ಅಂಕಣಪ್ರಚಲಿತ

ಅಧಿಕಾರ ಸ್ವೀಕರಿಸಿ ಒಂದು ವರುಷ ಆಯ್ತು! ಯೋಗಿ ಆದಿತ್ಯನಾಥ್ ಸರಕಾರ ಕಳೆದೊಂದು ವರ್ಷದಲ್ಲಿ ಉತ್ತರ ಪ್ರದೇಶದಲ್ಲಿ ಮಾಡಿದ್ದೇನು ಗೊತ್ತೇ?!

ಈ ಪ್ರಶ್ನೆ ಯಾರಿಗೆ ಕಾಡುತ್ತೋ ಬಿಡುತ್ತೋ! ಆದರೆ, ಒಬ್ಬ ಹಿಂದೂ ಸಂತನ ವಿರುದ್ಧ ನಿಂತಿರುವ ವಿರೋಧಿಗಳಿಗೆ ಮಾತ್ರ ನಿದ್ದೆಯಲ್ಲಿಯೂ ಕನವರಿಕೆಯಾಗುವ ಹಾಗೆ ಯೋಗಿ ಸರಕಾರದ ಬಗ್ಗೆ ಆಲೋಚನೆಗಳೇಳುತ್ತಲೇ ಇರುತ್ತವೆ ಬಿಡಿ! ಯೋಗಿ ಆದಿತ್ಯನಾಥ್ ಅಧಿಕಾರ ಏರಿ ಒಂದು ವರ್ಷವಾಗಿ ಹೋಗಿದೆ! ಯಾವ್ಯಾವ ಕ್ಷೇತ್ರದಲ್ಲಿ ಯಾವ್ಯಾವ ಬದಲಾವಣೆಗಳನ್ನು ತರಲಾಗಿದೆ, ಯಾವ್ಯಾವ ಯೋಜನೆಗಳನ್ನು ತರಲಾಗಿದೆ ಎಂಬುದಕ್ಕಿಂತ, ಮುಂಚೆ ಇದ್ದ ಉತ್ತರ ಪ್ರದೇಶಕ್ಕೂ, ಪ್ರಸ್ತುತವಾದ ಉತ್ತರ ಪ್ರದೇಶಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ! ಯೋಗಿ ಆದಿತ್ಯನಾಥರ ಕಠಿಣವಾದ ಆಡಳಿತವೊಂದಿದೆಯಲ್ಲವಾ?! ಎಂತಹವರನ್ನೂ ಸಹ ಕೈ ಕಟ್ಟಿ ಕೂರಿಸುತ್ತದೆನ್ನುವುದು ಅಷ್ಟೇ ಸತ್ಯ ಕೂಡಾ! ಉತ್ತರ ಪ್ರದೇಶದಲ್ಲಿರಬೇಕೆಂದರೆ, ಯೋಗಿ ಯೋಗಿ ಎನ್ನಬೇಕು ಎನ್ನುವುದು ಮೇಲ್ನೋಟಕ್ಕೆನಿಸಿದರೂ, ಉತ್ತರ ಪ್ರದೇಶದ ಪರಿಸ್ಥಿತಿಗೆ ಅದು ಅನಿವಾರ್ಯ ಕೂಡಾ!

ಯಾಕೆ ಹೇಳುತ್ತಿದ್ದೇನೆಂದರೆ, ಕಳೆದ ಫೆಬ್ರುವರಿಯಲ್ಲಿ ಉತ್ತರ ಪ್ರದೇಶಕ್ಕೆ ಭೇಟಿ ನೀಡುವ ಅದಮ್ಯ ಅವಕಾಶವೊಂದು ಒದಗಿ ಬಂದಿತ್ತಷ್ಟೇ! ಉತ್ತರ ಪ್ರದೇಶ
ಅಷ್ಟು ಅಗಲವಿದೆ, ಇಷ್ಟು ಉದ್ದವಿದೆ ಎನ್ನುವುದನ್ನು ಹೊರತು ಪಡಿಸಿ, ಆಗ್ರಾದಿಂದ ಗಾಝಿಯಾಬಾದ್ ಹಾದು, ಕೊನೆಗೆ ಪಶ್ಚಿಮದ ಮೀರತ್ತಿನ ವರೆಗೆ, ಉತ್ತರದ ಫಿಲ್ಬಿಟ್ ನಿಂದ ಲಖೀಮ್ ಪುರದವರೆಗೆ, ಪೂರ್ವದ ಗೋರಖ್ ಪುರದ ತನಕ ಸುಮಾರು ೨೪೦೦ ಕಿ.ಮೀ ಪ್ರಯಾಣವೊಂದು ಸರಿಸುಮಾರು ೨೫ ರಿಂದ ೭೫ ಜಿಲ್ಲೆಯನ್ನು ನೋಡುವ, ಪರಿಸ್ಥಿತಿಯನ್ನು ಅವಲೋಕಿಸುವ ಮತ್ತು, ಯೋಗಿ ಸಾಮ್ರಾಜ್ಯದ ಆಡಳಿತ ವ್ಯವಸ್ಥೆ ಹೇಗಿರಬಹುದು ಎಂಬುದಕ್ಕೊಂದು ಜ್ವಲಂತ ಉದಾಹರಣೆಯಾಗಿ ನಿಲ್ಲುತ್ತದಷ್ಟೇ!

