್ರಧಾನಿ ನರೇಂದ್ರ ಮೋದಿ ಮತ್ತವರ ಪಕ್ಷ ಮಾಡಿತ್ತು. ಅದರಂತೆ 2014 ರ ಚುನಾವಣೆಯನ್ನು ಗೆದ್ದು ಕೇಂದ್ರದಲ್ಲಿ ಅಧಿಕಾರ ಸ್ಥಾಪಿಸಿದ ಬಳಿಕ ಬಿಜೆಪಿ ನ್ಯಾಯಾಲಯದಲ್ಲಿದ್ದ ರಾಮ ಜನ್ಮಭೂಮಿ ಪ್ರಕರಣದಲ್ಲಿ ಹಿಂದೂಗಳಿಗೆ ನ್ಯಾಯ ಒದಗುವಂತೆ ಮಾಡಿತ್ತು.

ಅದಾದ ಬಳಿಕ ಯಾವುದೇ ಗೊಂದಲಗಳಿಗೆ ಅವಕಾಶ ಇಲ್ಲದ ಹಾಗೆ ಅಯೋಧ್ಯೆಯ ಸರಯೂ ನದಿ ಸಮೀಪ ಶ್ರೀರಾಮ ಜನಿಸಿದ ಸ್ಥಳದಲ್ಲಿಯೇ ಆತನಿಗೆ ಮತ್ತೆ ಆಲಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ, ಮಂದಿರದ ಕಾಮಗಾರಿ ಆರಂಭವಾಗುವ ಹಾಗೆ ಮಾಡಿತ್ತು ಪ್ರಧಾನಿ ಮೋದಿ ಸರ್ಕಾರ. ಇದರ ಫಲವೆಂಬಂತೆ ಸದ್ಯ ಮಂದಿರದ ಮೊದಲ ಹಂತ ಪೂರ್ಣವಾಗಿದ್ದು 2024 ಜನವರಿ 22 ರಂದು ಅಯೋಧ್ಯೆಯ ರಾಷ್ಟ್ರ ಮಂದಿರದಲ್ಲಿ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠೆ ನಡೆಯಲಿದೆ.

ಭಾರತದೆಲ್ಲೆಡೆ ಈ ಸಂಭ್ರಮವನ್ನು ಆಚರಿಸಲು ಪ್ರಭು ಶ್ರೀರಾಮನ ಭಕ್ತರು, ಬಿಜೆಪಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಾಮ ಮಂದಿರದ ಮಂತ್ರಾಕ್ಷತೆ ಮನೆ ಮನೆಗೂ ಸಿಗುವಂತೆ ವಿಎಚ್‌ಪಿ, ರಾಮ ಭಕ್ತರು ಕಾರ್ಯತತ್ಪರರಾಗಿದ್ದಾರೆ. ಪ್ರತಿಷ್ಠೆ ರಂದು ದೇಶದ ಎಲ್ಲಾ ದೇಗುಲ ಗಳಲ್ಲಿ ಭಜನೆ, ಧಾರ್ಮಿಕ ಕಾರ್ಯಕ್ರಮಗಳು, ಅನ್ನ ಸಂತರ್ಪಣೆ, ಮನೆ ಮನೆಗಳಲ್ಲಿ ದೀಪ ಬೆಳಗುವುದರ ಮೂಲಕ ದೀಪಾವಳಿ ಆಚರಣೆ ನಡೆಯಲಿದೆ. ದೇಶದೆಲ್ಲೆಡೆ ಈ ಕಾರ್ಯಕ್ರಮಗಳನ್ನು ದೊಡ್ಡ ಪರದೆಗಳನ್ನು ಅಳವಡಿಸಿ ನೇರಪ್ರಸಾರವನ್ನು ಭಕ್ತರಿಗೆ ತೋರಿಸುವ ಕಾರ್ಯ ಸಹ ನಡೆಯಲಿದೆ.

ಇನ್ನು ಅಮೆರಿಕಾದಲ್ಲಿಯೂ ಶ್ರೀರಾಮ ಮಂದಿರ ಉದ್ಘಾಟನೆಯ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಜನತೆ ಕಾತರದಿಂದ ಕಾಯುತ್ತಿದ್ದು, ಈ ಐತಿಹಾಸಿಕ ಕ್ಷಣವನ್ನು ನೇರಪ್ರಸಾರ ಮಾಡಲು ಸಜ್ಜಾಗುತ್ತಿದೆ. ನ್ಯೂಯಾರ್ಕ್‌ನ ಐಕಾನಿಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ಇದಕ್ಕಾಗಿ ಸಿದ್ಧತೆ ನಡೆಯುತ್ತಿದೆ. ಅಮೆರಿಕಾದ ವಿವಿಧ ಭಾರತೀಯ ರಾಯಭಾರಿ ಕಚೇರಿಗಳು ಸಹ ಈ ಕ್ಷಣವನ್ನು ನೇರ ಪ್ರಸಾರ ಮಾಡಲಿವೆ.

ಒಟ್ಟಿನಲ್ಲಿ ಪ್ರಭು ಶ್ರೀರಾಮನನ್ನು ಅಯೋಧ್ಯೆಯ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡುತ್ತಿರುವ ಸಂಭ್ರಮವನ್ನು ಕೇವಲ ಭಾರತೀಯರು ಮಾತ್ರವಲ್ಲದೆ ಇಡೀ ವಿಶ್ವವೇ ಹಬ್ಬದಂತೆ ಆಚರಿಸಲು ಮುಂದಾಗಿದ್ದು, ಅಂದು ಇಡೀ ಜಗತ್ತೇ ರಾಮ ನಾಮ ಜಪದ ಮೂಲಕ ಶ್ರೀರಾಮನ ಕೃಪೆಗೆ ಪಾತ್ರರಾಗುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Tags

Related Articles

Close