ಪ್ರಚಲಿತ

ಕರ್ನಾಟಕದಲ್ಲಿ ನಡೆಯಲಿದೆ ಧರ್ಮಯುದ್ಧ..! ಧರ್ಮ ಗೆಲ್ಲಬೇಕಾದರೆ ಕಾಂಗ್ರೆಸ್ ಸೋಲಲೇಬೇಕು..!

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಕಳೆದ ಒಂದು ವರ್ಷಗಳಿಂದ ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿಯಾಗಿ ತಯಾರಿ ನಡೆಸುತ್ತಿದೆ. ಯಾಕೆಂದರೆ ಕರ್ನಾಟಕ ಎಲ್ಲಾ ರಾಜಕೀಯ ಪಕ್ಷಗಳಿಗೂ ಪ್ರತಿಷ್ಟೆಯ ಕಣವಾಗಿದ್ದು,ಗೆಲ್ಲಲೇಬೇಕು ಎಂಬ ಹಠಕ್ಕೆ ಬಿದ್ದಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನೇರವಾಗಿ ರಣರಂಗಕ್ಕೆ ಇಳಿದರೆ, ಇತ್ತ ಜೆಡಿಎಸ್ ಕೂಡಾ ತಾವೇನು ಕಮ್ಮಿ ಇಲ್ಲ ಎಂಬಂತೆ ಭರ್ಜರಿಯಾಗಿ ತಯಾರಿ ನಡೆಸುತ್ತಿದೆ. ಒಟ್ಟು ೨೨೪ ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಕರ್ನಾಟಕ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜ್ಯ ಎಂದರೆ ತಪ್ಪಾಗದು.

ಈಗಾಗಲೇ ನಡೆದ ಎಲ್ಲಾ ರಾಜ್ಯಗಳ ಚುನಾವಣೆಯಲ್ಲೂ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ , ಕರ್ನಾಟಕವನ್ನೂ ತಮ್ಮ ತೆಕ್ಕೆಗೆ ತಂದುಕೊಳ್ಳಬೇಕು ಎಂದು ಪಣತೊಟ್ಟರೆ, ಇತ್ತ ಕಾಂಗ್ರೆಸ್ ಕಳೆದ ಐದು ವರ್ಷಗಳಿಂದ ಆಳ್ವಿಕೆ ನಡೆಸುತ್ತಿರುವುದರಿಂದ ಈ ಬಾರಿಯೂ ತಮ್ಮದೇ ಸರಕಾರ ರಚನೆ ಮಾಡಬೇಕೆಂಬ ಹಠಕ್ಕೆ ಬಿದ್ದಿದೆ.! ಕರ್ನಾಟಕದಲ್ಲಿ ಆಡಳಿತ ವಿರೋಧಿ ಅಲೆ ಇರುವುದರಿಂದ ಕಾಂಗ್ರೆಸ್ ಗೆ ಸೋಲಿನ ಭೀತಿ ತಪ್ಪಿದ್ದಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರಂತೂ ತಾನು ಅಧಿಕಾರ ಹಿಡಿಯುತ್ತಿದ್ದಂತೆ ತಾನೊಬ್ಬ ಹಿಂದೂ ವಿರೋಧಿ ಎಂಬುವುದನ್ನು ಪ್ರದರ್ಶಿಸಿಯೇ ಬಿಟ್ಟರು. ಅಂದಿನಿಂದ ಇಂದಿನವರೆಗೂ ಸಿದ್ದರಾಮಯ್ಯನವರ ಅಸಲಿ ಮುಖ ಏನೆಂಬುದನ್ನು ಪ್ರದರ್ಶಿಸುತ್ತಲೇ ಬಂದಿದ್ದಾರೆ. ರಾಜ್ಯದಲ್ಲಿ ಹಿಂದೂಗಳ ಸ್ಥಿತಿ ಯಾವ ಮಟ್ಟಿಗೆ ಶೋಚನೀಯವಾಗಿದೆ ಎಂದರೆ , ಕಾಶ್ಮೀರದಲ್ಲಿ ಹಿಂದೂಗಳು ಪಡುತ್ತಿರುವ ಸಮಸ್ಯೆಯೇ ಕರ್ನಾಟಕದಲ್ಲೂ ಎದುರಾಗಿದೆ.!

ಕರ್ನಾಟಕದಲ್ಲಿ ನಡೆಯಲಿದೆ ಧರ್ಮಯುದ್ಧ..!