“Turning around Uttar Pradesh’s prospects is no mean task, but after one year in office, Chief Minister Yogi Adityanath is proving that he is firmly in command.”

ಮುಂಚೆ, ನಗರ ಭಾಗದಿಂದ ಹೊರಗಿದ್ದ ರಾಷ್ಟ್ರೀಯ ಹೆದ್ದಾರಿಗಳಲ್ಲಿಯೇ ರಾಜಾ ರೋಷವಾಗಿ ನಡೆಯುತ್ತಿದ್ದ ಅಪರಾಧಗಳು, ಹತ್ಯೆಗಳು, ಸ್ವಲ್ಪ ಗ್ರಾಮೀಣ
ಭಾಗದಿಂದ ದೂರವಾಗಿ ನಿರ್ಜನ ಎನ್ನಿಸಿದ ಪ್ರದೇಶದಲ್ಲಿ ನಡೆಯುತ್ತಿದ್ದ ಅತ್ಯಾಚಾರಗಳೆಲ್ಲ ಇವೆಯಲ್ಲ?! ಬಹುಷಃ ಯೋಗಿಯೆಂಬ ಸಂತ ಅಧಿಕಾರಕ್ಕೆ ಬರದಿದ್ಧರೆ ಇವತ್ತೂ ಸಹ ಮತ್ತದೇ ಸ್ಥಿತಿ ಇರುತ್ತಿತ್ತೇನೋ! ಹೊರಗಿನಿಂದ ಹೋದ ನಮಗೆ, ಉತ್ತರ ಪ್ರದೇಶದ ಸಮಸ್ಯೆಗಳ ಬಗ್ಗೆವ ಅಷ್ಟಾಗಿ ಅರಿವಾಗದೇ ಇದ್ದರೂ ಸಹ, ಫಿರೋಜಾಬಾದ್ ಅಥವಾ ಮೀರತ್ತಿನಲ್ಲಿ ವಾಸವಾಗಿರುವ ಉತ್ತರಪ್ರದೇಶಿಗನೊಬ್ಬ ಯೋಗಿಗೆ ಕೈ ಮುಗಿದು ನಿಲ್ಲುತ್ತಾನೆ! ಅಪರಾಧಿಗಳನ್ನು ಅಟ್ಟಾಡಿಸಿ ಹೊಡೆದದ್ದಲ್ಲದೇ, ಪ್ರತೀ ಶ್ರೀಸಾಮಾನ್ಯನ ದೂರಿಗೆ ಅಲ್ಲಿ ಸ್ಪಂದನೆಯಿದೆ! ಅದು, ಯಾವ ಮಾಧ್ಯಮಗಳು ತೋರಿಸಬಹುದೋ ಇಲ್ಲವೋ, ಆದರೆ ಉತ್ತರ ಪ್ರದೇಶವೊಂದು ಕಳೆದ ಮೂರು ದಶಕಗಳಲ್ಲಿ, ಯಾವತ್ತೂ ಸುರಕ್ಷಿತವಾಗಿರಲೇ ಇಲ್ಲ ಎಂಬುದನ್ನು ಮತ್ತು, ಯೋಗಿಯೆಲ್ಲಿರುತ್ತಾರೋ ಅಲ್ಲಿ ಸುರಕ್ಷತೆಯ ಅಭಯ ಹಸ್ತ ಕಾಯುತ್ತಲಿರುತ್ತದೆ ಎಂಬುವುದನ್ನು ಅಲ್ಲಿನ ಪ್ರಜೆಯ ಕೃತಜ್ಞತೆ ತುಂಬಿದ ಮುಖಭಾವಗಳು ತೋರಿಸುತ್ತದೆ!

