ಪ್ರಚಲಿತ

ಶಿಕ್ಷಣ ಸಂಸ್ಥೆಗಳಿಗೆ ಬಿತ್ತು ಯೋಗಿ ಅಂಕುಶ!! ಯೋಗಿ ಆದಿತ್ಯನಾಥರ ರಾಜ್ಯದಲ್ಲಿ ಇನ್ನು ಬೇಕಾ ಬಿಟ್ಟಿ ಫೀಸು ಪೀಕುವಂತಿಲ್ಲ!!

ಉತ್ತರ ಪ್ರದೇಶದಲ್ಲಿ ಕಳೆದ ವರ್ಷ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾದಾಗ ಕೆಲವರು ಕೊಂಕು ನುಡಿದರು. ಈ ಯೋಗಿ ಹೇಗೆ ಸಮರ್ಥವಾಗಿ ರಾಜ್ಯವಾಳಬಲ್ಲರು ಎಂದು ಮೂಗು ಮುರಿದರು. ಟೀಕಾಕಾರರ ಟೀಕೆಗಳನ್ನು ಲೆಕ್ಕಿಸದೆ ಯೋಗಿ ಆದಿತ್ಯನಾಥರು ರಾಜ್ಯದಲ್ಲಿ ಉತ್ತಮವಾಗಿ ಆಡಳಿತ ನಡೆಸಿದ್ದಾರೆ. ಹಲವು ಸುಧಾರಣೆ ಜಾರಿಗೆ ತಂದಿದ್ದಾರೆ. ನೋಡ ನೋಡ ನೋಡತ್ತಿದ್ದಂತೇಯೇ ಉತ್ತರ ಪ್ರದೇಶದಲ್ಲಿ ಅಭೂತಪೂರ್ವ ಬದಲಾವಣೆಗಳಾಗುತ್ತಿರುವುದು ನೋಡಿ ಇಡೀ ದೇಶವೇ ನಿಬ್ಬೆರಗಾಗಿ ನೋಡುತ್ತಿದೆ!!

ರಾಜಕೀಯ ಸಂತನಾಗಿ ಮಾಡಿದ ಕಾರ್ಯಗಳು ಒಂದಾ ಎರಡಾ? ಇಡೀ ಉತ್ತರ ಪ್ರದೇಶವನ್ನೇ ಬದಲಾಯಿಸಿದ್ದರು.. ಇವರ ಕಾರ್ಯವೈಖರಿಯನ್ನು ಕೇಳಿ ಒಂದು ಬಾರಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವುದುಂಟು.. ಸತತ ಒಂದಲ್ಲ ಒಂದು ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಸುದ್ಧಿಯಲ್ಲಿದ್ದಾರೆ ನಮ್ಮ ಉತ್ತರ ಪ್ರದೇಶದ ಮುಖ್ಯಮಂತ್ರಿ!! ಶಿಕ್ಷಣ ಕ್ಷೇತ್ರದಲ್ಲಿ ಅಭೂತಪೂರ್ವ ಬದಲಾವಣೆಯನ್ನೇ ತರುತ್ತಿದ್ದಾರೆ!! ಈ ಬಾರಿ ಇಡೀ ಜಗತ್ತೇ ಮೆಚ್ಚುವಂತೆ ಯೋಗಿ ಆದಿತ್ಯನಾಥರು ಮಾಡಿದ ಮೋಡಿ ಏನು ಗೊತ್ತಾ?

Related image

ಖಾಸಗಿ ಶಾಲೆಗಳಿಗೆ ಕಡಿವಾಣ

ಖಾಸಗಿ ಶಾಲೆಗಳು ಶುಲ್ಕಗಳ ಹೆಸರಿನಲ್ಲಿ ಮಕ್ಕಳ ಹೆತ್ತವರನ್ನು ಸುಲಿಗೆ ಮಾಡುವ ಕೆಟ್ಟ ಸಂಸ್ಕೃತಿಗೆ ಕಡಿವಾಣ ಹಾಕಲು ನಿರ್ಧರಿಸಿರುವ ಉತ್ತರ ಪ್ರದೇಶ ಸರಕಾರ, ಸದ್ಯದಲ್ಲೇ ಖಾಸಗಿ ಶಾಲೆಗಳ ಶುಲ್ಕವನ್ನು ಸರಕಾರವೇ ನಿಗದಿಗೊಳಿಸುವ ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಿದೆ. “ಸ್ವವಿತಾಪೆÇೀಷಿತ್ ಸ್ವತಂತ್ರ ವಿದ್ಯಾಲಯ (ಶುಲ್ಕ ನಿರ್ಧರಣ್) ಅಧ್ಯಾದೇಶ್-2018′ ಎಂಬ ಹೆಸರಿನ ಈ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅನುಮತಿ ಸಿಕ್ಕರೆ, ಆ ರಾಜ್ಯದಲ್ಲಿ ವಿದ್ಯಾರ್ಥಿಗಳಿಂದ ವರ್ಷಕ್ಕೆ ಕನಿಷ್ಟ 20 ಸಾವಿರ ರೂ.ಗಳಷ್ಟು ಶುಲ್ಕವನ್ನು ವಸೂಲಿ ಮಾಡುತ್ತಿರುವ ಖಾಸಗಿ ಶಾಲೆಗಳಿಗೆ ಕಡಿವಾಣ ಬೀಳಲಿದೆ.!!

