ಪ್ರಚಲಿತ

ಸಿ ಎಂ ಗೆ ತಿರುಗಿ ಬಿದ್ದ ವೀರಶೈವ-ಲಿಂಗಾಯತ ಸಮಾಜ! ವೈಯಕ್ತಿಕ ಲಾಭಕ್ಕಾಗಿ ವೀರಶೈವ-ಲಿಂಗಾಯತರ ದಾರಿ ತಪ್ಪಿಸಿದರಾ ಸಿಎಂ?!

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ “ನನ್ನ ಹೆಸರಲ್ಲೂ ರಾಮನಿದ್ದಾನೆ, ನಾನೊಬ್ಬ ಹಿಂದೂ” ಎಂದು ಹೇಳಿಕೊಂಡೇ ಆರಂಭದಿಂದಲೂ ಹಿಂದೂ ಧರ್ಮವನ್ನು ಒಡೆದು ಹಾಕಲು ಶತ ಪ್ರಯತ್ನ ಪಟ್ಟಿರುವ ಇವರು, ಇದೀಗ ವೀರಶೈವ-ಲಿಂಗಾಯತರ ಮಧ್ಯೆ ಕಲಹವನ್ನು ಸೃಷ್ಟಿಸಿ, ಲಿಂಗಾಯಿತ ಮತ್ತು ವೀರಶೈವರನ್ನು ತನ್ನ ವೈಯಕ್ತಿಕ ಲಾಭಕ್ಕಾಗಿಯೇ ಒಡೆದು ಸಮಾಜದ ದಾರಿ ತಪ್ಪಿಸಿದ್ದರಾ ಎನ್ನುವ ಪ್ರಶ್ನೆ ಇದೀಗ ಎಲ್ಲೆಡೆ ಕೇಳಲಾರಂಭಿಸಿದೆ.

ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಮಾಡಿರುವ ಅನಾಚಾರಗಳು ಮಾತ್ರ ಅಷ್ಟಿಷ್ಟಲ್ಲ!! ಹಿಂದೂಗಳಿಗೊಂದು ನ್ಯಾಯ, ಅಲ್ಪಸಂಖ್ಯಾತರಿಗೊಂದು ನ್ಯಾಯ ಎಂದು ಸಮಾಜಘಾತುಕ ಕೃತ್ಯಗಳಿಗೆ ಕೈಜೋಡಿಸುತ್ತಿರುವ ಸಿಎಂ ಸಿದ್ದರಾಮಯ್ಯನವರು ಕರ್ನಾಟಕದಲ್ಲಿ ತುಘಲಕ್ ದರ್ಬಾರ್ ನಡೆಸಿದ್ದಂತೂ ಅಕ್ಷರಶಃ ನಿಜ!! ಈಗಾಗಲೇ ಮುಸಲ್ಮಾನರ ಓಲೈಕೆಯಲ್ಲಿ ತೊಡಗಿದ್ದ ಮುಖ್ಯಮಂತ್ರಿಗಳು ಅದ್ಯಾವ್ಯಾವ ಭಾಗ್ಯಗಳನ್ನು ಕರುಣಿಸಿದರು ಎಂದರೆ ಹಿಂದೂಗಳನ್ನು ಮೂಲೆಗುಂಪು ಮಾಡಿ ಮುಸಲ್ಮಾನರೇ ಈ ದೇಶದ ಆಸ್ತಿ ಎನ್ನುವಂತೆ ಹಿಂದೂ ಮತ್ತು ಮುಸಲ್ಮಾನರ ನಡುವೆ ತಾರತಮ್ಯಗಳನ್ನು ಸೃಷ್ಟಿಸಿ ಹಿಂದೂಗಳು ಕರ್ನಾಟಕದಲ್ಲಿ ಇದ್ದೂ…. ಇಲ್ಲದಂತಾಗಿದ್ದು ಮಾತ್ರ ಖಂಡಿತಾ..

