ಪ್ರಚಲಿತ

ಪಾಕಿಸ್ತಾನದ ಹೆಗಲ ಮೇಲೆ ಕೈ ಹಾಕಿ ನಾನೂ ನೀನು ದೋಸ್ತಿ ಎನ್ನುವ ಕಮ್ಯುನಿಷ್ಟ್ ಚೀನಾ ತನ್ನ ದೇಶದ ಮುಸಲ್ಮಾನರನ್ನು ಯಾವ ರೀತಿ ನಡೆಸಿಕೊಳ್ಳುತ್ತಿದೆ ಎನ್ನುವುದನ್ನು ಕೇಳಿದರೆ ಹೌಹಾರುತ್ತೀರಿ!!

 

ಮೇಲು ನೋಟಕ್ಕೆ ತಾನು ಪಾಕಿಸ್ತಾನದ ಘನ ಮಿತ್ರನೆನ್ನುವ ಚೀನಾ ತನ್ನದೆ ದೇಶದಲ್ಲಿರುವ ಮುಸಲ್ಮಾನರನ್ನು ಅತ್ಯಂತ ಅಮಾನವೀಯ ರೀತಿಯಲ್ಲಿ ನಡೆಸಿಕೊಳ್ಳುತ್ತದೆನ್ನುವುದು ಇಲ್ಲಿನ “ಸೆಕ್ಯೂಲರ್ ಬ್ರಿಗೇಡಿಗೆ” ಗೊತ್ತಿಲ್ಲವೊ? ಅಥವಾ ಗೊತ್ತಿದ್ದೂ ಜಾಣ ಮೌನವೊ? ಭಾರತದಲ್ಲಿ ಮುಸಲ್ಮಾನರು ಭಯದಿಂದ ಜೀವಿಸುತ್ತಿದ್ದಾರೆ, ಇಸ್ಲಾಮ್ ಅಪಾಯದಲ್ಲಿದೆ ಎನ್ನುವ ಬ್ರಿಗೇಡಿಗರು ಒಮ್ಮೆ ಚೀನಾದಲ್ಲಿ ಇಸ್ಲಾಮಿಗೆ ಮತ್ತು ಮುಸಲ್ಮಾನರಿಗೆ ಎಷ್ಟು ಮರ್ಯಾದೆ ಸಿಗುತ್ತದೆ ಎಂದು ನೋಡಿ ಬನ್ನಿ.

ಡೈಲಿ ಮೇಲ್ ವರದಿಯ ಪ್ರಕಾರ “ಮರು ಶಿಕ್ಷಣ”ದ ಹೆಸರಿನಲ್ಲಿ ಚೀನಾವು ಉಯಿಗರ್ ಮುಸಲ್ಮಾನರನ್ನು ಹಂದಿ ಮಾಂಸ ತಿನ್ನುವಂತೆ ಮತ್ತು ಮದ್ಯ ಕುಡಿಯುವಂತೆ ಬಲವಂತ ಪಡಿಸುತ್ತಿದೆ ಎಂದು ತಿಳಿದು ಬಂದಿದೆ. ಚೀನಾದ ಕ್ಸಿನ್ ಜಿಯಾಂಗ್ ಪ್ರಾಂತ್ಯದಲ್ಲಿ ಉಯಿಗರ್ ಮುಸ್ಲಿಮ್ ಸಮುದಾಯವು ವಾಸಿಸುತ್ತದೆ. ಈ ಪ್ರಾಂತ್ಯದಲ್ಲಿ ಮುಸಲ್ಮಾನರ ಸಂಖ್ಯೆ ಒಂಭತ್ತು ಮಿಲಿಯನ್ ಗಳು ಎಂದು ಅಂದಾಜಿಸಲಾಗಿದೆ. ಇದರಲ್ಲಿ ಒಂದು ಮಿಲಿಯನ್ ಉಯಿಗರ್ ಮುಸಲ್ಮಾನರನ್ನು ಚೀನಾದ “ಮರು ಶಿಕ್ಷಣ” ಶಿಬಿರಗಳಲ್ಲಿ ಬಂಧಿಯಾಗಿಸಲಾಗಿದೆ. ಶಿಬಿರದಲ್ಲಿ ಬಂಧಿಯಾಗಿದ್ದ ಮಾಜಿ ಕೈದಿಗಳು ಹೇಳಿರುವ ಪ್ರಕಾರ ಶಿಬಿರದ ಅಧಿಕಾರಿಗಳ ಆದೇಶಗಳನ್ನು ಅನುಸರಿಸಲು ನಿರಾಕರಿಸುವ ಮುಸಲ್ಮಾನರಿಗೆ ಹಂದಿ ಮಾಂಸ ತಿನ್ನುವಂತೆ ಮತ್ತು ಮದ್ಯ ಕುಡಿಯುವಂತೆ ಒತ್ತಾಯಿಸಲಾಗುತ್ತದೆ. ಅವರು ಇಸ್ಲಾಂ ನ ನಂಬಿಕಗಳನ್ನು ತ್ಯಜಿಸಿ ಕಮ್ಯೂನಿಷ್ಟ್ ಪದ್ದತಿಯನ್ನು ಅಳವಡಿಸಿಕೊಳ್ಳಲು ಹೀಗೆ ಮಾಡಲಾಗುತ್ತಿದೆಯಂತೆ!! ಹೇಳಿ ಕೇಳಿ ಚೀನಾ ಕಮೂನಿಷ್ಟ್ ದೇಶ. ಅದು ತನ್ನ ಸ್ವಾರ್ಥ ಬಿಟ್ಟರೆ ಇನ್ನಾರ ಹಿತವನ್ನೂ ಬಯಸುವುದಿಲ್ಲ.

