ಪ್ರಚಲಿತ

ಸನಾತನ ಧರ್ಮದ ಬಗ್ಗೆ ಮಾತನಾಡುವವರು ಹಿಂದೂಗಳಲ್ಲ

ಅಪ್ರಬುದ್ಧ ವ್ಯಕ್ತಿ ಪ್ರಕಾಶ್ ರಾಜ್ ಇತ್ತೀಚಿನ ದಿನಗಳಲ್ಲಿ ಬೇಕಾಬಿಟ್ಟಿ ಬೊಬ್ಬೆ ಹಾಕಿ ಪ್ರಚಾರ ಗಿಟ್ಟಿಸಿಕೊಳ್ಳುವ ಕಾಯಕದಲ್ಲಿ ಫುಲ್ ಬ್ಯುಸಿ ಆಗಿಬಿಟ್ಟಿದ್ದಾರೆ. ಒಂದರ್ಥದಲ್ಲಿ ಹೇಳುವುದಾದರೆ ಚಲನಚಿತ್ರ ರಂಗದಿಂದ ತನಗೆ ಸಾಕಷ್ಟು ಧನಾಗಮನ ಇಲ್ಲದೇ ಹೋದಾಗ, ತನ್ನ ತುಕ್ಕು ಹಿಡಿದ ನಾಲಿಗೆ ಮತ್ತು ಅರೆ ಬೆಂದ ಬುದ್ಧಿಯನ್ನೇ ಬ್ಯುಸಿನೆಸ್ ಮಾಡಿಕೊಂಡು ಜನರೆದುರು ‌ಬೆತ್ತಲಾಗುವುದು, ಛೀ.. ಥೂ.. ಎನ್ನಿಸಿಕೊಳ್ಳುವುದು ಈ ವ್ಯಕ್ತಿಯ ನಿತ್ಯದ ರೋಧನೆಯಾಗಿಬಿಟ್ಟಿದೆ ಎನ್ನುವುದರಲ್ಲಿ ಸಂದೇಹ ಉಳಿದಿಲ್ಲ.

ಕೆಲ ದಿನಗಳ ಹಿಂದಷ್ಟೇ ತಮಿಳುನಾಡು ಸಿ ಎಂ ಸ್ಟ್ಯಾಲಿನ್ ಪುತ್ರ ಉದಯ ನಿಧಿ ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡಿ‌ ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಂಡ ಘಟನೆ ಇನ್ನೂ ಹಚ್ಚ ಹಸಿರು. ಉದಯ ನಿಧಿ ಮನೆಯವರೇ ಅದೆಷ್ಟೋ ಬಾರಿ ದೇವಾಲಯಗಳಿಗೆ ತೆರಳಿರುವುದು, ದೇವರಿಗೆ ಪೂಜೆ ಸಲ್ಲಿಸುವ ಚಿತ್ರಗಳು, ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಉದಯ ನಿಧಿ ಎಂಬ ಮಾನಸಿಕ ರೋಗಿಯ ಹೇಳಿಕೆಯ ಬಳಿಕ ವೈರಲ್ ಆಗಿದ್ದು, ಆ ಮೂಲಕ ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬಂತೆ ಸಮಾಜದ ಮುಂದೆ ಉಗಿಸಿಕೊಂಡ ವಿಷಯ ಇನ್ನೂ ಜೀವಂತ. ಇಂತಹ ಎಡಬಿಡಂಗಿ ವ್ಯಕ್ತಿತ್ವಕ್ಕೆ ಸಾರ್ವಜನಿಕರು ಛೀಮಾರಿ ಹಾಕುತ್ತಿರುವಾಗಲೇ, ಇದೇ ವಿಷಯವನ್ನಿಟ್ಟುಕೊಂಡು ತನ್ನ ಬೇಳೆ ಬೇಯಿಸಿಕೊಳ್ಳಲು ಪ್ರಕಾಶ್ ರಾಜ್ ಎಂಬ ಅವಕಾಶವಾದಿ ಮುಂದಾಗಿದ್ದಾರೆ.

ಉದಯ ನಿಧಿ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುವುದಾಗಿ ಹೇಳಿರುವ ಪ್ರಕಾಶ್, ಆತ ಸನಾತನ ಧರ್ಮಕ್ಕೆ ಸಂಬಂಧಿಸಿದ ಹಾಗೆ ನೀಡಿರುವ ಹೇಳಿಕೆಗಳಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿ, ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ. ಉದಯ ನಿಧಿ ಹೇಳಿಕೆಯನ್ನು ತಿರುಚಲಾಗುತ್ತಿದೆ. ಜಾತಿ ವಿವಾದ ಹುಟ್ಟು ಹಾಕುವವರಿಗೆ ಕೆಲಸವಿಲ್ಲ. ಆದ ಕಾರಣ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸನಾತನ ಧರ್ಮದ ಬಗ್ಗೆ ಮಾತನಾಡುವವರು ಹಿಂದೂಗಳಲ್ಲ. ನಾನು ಬದಲಾಗಲಾರೆ ಎನ್ನುವುದು ಪ್ರಕೃತಿಗೆ ವಿರುದ್ಧ. ಸನಾತನ ಧರ್ಮದ ಪರ ಎನ್ನುವವರು ಜನರ ದಾರಿ ತಪ್ಪಿಸುತ್ತಿದ್ದಾರೆ. ಇದರ ಹಿಂದಿರುವುದು ರಾಜಕೀಯ ದುರುದ್ದೇಶ. ಅಮಾವಾಸ್ಯೆ ಒಳ್ಳೆಯದಲ್ಲ ಎನ್ನುವವರು, ಚಂದ್ರಯಾನ ಮಾಡುತ್ತಾರಂತೆ ಎಂದು ಹೇಳುವ ಮೂಲಕ ಸನಾತನಿಗಳನ್ನು ಅವಮಾನಿಸುವ ಹೇಳಿಕೆ ನೀಡಿದ್ದಾರೆ.

