ಪ್ರಚಲಿತ

ಅದೆಷ್ಟೋ ಮಂದಿ ಭಾರತೀಯರ ರುಂಡವನ್ನು ಚೆಂಡಾಡಿ, ತನ್ನ ಹೆಂಡತಿಯನ್ನೇ ಭಕ್ಷಿಸಿದ ಈ ನರರಕ್ಕಸನ ಕೌರ್ಯಕ್ಕೆ ಇಂದಿಗೂ ಆ ಪ್ರದೇಶ ನಲುಗಿ ಹೋಗಿದೆ!!

ಸರ್ವಾಧಿಕಾರಿಗಳ ದಿನಗಳಲ್ಲಿ ಅದೆಷ್ಟೋ ಮಂದಿ ಅಮಾಯಕರು, ದುಷ್ಟರ ಕ್ರೌರ್ಯಗಳಿಗೆ ನಲುಗಿ ಹೋಗಿದ್ದಾರೋ ಗೊತ್ತಿಲ್ಲ. ಆದರೆ ಹಿಟ್ಲರ್, ಸ್ಟ್ಯಾಲಿನ್, ಕಿಮ್ ಜಾಂಗ್-ಉಲ್, ಪಾಲ್‍ಪಾಟ್ ನ ಸಾಲಿಗೆ ಸೇರುವ ಕೆಲ ದುಷ್ಟ ಸರ್ವಾಧಿಕಾರಿಗಳ ಬಗ್ಗೆ ಅಧ್ಯಾಯನಗಳನ್ನು ಮಾಡುತ್ತಾ ಹೋದರೆ, ಅಬ್ಬಾ ಇವರೆಂಥಹ ರಾಕ್ಷಸರು ಎನ್ನುವ ಉದ್ಗಾರ ಮಾಡುವುದು ಸಹಜ. ಆದರೆ ಇಂಥಹ ದುಷ್ಟ ಸರ್ವಾಧಿಕಾರಿಗಳ ಸಾಲಿಗೆ ಸೇರಿದ ಮತ್ತೋರ್ವ ರಾಕ್ಷಸ, ಸತ್ತವರ ಗುಂಡಿಗೆ ಕೀಳಿಸಿ ಡ್ರಾಕುಲಾದ ತರಹ ರಕ್ತಪಾನ ಮಾಡುತ್ತಿದ್ದನಲ್ಲದೇ, 5 ಲಕ್ಷ ಮಂದಿಯನ್ನು ದಾರುಣವಾಗಿ ಸಾಯಿಸಿ ಅದೆಷ್ಟೋ ಮಂದಿ ಭಾರತೀಯರನ್ನು ದಿಕ್ಕಿಲ್ಲದಂತೆ ಮಾಡಿದ ಈ ನರಭಕ್ಷಕನ ಕಥೆಯನ್ನು ತಿಳಿದರೆ ಒಂದು ಕ್ಷಣ ದಂಗಾಗುವಿರಿ.

ಹೌದು… ಮಾನವ ಹಕ್ಕುಗಳ ದುರುಪಯೋಗ, ರಾಜಕೀಯ ನಿಗ್ರಹ ಜನಾಂಗೀಯ ಹಿಂಸಾಚರಣೆ, ಕಾನೂನು ಬಾಹಿರ ಕೊಲೆಗಳು ಕುಲ ಪಕ್ಷಪಾತ, ಭ್ರಷ್ಟಾಚಾರ, ಮತ್ತು ಆರ್ಥಿಕತೆಯ ಅಸಮರ್ಪಕ ನಿರ್ವಹಣೆಗಳನ್ನು ಒಳಗೊಂಡಿತ್ತು ಈತನ ಆಡಳಿತ!! ಆತ ಬೇರಾರು ಅಲ್ಲ… ಆಫ್ರಿಕಾ, ಅದರಲ್ಲೂ ಉಗಾಂಡಾವನ್ನು ಒಂದು ಬಲಿಷ್ಟ ಶಕ್ತಿಯನ್ನಾಗಿ, ಅಭಿವೃದ್ದಿಯ ಹಾದಿಯಲ್ಲಿ ಮುನ್ನಡೆಸಬೇಕೆಂಬ ಅದಮ್ಯ ಹಂಬಲ ಹೊತ್ತು ಲಕ್ಷಾನೂ ಲಕ್ಷ ಹೆಣಗಳನ್ನು ಉರುಳಿಸಿ ಕ್ರೂರತೆಗೆ ಒಂದು ನಿದರ್ಶನ ಎನ್ನುವಂಥಹ ಈ ಸರ್ವಾಧಿಕಾರಿಯೇ ಈದಿ ಅಮೀನ್ ದಾದಾ!!