ಚೀನಾ ದೇಶದ ಮುಸ್ಲಿಂ ಪ್ರಾಬಲ್ಯದ ಕ್ಸಿನ್ ಜಿಯಾಂಗ್ ಪ್ರಾಂತ್ಯದಲ್ಲಿ ಇಸ್ಲಾಮಿಕ್ ಉಗ್ರಗಾಮಿತ್ವ ಮತ್ತು ಪ್ರತ್ಯೇಕತಾವಾದಿ ಚಳುವಳಿಗಳನ್ನು ಪರಿಶೀಲಿಸಲು ಕಮ್ಯೂನಿಷ್ಟರು ಬಳಸುತ್ತಿರುವ ಇತ್ತೀಚಿನ ಅಸ್ತ್ರ “ಮರು ಶಿಕ್ಷಣ” ಶಿಬಿರಗಳು. ಇದಕ್ಕೂ ಮುಂಚೆ ಈ ಪ್ರಾಂತ್ಯದಲ್ಲಿರುವ ಮುಸ್ಲಿಮರನ್ನು ಹತ್ತಿಕ್ಕಲು ಚೀನಾ ಹತ್ತು ಹಲವು ನಿರ್ಣಯಗಳನ್ನು ತೆಗೆದುಕೊಂಡಿದೆ:

1. ಚೀನಾದಲ್ಲಿ ಮುಸಲ್ಮಾನರು ಗಡ್ಡ ಬಿಡುವುದನ್ನು ಮತ್ತು ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸುವುದನ್ನು ಖಡ್ಡಾಯವಾಗಿ ನಿಷೇಧಿಸಲಾಗಿದೆ.

2. 2014 ರಲ್ಲಿ ರಮ್ಜಾನ್ ಸಮಯದಲ್ಲಿ ರೋಜಾ ಉಪವಾಸ ಮಾಡದಂತೆ ತಾಕೀತು ಮಾಡಿತ್ತು ಚೀನಾ ಸರಕಾರ. ನಮಾಜ್ ಸಮಯದಲ್ಲಿ ಅವರ ಚಾದರ ಮತ್ತು ಕುರಾನ್ ಪುಸ್ತಕಗಳನ್ನು ಕಿತ್ತುಕೊಂಡಿತ್ತು.