ಎಲ್ಲಾ ಧರ್ಮಗಳಲ್ಲಿ ವಿಕಾರ ಇದೆ. ಧರ್ಮ ಯುದ್ಧದ ಕೊನೆ ಯಾವಾಗ ಎಂದು ತಿಳಿದಿಲ್ಲ. ಧರ್ಮ ಯುದ್ಧ ಕಾಡ್ಗಿಚ್ಚು ಇದ್ದ ಹಾಗೆ. ಮೂಲವೂ ಗೊತ್ತಾಗಲ್ಲ. ಅಂತ್ಯವೂ ಗೊತ್ತಾಗದು. ಹಿಂದೆಲ್ಲಾ ರಾಜರ ಕಾಲದಲ್ಲಿ ಸೈನಿಕರಿಗೆ ಸಂಬಳ ಕೊಡಲು ಸಾಧ್ಯವಾಗದಾಗ, ಸೈನಿಕರು ಲೂಟಿ, ಅತ್ಯಾಚಾರ, ದರೋಡೆ ಮಾಡುತ್ತಿದ್ದರು. ಈಗ ಅಂತಹವರನ್ನೇ ರಾಜಕೀಯಕ್ಕೂ ಬಳಕೆ ಮಾಡುತ್ತಾರೆ ಎನ್ನುವ ಮೂಲಕ ಮತ್ತೆ ವಿವಾದಕ್ಕೆ ಈಡಾಗಿದ್ದಾರೆ.

ಅಂದ ಹಾಗೆ ಪ್ರಕಾಶ್ ರಾಜ್ ಅವರೇ, ನಿಮ್ಮ ಯೋಜನಾ ಮಟ್ಟ ಎಂತದ್ದು, ನೀವು ಎಷ್ಟು ಪ್ರಬುದ್ಧ ಎನ್ನುವುದನ್ನು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಇಡೀ ಜಗತ್ತಿಗೆ ತೋರಿಸಿದ್ದೀರಿ. ನಿಮ್ಮನ್ನು ಎಷ್ಟರ ಮಟ್ಟಿಗೆ ಹಿಂಬಾಲಿಸಬಹುದು, ನಿಮ್ಮ ಮಾನಸಿಕ ಸ್ಥಿತಿ ಏನು ಎಂಬುದಕ್ಕೂ ಆ ಸಂದರ್ಶನ ಸರಿಯಾದ ಉತ್ತರವನ್ನು ನಿಮ್ಮನ್ನು ಈಗಾಗಲೇ ಹಿಂಬಾಲಿಸುತ್ತಿರುವ ಅಭಿಮಾನಿಗಳಿಗೂ ನೀಡಿದಂತಾಗಿದೆ. ಬಹಳ ಮುಖ್ಯವಾಗಿ, ನಿಮ್ಮ ತಲೆಯಲ್ಲಿ ತುಂಬಿರುವುದು ‘ಲದ್ದಿ’ ಎನ್ನುವುದನ್ನು, ನಿಮ್ಮನ್ನು ನೀವೇ ಜನರೆದುರು ತೆರೆದಿಡುವ ಮೂಲಕ ಸಾಬೀತು ಮಾಡಿದ್ದೀರಿ.

ಇಷ್ಟೆಲ್ಲಾ ಇರುವಾಗ ಸನಾತನ ಧರ್ಮ, ಭಾರತ ದೇಶ, ಪ್ರಧಾನಿ ಮೋದಿ ಸೇರಿದಂತೆ ದೇಶ – ದೇಶ ಪ್ರೇಮಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ವಿರೋಧದ ಹೇಳಿಕೆ ನೀಡಿದರೆ, ನಿಮ್ಮನ್ನೇ ಹುಚ್ಚ ಎಂಬಂತೆ ನೋಡುತ್ತಾರಲ್ಲದೆ, ಇದರಿಂದ ಸಮಾಜಕ್ಕೆ, ದೇಶಕ್ಕೆ ಯಾವುದೇ ಹಾನಿ ಇಲ್ಲ ಎನ್ನುವುದು ಸ್ಪಷ್ಟ. ದಯಮಾಡಿ, ಈ ದೇಶ, ಧರ್ಮದ ಮೇಲೆ ನಿಮ್ಮ ಅಸಮಾಧಾನ ಇದ್ದರೆ, ಇಲ್ಲಿಂದ ನಿಮ್ಮ ನೆಚ್ಚಿನ ರಾಷ್ಟ್ರಗಳಿಗೆ ತೆರಳಿ ಎನ್ನುವುದೊಂದೇ ನಮ್ಮ ಮನವಿ. ಬದಲಾಗಿ ಇಂತಹ ಹೊಲಸು ಮನಸ್ಸನ್ನು ಪ್ರದರ್ಶನಕ್ಕೆ ಇರಿಸಿ ನಿಮ್ಮ ನಟನೆಯ ಮೇಲೆ ಕೆಲ ಭಾರತೀಯರಾದರೂ ಇರಿಸಿರುವ ಗೌರವವನ್ನು ಮಣ್ಣು ಪಾಲು ಮಾಡಿಕೊಳ್ಳದಿರಿ. ಅಷ್ಟೇ.

Tags

Related Articles

Close