ಉತ್ತರ ಪ್ರದೇಶದ ಪೋಲಿಸರ ಪ್ರಕಾರ, ೪೪ ನಟೋರಿಯಸ್ ಅಪರಾಧಿಗಳನ್ನು ಕೊಲ್ಲಲಾಗಿದೆ! ಮಾರ್ಚ್ ೨೦, ೨೧೦೭ ರಿಂದ ಮಾರ್ಚ್ ೫, ೨೦೧೮ ರ ವರೆಗೆ ಸರಾಸರಿ ೧,೩೨೨ ಎನ್ ಕೌಂಟರ್ ನಡೆದಿದೆ! ಅದೆಷ್ಟೇ, ಮಾನವ ಹಕ್ಕು ಹೋರಾಟಗಾರರೆನ್ನಿಸಿಕೊಂಡವರು, ಅಥವಾ ವಿವಿಧ ಸಂಘಟನೆಗಳ ಕಾರ್ಯಕರ್ತರು, ಮಾಧ್ಯಮಗಳು ಯೋಗಿ ಸರಕಾರದ ನಿರಂತರ ಎನ್ ಕೌಂಟರ್ ಬಗ್ಗೆ ಬೊಬ್ಬಿರಿದಿದ್ದರೂ ಸಹ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು, ಓ ಪಿ ಸಿಂಗ್ ಮಾತ್ರ, ಅಪರಾಧಿಗಳು ಒಂದೋ ಜೈಲಿಗೆ ಹೋಗಬೇಕು, ಇಲ್ಲವೇ ನಮ್ಮ ಗುಂಡಿಗೆ ಬಲಿಯಾಗಬೇಕು ಎಂದು ಸ್ಪಷ್ಟ ಪಡಿಸಿದ್ದಲ್ಲದೇ, ಯಾವುದೇ ಕಾರಣಕ್ಕೂ ಅಪರಾಧಿಗಳ ಎನ್ ಕೌಂಟರ್ ನಿಲ್ಲುವುದಿಲ್ಲ, ನಿಲ್ಲಿಸಲು ಸಾಧ್ಯವೂ ಇಲ್ಲ ವೆಂದು ಬಿಟ್ಟಿದ್ದಾರೆ! ಒಂದು ಅತಿ ಮುಖ್ಯವಾದ ಅಂಶವನ್ನು ಇಲ್ಲಿ ನೀವು ಗಮನಿಸಲೇ ಬೇಕು!! ಎನ್ ಕೌಂಟರ್ ಗಳ ಹೆಸರಿನಲ್ಲಿ ಸಾಕ್ಷ್ಯಗಳನ್ನೂ ನಾಶಪಡಿಸಿದಂತಹ ಅದೆಷ್ಟೋ ಉದಾಹರಣೆಗಳಿದ್ದರೂ, ಆ ನಿಟ್ಟಿನಲ್ಲಿ ನ್ಯಾಯಾಂಗ ತನಿಖೆಯೆಂಬುದೆಲ್ಲ ಅದೆಷ್ಟೋ ನಡೆದಿದ್ದರೂ, ಯೋಗಿ ಸರಕಾರದಲ್ಲಿ ಅಂತಹ ಯಾವ ಎನ್ ಕೌಂಟರ್ ಗಳೂ ವರದಿಯಾಗಿಲ್ಲ! ಅದಲ್ಲದೇ, ಯೋಗಿ ಯ ಎನ್ ಕೌಂಟರ್ ಎಂದೆಲ್ಲ ತೋರಿಸುವ ಮಾಧ್ಯಮಗಳು, ಕಾರ್ಯಾಚರಣೆಯಲ್ಲಿ ಎಷ್ಟು ಜನ ಪೋಲಿಸರು ಗಾಯಗೊಂಡಿದ್ಧಾರೆ ಎನ್ನುವುದನ್ನು ಮಾತ್ರ ತೋರಿಸಲೂ ಇಲ್ಲವಷ್ಟೇ! ಎನ್ ಕೌಂಟರ್ ಕಾರ್ಯಾಚರಣೆಯಲ್ಲಿ ಜೀವವನ್ನೇ ಕಳೆದುಕೊಂಡ ಪೋಲಿಸರನ್ನು ಬಿಡಿ!! ಬದಲಾಗಿ, ಬರೋಬ್ಬರಿ ೨೮೩ ಪೋಲಿಸರು ಗಂಭೀರವಾಗಿ ಗಾಯಗೊಂಡಿದ್ದಾರೆ!! ಈಗ ಮೊನ್ನೆ ಮೊನ್ನೆ ಒಂದು ವರದಿ ನೀಡಿತು ಉತ್ತರ ಪ್ರದೇಶದ ಪೋಲಿಸ್!! ಉತ್ತರ ಪ್ರದೇಶದಲ್ಲಾಗುತ್ತಿರುವಂತಹ ಎನ್ ಕೌಂಟರ್ ಗೆ ಹೆದರಿ, ಜಾಮೀನು ಸಿಕ್ಕಿದ್ದರೂ ಸಹ ಅಪರಾಧಿಗಳು ಯೋಗಿಗೆ ಹೆದರಿ, ತಮ್ಮ ಜಾಮೀನನ್ನೇ ರದ್ದುಗೊಳಿಸಿ ಜೈಲಿನಲ್ಲಿದ್ದಾರೆ!! ಉಳಿದಂತೆ, ಕೆಲ ಪ್ರದೇಶಗಳಲ್ಲಿ, ತಮ್ಮ ಕುತ್ತಿಗೆಗೆ, “ನಮ್ಮನ್ನು ಕ್ಷಮಿಸಿ! ನಾವಿನ್ನು ಯಾವುದೇ ಕಾರಣಕ್ಕೂ ಯಾವುದೇ ರೀತಿಯ ಅಪರಾಧಗಳಲ್ಲಿ ಭಾಗಿಯಾಗುವುದಿಲ್ಲ!” ಎಂಬ ಫಲಕ ತೂಗು ಹಾಕಿಕೊಂಡು ತಿರುಗಾಡುತ್ತಿದ್ದಾರೆ!! ಅಂದರೆ, ಸುಮ್ಮನೇ ಕಲ್ಪಿಸಿಕೊಳ್ಳಿ! ಯೋಗಿ ಸರಕಾರ ಅದೆಷ್ಟು ಬಗೆಯಲ್ಲಿ ಅಪರಾಧಿಗಳಿಗೆ ಶಿಕ್ಷೆ ನೀಡಿರಬಹುದು?!

