ಪ್ರಚಲಿತ

ಇಂತಹ ನೀತಿಗಳ ಜಾರಿಗೂ ಧಮ್ ಬೇಕು

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಹಲವಾರು ದಿಟ್ಟ ಕ್ರಮಗಳನ್ನು ರಾಜ್ಯದಲ್ಲಿ ಜಾಕರಿಗೊಳಿಸುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದೆ.

ಇದೀಗ ಮತ್ತೊಂದು ಮಹತ್ವದ ನಿರ್ಣಯವನ್ನು ಜಾರಿಗೆ ತರುವ ಮೂಲಕ ಭಾರತದ ಜನರು ಮೂಗಿಗೆ ಬೆರಳಿಟ್ಟು ಇದು ಹೀಗೂ ಸಾಧ್ಯವೇ? ಎಂದು ಆಲೋಚಿಸುವಂತೆ ಯೋಗಿ ಸರ್ಕಾರ ಮಾಡಿದೆ. ಇಂತಹ ಕಾನೂನನ್ನು ರೂಪಿಸಿ, ಜಾರಿಗೆ ತರುವುದಕ್ಕೂ ತಾಕತ್ತು ಬೇಕು. ಅಂತಹ ಧಮ್ ಇರುವುದು ಯೋಗೀಜಿ ಸರ್ಕಾರಕ್ಕೆ ಮಾತ್ರ ಎಂಬ ಮಾತುಗಳು ಸಹ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಹಿಂದೂಗಳಂತೂ ಇಂತಹ ಕಾನೂನು ನಮ್ಮ ರಾಜ್ಯದಲ್ಲಿಯೂ ಜಾರಿಯಾದರೆ ಚೆನ್ನಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಹೌದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರ ಸರ್ಕಾರ ‘ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ಮಾರಾಟ ನಿಷೇಧ’ ಮಾಡಿ ಆದೇಶ ಹೊರಡಿಸುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದೆ. ಇಂತಹ ಆದೇಶಗಳನ್ನು ಜಾರಿ ಮಾಡುವುದಕ್ಕೆ ಧಮ್ ಬೇಕು ಎಂಬ ಮಾತುಗಳು ಸಹ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಸಿಎಂ ಯೋಗಿ ಅವರ ಆಡಳಿತದಲ್ಲಿ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ಮಾರಾಟವನ್ನು ನಿಷೇಧಿಸುವ‌ ಮೂಲಕ ಮಹತ್ವದ ಹೆಜ್ಜೆ ಇರಿಸಲಾಗಿದೆ.‌ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ಉತ್ಪಾದನೆ, ಸಂಗ್ರಹ, ವಿತರಣೆ, ಮಾರಾಟವನ್ನು ತಕ್ಷಣದಿಂದಲೇ ಜಾರಿಯಾಗುವ ಹಾಗೆ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಈ ಕಾನೂನನ್ನು ಸಾರ್ವಜನಿಕರ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ರೂಪಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಔಷಧಗಳು ಹಲಾಲ್ ಪ್ರಮಾಣೀಕೃತವಾಗಿದ್ದರೂ ಅವುಗಳನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಹಲಾಲ್ ಪ್ರಮಾಣಪತ್ರಗಳನ್ನು ಅಂಟಿಸಿ ನಕಲಿ‌ ಔಷಧಗಳ ಮಾರಾಟ ಜಾಲ ಕಂಡುಬಂದಿತ್ತು. ಈ ಅಕ್ರಮದ ಆರೋಪ ದೊಡ್ಡ ಮಟ್ಟದಲ್ಲಿ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಯೋಗಿ ಸರ್ಕಾರ ಇಂತಹ ಒಂದು ದಿಟ್ಟ ನಿಲುವನ್ನು ತೆಗೆದುಕೊಳ್ಳುವ ಮೂಲಕ ಮಾದರಿಯಾಗಿದೆ.

ಹಾಗೆಯೇ ಕೆಲ ಕಂಪನಿಗಳ ವಿರುದ್ಧ ನಕಲಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ಹಾಗೆ ಎಫ್ಐಆರ್ ಸಹ ದಾಖಲು ಮಾಡಲಾಗಿದೆ.

ಉತ್ತರ ಪ್ರದೇಶದ ಇಂತಹ ನೀತಿ ಕರ್ನಾಟಕದಲ್ಲಿಯೂ ಜಾರಿಯಾದಲ್ಲಿ ಹಿಂದೂಗಳು ಯಾವುದೇ ಆತಂಕವಿಲ್ಲದೆ ವಸ್ತುಗಳ ಖರೀದಿ ಮಾಡಬಹುದಾಗಿದೆ. ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮುಸಲ್ಮಾನರ ಓಲೈಕೆಗಾಗಿ ಹಿಂದೂಗಳ ಹಿತವನ್ನೇ ಬಲಿ ನೀಡಿದೆ. ನಮ್ಮ ಜನರು ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ‌ಗೆ ಮತ ನೀಡಿ ಮಾಡಿದ ಒಂದು ತಪ್ಪಿ, ಹಿಂದೂಗಳ ಎಲ್ಲಾ ಅವಕಾಶಗಳನ್ನು ಕಿತ್ತುಕೊಳ್ಳುವಂತೆ ಮಾಡಿದೆ. ನಮ್ಮ ರಾಜ್ಯವೂ ಉತ್ತರ ಪ್ರದೇಶದಂತೆ ದೃಢ ನಿರ್ಧಾರಗಳನ್ನು ತೆಗೆದುಕೊಂಡಲ್ಲಿ ಮಾತ್ರ ಅಲ್ಪಸಂಖ್ಯಾತ ವರ್ಗದ ಕೆಲವರ ಅಕ್ರಮಗಳಿಗೆ ಫುಲ್‌ಸ್ಟಾಪ್ ಹಾಕಬಹುದಾಗಿದೆ.

Tags

Related Articles

Close