ತಾನು ಕೊಲ್ಲಿಸಿದ ಗಣ್ಯರ ರುಂಡ, ಹೃದಯ, ಲಿವರ್ ಮೊದಲಾದ ಅಂಗಾಗಗಳನ್ನು ಕತ್ತರಿಸಿ ತನ್ನ ಅಡುಗೆಮನೆಯ ಫ್ರಿಜ್‍ನಲ್ಲಿ ಇರಿಸುತ್ತಿದ್ದನಂತೆ. ಅತ್ಯಂತ ಮಹತ್ವದ ಮಾತುಕತೆಗಳ ಸಂದರ್ಭದಲ್ಲಿ ರುಂಡಗಳನ್ನು ಪ್ಲೇಟಿನಲ್ಲಿರಿಸಿ ತಂದು ಎದುರಾಳಿಯ ಬಾಯಿ ಕಟ್ಟಿಹಾಕಿಸುತ್ತಿದ್ದನಂತೆ. ತಾನು ಕೊಲ್ಲಿಸಿದವರ ಲಿವರ್, ಹೃದಯಗಳನ್ನು ಹುರಿದು ಸ್ವಾಹಾ ಮಾಡುತ್ತಿದ್ದನಂತೆ. ಸತ್ತವರ ಗುಂಡಿಗೆ ಕೀಳಿಸಿ ಡ್ರಾಕುಲಾದ ತರಹ ರಕ್ತಪಾನ ಮಾಡುತ್ತಿದ್ದ ಈತ ಕೊನೆಗೆ ತನ್ನ ಹೆಂಡತಿಯನ್ನು ಕೊಂದಾಗಲೂ ಇದೆ ರೀತಿ ಮಾಡಿದ್ದನಂತೆ. ಶವಗಳ ಮಾಂಸವನ್ನು ಹಸಿಹಸಿಯಾಗಿಯೇ ಕಚ್ಚಿ, ನರಭಕ್ಷಕ ಪ್ರಾಣಿಯಂತೆ ನರಮಾಂಸ ತಿಂದು ತೇಗಿದ್ದಾನಂತೆ. ಹೀಗೆ ಒಂದಕ್ಕಿಂತ ಒಂದು ವಿಲಕ್ಷಣ ಕತೆಗಳು ಅಸಹ್ಯ-ವಿಕೃತಿಗಳ ಪರಮಾವಧಿ ಎನ್ನಿಸುವ ಗಾಥೆಗಳು. ಈ ಕಥೆಗಳೆಲ್ಲವೂ ನಂಬಲರ್ಹವೆನಿಸಿದಲ್ಲಿ ಆತ ನಿಜಕ್ಕೂ ನರರೂಪಿ ರಾಕ್ಷಸನೇ ಸರಿ.

ಹೌದು….

ಈದಿ ಅಮಿನ್ ಹುಟ್ಟಿದ್ದು ಇಪ್ಪತ್ತರ ದಶಕದ ಮಧ್ಯಭಾಗದಲ್ಲಿ. ಹುಟ್ಟಿದ ಇಸವಿಯ ಬಗ್ಗೆ ಸಾಕಷ್ಟು ಗೊಂದಲಗಳಿವೆಯಾದರೂ ಅವನ ಮಗ ಜಾಫರ್ ಅಮಿನ್ ಹೇಳೋ ಪ್ರಕಾರ 1927ರಲ್ಲಿ ಉಗಾಂಡಾದ ಈಶಾನ್ಯ ಗಡಿ ಭಾಗದ ಅರುವಾದಲ್ಲಿ ಜನಿಸಿದ!! ಇನ್ನೊಂದು ಮೂಲದ ಪ್ರಕಾರ ಅವನ ಹುಟ್ಟು 1925ರಲ್ಲಿ ಕಂಪಾಲದಲ್ಲಾಯ್ತು!! ಕಾಕ್ವಾ(ಕಕ್ವಾ) ಬುಡಕಟ್ಟಿಗೆ ಸೇರಿದ ಅವನಪ್ಪ ಅಂಡ್ರಿಯಸ್ ನ್ಯಬಿರೇ ಇಸ್ಲಾಂ ಧರ್ಮದ ಅನುಯಾಯಿಯಾಗಿದ್ದಲ್ಲದೇ, ಜೀವನೋಪಾಯಕ್ಕಾಗಿ ವ್ಯವಸಾಯ ಮಾಡುತ್ತಿದ್ದ ಒರ್ವ ರೈತನಾಗಿದ್ದ. ಲುಗ್‍ಬರಾ ಬುಡಕಟ್ಟಿಗೆ ಸೇರಿದ ಅವನಮ್ಮನಿಗೆ ನಾಟಿವೈದ್ಯ ಗೊತ್ತಿತ್ತು. ಹಾಗೆಯೇ ಮಾಟ ಮಂತ್ರ ಕೂಡಾ ಮಾಡುತ್ತಿದ್ದಳು ಎನ್ನಲಾಗಿದೆ. ಮುಸ್ಲಿಂ ಸಮುದಾಯದವರ ಹಜ್ ಆಚರಣೆಯ “ಈದ್-ಅಲ್-ಅಧಾ”ದ ದಿನವೇ ಹುಟ್ಟಿದ ಕಾರಣಕ್ಕೆ “ಈದ್” ಅಂತ ನಾಮಕರಣಗೊಂಡ ಅಮಿನ್‍ನ ಹೆಸರು ಕಾಕ್ವಾ ಬುಡಕಟ್ಟಿನವರ ಬಾಯಲ್ಲಿ “ಈದಿ” ಅನ್ನಿಸಿಕೊಂಡಿತು.