“According to UP police, 44 criminals have been killed in 1,322 encounters between 20 March 2017 and 5 March 2018. Despite the uproar by leaders and activists, both Chief Minister Adityanath and Director General of Police O P Singh have made it clear that encounters of criminals were going to continue. An important fact which has been suppressed by opposition and human rights activists is that as per legal stipulation, all encounters are subjected to police and judicial probes and that not one encounter has been found to be staged in these probes. Another fact which is ignored is the number of casualties on police side. Besides four policemen losing their lives, 283 men in uniform have been injured in these encounters.”

ಎರಡನೆಯದಾಗಿ, ಬಹುತೇಕ ಬದಲಾವಣೆ ಎನ್ನಿಸಿರುವುದು ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರಗಳಲ್ಲಿ!! ಮುಂಚೆ, ಪರೀಕ್ಷೆ ನಡೆಯುವ ಕಾಲದಲ್ಲಿ, ವಿದ್ಯಾರ್ಥಿಯ ಕುಟುಂಬವೇ ಕಿಟಕಿಯಾಚೆ ನಿಂತು, ನಕಲು ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತಿತ್ತು! ಪರೀಕ್ಷೆ ಎಂದರೆ, ಇದ್ದಕ್ಕಿದ್ದ ಹಾಗೆ ವಿದ್ಯಾ ನಿಲಯಗಳು ಜನಗಳಿಂದ ಗಿಜಿಗುಡುತ್ತಿದ್ದವು! ಆದರೀಗ?! ಪರೀಕ್ಷೆ ನಡೆಯುವ ಹೊತ್ತಿನಲ್ಲಿ, ವಿದ್ಯಾನಿಲಯಗಳ ೪೦೦ ಮೀಟರ್ ಸುತ್ತ ವಿದ್ಯಾರ್ಥಿಗಳನ್ನು ಬಿಟ್ಟು ಬೇರೆ ಯಾರೂ ಸಹ ಇರುವಂತಿಲ್ಲ!!

