ಪ್ರಚಲಿತ

ಮತ್ತೆ ಸದ್ದು ಮಾಡಿದ ಟಿಪ್ಪು ವಿವಾದ.! ಮೈತ್ರಿ ಸರಕಾರದಲ್ಲೂ ಮುಂದುವರಿಯುತ್ತಾ ಟಿಪ್ಪು ಜಯಂತಿ.?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತದಲ್ಲಿ ಮುಸ್ಲೀಮರ ಅತೀಯಾದ ಓಲೈಕೆ ಮಾಡಿಕೊಂಡು ಅಧಿಕಾರ ನಡೆಸುತ್ತಿದ್ದ ಕಾರಣದಿಂದಾಗಿಯೇ ರಾಜ್ಯದಲ್ಲಿ ಒಂದು ವರ್ಗವನ್ನು ಕಡೆಗಣನೆ ಮಾಡಲಾಗಿತ್ತು. ಅಲ್ಪಸಂಖ್ಯಾತರ ಓಲೈಕೆಗಾಗಿ ವಿವಾದಾತ್ಮಕ ಟಿಪ್ಪು ಜಯಂತಿ ಪ್ರಾರಂಭಿಸಿದ ಸಿದ್ದರಾಮಯ್ಯನವರು, ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುವಂತೆ ಮಾಡಿದ್ದರು. ಕೇವಲ ಮುಸ್ಲೀಮರನ್ನು ತಮ್ಮ ಕೀಳು ಮಟ್ಟದ ರಾಜಕೀಯಕ್ಕೆ ಬಳಸಿಕೊಂಡ ಕಾಂಗ್ರೆಸ್, ಕನ್ನಡ ವಿರೋಧಿ, ಹಿಂದೂ ಮತ್ತು ಕ್ರೈಸ್ತರ ಮಾರಣಹೋಮ ಮಾಡಿ ತನ್ನ ಸಾಮ್ರಾಜ್ಯ ವಿಸ್ತರಿಸಿಕೊಳ್ಳುತ್ತಿದ್ದ ಟಿಪ್ಪು ಸುಲ್ತಾನ್‌ನ ಜಯಂತಿಯನ್ನು ಸರಕಾರದ ವತಿಯಿಂದ ಆರಂಭಿಸಿದ ಸಿದ್ದರಾಮಯ್ಯನವರು ತಾನು ಒಂದು ವರ್ಗದ ಜನರ ಓಲೈಕೆಯಲ್ಲೇ ತೊಡಗಿದ್ದೇನೆ ಎಂಬುದನ್ನು ಸ್ಪಷ್ಟಪಡಿಸಿದ್ದರು. ಟಿಪ್ಪು ಜಯಂತಿ ಆಚರಣೆಯ ವೇಳೆ ಕೊಡಗಿನಲ್ಲಿ ಹಿಂದೂ ಕಾರ್ಯಕರ್ತನ ಕೊಲೆ ಕೂಡ ನಡೆದಿತ್ತು. ಇಂತಹ ವಿವಾದ ಉಂಟುಮಾಡಿದ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರಕಾರದ ವತಿಯಿಂದಲೇ ಆಚರಿಸಿದ್ದು ರಾಜ್ಯದ ಜನತೆಯ ದುರಾದೃಷ್ಟ ಎನ್ನಬಹುದಷ್ಟೇ. ಯಾಕೆಂದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯಾರ ವಿರೋಧವನ್ನೂ ಕ್ಯಾರೇ ಅನ್ನುತ್ತಿರಲಿಲ್ಲ, ಸರ್ವಾಧಿಕಾರದ ಆಡಳಿತ ನಡೆಸುತ್ತಿದ್ದ ಸಿದ್ದರಾಮಯ್ಯ ಇದೀಗ ಮೈತ್ರಿ ಸರಕಾರದಲ್ಲಿ ಮೂಲೆಗುಂಪಾಗಿದ್ದರೂ ಕೂಡ ತಾನು ಪ್ರಾರಂಭಿಸಿದ ಟಿಪ್ಪು ಜಯಂತಿ ಮೈತ್ರಿ ಸರಕಾರದಲ್ಲೂ ಮುಂದುವರಿಯುವ ಸಾಧ್ಯತೆ ಇದೆ.!

ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿ ಆರಂಭಿಸಿದಾಗ ಇಡೀ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿತ್ತು. ಆದರೂ ಕ್ಯಾರೇ ಅನ್ನದ ಸಿದ್ದರಾಮಯ್ಯ ಜಯಂತಿ ಮಾಡಿಯೇ ಬಿಟ್ಟಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾದ್ಯಂತ ಉಗ್ರ ಹೋರಾಟ ಕೂಡ ನಡೆಸಿತ್ತು. ಇತ್ತ ಜೆಡಿಎಸ್‌ ಕೂಡ ತಕ್ಕ ಮಟ್ಟಿಗೆ ವಿರೋಧ ವ್ಯಕ್ತಪಡಿಸಿ ಸುಮ್ಮನಾಗಿತ್ತು. ಯಾಕೆಂದರೆ ಟಿಪ್ಪು ಸುಲ್ತಾನ್ ಕನ್ನಡ ವಿರೋಧಿ ಎಂಬ ಕಾರಣಕ್ಕಾಗಿ ಜೆಡಿಎಸ್‌ ವಿರೋಧಿಸಿತ್ತು. ಆದರೆ ಇದೀಗ ಕಾಂಗ್ರೆಸ್ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡ ಕಾರಣದಿಂದಾಗಿ ಈ ಬಾರಿಯೂ ಟಿಪ್ಪು ಜಯಂತಿ ಸರಕಾರದ ವತಿಯಿಂದ ನಡೆಯುವ ಮುನ್ಸೂಚನೆ ಸಿಕ್ಕಿದೆ.!

ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲು ಜಮೀರ್ ಚಿಂತನೆ..!

ಜೆಡಿಎಸ್‌ ನಿಂದ ಹೊರಬಂದ ಜಮೀರ್ ಅಹ್ಮದ್ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದನು. ಪದೇ ಪದೇ ವಿವಾದಾತ್ಮಕವಾಗಿ ಹೇಳಿಕೆ ನೀಡುತ್ತಲೇ ಸುದ್ದಿಯಾಗುತ್ತಿದ್ದ ಜಮೀರ್, ಇದೀಗ ಮತ್ತೊಂದು ವಿವಾದಾತ್ಮಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಯಾಕೆಂದರೆ ಬೆಂಗಳೂರಿನಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಮುಸ್ಲೀಮರಿಗಾಗಿ ಹಜ್ ಭವನವನ್ನು ಸರಕಾರದ ಅನುದಾನದಿಂದ ಕಟ್ಟಿಸಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಆದರೂ ಹಜ್ ಭವನ ಉದ್ಘಾಟಿಸಿದ ಸಿದ್ದರಾಮಯ್ಯ, ಹಜ್ ಯಾತ್ರಿಕರಿಗೆ ಸಹಕಾರಿಯಾಗುವಂತೆ ಮಾಡಿದ್ದರು. ಆದರೆ ಇದೀಗ ಈ ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವಂತೆ ಮನವಿ ಮಾಡಲು ಸಚಿವ ಜಮೀರ್ ಅಹ್ಮದ್ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.!

ಟಿಪ್ಪು ಸುಲ್ತಾನ್ ಮುಸ್ಲೀಮರ ನಾಯಕ, ಹಜ್ ಭವನ ಮುಸ್ಲೀಮರಿಗಾಗಿ ಇರುವಂತಹ ಒಂದು ವ್ಯವಸ್ಥೆ. ಆದ್ದರಿಂದ ಸರಕಾರದ ಈ ಭವನಕ್ಕೆ ಟಿಪ್ಪು ಸುಲ್ತಾನ್‌ನ ಹೆಸರಿಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಲು ತಯಾರಿ ನಡೆಸಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಮಾಹಿತಿ ನೀಡದ ಜಮೀರ್,ಟಿಪ್ಪು ಸುಲ್ತಾನ್ ಅವರ ಹೆಸರನ್ನು ಹಜ್ ಭವನಕ್ಕೆ ಇಡುವಂತೆ ಮುಸ್ಲಿಂ ಧರ್ಮಗುರುಗಳು ಹೇಳಿದ್ದಾರೆ, ಆದ್ದರಿಂದ ಹೆಸರನ್ನೇ ಇಡಲು ಸಿಎಂ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸುತ್ತೇನೆ, ಅದಕ್ಕೆ ಒಪ್ಪಿಗೆ ನೀಡುವುದು ಬಿಡುವುದು ಅವರಿಗೆ ಬಿಟ್ಟಿದ್ದು ಎಂದು ಹೇಳಿಕೊಂಡಿದ್ದಾರೆ.!

