ಪ್ರಚಲಿತ

ಶ್ರೀಲಂಕಾದ ನೆಲದಲ್ಲಿ ಭಾರತ ವಿರೋಧಿ ಕೃತ್ಯ ನಡೆಸಲು ಬಿಡವುದಿಲ್ಲ

ಭಾರತದ ವಿರುದ್ಧ ಕೆಲಸ ಮಾಡಲು ತಮ್ಮ ದೇಶವನ್ನು ಬಳಕೆ ಮಾಡಿಕೊಳ್ಳಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂಬುದಾಗಿ ಶ್ರೀಲಂಕಾದ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ತಿಳಿಸಿದ್ದಾರೆ.

ಭಾರತದ ಕೆಲವು ಬುದ್ಧಿವಂತರೇ ಭಾರತದ ವಿರುದ್ಧ ಷಡ್ಯಂತ್ರ ನಡೆಸುತ್ತಿರುವ ಕಾಲದಲ್ಲಿ, ಭಾರತ ವಿರೋಧಿಗಳ ಜೊತೆ ಕೈ ಜೋಡಿಸಿ ಕೆಲಸ ಮಾಡುವ, ಆ ಮೂಲಕವೇ ಹಣ ಮಾಡಿ ಬದುಕುತ್ತಿರುವ ಹಲವಾರು ಜ್ವಲಂತ ಸಾಕ್ಷಿಗಳು ನಮ್ಮಲ್ಲೇ ಇವೆ. ಇಂತಹ ಸಂದರ್ಭದಲ್ಲಿ ಶ್ರೀಲಂಕಾ ಪ್ರಕಟಿಸಿರುವ ಈ ಹೇಳಿಕೆ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಗಳಾಗಿರುವ ದೇಶವಾಸಿಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ಛಾಟಿ ಬೀಸಿದೆ ಎಂದರೂ ತಪ್ಪಾಗಲಾರದು.

ಶ್ರೀಲಂಕಾದ ಅಧ್ಯಕ್ಷ‌ರು ಬ್ರಿಟನ್ ಮತ್ತು ಫ್ರಾನ್ಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಫ್ರೆಂಚ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಭಾರತದ ಬಗೆಗಿನ ಈ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಭಾರತದ ವಿರುದ್ಧ ನಡೆಸಲಾಗುವ ಯಾವುದೇ ಕುಕೃತ್ಯಕ್ಕೂ ಶ್ರೀಲಂಕಾದ ನೆಲವನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಬಿಡಲಾರೆವು ಎನ್ನುವ ಮೂಲಕ, ಭಾರತದ ಮೇಲಿರುವ ಗೌರವವನ್ನು ಸಾದರಪಡಿಸಿದ್ದಾರೆ.

ಭಾರತದ ನೆರೆೊರ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾ ಭಾರತವಕ್ಕೆ ಹೇಗೆಲ್ಲಾ ತೊಂದರೆ ನೀಡಬಹುದು?, ಭಾರತದ ಸ್ವಾಸ್ಥ್ಯ ಕೊಡುವ ಬಗೆ ಹೇಗೆ ಎಂದೆಲ್ಲಾ ಆಲೋಚಿಸುತ್ತಿದೆ. ಹಾಗೆಯೇ ಭಯೋತ್ಪಾದನೆ, ಗಡಿ ತಂದೆ ಮೊದಲಾದ ಮಾರ್ಗಗಳನ್ನು ಬಳಕೆ ಮಾಡಿಕೊಂಡು ತಂದೆ ತಕರಾರು ಮಾಡಿ ಭಾರತವನ್ನು ಕೆಣಕುತ್ತಲೇ ಇರುತ್ತದೆ. ಜೊತೆಗೆ ಭಾರತದಿಂದ ಅದೆಷ್ಟೋ ಬಾರಿ ಸರಿಯಾದ ಪ್ರತ್ಯುತ್ತರ ದೊರೆತರೂ ಈ ರಾಷ್ಟ್ರಗಳು ಬಾಲ ಬಿಚ್ಚುವುದನ್ನು ಮಾತ್ರ ಬಿಡಲೊಲ್ಲವು. ಇಂತಹ ದುಷ್ಟ ಮನಸ್ಥಿತಿಯ ರಾಷ್ಟ್ರಗಳಿಗೆ ಶ್ರೀಲಂಕಾದ ಈ ಹೇಳಿಕೆ ಮತ್ತು ಭಾರತದ ಮೇಲೆ ಶ್ರೀಲಂಕಾ ಇರಿಸಿರುವ ಗೌರವ ನುಂಗಲಾರದ ತುತ್ತಾಗಿ ಪರಿಣಮಿಸಿರಬಹುದು. ಜೊತೆಗೆ ದೇಶದೊಳಗಿದ್ದೇ ದೇಶ ವಿರೋಧಿ ಕೆಲಸಗಳನ್ನು ಮಾಡುವವರಿಗೂ ಶ್ರೀಲಂಕಾದ ಈ ಧೋರಣೆ ಮುಖಕ್ಕೆ ಹೊಡೆದಂತಿದೆ ಎನ್ನುವುದು ಸ್ಪಷ್ಟ.