ರಾಜ್ಯದ ಪ್ರತಿ ವಲಯದಲ್ಲಿಯೂ ಶುಲ್ಕ ನಿಯಂತ್ರಣ ಸಮಿತಿಗಳು ಅಸ್ತಿತ್ವಕ್ಕೆ ಬರಲಿದ್ದು, ಆ ಸಮಿತಿಗಳು 1ನೇ ತರಗತಿಯಿಂದ ಪ್ರೌಢ ಶಾಲೆಗಳವರೆಗಿನ ಶಿಕ್ಷಣ ನೀಡುವ ಎಲ್ಲಾ ಶಿಕ್ಷಣ ಸಂಸ್ಥೆಗಳ ಶುಲ್ಕಗಳನ್ನು ನಿರ್ಧರಿಸುತ್ತವೆ. ಸಿಬಿಎಸ್‍ಇ, ಐಸಿಎಸ್‍ಇ ಪಠ್ಯಕ್ರಮ ಅಳವಡಿಸಿಕೊಂಡಿರುವ ಶಾಲೆಗಳು ಮಾತ್ರವಲ್ಲ, ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳೂ ಈ ಸಮಿತಿಗಳ ವ್ಯಾಪ್ತಿಯೊಳಗೆ ಬರಲಿವೆ. ಈ ಸಮಿತಿಯಲ್ಲಿ ಶಿಕ್ಷಣ ತಜ್ಞರು ಸೇರಿದಂತೆ, ವಿದ್ಯಾರ್ಥಿಗಳ ಪೆÇೀಷಕರ ವಲಯದ ಪ್ರತಿನಿಧಿಗಳೂ ಸದಸ್ಯರಾಗಿ ಇರಲಿದ್ದಾರೆ. ಈ ಪ್ರಾದೇಶಿಕ ಸಮಿತಿಗಳಿಗೆ ಎಲ್ಲಾ ಖಾಸಗಿ ಶಾಲೆಗಳೂ ತಮ್ಮ ವಾರ್ಷಿಕ ಆದಾಯದ ವರದಿಯನ್ನು ಸಲ್ಲಿಸಬೇಕಿರುತ್ತದೆ. ವರದಿ ಸಲ್ಲಿಸುವಲ್ಲಿ ಮೊದಲ ಬಾರಿ ವಿಫಲವಾದರೆ, 1 ಲಕ್ಷ ರೂ., ಪುನಃ ಪುನಃ ವಿಫಲವಾದರೆ ಅಂಥ ಪ್ರತಿ ಸಂದರ್ಭದಲ್ಲಿಯೂ 5 ಲಕ್ಷ ರೂ. ದಂಡ ವಿಧಿಸುವ ಅಧಿಕಾರವನ್ನು ಸಮಿತಿಗೆ ನೀಡಲಾಗಿದೆ.

ಸ್ವಲ್ಪ ದಿನಗಳ ಮುಂಚಿತವಾಗಿ ಉತ್ತರಪ್ರದೇಶದಲ್ಲಿ ಪರೀಕ್ಷೆ ನಕಲು ಮಾಡದಂತೆ ನಿರ್ಭಂದ ಹೇರಲಾಗಿತ್ತು!! ಅದರಲ್ಲಂತೂ ಅಭೂತಪೂರ್ವ ಯಶಸ್ಸನ್ನೇ ಕಂಡರು ಯೋಗಿ ಆದಿತ್ಯನಾಥರು.. ಇದೀಗ ಖಾಸಗಿ ಶಾಲೆಗಳ ಶುಲ್ಕವನ್ನು ಸರಕಾರವೇ ನಿಗದಿಗೊಳಿಸುವ ಸುಗ್ರೀವಾಜ್ಞೆ ಹೊರಡಿಸಿದೆ!!

source: udayavani

ಪವಿತ್ರ

Tags

Related Articles

Close