ಪ್ರಚಲಿತ

ಕಾಶ್ಮೀರದಲ್ಲಿ ಉರುಳಿದ ಮತ್ತೆರಡು ಉಗ್ರರ ರುಂಡ! ಅಮರನಾಥ ಯಾತ್ರೆಗೆ ವಿಘ್ನ ಸಂಚು ಠುಸ್! ಭಾರತೀಯ ಸೇನೆಯ ಕಾರ್ಯಾಚರಣೆಗೆ ಬೆಚ್ಚಿ ಬಿದ್ದ ಇಸ್ಲಾಂ ಕನಸುಗಾರರು..!

ಇಡೀ ಜಗತ್ತನ್ನೇ ಗೆದ್ದು ಸಂಪೂರ್ಣ ಇಸ್ಲಾಮೀಕರಣ ಮಾಡುತ್ತೇವೆ ಎಂದು ಹೊರಟಿರುವ ಪಾಕಿಸ್ಥಾನದ ಪಾಪಿ ಉಗ್ರರಿಗೆ ಸ್ವರ್ಗದ (ಭಾರತದ) ಸೈನಿಕರು ನರಕದ ಹಾದಿ ತೋರಿಸಿದ್ದಾರೆ. ಭಾರತೀಯ ಸೈನಿಕರ ಮೇಲೆ ಗುಂಡು ಹಾರಿಸಲು ಬಂದ ಇಬ್ಬರು ಉಗ್ರರನ್ನು ಭಾರತೀಯ ಸೈನಿಕರು ಹೊಡೆದುರುಳಿಸಿದ್ದಾರೆ.

ಕುಲ್ಗಾಮ್​ನ ಚಾಡರ್‌ ಪ್ರದೇಶದಲ್ಲಿ ಯೋಧರ ಬೆಂಗಾವಲು ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದು, ಸೇನೆಯು ಪ್ರತಿದಾಳಿ ನಡೆಸಿದೆ. ಭಾರತೀಯ ಯೋಧರ ಮೇಲೆ ದಾಳಿಮಾಡಲು ಬಂದಂತಹ ಉಗ್ರರನ್ನು ಕರುಣೆ ತೋರದೆ ಹೆಡೆಮುರಿ ಕಟ್ಟಿದ್ದಾರೆ.

ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ ಡಿಜಿಪಿ ಉಗ್ರ ಸಂಹಾರವನ್ನು ದೃಢ ಪಡಿಸಿದ್ದಾರೆ. ಸದ್ಯ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಇಬ್ಬರು ಉಗ್ರರನ್ನು ಹತ್ಯೆ ಮಾಡಿರುವುದಾಗಿ ಜಮ್ಮು ಕಾಶ್ಮೀರದ ಡಿಜಿಪಿ ಶೇಶ್‌ ಪೌಲ್‌ ತಿಳಿಸಿದ್ದಾರೆ.

ಕುಲ್ಗಾಮ್‌ ಜಿಲ್ಲೆಯಾದ್ಯಂತ ಅಂತರ್ಜಾಲ ಸೇವೆಯನ್ನು ಸ್ಥಳಿಗತಗೊಳಿಸಲಾಗಿದೆ. ಉಗ್ರರು ಲಷ್ಕರ್‌ ಎ ತೊಯ್ಬಾ ಸಂಘಟನೆ ಸೇರಿದವರಾಗಿದ್ದಾರೆ ಎನ್ನಲಾಗಿದ್ದು ಮತ್ತೆ ಕಾರ್ಯಾಚರಣೆ ಮುಂದುವರೆದಿದೆ.