ಪ್ರಸ್ತುತ ಶ್ರೀಲಂಕಾ ಮಾತ್ರವಲ್ಲದೆ ವಿಶ್ವದ ಹೆಚ್ಚಿನ ರಾಷ್ಟ್ರಗಳು ಭಾರತವನ್ನು ಮಾದರಿ ಎಂಬಂತೆ ತಿಳಿದುಕೊಂಡಿವೆ. ಒಂಬತ್ತು ವರ್ಷಗಳ ಹಿಂದೆ ವಿಶ್ವದೆದುರು ಕೈ ಕಟ್ಟಿ ನಿಲ್ಲುತ್ತಿದ್ದ ಭಾರತದ ಮುಂದೆ ಇಂದು ವಿಶ್ವದ ಹಲವು ರಾಷ್ಟ್ರಗಳು ಕೈ ಮುಗಿದು ಗೌರವ ಸೂಚಿಸುವ ಸ್ಥಿತಿ ನಿರ್ಮಾಣವಾಗಿದೆ. ವಿಶ್ವದ ಹಲವು ಮುಖ್ಯ ನಿರ್ಧಾರಗಳಲ್ಲಿ ಭಾರತವೂ ಪಾಲು ಪಡೆಯುವಂತಾಗಿದೆ. ಕೊರೋನಾ ಸಮಯದಲ್ಲಂತೂ ಭಾರತ ಪ್ರಪಂಚದ ಹಲವು ರಾಷ್ಟ್ರಗಳಿಗೆ ಆರೋಗ್ಯ, ಆಹಾರ ಸಹಕಾರಗಳನ್ನು ನೀಡಿದ್ದು, ಈ ಎಲ್ಲಾ ಕಾರಣಗಳಿಂದಲೂ ಭಾರತ ವಿಶ್ವ ಮಾನ್ಯವಾಗಿದೆ. ಭಾರತದ ಗೌರವ ಹೆಚ್ಚಿದೆ.

ಇವೆಲ್ಲವನ್ನೂ ಕಂಡು ಸಾಗಿಸಲು ಸಾಧ್ಯವಾಗದ ಪಾಕಿಸ್ತಾನ, ಚೀನಾಗಳಂತಹ ರಾಷ್ಟ್ರಗಳು ಭಾರತದ ವಿರುದ್ಧ ತಮ್ಮ ನೆಲದಲ್ಲಿ ಷಡ್ಯಂತ್ರ ರೂಪಿಸುತ್ತಲೇ ಬಂದಿವೆ. ಕೆಟ್ಟ ಮೇಲೆಯೂ ಬುದ್ಧಿ ಬಾರದ ಈ ರಾಷ್ಟ್ರಗಳಿಗೆ ಕೆಲವು ಹರಾಮಿ ಭಾರತೀಯರೇ ತೆರೆಮರೆಯ ಸಹಾಯ ನೀಡುತ್ತಿದ್ದಾರೆ ಎನ್ನುವುದು ದುರಾದೃಷ್ಟಕರ. ಇಂತಹ ನಾ ಲಾ ಯರು ಗಳಿಗೆ ಶ್ರೀಲಂಕಾ ಅಧ್ಯಕ್ಷರ ಭಾರತದ ಪರ ನಿಲುವು ಪಾಠವಾಗಲಿ. ದೇಶ ವಿರೋಧಿಗಳ ಕಣ್ತೆರೆಯುವಂತಾಗಿ, ದೇಶದ ಪರ ಕೆಲಸ ಮಾಡಲು ಸಾಧ್ಯವಾಗದಿದ್ದರೂ, ದೇಶ ವಿರೋಧಿಗಳ ಜೊತೆ ಕೈ ಜೋಡಿಸುವುದನ್ನು ನಿಲ್ಲಿಸುವ ಮನಸ್ಸು ಮಾಡಲಿ ಎಂಬುದೇ ನಮ್ಮ ಸದಾಶಯ.

Tags

Related Articles

Close