ಚಿಕ್ಕ ವಯಸ್ಸಿನಲ್ಲೇ ವಿಚಿತ್ರ ಸ್ವಭಾವದವನಾದ ಈದಿಯನ್ನು, ಕಾಕ್ವಾ ಬುಡಕಟ್ಟಿನವರ ಸಂಪ್ರದಾಯಕ್ಕನುಗುಣವಾಗಿ “ಅವೋಂಗೋ” ಅಂತ ಹೆಸರಿಡಲಾಗಿತ್ತು. ಅವರ ಭಾಷೆಯಲ್ಲಿ “ಅವೋಂಗೋ” ಅಂದ್ರೆ ಕಿರುಚುವವನು ಅಥವಾ ಬೊಬ್ಬೆ ಹೊಡೆಯುವವನು ಎಂದರ್ಥ!! ಇನ್ನು ರೋಮನ್ ಕ್ಯಾಥೋಲಿಕ್ ಆದ ಈದಿ, ಬರೀ ಮೂಲ ಪ್ರಾಥಮಿಕ ಶಿಕ್ಷಣವನ್ನು ಮಾತ್ರ ಪೂರೈಸಿದ್ದು ಶಾಲೆಗೆ ಸೇರಿದ ಬಳಿಕ ಮುಸ್ಲಿಂ ಆಗಿ ಬದಲಾದ. ತದನಂತರ ಅಮೀನ್ ಎಲ್ಲಿ ಓದಿಕೊಂಡನೋ, ಹೇಗೆ ಬೆಳೆದನೋ ಎಂಬುವುದು ಯಾರಿಗೂ ಗೊತ್ತಿಲ್ಲದ ರಹಸ್ಯವಾಗಿದೆ!!

ಇನ್ನು, ಪ್ರಾಪ್ತ ವಯಸ್ಸಿನಲ್ಲಿ ಬ್ರಿಟೀಷ್ ಅಧಿಕಾರಿಯೊಬ್ಬ ಈತನನ್ನು ಆರ್ಮಿಗೆ ಆಯ್ಕೆ ಮಾಡಿಕೊಂಡರು. ಅಲ್ಲಿಂದ ಹಂತಹಂತವಾಗಿ ಬೆಳೆದ ಈತ 1971ರ ಜನವರಿ 25, ಉಗಾಂಡಾದ ಇತಿಹಾಸದಲ್ಲೊಂದು ವಿಲಕ್ಷಣ ತಿರುವು ನೀಡಿದ. ಅಪೆÇೀಲೋ ಮಿಲ್ಟನ್ ಒಬೋಟೆಯನ್ನು ಪದಚ್ಯುತಗೊಳಿಸಿ ಉಗಾಂಡಾದ ಚುಕ್ಕಾಣಿಯನ್ನು ಕೈಗೆತ್ತಿಕೊಂಡ ಈದಿ ಅಮಿನ್ ಅನ್ನೋ ಸೇನಾನಾಯಕನಿಗೆ ಭವಿಷ್ಯತ್ತಿನಲ್ಲಿ ತನ್ನ ಅವಸಾನದ ಬಳಿಕವೂ ಬಹುಚರ್ಚಿತ ವ್ಯಕ್ತಿ ತಾನಾಗಬಹುದೆಂಬ ಸಣ್ಣ ಸುಳಿವೂ ಇದ್ದಿರಲಿಕ್ಕಿಲ್ಲ. ಅವನ ಧ್ಯೇಯ ಸ್ಪಷ್ಟವಾಗಿತ್ತು. ಇಡೀ ಜಗತ್ತೇ ನಿಬ್ಬೆರಗಾಗಿ ನೋಡುವಷ್ಟು ಸುದೃಢವಾಗಿ-ಬಲಿಷ್ಟವಾಗಿ ಬೆಳೆದು ನಿಂತ ಅಫ್ರಿಕಾದ ಚಿತ್ರ ಅವನ ಕಣ್ಮುಂದೆ ಕುಣಿಯುತ್ತಿತ್ತು ಮತ್ತು ಅದನ್ನು ಶತಾಯಗತಾಯ ನನಸಾಗಿಸುತ್ತೇನೆಂಬ ತುಂಬು ವಿಶ್ವಾಸವೂ ಇತ್ತು.