Image result for terrerist attack to amarnathyatra

ಜೂನ್ 28 ರಿಂದ ಆರಂಭವಾಗುವ ಅಮರನಾಥ ಯಾತ್ರೆಗೆ ಮುನ್ನ ರಾಷ್ಟ್ರೀಯ ಹೆದ್ದಾರಿ ತೆರವುಗೊಳಿಸಲು ಜಮ್ಮು ಕಾಶ್ಮೀರದ ಪೊಲೀಸರು, ಸಿಆರ್‌ಪಿಎಫ್ ಮತ್ತು ಯೋಧರು ಕಾರ್ಯಾಚರಣೆ ನಡೆಸುತ್ತಿದ್ದಾಗ ಮಧ್ಯಾಹ್ನದ ವೇಳೆಗೆ ಎನ್‌ಕೌಂಟರ್‌ ಪ್ರಾರಂಭವಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳ ಹಿಂದೆ ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ಜೊತೆ ಮೈತ್ರಿ ಮಾಡಿಕೊಂಡು ಭಾರತೀಯ ಜನತಾ ಪಕ್ಷ ಸರಕಾರ ರಚಿಸಿತ್ತು. ಮೈತ್ರಿ ಸರಕಾರದಲ್ಲಿ ಪಿಡಿಪಿ ಮುಖ್ಯಸ್ಥೆ ಮೆಹಬೂಬ್ ಮುಫ್ತಿ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಅಧಿಕಾರದಲ್ಲಿ ಬಿಜೆಪಿಯ ಪಾಲಿದ್ದರೂ ಕೂಡ ಮುಖ್ಯಮಂತ್ರಿಗಳ ಮೃದು ಧೋರಣೆಯಿಂದ ಕಾಶ್ಮೀರದಲ್ಲಿ ಭಯೋತ್ಪಾದಕರ ಅಟ್ಟಹಾಸ ಮುಂದುವರಿದಿತ್ತು. ಪಿಡಿಪಿಯ ಅಸಡ್ಡೆಯಿಂದಾಗಿ ಮೋದಿ ಸರಕಾರಕ್ಕೂ ಕಪ್ಪು ಚುಕ್ಕೆ ಬಂದಿದ್ದರಿಂದ ಇದೀಗ ನರೇಂದ್ರ ಮೋದಿ ಸರಕಾರ ಮಹತ್ತರವಾದ ನಿರ್ಧಾರ ಕೈಗೊಂಡು ಮೈತ್ರಿಯನ್ನು ಕಡಿತಗೊಳಿಸಿ ಜಮ್ಮು ಕಾಶ್ಮೀರದ ಅಧಿಕಾರದಿಂದ ಹೊರ ಬಂದಿದ್ದಾರೆ. ಉಗ್ರರನ್ನು ಮಟ್ಟಹಾಕಲೆಂದೇ ಮೋದಿ ಸರಕಾರ ಈ ನಿರ್ಧಾರ ಕೈಗೊಂಡಿದ್ದು ಇನ್ನು ಮುಂದೆ ಕಾಶ್ಮೀರದಲ್ಲಿ ಭಾರತೀಯ ಸೈನಿಕರ ನೈಜ ಸ್ವರೂಪ ಪ್ರದರ್ಶನವಾಗುವುದರಲ್ಲಿ ಸಂಶಯವಿಲ್ಲ.!

Image result for amarnathyatra

ಅಮರನಾಥ ಯಾತ್ರೆಯ ವೇಳೆ ವಿಧ್ವಂಸಕ ಕೃತ್ಯಗಳನ್ನು ಎಸೆದು ಹಿಂದೂ ಭಕ್ತರನ್ನು ಹತ್ಯೆಗೈವ ಸಂಚನ್ನು ಈ ಉಗ್ರ ಸಂಘಟನೆಗಳು ಹೊಂದಿದ್ದು ಇಂತಹ ಸಂಚುಗಳನ್ನು ಆರಂಭದಲ್ಲೇ ಅಂತ್ಯಕಾಣುವಂತೆ ಮಾಡುತ್ತಿದ್ದಾರೆ ಭಾರತೀಯ ಯೋಧರು. ಈವರೆಗೆ ಬರೋಬ್ಬರಿ ಪಿಡಿಪಿ-ಬಿಜೆಪಿ ಸರ್ಕಾರ ಅಂತ್ಯಗೊಂಡ ನಂತರ ಅಂದರೆ ರಾಷ್ಟ್ರಪತಿ ಆಳ್ವಿಕೆ ಆರಂಭವಾದ ನಂತರ ಬರೋಬ್ಬರಿ ೧೩ ಉಗ್ರರನ್ನು ಯೋಧರು ಹತ್ಯೆ ಮಾಡಿದ್ದಾರೆ. ಇದು ಮತ್ತಷ್ಟು ಮುಂದುವರೆಯುವುದು ನಿಸ್ಸಂಶಯ.

-ಸುನಿಲ್ ಪಣಪಿಲ

Tags

Related Articles

Close