3. 2016 ರಲ್ಲಿ ಮುಸ್ಲಿಮರು ತಮ್ಮ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಚರಿಸುವ ಮುನ್ನ ಸರಕಾರದ ಆದೇಶ ಪಡೆಯಬೇಕೆಂದು ಆದೇಶ ಹೊರಡಿಸಿತ್ತು. ಇದನ್ನು ಉಲ್ಲಂಘಿಸಿದವರಿಗೆ ದೇಶದ್ರೋಹಿಗಳೆಂದು ಘೋಷಿಸಲಾಗುವುದೆಂದು ಹೇಳಿತ್ತು. ಆದೇಶ ಉಲ್ಲಂಘಿಸಿದವರಿಗೆ ಮರಣದಂಡೆನೆಯೆ ಶಿಕ್ಷೆ.


4. ಚೀನಾದಲ್ಲಿ ಮುಸ್ಲಿಮರು ಇಸ್ಲಾಂಗೆ ಸಂಬಂಧಿಸಿದ ಹೆಸರುಗಳನ್ನು ಇಡುವುದನ್ನು ಖಡ್ಡಾಯವಾಗಿ ನಿಷೇಧಿಸಲಾಗಿದೆ. ಮಹಮ್ಮದ್, ಜಿಹಾದ್, ಇಸ್ಲಾಂ, ಇಮಾಮ್, ಹಜ್, ತುರ್ಕ್, ಅಜಹರ್, ವಹಾಬ್, ಸದ್ದಾಮ್, ಅರಾಫಾತ್, ಮದೀನಾ, ಕಾಯರೋ ಎನ್ನುವಂತಹ ಯಾವುದೆ ಹೆಸರುಗಳನ್ನು ಅಲ್ಲಿ ಇಡುವಂತಿಲ್ಲ!! ಭಾರತದಲ್ಲಿ ಕೆಲವು ಮತಿ ವಿಭ್ರಾಂತರು ತಮ್ಮ ಮಕ್ಕಳಿಗೆ ನರಹಂತಕ ತೈಮೂರ, ಅಕ್ಬರ, ಬಾಬರ, ಸ್ಟಾಲಿನ್ ಎನ್ನುವ ಹೆಸರಿಡುತ್ತಾರೆ ಎಂಥ ದೌರ್ಭಾಗ್ಯ ನಮ್ಮದು.


5. ಚೀನಾದಲ್ಲಿ ಒಬ್ಬ ವ್ಯಕ್ತಿ ಮಸೀದಿಗೆ ಹೋಗಬೇಕಾದರೆ ಆತನಿಗೆ ಹದಿನೆಂಟು ವರ್ಷ ಆಗಿರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಪದೇಶ ಕೊಡುವವರು ಸರಕಾರದ ಅನುಮತಿ ಪಡೆದಿರಬೇಕು. ಮುಸಲ್ಮಾನರ ಮದುವೆ, ಉತ್ತರಕ್ರಿಯೆ ಮುಂತಾದ ಕಾರ್ಯಗಳನ್ನು ಕೂಡ ಧಾರ್ಮಿಕ ಚರಮಪಂಥವೆಂದೆ ಪರಿಗಣಿಸಲಾಗುತ್ತದೆ.

6. “ಸ್ವಚ್ಚತಾ ಅಭಿಯಾನ”ದ ಹೆಸರಿನಲ್ಲಿ ಚೀನಾದಲ್ಲಿ 5000 ಕ್ಕೂ ಅಧಿಕ ಮಸೀದಿಗಳನ್ನು ಪುಡಿಗೈಯಲಾಗಿದೆ. ಜನರನ್ನು ಮೂಲಭೂತವಾದಿಗಳನ್ನಾಗಿಸಿ ಉಗ್ರರಾಗಲು ತರಬೇತಿ ನೀಡಲಾಗುತ್ತಿತ್ತು ಎನ್ನುವ ಆರೋಪದಡಿ ಈ ಮಸೀದಿಗಳನ್ನ ಧ್ವಂಸ ಮಾಡಿದ್ದಲ್ಲದೆ ಅಲ್ಲಿ ಮಾರುಕಟ್ಟೆ ಮತ್ತು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಅನುಮತಿ ನೀಡಲಾಗಿದೆ!! ಆ ಜಾಗಗಳನ್ನು ಹಾಗೆ ಬಿಟ್ಟರೆ ಮತ್ತೆ ಅಲ್ಲಿ ಮಸೀದಿಗಳನ್ನು ನಿರ್ಮಿಸಲಾಗುತ್ತದೆ ಎನ್ನುತ್ತದೆ ಚೀನೀ ಸರಕಾರ.

