ಪ್ರಚಲಿತ

ನಾಲ್ಕು ಜನರ ತಂಡವೊಂದು ಮೋದಿ ಸರಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ!! ಕೇಂದ್ರ ಸರಕಾರದ ಅಧಿಕಾರಿಗಳು ಮತ್ತು ಕಾಂಗ್ರೆಸ್ ರಹಸ್ಯ ದೋಸ್ತಿಯ ಸುಳಿವು ಕೊಟ್ಟರು ಸುಬ್ರಮಣ್ಯನ್ ಸ್ವಾಮಿ!!

ಕಳೆದ ಕೆಲವು ತಿಂಗಳಿನಿಂದ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಸುಬ್ರಮಣ್ಯನ್ ಸ್ವಾಮಿ ಹೇಳುತ್ತಿರುವ ಮಾತುಗಳಲ್ಲಿ ಸತ್ಯ ಇದೆ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಮೋದಿ ಸರಕಾರದ ಒಳಗಿಂದಲೇ ಮೋದಿಯವರ ವಿರುದ್ದವಾಗಿ ಕೆಲಸ ಮಾಡುತ್ತಿರುವ ಅಧಿಕಾರಿ ಮತ್ತು ಮಂತ್ರಿಗಳ ಗುಂಪೊಂದು ಕಾಂಗ್ರೆಸ್ ಜೊತೆ ಶಾಮೀಲಾಗಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಈ ಕುರಿತಾಗಿ ಸುಬ್ರಮಣ್ಯನ್ ಸ್ವಾಮಿ ಮಾತನಾಡುತ್ತಾ, “ಕೇಂದ್ರ ಸರಕಾರ ಮತ್ತು ಪಕ್ಷದೊಳಗಿನ ಕೆಲವು “ಅಂಶಗಳು” ಕಾಂಗ್ರೆಸ್ ಜೊತೆ “ಸಹಭಾಗಿತ್ವ” ಹೊಂದಿ ಭಷ್ಟಾಚಾರದ ವಿರುದ್ದ ಸರಕಾರ ನಡೆಸುತ್ತಿರುವ ಹಲವಾರು ಪ್ರಕರಣಗಳಲ್ಲಿ ತನಿಖೆಯನ್ನು “ವಿಧ್ವಂಸ”ಗೊಳಿಸಲು ಪ್ರಯತ್ನಿಸುತ್ತಿವೆ” ಎಂದು ಆರೋಪ ಮಾಡಿದ್ದಾರೆ.

ನ್ಯಾಶನಲ್ ಹೆರಾಲ್ಡ್ ಕೇಸಿನಲ್ಲಿ ಅಮ್ಮ -ಮಗ ಮತ್ತು ಏರ್ ಸೆಲ್ ಮಾಕ್ಸಿಮ್ ಕೇಸಿನಲ್ಲಿ ಅಪ್ಪ-ಮಗನ ಮೇಲೆ ಚಾರ್ಜ್ ಶೀಟ್ ದಾಖಲಾಗಲಿದೆ. ಇನ್ನೇನು ತನಿಖೆ ತಾರ್ಕಿಕ ಅಂತ್ಯ ಕಂಡು ಅಮ್ಮ-ಮಗ, ಅಪ್ಪ-ಮಗ ಎಲ್ಲರೂ ತಿಹಾರಿನ ಕಂಬಿ ಎಣಿಸುವಂತೆ ಆದರೆ ಸಾಕು ಎಂದು ದೇಶದ ಜನ ಕೈ ಮುಗಿಯುತ್ತಿದ್ದರೆ, ಕೇಂದ್ರ ಸರಕಾರದೊಳಗಿನಿಂದಲೆ ಮೋದಿ ಸರಕಾರದ ವಿರುದ್ದ ಪಿತೂರಿ ನಡೆಯುತ್ತಿದೆ ಎನ್ನುವ ಆಘಾತಕಾರಿ ವಿಷಯವನ್ನು ಹೊರಗೆಡಹಿದ್ದಾರೆ ಸ್ವಾಮಿ. ಲೋಕಸಭೆ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ದುರ್ಬಲಗೊಳಿಸಲು ಪಿತೂರಿ ನಡೆಸಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ವಾಮಿ ತಿಳಿಸಿದ್ದಾರೆ.