ಎಲ್ಲಾ ರಾಜ್ಯಗಳಲ್ಲೂ ರಾಜಕೀಯ ಪಕ್ಷಗಳ ಮಧ್ಯೆ ಚುನಾವಣೆ ನಡೆದರೆ, ಕರ್ನಾಟಕದಲ್ಲಿ ಮಾತ್ರ ಈ ಬಾರಿ ಧರ್ಮಯುದ್ಧವೇ ನಡೆಯಲಿದೆ. ಯಾಕೆಂದರೆ ರಾಜ್ಯದಲ್ಲಿ ಆಡಳಿತ ಇರುವ ಕಾಂಗ್ರೆಸ್ ಕೇವಲ ಅಲ್ಪಸಂಖ್ಯಾತರ ಓಲೈಕೆಗಾಗಿ ಬಹುಸಂಖ್ಯಾತ ಹಿಂದೂಗಳನ್ನು ಕಡೆಗಣಿಸುತ್ತಲೇ ಬಂದಿದೆ. ಇದಕ್ಕೆಲ್ಲಾ ಉತ್ತರ ಸಿಗಬೇಕಾದರೆ ಚುನಾವಣೆ ಅನಿವಾರ್ಯ. ಯಾಕೆಂದರೆ ರಾಜ್ಯ ಸರಕಾರವೇ ಹಿಂದೂಗಳನ್ನು ನಾಶ ಮಾಡಲು ಹೊರಟಿದೆ ಎಂದರೆ ಕರ್ನಾಟಕದಲ್ಲಿ ಜನತೆ ಶಾಂತಿಯಿಂದ ಇರಲು ಹೇಗೆ ಸಾಧ್ಯ..?

ಕೇವಲ ರಾಜಕೀಯ ಲಾಭಕ್ಕಾಗಿ ಧರ್ಮ-ಧರ್ಮದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಿ , ಇಡೀ ರಾಜ್ಯವನ್ನೇ ನರಕದ ಕೂಪವನ್ನಾಗಿಸಿದ ಈ ಕಾಂಗ್ರೆಸ್ ಗೆ ರಾಜಕಾರಣವಷ್ಟೇ ಮುಖ್ಯ. ಹೆಣದ ಮೇಲೆ ರಾಜಕಾರಣ ನಡೆಸುವ ಕಾಂಗ್ರೆಸ್ ಗೆ ರಾಜ್ಯದ ಜನತೆ ಚುನಾವಣೆಯ ಮೂಲಕ ತಕ್ಕ ಉತ್ತರ ನೀಡಲು ಈಗಾಗಲೇ ಸಜ್ಜಾಗಿದ್ದಾರೆ.

ಹಿಂದೂ ಕಾರ್ಯಕರ್ತರ ಸಾವಿಗೆ ನ್ಯಾಯ ಚುನಾವಣೆಯ ಮುಖಾಂತರ..!

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗುತ್ತಲೇ ಮುಸ್ಲೀಂ ಸಂಘಟನೆಯಾದ ಪಿ.ಎಫ್.ಐ ಕಾರ್ಯಕರ್ತರ ಮೇಲಿದ್ದ ಕೇಸ್ ಗಳನ್ನು ಹಿಂಪಡೆಯುವ ಮೂಲಕ ಅಪರಾಧಿಗಳನ್ನು ಸಾಕಲು ಆರಂಭಿಸಿದರು. ಕೊಲೆ, ದರೋಡೆ , ಅತ್ಯಾಚಾರ ನಡೆಸಿ ಜೈಲು ಪಾಲಾಗಿದ್ದ ಮುಸ್ಲೀಮರ ಬೆಂಬಲಕ್ಕೆ ನಿಂತ ಈ
ಸರಕಾರಕ್ಕೆ ತಕ್ಕ ಪಾಠ ಕಲಿಸಬೇಕಾದರೆ ಚುನಾವಣೆಯಲ್ಲಿ ಸೋಲಿಸಲೇಬೇಕು. ಅಪರಾಧಿಗಳನ್ನು ಸರಕಾರವೇ ರಕ್ಷಿಸಿದ ಪರಿಣಾಮವಾಗಿ ಸಾಲು ಸಾಲು ಹಿಂದೂ ಸಂಘಟನೆ ಮತ್ತು ಬಿಜೆಪಿ ಕಾರ್ಯಕರ್ತರ ಕೊಲೆಗಳು ನಡೆಯುತ್ತಲೇ ಇದೆ. ಕೇಸರಿ ಶಾಲು ಹಾಕಿಕೊಂಡು ಹೋದರೆ ಸಾಕು ಅಂತವರನ್ನು ಜಿಹಾದಿಗಳು ಟಾರ್ಗೆಟ್ ಮಾಡಿ ಹಲ್ಲೆ ಅಥವಾ ಕೊಲೆ ನಡೆಸುತ್ತಾರೆ ಎಂದರೆ ನಾವು ಎಂತಹ ಆಡಳಿತದಲ್ಲಿ ಇದ್ದೇವೆ ಎಂಬುದು ಅರಿವಾಗುತ್ತದೆ. ಕಳೆದ ಐದು ವರ್ಷಗಳಲ್ಲಿ ಇಪ್ಪತ್ತನಾಲ್ಕು ಹಿಂದೂ ಕಾರ್ಯಕರ್ತರ ಹತ್ಯೆ ನಡೆದರೂ , ಸಿದ್ದರಾಮಯ್ಯನವರು ಮಾತ್ರ ತನಗೂ ಈ ರಾಜ್ಯದ ಜನತೆಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.