ಆದರೆ, ಅಣ್ಣ-ತಮ್ಮಂದಿರಂತಿದ್ದ ‘ಲಿಂಗಾಯತ ಮತ್ತು ವೀರಶೈವ’ ರನ್ನೇ ಬೇರ್ಪಡಿಸಿ ಪ್ರತ್ಯೇಕ ಧರ್ಮವನ್ನು ಕಲ್ಪಿಸುವಲ್ಲಿ ಯಶಸ್ವಿಯಾದಂತೆ ಬೀಗುತ್ತಿರುವ
ಸಿದ್ದರಾಮಯ್ಯನವರು, ‘ಲಿಂಗಾಯತ ಮತ್ತು ವೀರಶೈವ ಲಿಂಗಾಯತ (ಬಸವ ತತ್ತ್ವದಲ್ಲಿ ನಂಬಿಕೆಯುಳ್ಳವರು)’ ಎಂಬ ಹೆಸರಿನಡಿ ಲಿಂಗಾಯತರಿಗೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡಿರುವ ತೀರ್ಮಾನ ಯಾರಿಗೂ ಸಮಾಧಾನ ತಂದಿಲ್ಲವೇ ಎನ್ನುವ ಪ್ರಶ್ನೆಯೊಂದು ರಾಜ್ಯದ ವೀರಶೈವ-ಲಿಂಗಾಯತ ಸಮಾಜದ ಮುಖಂಡರು ಹಾಗೂ ಮಠಾಧೀಶರಲ್ಲಿ ಮೂಡಿದೆ.

ಹೌದು… “ಎರಡೂ ಗುಂಪುಗಳನ್ನು ಸಮಾಧಾನಪಡಿಸುವ ನಿಟ್ಟಿನಲ್ಲಿ ಕೈಗೊಂಡ ನಿರ್ಣಯದಿಂದ ಪ್ರತ್ಯೇಕ ಧರ್ಮವೂ ಆಗುವುದಿಲ್ಲ, ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನವೂ ಸಿಗುವುದಿಲ್ಲ!! ಇದು ಕೇವಲ ರಾಜಕೀಯ ಕಾರಣಗಳಿಗಾಗಿ ಈ ಬಗೆಯ ತೀರ್ಮಾನ ಕೈಗೊಳ್ಳಲಾಗಿದೆಯೇ ಹೊರತು ವಾಸ್ತವವಾಗಿ ಇದು ಸಾಧ್ಯವಾಗದ ಮಾತು” ಎಂದು, ರಾಜ್ಯದ ವೀರಶೈವ-ಲಿಂಗಾಯತ ಸಮಾಜದ ಮುಖಂಡರು ಹಾಗೂ ಮಠಾಧೀಶರಿಂದಲೇ ಕೇಳಿಬರುತ್ತಿದೆ!!

ತನ್ನ ರಾಜಕೀಯ ಲಾಭಕ್ಕಾಗಿ ಶೇಕಡಾ 17 ರಷ್ಟಿದ್ದ ಲಿಂಗಾಯತ ಹಾಗೂ ವೀರಶೈವರನ್ನು ಒಡೆದು ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಮೂಲಕ ಅವರಿಗೆ ಸವಲತ್ತು ನೀಡುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಂಬಿ ಪಾಟೀಲ್ ಹಾಗೂ ವಿನಯ ಕುಲಕರ್ಣಿ ಅವರ ರಾಜಕೀಯ ಷಡ್ಯಂತ್ರಕ್ಕೊಳಗಾಗಿ ಲಿಂಗಾಯತ ಹಾಗೂ ವೀರಶೈವರನ್ನು ಒಡೆದು ಪ್ರತ್ಯೇಕ ಧರ್ಮ ಮಾಡಿ ಅದರ ಅನುಕೂಲವನ್ನು ತಾನು ಪಡೆಯಬೇಕೆಂಬ ಹಂಬಲವನ್ನು ಕಾಂಗ್ರೆಸ್ ನಾಯಕರು ಹೊತ್ತಿದ್ದಂತೂ ನಿಜ. ಇದಕ್ಕಾಗಿ ಹಲವಾರು ಸಭೆ ಸಮಾರಂಭಗಳನ್ನು ಮಾಡಿದ್ದರಲ್ಲದೇ, ಕಂದಕಗಳು ಸೃಷ್ಟಿಯಾಗಲು ಹಲವಾರು ಸಮಾವೇಶಗಳನ್ನೇ ನಡೆಸಿದ್ದರು. ಅಷ್ಟೇ ಅಲ್ಲದೇ ಪ್ರತ್ಯೇಕ ಧರ್ಮದ ಕಿಚ್ಚು ಹಚ್ಚುವಂತೆ ಮಾಡಿದ್ದ ಸಿದ್ದರಾಮಯ್ಯ ಸರ್ಕಾರವು ಲಿಂಗಾಯತ ವೀರಶೈವರನ್ನು ಪ್ರತ್ಯೇಕಿಸಲು ತುದಿಗಾಲಿನಲ್ಲಿ ನಿಂತಿದ್ದಂತೂ ಅಕ್ಷರಶಃ ನಿಜ.