ಮತ್ತೊಮ್ಮೆ ಅಶಾಂತಿಗೆ ಕಾರಣರಾಗುತ್ತಾರಾ ಸಿಎಂ ಕುಮಾರಸ್ವಾಮಿ..?

ಸಿದ್ದರಾಮಯ್ಯನವರ ಆಡಳಿತದಲ್ಲಿ ಇಡೀ ರಾಜ್ಯದಲ್ಲಿ ನರಕದ ವಾತಾವರಣ ಸೃಷ್ಟಿಯಾಗಿತ್ತು. ಅಂದು ಕುಮಾರಸ್ವಾಮಿ ಅವರು ಟಿಪ್ಪು ಜಯಂತಿಯನ್ನು ವಿರೋಧಿಸಿ, ಇದೀಗ ಮೈತ್ರಿ ಮಾಡಿಕೊಂಡ ಕಾರಣಕ್ಕಾಗಿ ಕಾಂಗ್ರೆಸ್ ಮನವಿಗೆ ಮಣಿಯುತ್ತಾರ ಎಂಬುದು ಕುತೂಹಲ. ಯಾಕೆಂದರೆ ಜಮೀರ್ ಅಹ್ಮದ್ ಮತ್ತು ಕುಮಾರಸ್ವಾಮಿ ಅವರು ಒಂದೇ ಪಕ್ಷದಲ್ಲಿದ್ದಾಗ ಇಬ್ಬರ ನಡುವೆ ಅಸಮಧಾನ ಉಂಟಾಗಿ ಜಮೀರ್ ಜೆಡಿಎಸ್‌ ತೊರೆದಿದ್ದರು. ಈ ಸಂದರ್ಭದಲ್ಲಿ ಪರಸ್ಪರ ವಾಗ್ದಾಳಿ ನಡೆಸಿದ್ದ ಜಮೀರ್ ಮತ್ತು ಕುಮಾರಣ್ಣ ಇದೀಗ ಒಟ್ಟಾಗಿದ್ದಾರೆ. ಆದರೆ ಟಿಪ್ಪು ಜಯಂತಿಯ ವಿಚಾರವಾಗಿ ಸಿಎಂ ಕುಮಾರಸ್ವಾಮಿ ಅವರ ನಿರ್ಧಾರ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಆದ್ದರಿಂದ ಸಿದ್ದರಾಮಯ್ಯನವರು ಮಾಡಿದ ತಪ್ಪನ್ನೇ ಮತ್ತೊಮ್ಮೆ ಕುಮಾರಸ್ವಾಮಿ ಅವರೂ ಕೂಡ ಮಾಡುತ್ತಾರಾ ಎಂಬೂದೇ ಕುತೂಹಲ.!

ಟಿಪ್ಪು ಸುಲ್ತಾನ್ ವಿಚಾರವಾಗಿ ಯಾರೇ ಕೈಹಾಕಿದರೂ ಅವರು ಉದ್ಧಾರವಾದ ಉದಾಹರಣೆಯೇ ಇಲ್ಲ. ಆದ್ದರಿಂದಲೇ ಸಿದ್ದರಾಮಯ್ಯನವರು ಚುನಾವಣೆಯಲ್ಲಿ ಹೀನಾಯವಾಗಿ ಸೋಲನುಭವಿಸಿದರು. ಇದೀಗ ಕುಮಾರಸ್ವಾಮಿ ಅವರೂ ಕೂಡ ಇದೇ ತಪ್ಪು ಮಾಡುತ್ತಾರೆಯೇ ಇಲ್ಲವೇ ಎಂಬುದು ಕಾದು ನೋಡಬೇಕಾಗಿದೆ..!

–ಅರ್ಜುನ್

Tags

Related Articles

Close