ಇದಕ್ಕೆಲ್ಲಾ ನೇರ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ. ಯಾಕೆಂದರೆ ಅಧಿಕಾರ ವಹಿಸಿಕೊಂಡು ಮೊದಲು ಮಾಡಿದ ಕೆಲಸವೇ ಹಿಂದೂಗಳ ಧಮನ ನೀತಿ. ಸಂಘಪರಿವಾರದ ವಿರುದ್ಧ ನಾವೆಲ್ಲಾ ಒಟ್ಟಾಗಿ ಹೋರಾಡಬೇಕು ಎಂದು ಬಹಿರಂಗವಾಗಿಯೇ ಕರೆಕೊಟ್ಟ ಸಿದ್ದರಾಮಯ್ಯನವರ ಹೇಳಿಕೆಯಿಂದಲೇ ಜಿಹಾದಿಗಳಿಗೆ ಬಲ ಬಂದಂತಾಗಿದೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಎಂಬುದು ಸಂಪೂರ್ಣವಾಗಿ ಕುಸಿದುಹೋಗಿದ್ದು, ರಾಜ್ಯ ಸರಕಾರ ಸರ್ವಾಧಿಕಾರದ ಆಡಳಿತ ನಡೆಸುತ್ತಿದೆ ಎಂಬುವುದಕ್ಕೆ ಇದೊಂದು ಉದಾಹರಣೆ ಅಷ್ಟೇ..!

ಹಿಂದೂ ದೇವರುಗಳನ್ನೇ ಅವಮಾನವೆಸಗಿದ ಕಾಂಗ್ರೆಸ್..!

ಸನಾತನ ಧರ್ಮವಾದ ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರನ್ನು ಪೂಜಿಸಲಾಗುತ್ತದೆ. ಒಂದೊಂದು ಆಚರಣೆಯ ಹಿಂದೆಯೂ ಹತ್ತು ಹಲವಾರು ಕಾರಣಗಳಿವೆ ಮತ್ತು ನಂಬಿಕೆಗಳಿವೆ. ಇಂತಹ ಆಚರಣೆಗಳನ್ನೇ ಮೂಡನಂಬಿಕೆ ಎಂದು ಬಿಂಬಿಸಿ ಇಡೀ ಹಿಂದೂ ಸಮಾಜಕ್ಕೆ ಅವಮಾನವೆಸಗಿದ ಈ ಕಾಂಗ್ರೆಸ್ ಗೆ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಹಿಂದೂ ದೇವರುಗಳ ನೆನಪಾದಂತಿದೆ. ಇದೀಗ ಕಾಂಗ್ರೆಸ್ ನ ಎಲ್ಲಾ ನಾಯಕರುಗಳು ಪದೇ ಪದೇ ಒಂದಲ್ಲಾ ಒಂದು ದೇವಾಲಾಯಗಳಿಗೆ ಭೇಟಿ ನೀಡುತ್ತಾ ತಾವೂ ಹಿಂದುತ್ವವಾದಿಗಳು ಎಂಬುವುದನ್ನು ಪ್ರದರ್ಶಿಸುತ್ತಿದ್ದಾರೆ.