ಹೀಗಿರಬೇಕಾದರೆ, ಸರ್ಕಾರದದ ನಡೆ ಸ್ಪಷ್ಟವಾಗಿಲ್ಲದ ಕಾರಣ ಇರುವುದರಿಂದ ಯಾರಿಗೂ ಈ ಬಗ್ಗೆ ಸಮಧಾನವಿಲ್ಲ. ಇದುವರೆಗೂ ಅಣ್ಣ ತಮ್ಮಂದಿರಂತೆ ಇದ್ದ ವೀರಶೈವ-ಲಿಂಗಾಯತ ಸಮಾಜದ ನಡುವೆ ಒಡಕು ಮೂಡಿಸಿ ವಿಷ ಬೀಜ ಬಿತ್ತಿರುವ ಸಿದ್ದರಾಮಯ್ಯ ಸರ್ಕಾರವು ಎರಡೂ ಸಮಾಜದ ಮುಖಂಡರು ಹಾಗೂ ಮಠಾಧೀಶರ ನಡುವೆ ಭಿನ್ನಾಭಿಪ್ರಾಯ ಮೂಡಿಸಿ ಬೀದಿಗೆ ತಂದು ಬಿಟ್ಟಿರುವುದರೇ ಇವರ ಸಾಧನೆ. ಈ ಬಗ್ಗೆ ಎರಡೂ ಸಮಾಜದ ಮುಖಂಡರು ಎಚ್ಚರಿಕೆಯಿಂದ ಇರಬೇಕೆಂಬ ಅನಿಸಿಕೆಗಳು ಇದೀಗ ಕೇಳಿ ಬರುತ್ತಿವೆ.

ಅಷ್ಟೇ ಅಲ್ಲದೇ, ”ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಂದಿನ ಸಂಪುಟ ಸಭೆಯ ನಿರ್ಣಯದ ಭವಿಷ್ಯ (ಸತ್ಯ) ಏನೆಂಬುದು ಸ್ಪಷ್ಟವಾಗಿ ಗೊತ್ತಿದ್ದರೂ
ವೀರಶೈವ-ಲಿಂಗಾಯತರ ಹಾದಿ ತಪ್ಪಿಸಿದ್ದಾರೆ. ಅಷ್ಟೇ ಅಲ್ಲ ವೀರಶೈವ-ಲಿಂಗಾಯತರನ್ನು ವ್ಯವಸ್ಥಿತವಾಗಿ ದೂರ ಮಾಡಿ ತಮ್ಮ ರಾಜಕೀಯ ಬೇಳೆ
ಬೇಯಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ,” ಎನ್ನುವ ಅಭಿಪ್ರಾಯಗಳು ಎಲ್ಲೆಡೆ ಕೇಳಿ ಬರುತ್ತಿವೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಂ.ಬಿ.ಪಾಟೀಲ್, ವಿನಯ ಕುಲಕರ್ಣಿ, ಡಾ. ಶರಣ ಪ್ರಕಾಶ್ ಪಾಟೀಲ್, ಬಸವರಾಜ ರಾಯರೆಡ್ಡಿ ಅವರು ಲಿಂಗಾಯತ-ವೀರಶೈವರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನವೇ ದೊರೆತಿದೆ ಎಂದು ಬಿಂಬಿಸುತ್ತಿರುವುದು ಜತೆಗೆ ಹಲವು ಮಠಾಧೀರರು ಹಾಗೂ ಭಕ್ತವೃಂದ ಸಂಭ್ರಮಾಚರಣೆ ಇಲ್ಲವೇ ವಿಜಯೋತ್ಸವದಲ್ಲಿ ತೊಡಗಿರುವುದನ್ನು ನೋಡಿದರೆ ಇಡೀ ಸಮಾಜವನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕೆಲವರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಆದರೆ ಪ್ರತ್ಯೇಕ ಧರ್ಮ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನದ ತೀರ್ಮಾನ ಕೈಗೊಳ್ಳುವ ನಿರ್ಣಯ ಅಂತಿಮವಾಗಿ ಕೇಂದ್ರ ಸರಕಾರಕ್ಕೆ ಬಿಟ್ಟದ್ದು. ಹಾಗಾಗಿ ರಾಜ್ಯ ಸರ್ಕಾರದ ಪಾತ್ರ ಕೇವಲ ಶಿಫಾರಸು ಅಷ್ಟೆ. ಆದರೆ ಕಾಂಗ್ರೆಸ್ಸಿಗರು ಮಾಡುತ್ತಿರುವ ಸಂಭ್ರಮವನ್ನು ನೋಡುತ್ತಿದ್ದರೆ ಲಿಂಗಾಯತ-ವೀರಶೈವರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನವೇ ದೊರೆತಿದೆ ಎನ್ನುವಂತೆ ಎಲ್ಲೆಡೆ ಬೊಬ್ಬಿರಿಯುತ್ತಿದ್ದಾರೆ.

ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜತೆ ಒಕ್ಕಲಿಗರು, ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಕುರುಬರು ಇರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಜತೆ ಲಿಂಗಾಯತರು ಗುರುತಿಸಿಕೊಂಡಿದ್ದಾರೆ. ಆದರೆ ಬಿಜೆಪಿಯ ರಾಷ್ಟ್ರೀಯ ನಾಯಕರು ಬಿ.ಎಸ್. ಯಡಿಯೂರಪ್ಪನವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದ್ದಲ್ಲದೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದು ಸಿದ್ದರಾಮಯ್ಯನವರ ನಿದ್ದೆಗೆಡಿಸಿದೆ!! ಇದರಿಂದಾಗಿ ಸಿದ್ದರಾಮಯ್ಯನವರು ಉರುಳಿಸಿದ ದಾಳವೇ ಲಿಂಗಾಯತ-ವೀರಶೈವರ ನಡುವೆ ಒಡಕುಂಟು ಮಾಡುವುದು!!

ಹಾಗಾಗಿ ಬಿಜೆಪಿಯು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಿಸಿರುವುದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಇಡೀ ಲಿಂಗಾಯತ ಸಮುದಾಯ ಯಡಿಯೂರಪ್ಪ ಪರ ನಿಲ್ಲಬಹುದು ಎಂಬ ಏಕೈಕ ಕಾರಣದಿಂದ ಲಿಂಗಾಯತ ಸಮುದಾಯದ ಮತಗಳನ್ನು ವಿಭಜಿಸುವ ರಾಜಕಾರಣದ ತಂತ್ರವಾಗಿ ಕಾಂಗ್ರೆಸ್ ಸರ್ಕಾರ ಲಿಂಗಾಯತರಿಗೆ ಪ್ರತ್ಯೇಕ ಧರ್ಮ- ಅಲ್ಪಸಂಖ್ಯಾತ ಸ್ಥಾನಮಾನದ ನಾಟಕವಾಡಿದೆ!!

ಸಿದ್ದರಾಮಯ್ಯನವರ ಸ್ವಹಿತಾಸಕ್ತಿಗಾಗಿ ಪ್ರತ್ಯೇಕ ಧರ್ಮದ ದಾಳ ಬೀಸಿದ್ದು, ಈ ವಿಚಾರಗಳನ್ನು ಲಿಂಗಾಯಿತರು ಸೇರಿ ಎಲ್ಲರೂ ಅರ್ಥ ಮಾಡಿಕೊಂಡು ಸತ್ಯವನ್ನು ಅರಿಯಬೇಕಾಗಿದೆ. ಈಗಾಗಲೇ ರಾಜ್ಯದಲ್ಲಿ ಒಟ್ಟು ಹಿಂದೂಗಳ ಸಂಖ್ಯೆ 2011ರಲ್ಲಿ ಶೇಕಡಾ 84ರಷ್ಟಿದ್ದು, ಹಿಂದೂಗಳಿಂದ ಲಿಂಗಾಯತರನ್ನು ವಿಭಜಿಸಿದರೆ ಹಿಂದೂಗಳ ಸಂಖ್ಯೆ 67%ಕ್ಕೆ ಕುಸಿತ ಕಾಣಲಿದೆ. ಇದು ಕಾಂಗ್ರೆಸ್‍ಗೆ ಭಾರೀ ಲಾಭವನ್ನು ತಂದು ಕೊಡಲಿದೆ ಎಂಬುವುದು ಪಕ್ಷದ ಆಂತರಿಕ ಲೆಕ್ಕಾಚಾರವಾಗಿದೆ. ಅದನ್ನು ಹೊರತು ಪಡಿಸಿ ಸಿದ್ದರಾಮಯ್ಯನವರಿಗೆ ಈ ಸಮಾಜದ ಮೇಲೆ ನಿಜವಾದ ಕಾಳಜಿ ಇಲ್ಲ ಎಂಬುದನ್ನು ವೀರಶೈವ-ಲಿಂಗಾಯತರು ಅರ್ಥ ಮಾಡಿಕೊಳ್ಳಬೇಕಾಗಿದೆ!!

– ಅಲೋಖಾ

Tags

Related Articles

Close