ಪ್ರಚಲಿತ

ದೇಶದ ರಕ್ಷಣಾ ವ್ಯವಸ್ಥೆ ಬಲ ಪಡಿಸಲು ಕೇಂದ್ರದ ಮೋದಿ ಸರ್ಕಾರದಿಂದ ಮಹತ್ವದ ಕ್ರಮ

ನಮ್ಮ ಭಾರತೀಯ ಸೇನೆಗೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆಯನ್ನಿರಿಸಿದೆ.

ಭಾರತೀಯ ರಕ್ಷಣಾ ಸ್ವಾಧೀನ ಮಂಡಳಿಯು ಭಾರತೀಯ ಸೇನೆಗೆ 97 ಹೆಚ್ಚುವರಿ ತೇಜಸ್ ಯುದ್ಧ ವಿಮಾನಗಳು ಮತ್ತು 156 ಪ್ರಚಂಡ ದಾಳಿ ಹೆಲಿಕಾಪ್ಟರ್ ಗಳನ್ನು ಖರೀದಿ ಮಾಡುವುದಕ್ಕೆ ಅನುಮೋದನೆ ನೀಡಿದೆ. ದೇಶದ ರಕ್ಷಣಾ ವಲಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ತೆಗೆದುಕೊಂಡ ಮಹತ್ವದ ಕ್ರಮ ಇದಾಗಿದೆ.

ಭಾರತದಲ್ಲಿಯೇ‌ ಈ ಎರಡೂ ವಿಮಾನಗಳ ಅಭಿವೃದ್ಧಿ ನಡೆದಿದೆ. ತೇಜಸ್ ಯುದ್ಧ ವಿಮಾನಗಳ ಬೆಲೆ ಸುಮಾರು 65,000 ಕೋಟಿ ರೂ. ಗಳಾಗಿವೆ. ಭಾರತೀಯ ವಾಯುಪಡೆ ಬಳಸುವ 84 Su-30MKI ಫೈಟರ್‌ಗಳ ಅಪ್ ಗ್ರೇಡ್ ವಿಮಾನಗಳಿಗೂ ಕೌನ್ಸಿಲ್ ಅನುಮೋದನೆ ನೀಡಿರುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ಈಗಾಗಲೇ ಮಾಹಿತಿ ನೀಡಿದ್ದಾರೆ.

ಈ ಪ್ರಸ್ತಾವನೆಗಳಿಗೆ ಒಟ್ಟಾರೆಯಾಗಿ ಸುಮಾರು ಒಂದು ಲಕ್ಷದ ಅರವತ್ತು ಸಾವಿರ ಕೋಟಿ ರೂ. ಗಳಿಗೂ ಅಧಿಕ ವೆಚ್ಚವಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಭಾರತದ ರಕ್ಷಣಾ ಸಚಿವಾಲಯವು ಭಾರತೀಯ ವಾಯು ಪಡೆಗೆ ಸುಮಾರು ಅರವತ್ತೈದು ಸಾವಿರ ಕೋಟಿ ರೂ. ಗಳಲ್ಲಿ 97 LCA ಮಾರ್ಕ್ 1A ಫೈಟರ್ ಜೆಟ್ ಗಳನ್ನು ಸ್ವಾಧೀನ ಮಾಡಿಕೊಳ್ಳುವ ಪ್ರಸ್ತಾವನೆಗೆ ನಿನ್ನೆ ಒಪ್ಪಿಗೆ ನೀಡಿರುವುದಾಗಿದೆ. 156 LCH ಪ್ರಚಂಡ್ ಚಾಪರ್‌ಗಳನ್ನು ಖರೀದಿ ಮಾಡುವ ಪ್ರಸ್ತಾವನೆಯನ್ನು ರಕ್ಷಣಾ ಸ್ವಾಧೀನ ಮಂಡಳಿಯು ಅನುಮೋದಿಸಿದೆ. ಈ ಬಗ್ಗೆ ರಕ್ಷಣಾ ಅಧಿಕಾರಿಗಳೇ ‌ಮಾಹಿತಿ ನೀಡಿದ್ದಾರೆ.

2030 ರ ಅವಧಿಯೊಳಗಾಗಿ ಭಾರತವು 160 ಮತ್ತು 2035ರ ಅವಧಿಗೆ 175 ಯುದ್ಧ ನೌಕೆಗಳನ್ನು ಹೊಂದಲು ಭಾರತ ಯೋಜಿಸಿದೆ. ಸುಮಾರು ಎರಡು ಲಕ್ಷ ಕೋಟಿ ರೂ. ಗಳು ಇದಕ್ಕೆ ತಗುಲುವುದಾಗಿಯೂ ಅಂದಾಜಿಸಲಾಗಿದೆ. ಭಾರತೀಯ ನೌಕಾಪಡೆಯ ಅರವತ್ತಕ್ಕೂ ಹೆಚ್ಚು ಹಡಗುಗಳು ಪ್ರಸ್ತುತ ನಿರ್ಮಾಣ ಹಂತದಲ್ಲಿರುವುದಾಗಿಯೂ ಅಧಿಕಾರಿಗಳು ಹೇಳಿದ್ದಾರೆ.

ಒಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಒಂಬತ್ತು ವರ್ಷಗಳಲ್ಲಿ ನಮ್ಮ ಭಾರತದ ಸೇನಾ ಬಲವನ್ನು ಮತ್ತಷ್ಟು ಹೆಚ್ಚಿಸಿದ್ದು, ರಕ್ಷಣಾ ವಲಯಕ್ಕೆ ಬಲ ತುಂಬುವ ನಿಟ್ಟಿನಲ್ಲಿ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ ಎನ್ನುವುದರಲ್ಲಿ‌ ಎರಡು ಮಾತಿಲ್ಲ.

Tags

Related Articles

Close