ಆಗಿನಿಂದ ಆ ದೇಶದಲ್ಲಿ ಆತ ರಾಕ್ಷಸ ಪರಿಪಾಲನೆ ಮುಂದುವರೆಯಿತು. ಹಾಗೆ ಶುರುವಾಗಿ ಹೋಗಿತ್ತು ಈದಿ ಅಮಿನ್ ಎಂಬ ವಿಲಕ್ಷಣ ಸರ್ವಾಧಿಕಾರಿಯ ಅಧಿಕಾರ ಪರ್ವ. ಅಧಿಕಾರಕ್ಕೆ ಬಂದವನೇ ಅಮಿನ್ ಪಾದರಸ ಕುಡಿದವನಂತೆ ಚುರುಕಾಗಿಬಿಟ್ಟ. ದೇಶದ ಎಲ್ಲಾ ನಾಗರಿಕ ಕಾಯ್ದೆಗಳನ್ನು ಕಿತ್ತೊಗೆದು ಮಿಲಿಟರಿ ಕಾನೂನುಗಳನ್ನು ಜಾರಿಗೆ ತಂದ. ಅಧ್ಯಕ್ಷನ ಅಧಿಕೃತ ಭವನ “ಕಮಾಂಡ್ ಪೆÇೀಸ್ಟ್” ಅನ್ನಿಸಿಕೊಂಡಿತು.

ಸ್ವಭಾವತಃ ಸಂಶಯಪಿಶಾಚಿಯಾಗಿದ್ದ ಅಮಿನ್‍ಗೆ ಯಾರ ಮೇಲಾದರೂ ಕೊಂಚ ಅನುಮಾನ ಬಂದರೂ ಅವರು ನಿಗೂಢ ರೀತಿಯಲ್ಲಿ ಕಣ್ಮರೆಯಾಗತೊಡಗಿದರು. ಅವನ ಕ್ರೌರ್ಯ ಎಲ್ಲಿಗೆ ಬಂದು ಮುಟ್ಟಿತೆಂದರೆ ತನಗೆ ಎದುರಾಡಿದವರು, ತನಗೆ ಗೌರವ ಕೊಡದವರನ್ನೂ ಹಿಡಿದು ಕೊಲ್ಲಲಾರಂಭಿಸಿದ. ಅವನ ಉರಿ ಹಸ್ತದ ಬೆಂಕಿಗೆ ಅನೇಕ ಹಳ್ಳಿಗಳು ನಿರ್ಮಾನುಷ್ಯವಾಗಿ ಹೋದವು. ಪವಿತ್ರ ನೈಲ್ ನದಿ ಅಮಾಯಕರ ರಕ್ತ ಕುಡಿದು ಕೆಂಪಾಗತೊಡಗಿತ್ತು. ಅವನು ಕೊಲ್ಲಿಸಿದ್ದ ವ್ಯಕ್ತಿಗಳ ಶವಗಳನ್ನು ನೈಲ್ ನದಿಯಲ್ಲಿ ತೇಲಿ ಬಿಡಲಾಗುತ್ತಿತ್ತು ಮತ್ತು ಆ ಶವಗಳನ್ನು ಹಿಡಿದು ದಡಕ್ಕೆಸೆಯಲು ಕೆಲಸಗಾರರನ್ನು ನೇಮಿಸಲಾಗಿತ್ತು. ಓವನ್ ಫಾಲ್ಸ್ ಬಳಿಯಿದ್ದ ಜಲವಿದ್ಯುತ್ ಉತ್ಪಾದನೆಗೆ ಕಟ್ಟಲಾಗಿದ್ದ ಅಣೆಕಟ್ಟಿನ ತೂಬುಗಳಲ್ಲಿ ಈ ಶವಗಳು ಸಿಕ್ಕಿಹಾಕಿಕೊಂಡು ಒಮ್ಮೆ ತೊಂದರೆಯಾದ ಬಳಿಕ ಈ ವ್ಯವಸ್ಥೆ ಮಾಡಲಾಗಿತ್ತಂತೆ.