ಈ ಸಂಪೂರ್ಣ ಕಾರ್ಯಾಚರಣೆ ಯನ್ನು ಉತ್ತರ ಪ್ರದೇಶದಾದ್ಯಂತ ಅನುಸರಿಸಲಾಗಿದೆ! ರಾಜ್ಯ ಮತ್ತು ರಾಷ್ಟ್ರೀಯ ಪಠ್ಯ ಕ್ರಮಗಳ ಹತ್ತನೇ ತರಗತಿ ಮತ್ತು, ಹನ್ನೆರಡನೇ ತರಗತಿ ಯ ಪರೀಕ್ಷೆಗಳನ್ನು ನಡೆಸುವಾಗ, ಪ್ರಶ್ನೆ ಪತ್ರಿಕೆಗಳು ಪರೀಕ್ಷೆಯ ಸಮಯದ ಒಂದು ಗಂಟೆ ಮುಂಚೆಯಷ್ಟೇ ಪರೀಕ್ಷಾ ಕೇಂದ್ರಗಳಿಗೆ ತಲುಪುತ್ತವೆ!! ಅದಲ್ಲದೇ, ಪ್ರತಿ ಪರೀಕ್ಷೆಗಳು ಸಿಸಿಟಿವಿ ಸರ್ವಿಲೆನ್ಸ್ ಮೇಲೆ ನಡೆಯುತ್ತವೆ!! ಯಾವುದೇ ಕಾರಣಕ್ಕೂ, ವಿದ್ಯಾರ್ಥಿ ಏನಾದರೂ
ಅನುಮಾನಾಸ್ಪದವಾಗಿ ನಡೆದುಕೊಂಡರೆ ಆತನನ್ನು ಸಂಪೂರ್ಣವಾಗಿ ಪರೀಕ್ಷಿಸಲೇ ಬೇಕು! ಪರೀಕ್ಷೆ ನಡೆಯುವ ಕೇಂದ್ರದ ಸುತ್ತ ಮುತ್ತ ವಿಶೇಷವಾದಂತಹ ಪೋಲಿಸ್ ಪಡೆಯ ಕಾವಲಿರುತ್ತದೆ! ವಿದ್ಯಾರ್ಥಿಗಳು ನಕಲು ಮಾಡುವುದನ್ನು ಮತ್ತು, ಇನ್ಯಾವುದೋ ಅಕ್ರಮಗಳಲ್ಲಿ ಭಾಗಿಯಾಗುವುದನ್ನು ತಡೆಯಲು ಸ್ವತಃ ಪೋಲಿಸ್ ಪಡೆ ಕಾವಲು ಕಾಯುತ್ತದೆ! ಇದು, ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ಧ ಶಿಕ್ಷಣ ಮಾಫಿಯಾವನ್ನು ನಿಲ್ಲಿಸಿರುವುದಲ್ಲದೇ, “ನಕಲು ರಹಿತ” ಪರೀಕ್ಷೆಗಳು ನಡೆಯುತ್ತಿರುವುದು!

ಮೂರನೆಯಾದಾಗಿ, ರಸ್ತೆ ದುರಸ್ಥಿ ಮತ್ತು ಅಗಲೀಕರಣ!! ಇಡೀ ರಾಜ್ಯಾದ್ಯಂತ ಅದೆಷ್ಟೋ ಹೆದ್ದಾರಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ! ಪ್ರತೀ ಹಳ್ಳಿಗೂ ಸಂಪರ್ಕನ ಕಲ್ಪಿಸುವ ನಿಟ್ಟಿನಲ್ಲಿ ಯೋಗಿ ಸರಕಾರ ರಸ್ತೆ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿದೆ! ಮುಂಚೆ, ಅಖಿಲೇಶ್ ಯಾದವ್ ಸರಕಾರದಲ್ಲಿ ಕೇವಲ ಆಗ್ರಾ – ಲಕ್ನೋ ಸಂಪರ್ಕ ವ್ಯವಸ್ಥೆಯನ್ನೂ ಸರಿಯಾಗಿ ಮಾಡಿರಲಿಲ್ಲ! ಆದರೆ, ಫಿಲ್ಬಿಟ್, ಲಖೀಮ್ ಪುರ್ ಖೇರಿ, ಬಸ್ತಿ ಸಂತ ಕಬೀರ್ ನಗರ್, ಚಾಂದಾಳಿ ಯ ಕಡೆರಯಲ್ಲೆಲ್ಲ ರಸ್ತೆ ಸಂಪರ್ಕಗಳು ವೇಗವಾಗಿ ನಿರ್ಮಾಣವಾಗುತ್ತಿದೆ! ಅನುಮಾನವೇ ಇಲ್ಲ! ಯೋಗಿ ಸರಕಾರದಿಂದ ಈಗ ರಾಷ್ಟ್ರೀಯ ಹೆದ್ದಾರಿಗಳಿಗೂ ಸಹ ಅಷ್ಟೇ ಪ್ರಾಮುಖ್ಯತೆ ದೊರೆತಿರುವುದು, ಇಡೀ ರಾಜ್ಯದ ಅಭಿವೃದ್ದಿಗೆ ಸಹಕಾರಿಯಾಗಿ ಕೆಲಸ ಮಾಡಲಿದೆ! ಲಕ್ನೋದಿಂದ ಬಲಿಯಾಗೆ ಪೂರ್ವಂಚಲ್ ಎಕ್ಸ್ ಪ್ರೆಸ್ ಮತ್ತು, ಆಗ್ರಾದಿಂದ ಝಾನ್ಸಿಗೆ ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ದಾರಿಗಳು ನಿರ್ಮಾಣ ವಾಗುತ್ತಿವೆ! ರಾಜ್ಯದಲ್ಲಿ, ಹದಿನೈದು ವಿಮಾನ ನಿಲ್ದಾಣಗಳನ್ನು ನಿರ್ಮಿಸಬೇಕೆಂದು ಹೊರಟಿರುವ ಸರಕಾರ ಈಗಾಗಲೇ ಕಾರ್ಯಸೂಚಿಯನ್ನು ಸಿದ್ಧಪಡಿಸಿದೆ!!