ಮೋದಿಯವರಿಗೆ ಹೊರಗಿನ ಶತ್ರುಗಳಿಗಿಂತಲೂ ಹಿತ ಶತ್ರುಗಳ ಕಾಟವೆ ಜಾಸ್ತಿ ಎನ್ನುವ ವಾದಕ್ಕೆ ಪುಷ್ಟಿ ದೊರೆಯುವಂತೆ ಘಟನಾವಳಿಗಳು ನಡೆಯುತ್ತಿವೆ. “ನಾಲ್ಕು ಜನರ ತಂಡ” ವೊಂದು ಮೋದಿ ಸರಕಾರವನ್ನು ಉರುಳಿಸಲು ಪಿತೂರಿ ನಡೆಸುತ್ತಿದೆ ಈ ಬಗ್ಗೆ ಜುಲೈ 8 ರಂದು ಮುಂಬೈಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಳಕು ಹರಿಸಲಿದ್ದೇನೆ ಎಂದು ಸುಬ್ರಮಣ್ಯನ್ ಸ್ವಾಮಿ ತಿಳಿಸಿದ್ದಾರೆ. ಎನ್ಪೋರ್ಮೆಂಟ್ ಡೈರೆಕ್ಟರೇಟ್ (ED) ಅಧಿಕಾರಿ ರಾಜೇಶ್ವರ್ ಸಿಂಗ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಈ ಬಗ್ಗೆ ಕೇಂದ್ರ ಸರಕಾರ ಗಮನ ಹರಿಸಲು ಸ್ವತಂತ್ರವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ. ಅದರ ಬೆನ್ನಿಗೇ ಸ್ವಾಮಿ ಪತ್ರಿಕಾಗೋಷ್ಟಿ ನಡೆಸಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

“ಅತಿ ಸೂಕ್ಷ್ಮ” ಕೇಸುಗಳಾದ 2 ಜಿ ಸ್ಪೆಕ್ಟ್ರಮ್ ವಿತರಣೆ ಹಗರಣ ಮತ್ತು ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣಗಳನ್ನು ರಾಜೇಶ್ವರ್ ಸಿಂಗ್ ತನಿಖೆ ನಡೆಸುತ್ತಿದ್ದಾರೆ. ಈಗ ಅವರ ಮೇಲೆ ಗಂಭೀರ ಆರೋಪ ಹೊರಿಸಿ ಅವರಿಗೆ ಮಾನಸಿಕ ಕಿರುಕುಳ ಕೊಡುವ ಪ್ರಯತ್ನ ಇದೆಂದು ಸ್ವಾಮಿ ಹೇಳಿದ್ದಾರೆ. ಸಿಂಗ್ ಒಬ್ಬ ಪ್ರಾಮಾಣಿಕ ಅಧಿಕಾರಿಯಾಗಿದ್ದು, ಅವರಿಗೆ ದುಃಖವನ್ನುಂಟುಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದ ಸ್ವಾಮಿ, ಹಣಕಾಸು ಕಾರ್ಯದರ್ಶಿ ಹನ್ಸ್ ಮುಖ್ ಅಧಿಯಾ ಮೇಲೆ ಆರೋಪ ಹೊರಿಸಿದ್ದಾರೆ. ಸರಕಾರದ ಒಬ್ಬ ತನಿಖಾಧಿಕಾರಿಯ ಕೇಸನ್ನು ತಾನು ನ್ಯಾಯಾಲಯದಲ್ಲಿ ವಾದಿಸುತ್ತಿರುವಾಗ ಸರಕಾರದ್ದೇ ಅಡಿಶನಲ್ ಸೋಲಿಸಿಟರ್ ಜನರಲ್ ತನ್ನ ವಿರುದ್ದವೆ ಅರ್ಜಿ ಹಾಕುವುದು ಆಶ್ಚರ್ಯಕರ! ಸರಕಾರಿ ಅಧಿಕಾರಿಯ ಡಿಫೆನ್ಸ್ ಪರವಾಗಿ ತಾನು ನಿಂತಿರುವಾಗ ಸರಕಾರದ್ದೆ ವಕೀಲ ಸರಕಾರದ ವಿರುದ್ದವೆ ಸವಾಲು ಹಾಕಿ ತನ್ನ ವಿರುದ್ದವೂ ಸವಾಲು ಹಾಕುತ್ತಿದ್ದಾನೆ ಇದೆಂತ ಕಥೆ ಎಂದು ಅವರು ಸೊಲಿಸಿಟರ್ ಜನರಲ್ ನಡವಳಿಕೆ ಬಗ್ಗೆ ಅನುಮಾನ ವ್ಯಕ್ತ ಪಡಿಸಿದರು.