ಈತನ ಬರ್ಬರ ಕೃತ್ಯಗಳ ಪರಮಾವಧಿಯೋ ಎಂಬಂತಹ ಈ ಘಟನೆಯ ವಿವರಣೆಯನ್ನು ಓದಿದಾಗ ಅಬ್ಬಾ ಮನುಷ್ಯ ಮೃಗವೇ ಅನ್ನಿಸಿದ್ದು ಸುಳ್ಳಲ್ಲ. ಎಲ್ಲೆಂದರಲ್ಲಿ ತೇಲಿ ಬರುವ ಕೊಳೆತ ಹೆಣಗಳ ವಾಸನೆಗೆ ಇಡೀ ಉಗಾಂಡವೇ ಸ್ಮಶಾನವಾಗಿಬಿಟ್ಟಿತ್ತು!! ಹೀಗೆ ನಿರಂತರ ಎಂಟು ವರ್ಷಗಳ ಕಾಲ ಅವ್ಯಾಹತವಾಗಿ ಮುಂದುವರಿದ ಈ ಮಾರಣಹೋಮಕ್ಕೆ ಆಹುತಿಯಾದವರ ನಿರ್ದಿಷ್ಟ ಲೆಕ್ಕ ಸಿಕ್ಕಿಲ್ಲವಾದರೂ, ಈ ಕುರಿತು ಮಾಹಿತಿ ಕಲೆಹಾಕಿ ವಿಚಾರಣೆ ನಡೆಸಿದ ಅಂತರರಾಷ್ಟ್ರೀಯ ಜ್ಯೂರಿಗಳ ಸಮಿತಿ ನೀಡುವ ಮಾಹಿತಿಯ ಪ್ರಕಾರ ಏನಿಲ್ಲವೆಂದರೂ ಮೂರು ಲಕ್ಷ ಜನ ಈ ಅವಧಿಯಲ್ಲಿ ಅಸುನೀಗಿದ್ದರು! ಆಮ್ನೆಸ್ಟಿ ಇಂಟರ್‍ನ್ಯಾಷನಲ್ ಹೇಳುವ ಪ್ರಕಾರ ಕನಿಷ್ಟ ಐದು ಲಕ್ಷ ಜನರು ಈ ಮಾರಣಹೋಮದಲ್ಲಿ ಸಮಿಧೆಯಾಗಿ ಉರಿದು ಹೋಗಿದ್ದರು!!

ಅಮಿನ್‍ಗೆ ಆಗಾಗ್ಗೆ ತನಗೆ ಬೀಳುತ್ತಿದ್ದ ಕನಸುಗಳ ಬಗ್ಗೆ ಹೇಳಿಕೊಳ್ಳುತ್ತಿದ್ದ ಮತ್ತು ಅದರಂತೆಯೇ ಮಾಡುತ್ತಿದ್ದ ಕೂಡ!! ಆದರೆ ಅವನಿಗೆ ಬಿದ್ದ ಇನ್ನೊಂದು ಕನಸು, ನೂರಾರು ವರ್ಷಗಳಿಂದ ಅಲ್ಲಿಯೇ ನೆಲೆಸಿದ್ದ ಏಷ್ಯನ್ನರ ಪಾಲಿಗೆ ಮರೆಯಲಾಗದಂತಹ ದು:ಸ್ವಪ್ನವಾಗಿತ್ತು. ಹೌದು… 1972ರ ಒಂದು ದಿನ ಅಮಿನ್, “ತನಗೆ ಕನಸಿನಲ್ಲಿ ದೇವರ ಅಪ್ಪಣೆಯಾಗಿದೆ. ಉಗಾಂಡಾವು ಇನ್ನು ಮುಂದೆ ಕಪ್ಪುಜನರ ರಾಷ್ಟ್ರವಾಗಬೇಕೆಂದು ದೇವರು ಆದೇಶ ಮಾಡಿಬಿಟ್ಟಿದ್ದಾನೆ. ಕಪ್ಪು ಜನರಲ್ಲದವರು ಗಂಟು ಮೂಟೆ ಕಟ್ಟಿ. ಈ ದೇಶ ಕರಿಯರದ್ದು..” ಅಂತ ಆದೇಶ ಹೊರಡಿಸಿಬಿಟ್ಟ.