ಪ್ರಪಂಚದಲ್ಲಿ ಅಧಿಕೃತವಾಗಿ ಇಸ್ಲಾಂ ಅನ್ನು ನಿಷೇಧಿಸಿ ಮುಸಲ್ಮಾನರ ಆಚರಣೆಗಳನ್ನು ಬ್ಯಾನ್ ಮಾಡುವ ಹಾಕುವ ತಾಕತ್ತು ಇರುವ ಏಕೈಕ ದೇಶ ಚೀನಾ. ಪಾಕಿಸ್ತಾನದ ಗಡಿ ಪ್ರದೇಶಕ್ಕಂಟಿಕೊಂಡಿರುವ ಕ್ಸಿನ್ ಜಿಯಾಂಗ್ ಪ್ರಾಂತ್ಯದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಿವೆ. ಇಂತಹ ಚಟುವಟಿಕೆಗಳಿಗೆ ಇಸ್ಲಾಂ ಕಾರಣವೆನ್ನುವ ಚೀನಾ, ಉಯಿಗರ್ ಮುಸಲ್ಮಾನರು ಇಸ್ಲಾಂ ತ್ಯಜಿಸಿ ಕಮೂನಿಷ್ಟ್ ತತ್ವಗಳನ್ನು ಪಾಲಿಸಬೇಕೆನ್ನುತ್ತದೆ. ಭಾರತವನ್ನು ಮಣಿಸಲು ಪಾಕಿಸ್ತಾನಕ್ಕೆ ನಾನೂ-ನೀನು ದೋಸ್ತು ಎನ್ನುವ ಚೀನಾ, ಒಂದು ದಿನ ಪಾಕಿಸ್ತಾನವನ್ನೆ ತನ್ನ ಕಪಿ ಮುಷ್ಟಿಯಲ್ಲಿ ತೆಗೆದುಕೊಳ್ಳುತ್ತದೆ. ಇವತ್ತು ಭಯೋತ್ಪಾದನೆಗೆ ನೀರೆರೆದು ಪೋಷಿಸುವ ಚೀನಾ ಒಂದು ದಿನ ತಾನೆ ಅದರ ಸವಿ ಉಣ್ಣ ಬೇಕಾಗುತ್ತದೆ. ಆಗ ಪಾಕಿಸ್ತಾನದ ಮೇಲೆ ಚೀನಾ ಕತ್ತಿ ಮಸೆಯುತ್ತದೆ. ಇಸ್ಲಾಂ ಮತ್ತು ಮುಸಲ್ಮಾನರ ಬದ್ದ ದ್ವೇಷಿಯ ಕೈಯಲ್ಲಿ ಸಿಲುಕಿ ಪಾಕಿಸ್ತಾನ ವಿಲ ವಿಲ ಒದ್ದಾಡುತ್ತದೆ. ಈಗ ಘನ ಮಿತ್ರರೆನಿಸಿಕೊಂಡ ಈ ಕಪಟ ದೇಶಗಳು ಮುಂದೊಂದು ದಿನ ಬದ್ದವೈರಿಗಳಾದರೂ ಆಗಬಹುದು. ಆಗ ಭಾರತ “ನೀನೇ ಸಾಕಿದಾ ಗಿಣಿ ನಿನ್ನಾ ಮುದ್ದಿನಾ ಗಿಣಿ ಹದ್ದಾಗಿ ಕುಕ್ಕಿತಲ್ಲೋ” ಏಂದು ಹಾಡು ಹಾಡುವಂತಾಗುತ್ತದೆ. ಅಂತಹ ದಿನ ಬೇಗ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.

-ಶಾರ್ವರಿ

Tags

Related Articles

Close