ಕೇಂದ್ರ ಸರಕಾರದ ಆಯಕಟ್ಟಿನ ಜಾಗಗಳಲ್ಲಿ ಕಾಂಗ್ರೆಸ್ ಏಜಂಟರು ಈಗಲೂ ಇದ್ದಾರೆ ಎನ್ನುವುದು ಸುಳ್ಳಲ್ಲ. ಕಾಂಗ್ರೆಸ್ ಕಾಲದಲ್ಲಿ ಭ್ರಷ್ಟಾಚಾರ ಮಾಡಿ ತಿಂದು ತೇಗಿದವರಿಗೆ ಈಗ ಮೋದಿ ಶಾಸನದಲ್ಲಿ ಉಸಿರುಗಟ್ಟುವ ವಾತಾವರಣ ಉಂಟಾಗಿದೆ. ಒಮ್ಮೆ ಮೋದಿ ಹೋದರೆ ಸಾಕು ಎಂದು ಕಾಯುತ್ತಿರುವ ಈ ಕಾಂಗ್ರೆಸ್ ಏಜೆಂಟರು ತೆರೆಮರೆಯಲ್ಲಿ ಮೋದಿ ಸರಕಾರದ ವಿರುದ್ದ ಪಿತೂರಿ ನಡೆಸಿ ಸರಕಾರಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಈ ಅಧಿಕಾರಿಗಳು ಕೇಂದ್ರ ಸರಕಾರದ ಮಂತ್ರಿಗಳನ್ನೂ ದಾರಿ ತಪ್ಪಿಸುತ್ತಿದ್ದಾರೆ ಎನ್ನುವ ಅನುಮಾನ ಕೂಡಾ ಬರುತ್ತಿದೆ. ಇತ್ತೀಜಿಗೆ ಕಂಟೋನ್ ಮೆಂಟ್ ರೋಡಿನ ವಿಷಯದಲ್ಲಿ ನಿರ್ಮಲಾ ಸೀತಾರಾಮನ್ ನಿರ್ಧಾರ ಮತ್ತು ತನ್ವಿ ಸೇಟ್ ವಿಷಯದಲ್ಲಿ ಸುಶ್ಮಾ ಸ್ವರಾಜ್ ನಿರ್ಧಾರದ ವಿರುದ್ದ ಜನರು ಕೆಂಡ ಕಾರಿದ್ದನ್ನು ನೋಡಿದರೆ ಇದೂ ಕೂಡಾ ಪಿತೂರಿಯ ಒಂದು ಭಾಗವಿರಬಹುದೆಂದು ಅನಿಸುತ್ತಿದೆ. ಅತ್ತ ಹಿಂದೂ ಮತ ಬ್ಯಾಂಕ್ ಒಡೆಯಲು ವಿಶ್ವ ಹಿಂದೂ ಪರಿಷತ್ತಿನ ಪ್ರವೀಣ್ ಭಾಯಿ ತೋಗಾಡಿಯಾ ಕೂಡಾ ಸಜ್ಜಾಗಿದ್ದಾರೆ. ಇದರ ಹಿಂದೆಯೂ ಕಾಂಗ್ರೆಸ್ “ಕೈ” ವಾಡ ಇರುವುದು ನಿಚ್ಚಳವಾಗಿ ತೋರಿ ಬರುತ್ತಿದೆ.

ಮೋದಿ ಅವರ ಮೂಗಿನ ಕೆಳಗೆ ಅವರದೆ ಅಧಿಕಾರಿಗಳು ಮತ್ತು ಮಂತ್ರಿಗಳು ಕಾಂಗ್ರೆಸ್ ಜೊತೆ ಶಾಮೀಲಾಗಿ ಸರಕಾರದ ವಿರುದ್ದ ಕೆಲಸ ಮಾಡುತ್ತಿದ್ದಾರೆಂದರೆ ಇದು ಗಂಭೀರ ವಿಷಯ. ಚುನಾವಣೆಗೆ ಇನ್ನು ಹತ್ತು ತಿಂಗಳಿಗೂ ಕಡಿಮೆ ಸಮಯ ಉಳಿದಿದೆ. ಹತ್ತು ತಿಂಗಳು ಸತತವಾಗಿ ಕೆಂದ್ರ ಸರಕಾರದ ವರ್ಚಸ್ಸಿಗೆ ಹಾನಿ ಮಾಡುತ್ತಿದ್ದರೆ, ಮೋದಿ 2019 ರ ಲೋಕಸಭೆ ಚುನಾವಣೆಯನ್ನು ಸೋತು ಮನೆಗೆ ನಡೆಯುತ್ತಾರೆ ಆಮೇಲೆ ತಾವು ಭಾರತವನ್ನು ಹುರಿದು ಮುಕ್ಕಬಹುದು ಎನ್ನುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದೆ. ಅಟಲ್ ಜಿ ಬೆನ್ನಿಗೆ ಚೂರಿ ಇಕ್ಕಿದ ಜನರು ಮೋದಿ ಬೆನ್ನಿಗೂ ಚೂರಿ ಇರಿಯುತ್ತಿದ್ದಾರೆ. ದೇಶ ಒಡೆಯುವವರು ಮೋದಿ ಸೋಲಿಸಲು ಮೋದಿಯ ಜನರನ್ನೆ ಛೂ ಬಿಟ್ಟಿದ್ದಾರೆ. ಕೇಂದ್ರ ಸರಕಾರ ಈಗಲೆ ಎಚ್ಚೆತ್ತುಕೊಳ್ಳದಿದ್ದರೆ ಬಹು ದೊಡ್ಡ ನಷ್ಟ ಅನುಭವಿಸಬೇಕಾಗುತ್ತದೆ.

-ಶಾರ್ವರಿ

Tags

Related Articles

Close