ಉಗಾಂಡದಲ್ಲಿ ನೆಲೆಗೊಂಡಿದ್ದ ಸುಮಾರು 80,000 ಕ್ಕೂ ಮಿಕ್ಕಿದ ಏಷ್ಯನ್ನರನ್ನು ಉಟ್ಟಬಟ್ಟೆಯಲ್ಲೇ ಹೊರದಬ್ಬುವ ಪರಮ ಅನಾಹುತಕಾರಿ ನಿರ್ಧಾರಕ್ಕೆ ಅವನಾಗಲೇ ಬಂದು ಬಿಟ್ಟಿದ್ದ. ಅವರೆಲ್ಲರೂ ಸುಮಾರು ಮೂರು ತಲೆಮಾರುಗಳ ಹಿಂದೆ ತಮ್ಮ ವಸಾಹತುಗಳಲ್ಲಿ ಕೆಲಸ ಮಾಡಲು ಬ್ರಿಟಿಷರು ಭಾರತ, ಪಾಕಿಸ್ಥಾನಗಳಿಂದ ಕರೆತಂದಿದ್ದ ಕೂಲಿಯಾಳುಗಳ ವಂಶದವರು. “ತಮ್ಮ ಸ್ಥಿರ-ಚರಾಸ್ತಿಗಳನ್ನೆಲ್ಲಾ ಬಿಟ್ಟು ತೊಂಬತ್ತು ದಿನಗಳಲ್ಲಿ ಉಗಾಂಡಾ ಬಿಟ್ಟು ತೊಲಗಬೇಕು. ಇಲ್ಲವಾದಲ್ಲಿ ಈ ಭೂಮಿಯ ಮೇಲೆ ನೀವಿರುವುದಿಲ್ಲ” ಅಂತ ಧಮಕಿ ಹಾಕಿದ. ಅಲ್ಲೇ ಹುಟ್ಟಿ ಬೆಳೆದು, ಉಗಂಡಾದವರೇ ಆಗಿ ಹೋಗಿದ್ದ ಸಾವಿರಾರು ಜನ ವೈದ್ಯರು, ವಕೀಲರು, ಶಿಕ್ಷಕರು, ಉದ್ಯಮಿಗಳು ಇವರೆಲ್ಲ ಇಂಗ್ಲೆಂಡ್, ಆಸ್ಟ್ರೇಲಿಯಾ, ಕೆನಡಾ, ಭಾರತ, ಸ್ವೀಡನ್‍ಗಳಿಗೆ ಗುಳೇ ಹೊರಟರು. ಅವರ ಆಸ್ತಿ-ಪಾಸ್ತಿ-ನೌಕರಿ ಎಲ್ಲವನ್ನೂ ಈದಿ ಅಮಿನ್ ಬೆಂಬಲಿಗರು ಕಬಳಿಸಿದರು. ಏಷ್ಯನ್ನರ ಕಂದು ಮೈಚರ್ಮದ ಬಣ್ಣವೇ ಅವರ ಬದುಕಿಗೆ ಮುಳುವಾಯ್ತು.

ಉಗಾಂಡಾದಲ್ಲಿದ್ದ ಭಾರತೀಯರೆಲ್ಲರನ್ನೂ ಬಲವಂತವಾಗಿ ಸ್ವಂತ ದೇಶಕ್ಕೆ ಕಳುಹಿಸಿದ. ಉಗಾಂಡಾದಲ್ಲಿ ರೈಲ್ವೆ ವ್ಯವಸ್ಥೆಯನ್ನು ನಿರ್ಮಿಸಲು ಭಾರತದಿಂದ ಬಂದ 30 ಸಾವಿರ ಮಂದಿ ಕಾರ್ಮಿಕರನ್ನು ಕಿರಾತಕವಾಗಿ ನೇಣುಹಾಕಿದ. 1972ನೇ ವರ್ಷದಲ್ಲಿ 5 ಸಾವಿರ ಮಂದಿ ಹಸಿವಿನಿಂದ ಲಾಂಗೊ ಸೈನಿಕರು ಕಣ್ಮರೆಯಾದರಲ್ಲದೇ, ಇನ್ನು ಕೆಲ ರಾಜಕೀಯ ನಾಯಕರು, ಪತ್ರಕರ್ತರು, ವಿದ್ಯಾರ್ಥಿಗಳೂ ಕೂಡ ನಿಗೂಡವಾಗಿ ಕಾಣೆಯಾದರು. ಆದರೆ ಅವರನ್ನೆಲ್ಲ ಅಮೀನ್ ಸಮೀಪದಲ್ಲಿದ್ದ ನೈಲ್ ನದಿಯಲ್ಲಿ ಅವರ ಮೃತದೇಹಗಳನ್ನು ಎಸೆಯಲು ಕಣ್ಮರೆಗೊಳಿಸಿದ್ದ ಎಂದು ಇತಿಹಾಸ ತಿಳಿಸುತ್ತದೆ. ಇನ್ನು ಅಮೀನ್ ತನ್ನ 8 ವರ್ಷಗಳ ಪಾಲನೆಯಲ್ಲಿ ಒಟ್ಟು 80 ಸಾವಿರ ಮಂದಿಯನ್ನು ದಾರುಣವಾಗಿ ಸಾಯಿಸಿದ ಎಂದು ಇತಿಹಾಸ ಹೇಳುತ್ತಿದ್ದರೆ, ಕೆಲವರು ಮಾತ್ರ ಆ ಸಂಖ್ಯೆ 3 ಲಕ್ಷ ಎಂದು ಹೇಳುತ್ತಾರೆ.

ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಅದೆಷ್ಟೋ ಮಂದಿ ಈತನ ಕೌರ್ಯಕ್ಕೆ ಬಲಿಯಾದರೋ ಗೊತ್ತಿಲ್ಲ. ಆದರೆ ಆತ ಗಣ್ಯರ ರುಂಡ, ಹೃದಯ, ಲಿವರ್ ಮೊದಲಾದ ಅಂಗಾಗಗಳನ್ನು ಅತ್ಯಂತ ಜತನದಿಂದ ತನ್ನ ಅಡುಗೆಮನೆಯ ಫ್ರಿಜ್‍ನಲ್ಲಿ ಇರಿಸುತ್ತಿದ್ದನಲ್ಲದೇ ನರಮಾಂಸ ತಿನ್ನುತ್ತಿದ್ದ, ಮನುಷ್ಯರ ರಕ್ತವನ್ನೇ ಗಟಗಟನೇ ಕುಡಿಯುತ್ತಿದ್ದ ನರರಾಕ್ಷಸನಾಗಿದ್ದ. ಹಾಗೆಯೇ ತನ್ನ ಅನುಯಾಯಿಗಳಿಗೆ ಬುಲೆಟ್ ವೇಸ್ಟ್ ಮಾಡಬೇಡಿ, ಸೆರೆಸಿಕ್ಕವರನ್ನು, ಎದುರು ಮಾತಾಡಿದವರನ್ನು ಸುತ್ತಿಗೆಯಿಂದ ಹೊಡೆದು ಸಾಯಿಸಿ ಎಂದು ಹೇಳುತ್ತಿದ್ದನಂತೆ. ದೊಡ್ಡ ಗುಂಡಿ ತೆಗೆದು ಅಲ್ಲಲ್ಲೇ ಸುತ್ತಿಗೆಯಿಂದ ತಲೆಗೆ ಹೊಡೆದು ಸಾಯಿಸಿ ಅವರನ್ನು ಗುಂಡಿಗೆ ತಳ್ಳಿ ಸಾಮೂಹಿಕವಾಗಿ ಮಣ್ಣು ಮಾಡುತ್ತಿದ್ದನಂತೆ. ಕೊನೆಗೆ ತನ್ನ ಹೆಂಡ ತಿಯನ್ನು ಕೊಂದಾಗಲೂ ರಕ್ತವನ್ನೇ ಕುಡಿದಿದ್ದ … ಈತ ಶವಗಳ ಮಾಂಸವನ್ನು ಹಸಿಹಸಿಯಾಗಿಯೇ ಕಚ್ಚಿ ನರಭಕ್ಷಕ ಪ್ರಾಣಿಯಂತೆ ನರಮಾಂಸ ತಿಂದು ತೇಗಿದ್ದಾನಂತೆ!!