ಇನ್ನು ವಾರಣಾಸಿಯಲ್ಲಿ, ನರೇಂದ್ರ ಮೋದಿ ಪರಿಚಯಿಸಿರುವ ಅದೆಷ್ಟೋ ಪ್ರಮುಖ ಯೋಜನೆಗಳು ಪ್ರಗತಿಯಲ್ಲಿವೆ! ಬಾಬತ್ ಪುರವನ್ನು ನಗರಕ್ಕೆ ಕಲ್ಪಿಸುವ ಸಲುವಾಗಿ ರಸ್ತೆ ನಿರ್ಮಾಣ, ಹಲವಾರು ಫ್ಲೈ ಓವರ್ ಗಳು, ಒಂದು ರಿಂಗ್ ರಸ್ತೆ, ರಮಣ ಎಸ್ ಟಿ ಪಿ ಮತ್ತು ಅಮೃತಾ ಯೋಜನೆಯಡಿಯಲ್ಲಿ ನೀರಿನ ಸಂಪರ್ಕಗಳು, ಮೊದಲ ಸಂಯೋಜಿತ ಸಾರಿಗೆ ಕೇಂದ್ರ, ಮೆಟ್ರೋ ರೈಲು, ಪಂಪ್ ಲೈನ್ ಮೂಲಕ ಅಡುಗೆ ಅನಿಲವನ್ನು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಗೆ ತಯಾರಿ, ಹೀಗದೆಷ್ಟೋ ಅಭಿವೃದ್ದಿಗಳನ್ನು ಮಾಡುತ್ತ ಹೋಗುತ್ತಿರುವ ಯೋಗಿ ಸರಕಾರಕ್ಕೆ ಕ್ಯಾಬ್ ಡ್ರೈವರ್ ಆದ ಮೊಹಮ್ಮದ್
ಇರ್ಷಾಲ್ ಬಹಳ ಗರ್ವ ಪಡುತ್ತಾನೆ! ಆತನ ಪ್ರಕಾರ, ಇನ್ನೇನು ಸದ್ಯದಲ್ಲಿಯೇ ವಾರಣಾಸಿಯೊಂದು ಅಭಿವೃದ್ಧಿಯಲ್ಲಿ ಎಲ್ಲಾ ನಗರವನ್ನೂ ಮೀರಿತ್ತದೆ ಎನ್ನುವ ಇರ್ಷಾದ್, “ವಾರಣಾಸಿ ನಗರದ ಅಭಿವೃದ್ಧಿಯನ್ನು ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರೇ ಖುದ್ದಾಗಿ ಕಾಳಜಿ ವಹಿಸುತ್ತಿತುವುದಲ್ಲದೇ, ಎಂಟು ಜಿಲ್ಲೆಗಳಿಂದ ನೇರವಾಗಿ ವಾರಣಾಸಿ ನಗರಕ್ಕೆ ರಸ್ತೆ ಸಾರಿಗೆಯನ್ನು ಕಲ್ಪಿಸಲಾಗುತ್ತಿದೆ! ಈಗಾಗಲೇ, ಎನ್ ಎಚ್ ಎ ಐ ಜವಾಬ್ದಾರಿಗಳನ್ನು ತೆಗೆದುಕೊಂಡಿದೆ” ಎನ್ನುತ್ತಾನೆ!

