ಪ್ರಚಲಿತ

ನಮಗೆ ದೇಶ ಮೊದಲು: ಎಸ್. ಜೈಶಂಕರ್

ಪ್ರಸ್ತುತ ಭಾರತದ ನೀತಿ ನಿಯಮಗಳಲ್ಲಿ ಸಾಕಷ್ಟು ಧನಾತ್ಮಕ ಪರಿಣಾಮಗಳಾಗಿವೆ. ಈ ಹಿಂದೆ ನಂಬಿಕೆ ಮತ್ತು ಓಟ್ ಬ್ಯಾಂಕ್ ಮೊದಲಾದ ವಿಷಯಗಳು ಭಾರತದ ನೀತಿಯ ಮೇಲೆ ಪ್ರಭಾವ ಬೀರಿದ್ದವು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈ ಶಂಕರ್ ಅವರು ತಿಳಿಸಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ದೊರೆತ ಆರಂಭಿಕ ವರ್ಷಗಳಲ್ಲಿ ನಮ್ಮ ದೇಶದ ನೀತಿ ನಿರೂಪಕರು ಮಾಡಿದ ನಿರ್ಣಯಗಳು ಭಾರತವನ್ನು ದೀರ್ಘಾವಧಿಯ ಸಮಸ್ಯೆಗಳಿಗೆ ನೂಕಿತ್ತು. ನಾವು ಪ್ರಪಂಚಕ್ಕಾಗಿ ಹಲವಾರು ಕೆಲಸಗಳನ್ನು ಮಾಡುತ್ತೇವೆ. ಆದರೆ ನಮ್ಮ ದೇಶದ ಹಿತಾಸಕ್ತಿಗಳನ್ನು ಬಲಿಕೊಟ್ಟು ಏನನ್ನೂ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ನಾವು ದೇಶದ ಹಿತವನ್ನು ಗಮನದಲ್ಲಿ ಇರಿಸಿಕೊಂಡು ಇಂಡಿಯಾ ಫಸ್ಟ್ ಮತ್ತು ವಸುದೈವ ಕುಟುಂಬಕಂ ಎಂಬುದು ಒಂದೇ ನಾಣ್ಯದ ಎರಡು ಮುಖಗಳಿದ್ದ ಹಾಗೆ. ನಮ್ಮ ಮೊದಲ ಆದ್ಯತೆ ಭಾರತವೇ ಆಗಿದೆ ಎಂಹುದಾಗಿಯೂ ಸಚಿವರು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಇಸ್ರೇಲ್ ಜೊತೆಗೆ ಭಾರತ ಇಟ್ಟುಕೊಂಡ ಸಂಬಂಧವನ್ನು ಉದಾಹರಣೆಗಾಗಿ ನೀಡಿದ ಅವರು, 1992 ರ ವರೆಗೆ ಇಸ್ರೇಲ್ ನಲ್ಲಿ ನಮ್ಮ ರಾಷ್ಟ್ರವು ರಾಯಭಾರ ಕಚೇರಿಯನ್ನು ಹೊಂದಿರಲಿಲ್ಲ. ಈ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ಮೊದಲು ಯಾವ ಪ್ರಧಾನಿ ಸಹ ಆ ದೇಶಕ್ಕೆ ಭೇಟಿ ನೀಡಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಇಸ್ರೇಲ್‌ನಂತಹ ದೇಶದ ಬಗ್ಗೆ ಚಿಂತಿಸಲು ಹೇಳಿದ ಅವರು, ಜನರು ಎಲ್ಲರೂ ಒಂದೇ ಎಂದು ಹೇಳುತ್ತಾರೆ. ನಾವು ಯಾವುದೇ ರೀತಿಯ ಚರ್ಚೆಯಲ್ಲಿ ನಂಬಿಕೆ ಇಡಬಾರದು ಎಂದಿದ್ದಾರೆ. ಇಸ್ರೇಲ್ ರಾಷ್ಟ್ರವು 1948 ರಲ್ಲಿ ಸ್ವಾತಂತ್ರ್ಯ ಹೊಂದಿತು. 1992 ರ ವರೆಗೆ ನಾವು ಇಸ್ರೇಲ್ ನಲ್ಲಿ ರಾಯಭಾರ ಕಚೇರಿಯನ್ನು ಹೊಂದಿರಬಾರದು ಎಂದು ನಿರ್ಧಾರ ಮಾಡಿದ್ದೆವು. ಆದರೆ ಈಗ ನಾವು ರಾಯಭಾರ ಕಚೇರಿ ಹೊಂದಿದ್ದೇವೆ. ಪ್ರಧಾನಿ ಮೋದಿ ಅವರಿಗೂ ಮೊದಲು ಯಾವ ಪ್ರಧಾನಿಯೂ ಆ ರಾಷ್ಟ್ರಕ್ಕೆ ಭೇಟಿ ನೀಡಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

Tags

Related Articles

Close