ಕಾಂಗ್ರೆಸ್ ಪ್ರೇರಿತ ಕೆಲ ಬುದ್ದಿಜೀವಿಗಳು ಹಿಂದೂಗಳ ಆರಾಧ್ಯ ದೈವ ಶ್ರೀ ರಾಮನನ್ನೇ ಅವನಾನ ಎಸಗಿ , ರಾಮನೊಬ್ಬ ಮಾಂಸಹಾರಿ, ಆತ ಸಂಶಯವಾದಿ ಎಂಬುದಾಗಿ ಕೀಳಾಗಿ ಮಾತನಾಡಿದ್ದಲ್ಲದೇ ಇಡೀ ಹಿಂದೂ ಧರ್ಮವೇ ಸುಳ್ಳು ಎಂಬುದಾಗಿ ಹೇಳಿಕೊಂಡಾಗಲೂ ಈ ಕಾಂಗ್ರೆಸ್ ನಾಯಕರು ತುಟಿ ಬಿಚ್ಚಲಿಲ್ಲ. ಯಾಕೆಂದರೆ ಕಾಂಗ್ರೆಸ್ ಗೆ ಬೇಕಾಗಿರುವುದು ಕೇವಲ ಅಲ್ಪಸಂಖ್ಯಾತರ ಮತವಷ್ಟೇ. ಅದೇ ಕಾರಣಕ್ಕಾಗಿ ತಾನೂ ಹಿಂದೂ ವಿರೋಧಿಯಾಗಿ ನಡೆದುಕೊಂಡು, ಹಿಂದೂ ವಿರೋಧಿಯಾಗಿ ನಡೆದುಕೊಳ್ಳುವವರನ್ನು ಸಾಕುತ್ತಿದೆ. ಹಿಂದೂ ವಿರೋಧಿ ಕಾಂಗ್ರೆಸ್ ಅಂತ್ವಾಗಬೇಕಾದರೆ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲೇಬೇಕು..!

ಧರ್ಮ ಒಡೆದವರಿಗೆ ಸೋಲು ಕಟ್ಟಿಟ್ಟಬುತ್ತಿ..!

ಹಿಂದೂ ಧರ್ಮ ಎಂದರೆ ಅದಕ್ಕೆ ಆದಿಯೂ ಇಲ್ಲ , ಅಂತ್ಯವೂ ಇಲ್ಲ. ಇಂತಹ ಸನಾತನ ಧರ್ಮದಲ್ಲಿ ನೂರಾರು ಜಾತಿಗಳು ಇವೆ‌. ಆದರೆ ಧರ್ಮ ಒಂದೇ ,ಅದುವೇ ಹಿಂದೂ ಧರ್ಮ. ಅಂತಹ ಧರ್ಮವನ್ನೇ ಒಡೆಯಲು ಪ್ರಯತ್ನಿಸಿದ ಈ ಸಿದ್ದರಾಮಯ್ಯ ಲಿಂಗಾಯತ ವೀರಶೈವರನ್ನು ವಿಭಜಿಸಿ ಹಿಂದೂ ಧರ್ಮದಿಂದ ಬೇರ್ಪಡಿಸಲು ಪಣತೊಟ್ಟು ಇಡೀಯ ಸಮಾಜವನ್ನೇ ಒಡೆದು ಆಳುವ ನೀತಿಗೆ ತಂದಿಟ್ಟರು. ಇಂತಹ ಮುಖ್ಯಮಂತ್ರಿ ಬದಲಾಗಬೇಕಾದರೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲೇಬೇಕು.

ಚುನಾವಣೆಯಲ್ಲಿ ಉತ್ತರ ನೀಡದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ಈ ಕಾಂಗ್ರೆಸ್ ಏನು ಮಾಡುತ್ತೋ ಗೊತ್ತಿಲ್ಲಾ. ಏಕೆಂದರೆ ಅಧಿಕಾರದ ಅಮಲೇರಿಸಿಕೊಂಡಿರುವ ಕಾಂಗ್ರೆಸ್ ಗೆ ರಾಜಕೀಯವಷ್ಟೇ ಮುಖ್ಯ ಹೊರತು ಜನರ ಶಾಂತಿ , ನೆಮ್ಮದಿ ಅಥವಾ ರಾಜ್ಯದ ಅಭಿವೃದ್ದಿಯಲ್ಲ..!


ಅರ್ಜುನ್

Tags

Related Articles

Close