ಬೆಲ್ತಾರಾ ರಸ್ತೆಯಲ್ಲಿ, ಶೀಲಾ ಮಿಶ್ರಾ ಹೇಳುವ ಪ್ರಕಾರ, “ಆದಿತ್ಯನಾಥ್ ಸರಕಾರ ಬರುವುದಕ್ಕೂ ಮುನ್ನ, ಆಕೆ ಎಂದಿಗೂ ನಿರಂತವಾದ ಐದು ತಾಸು ವಿದ್ಯುತ್ ಸಂಪರ್ಕವಿದ್ದದ್ದನ್ನು ನೋಡಿಯೇ ಇಲ್ಲ!” ಕ್ಷಣಕ್ಷಣಕ್ಕೂ ಕೂಡ, ಪವರ್ ಕಟ್ ಎಂದೆಲ್ಲ ಇದ್ದ ಉತ್ತರ ಪ್ರದೇಶದಲ್ಲಿ ಇವತ್ತು, ನಿರಂತರವಾಗಿ ವಿದ್ಯುತ್ ಸಂಪರ್ಕವಿದೆ! ಕಳೆದ ಆರು ತಿಂಗಳಿನಲ್ಲಿ, ರಾಜ್ಯದ ಪ್ರತೀ ಮೂಲೆ ಮೂಲೆಗೂ ಸಹ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ! ಸ್ವತಃ ಯೋಗಿ ಆದಿತ್ಯನಾಥ್ ರೇ ಗೋಮತಿ ನದಿಯ ಪುನರುಜ್ಜೀವನಕ್ಕೆ ಕೈ ಹಾಕಿದ್ದು, ಅದೇ ರೀತಿ ರಾಜ್ಯದ ಪ್ರತೀ ಅಳಿವಿನಂಚಿನಲ್ಲಿರುವ ನದಿಗೆ ಜೀವ ತುಂಬುವ ಕೆಲಸ ಅವ್ಯಾಹತವಾಗಿ ನಡೆಯುತ್ತಿದೆ! ಅಕಸ್ಮಾತ್ , ಉತ್ತರ ಪ್ರದೇಶದಲ್ಲಿ ಮುಂಚೆಯಷ್ಟೇ ಏನಾದರೂ ನದಿಗಳು ಜೀವ ತುಂಬಿ ಹರಿದರೆ, ರಾಜ್ಯದ ಜನರು ಎಂದಿಗೂ ಬರಗಾಲ ನೋಡಲಾರರು!

ಕಾನೂನು ಸುವ್ಯವಸ್ಥೆ ಮತ್ತು ಅಭಿವೃದ್ಧಿ ಶೀಲ ಸೌಕರ್ಯಗಳನ್ನು ಸುಧಾರಿಸಿದ ಫಲಿತಾಂಶವೊಂದು ಯೋಗಿ ಸರಕಾರಕ್ಕೆ, ೨೧, ೨೨ ಫೆಬ್ರುವರಿಯಂದು ನಡೆದ ಹೂಡಿಕೆದಾರರ ಶೃಂಗ ಸಭೆಯಲ್ಲಿಯೇ ಅರಿವಾಗಿದೆ! ಲಕ್ನೋದಲ್ಲಿ ನಡೆದ ಶೃಂಗ ಸಭೆಯ ಮೊದಲ ದಿನವೇ ೪.೨೬ ಲಕ್ಷ ಕೋಟಿಯಷ್ಟು ಹೂಡಿಕೆಗೆ ಉದ್ಯಮಿಗಳು ಮುಂದಾದರು! ಪ್ರಪಂಚಾದ್ಯಂತ, ಸುಮಾರು ೫೦೦೦ ಉದ್ಯಮಿಗಳು ಉಪಸ್ಥಿತರಿದ್ದ ಶೃಂಗಸಭೆಯಾಗಿತ್ತದು! ಹೂಡಿಕೆದಾರರಿಗೆ, ಸಿಂಗಲ್ ಕ್ಲಿಯರೆನ್ಸ್ ಒದಗಿಸಿದ್ದಲ್ಲದೇ, ಯುಪಿ ಸರಕಾರದ ಕ್ಲಸ್ಟರ್ ಚಾಲಿಯ ಕೈಗಾರಿಕಾ ನೀತಿಯನ್ನು ಸ್ವತಃ ಮುಖ್ಯಮಂತ್ರಿಯಾದ ಯೋಗಿ ಆದಿತ್ಯನಾಥ್ ವಿವರಿಸಿದ್ದರು! ಈ ಸಂದರ್ಭದಲ್ಲಿ, ಪ್ರಧಾನಿ ಮೋದಿಯವರೂ ಉಪಸ್ಥಿತರಿದ್ದು, ರಾಜ್ಯದಲ್ಲಿ ರಕ್ಷಣಾ ಉದ್ಯಮದ ಕಾರಿಡಾರ್ ಗೆ ಆಹ್ವಾನ ನೀಡಿದ್ದಾರೆ! ಇಲ್ಲಿಯವರೆಗೂ, ಯಾವತ್ತಿಗೂ ಸಹ ಉತ್ತರ ಪ್ರದೇಶದಲ್ಲಿ ಇಷ್ಟು ದೊಡ್ಡ ಮೊತ್ತದ ಹೂಡಿಕೆಗೆ ಯಾರೂ ಮುಂದಾಗಿರಲಿಲ್ಲವಾದರೂ, ಈ ಬಾರಿ ಉತ್ತರ ಪ್ರದೇಶದ ಅಭಿವೃದ್ಧಿ ಕಾರ್ಯವೊಂದು ಹೂಡಿಕೆಯ ಮೊತ್ತದಲ್ಲಿ ಫಲಿತಾಂಶವನ್ನು ನೀಡಿದೆ!!