ಉಗಾಂಡಾವನ್ನು ಎತ್ತರೆತ್ತರಕ್ಕೆ ಕ್ಕೊಂಡೊಯ್ಯುವ ಕನಸು ಕಂಡ ಅಮಿನ್ ಅಕ್ಷರಶಃ ಅವನತಿಯ ಪ್ರಪಾತಕ್ಕೆ ತಳ್ಳಿಬಿಟ್ಟಿದ್ದ. ಆದರೆ 8 ವರ್ಷಗಳ ಪಾಲನೆಯಲ್ಲಿ ಉಗಾಂಡಾದಲ್ಲಿ ರಾಕ್ಷಸ ಪಾಲನೆ ಮುಂದುವರೆಸಿದ ಬಳಿಕ 1979ರಲ್ಲಿ ಆತ ಸೌದಿಗೆ ಓಡಿಹೋದ. 1980ರಲ್ಲಿ ಒಬೋಟೆ ಪುನಃ ಅಧಿಕಾರದ ಚುಕ್ಕಾಣಿ ಹಿಡಿದನು. ಆದರೆ ಅವನ ಆಡಳಿತವು ಕೂಡಾ ಅಮಿನ್ ಆಡಳಿತಕ್ಕಿಂತ ಭಿನ್ನವಾಗೇನೂ ಇರಲಿಲ್ಲ. ಅವನ ಆಳ್ವಿಕೆಯಲ್ಲೂ ಸಾಕಷ್ಟು ಅಮಿನ್ ಬೆಂಬಲಿಗರ ಮಾರಣಹೋಮ ನಡೆಯಿತು. ಅಮಿನ್ ಸೌದಿ ಅರೇಬಿಯಾದಲ್ಲಿ ಇರತೊಡಗಿದ ಬಳಿಕ ಸಾರ್ವಜನಿಕ ಜೀವನದಿಂದ ಸಾಕಷ್ಟು ದೂರವೇ ಉಳಿದ. ಮಾಧ್ಯಮಗಳಿಗೆ ಮುಖ ತೋರಿಸಲೂ ಇಲ್ಲ. ಆದರೆ ಅವನ ದುರಾಡಳಿತಕ್ಕೆ ಸಿಕ್ಕಿ ನಲುಗಿದವರ ಪಾಲಿಗೆ ನಿತ್ಯ ಸೂತಕವಾಗಿತ್ತು!!! ಅಲ್ಲೇ ತನ್ನ ಜೀವನವನ್ನೂ ಮುಂದುವರೆಸಿದ ಈತ 2001ರಲ್ಲಿ ಅಮಿನ್ ಪುನಃ ಉಗಾಂಡಾಕ್ಕೆ ತೆರಳುವ ಇಚ್ಛೆಯನ್ನು ವ್ಯಕ್ತಪಡಿಸಿದ.

ಆದರೆ ಉಗಾಂಡಾದ ಸರ್ಕಾರ ಅವನ ಈ ಇಚ್ಛೆಯನ್ನು ಖಂಡತುಂಡವಾಗಿ ಖಂಡಿಸಿತು ಮಾತ್ರವಲ್ಲ ಒಂದು ವೇಳೆ ಅವನು ಉಗಾಂಡಾಕ್ಕೆ ಮರಳಿ ಬಂದರೆ ಅವನ ಹಿಂದಿನ ಎಲ್ಲಾ ಕೃತ್ಯಗಳಿಗೆ ಕಾನೂನಿನ ಕ್ರಮ ಕೈಗೊಳ್ಳುವುದಾಗಿ ಬೆದರಿಕೆಯನ್ನೊಡ್ಡಿತು. ಹೀಗಾಗಿ ಉಗಾಂಡಾಕ್ಕೆ ತೆರೆಳಿ ಮತ್ತೆ ಮೆರೆಯುವ ಅಮಿನ್ ಹಂಬಲದ ಬಳ್ಳಿ ಚಿಗುರುವ ಮುನ್ನವೇ ಕಮರಿಹೋಯಿತು. ಆ ಬಳಿಕ 2003ರಲ್ಲಿ ಅಮೀನ್ ಮರಣಿಸಿದ. ಅಮೀನ್ ಉಗಾಂಡಾದಿಂದ ಸೌದಿಗೆ ಪರಾರಿಯಾದ ಬಳಿಕ ಆತನ ಅಧೀನದಲ್ಲಿದ್ದ ಆಸ್ತಿ, ವ್ಯಾಪಾರಗಳನ್ನು ಆತನ ಬಂಧುಗಳು ಹಂಚಿಕೊಂಡರು.

ಇದು ಆಫ್ರಿಕಾದ ಇತಿಹಾಸದಲ್ಲಿ ರಕ್ತಸಿಕ್ತ ಅಧ್ಯಾಯವೊಂದಕ್ಕೆ ಬರೆದ ಮುನ್ನುಡಿಯಾಗಿದೆ!! ಈ ಘಟನೆಯ ಮೂಲಕ ಹಿಟ್ಲರ್‍ನ ನಂತರ ಜಗತ್ತು ಕಂಡ ಭೀಕರ ನರಮೇಧವೊಂದರ ರೂವಾರಿ ಎನ್ನುವ ಭೀತಿಯನ್ನು ಹುಟ್ಟಿಸಿ ಬಿಟ್ಟಿದ್ದ!! ಮೇಲಾಗಿ ಕ್ರೌರ್ಯದಲ್ಲಿ ಅವನನ್ನೂ ಮೀರಿಸೋವಷ್ಟು ಕಟುಕನೊಬ್ಬ ತಯಾರಾಗಿ ಬಿಟ್ಟಿದ್ದಂತಹ ವ್ಯಕ್ತಿ ಈತ!!

– ಅಲೋಖಾ

Tags

Related Articles

Close