ಸಭೆಯನ್ನು ಉತ್ತೇಜಿಸಲು, ಟಿವಿ ಜಾಹೀರಾತುಗಳ ಜೊತೆಗೆ, ಮುಂಬೈ, ದೆಹಲಿ, ಬೆಂಗಳೂರು, ಅಹಮಾದಾಬಾದ್, ಹೈದರಾಬಾದ್ ಮತ್ತು ಕೊಲ್ಕತ್ತಾಗಳಲ್ಲಿ ರಸ್ತೆ ಪ್ರದರ್ಶನಗಳನ್ನೂ ಆಯೋಜಿಸಲಾಗಿತ್ತೆಂಬ ಒಂದೇ ಅಂಶ ಸಾಕು!! ಶೃಂಗ ಸಭೆಯ ಗಂಭೀರತೆ ಎಷ್ಟಿತ್ತೆಂಬುದನ್ನು ತೋರಿಸಲು! ಉದ್ಯಮ ಕ್ಷೇತ್ರದ ಸಚಿವರಾಗಿರುವ ಸತೀಶ್ ಮಹಾನಾ ಉದ್ಯಮಿಗಳಿಗೆ, ಗೌರವ ಮತ್ತು ಸುರಕ್ಷತೆಯ ಭರವಸೆ ನೀಡಿದ್ದರೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ” ನಾನು ರಾಜ್ಯದಲ್ಲಿ ನ್ಯಾಯಾಂಗ ಮತ್ತು ಸುವ್ಯವಸ್ಥೆಯನ್ನು ನೋಡಿಕೊಳ್ಳುತ್ತೇನೆ! ನೀವು ಕೈಗಾರಿಕೆಗಳನ್ನು ಪ್ರಾರಂಭಿಸುವುದರ ಮೂಲಕ ಉದ್ಯಮಗಳನ್ನು ಸೃಷ್ಟಿಸಿ ಎಂಬುದನ್ನಷ್ಟನ್ನೇ ವಿನಂತಿಸಿಕೊಳ್ಳುತ್ತಿದ್ಧೇನೆ!” ಎಂದಿದ್ದರು!

“I will take care of law and order in the state, you are requested to start industries and provide jobs.”

-Yogi Adityanath

ಇದಕ್ಕಿಂತ ಹೆಚ್ಚಿನದಾಗಿ ಹೇಳಲೇ ಬೇಕೆಂದರೆ, ಪಕ್ಕದಲ್ಲೇ ಇರುವ ಬಿಹಾರ್ ಏನೇನೂ ಅಭಿವೃದ್ಧಿಯಾಗದೇ ಇರುವುದು ಪಾರ್ಶ್ವವಾಗಿ ಋಣಾತ್ಮಕ ಪ್ರಭಾವ ಬೀರಿದರೂ ಸಹ, ಉತ್ತರ ಪ್ರದೇಶದಂತಹ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಅಷ್ಟು ಸುಲಭವೂ ಅಲ್ಲ! ಅಲ್ಲದೇ, ಆಡಳಿತದ ವಿಷಯದಲ್ಲಿ ಅಷ್ಟು ಸುಲಭವಾದ ರಾಜ್ಯವೂ ಅಲ್ಲ! ಆದರೆ, ಅಲ್ಲಿಯ ಪ್ರತಿಯೊಬ್ಬರ ಜನರ ಅಭಿಪ್ರಾಯವೂ ಅದೆ! ಯೋಗಿ ಆದಿತ್ಯನಾಥ್ ಸರಕಾರ ಬಂದ ಮೇಲೆ ಅಲ್ಲಿನ ಪ್ರಜೆಗಳು ಭವಿಷ್ಯದ ಬಗ್ಗೆ ಭರವಸೆ ಇಡಲು ಕಲಿತಿದ್ದಾರೆ ಮತ್ತು, ಹಿಂದೆಂದೂ ಇಷ್ಟು ಸುರಕ್ಷತೆಯಿರಲಿಲ್ಲ ವೆಂಬುನ್ನಷ್ಟೆ!!

ಈಗ ಹೇಳಿ!! ಯೋಗಿ ಆದಿತ್ಯನಾಥ್ ರಂತರ ಮುಖ್ಯಮಂತ್ರಿ ಯ ಅವಶ್ಯಕತೆ ಕರ್ನಾಟಕಕ್ಕೆ ಇದೆಯೇ ಇಲ್ಲವೇ ಎಂದು!

– ತಪಸ್ವಿ

Tags

Related Articles

Close