ಪ್ರಚಲಿತ

ಬ್ರೇಕಿಂಗ್: ಮುಸ್ಲಿಂ ವಿರೋಧಿ ಮೋದಿ ಎನ್ನುವ ವಿರೋಧಿಗಳಿಗೆ ಶಾಕ್!! ದೆಹಲಿಯಲ್ಲಿ ಅಬ್ಬರಿಸಿದ ಮೋದಿ.!! ಮುಸ್ಲಿಮರ ಆಝಾನ್‍ಗೆ ಮೋದಿ ಮಾಡಿದ್ದೇನು ಗೊತ್ತಾ?

ಮೋದಿ ಮುಸ್ಲಿಂ ವಿರೋಧಿ ಎನ್ನುವ ದೇಶದ ಕೆಲವು ಬುದ್ಧಿ ಮಾಂದ್ಯರಿಗೆ ಪ್ರಧಾನಿ ಮೋದಿ ಇಂದು ಭರ್ಜರಿಯಾಗಿಯೇ ಟಾಂಗ್ ನೀಡಿದ್ದಾರೆ. ತನ್ನ ವ್ಯಕ್ತಿತ್ವದಲ್ಲೇ ತನ್ನ ಮಾತಿನ ಬಿಂಬವನ್ನು ಪ್ರದರ್ಶಿಸುವ ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. 3 ರಾಜ್ಯಗಳಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿಯಾಗಿ ಜಯಭೇರಿ ಭಾರಿಸಿದ ಹಿನ್ನೆಲೆಯಲ್ಲಿ ಇಂದು ಸಂಜೆ ದೆಹಲಿಯಲ್ಲಿ ಏರ್ಪಡಿಸಿದ್ದ ಭಾರತೀಯ ಜನತಾ ಪಕ್ಷದ ವಿಜಯಿ ಯಾತ್ರೆಯನ್ನು ಉದ್ಧೇಶಿಸಿ ಮಾತನಾಡಿದ್ದರು. ಈ ವೇಳೆ ಒಂದು ಆಕಸ್ಮಿಕ ಘಟನೆಯೇ ನಡೆದು ಹೋಗಿತ್ತು.

ನಮಾಜ್‍ಗೆ ಗೌರವಿಸಿದ ಪ್ರಧಾನಿ…

ಪ್ರಧಾನಿ ನರೇಂದ್ರ ಮೋದಿ ಮುಸ್ಲಿಂ ವಿರೋಧಿ. ಅವರು ಮುಸಲ್ಮಾನರನ್ನು ಕಟುವಾಗಿ ಧ್ವೇಷಿಸುತ್ತಾರೆ. ಹಿಂದುತ್ವದ ಹಾಗೂ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಟ್ಟರ್ ಕಾರ್ಯಕರ್ತರಾಗಿರುವ ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಂರನ್ನು ಕಂಡರೆ ಕೆಂಡ ಕಾರುತ್ತಾರೆ ಎಂದೇ ವ್ಯಾಖ್ಯಾನಿಸುತ್ತಾರೆ ಮೋದಿ ವಿರೋಧಿಗಳು. ಆದರೆ ಇಂದು ದೆಹಲಿಯಲ್ಲಿ ನಡೆದ ಒಂದೇ ಒಂದು ಘಟನೆ ಮೂಲಕ ಮೋದಿಯವರ ಮತ್ತೊಂದು ಮುಖವನ್ನು ತೋರಿಸಿದ್ದಾರೆ.

ಇಂದು ತ್ರಿಪುರ, ನಾಗಾಲ್ಯಾಂಡ್ ಹಾಗೂ ಮೇಘಾಲಯ ರಾಜ್ಯಗಳ ಚುನಾವಣಾ ಫಲಿತಾಂಶವು ಹೊರಬಿದ್ದಿದ್ದು, ಭಾರತೀಯ ಜನತಾ ಪಕ್ಷ ಭರ್ಜರಿ ಜಯವನ್ನು ದಾಖಲಿಸಿದೆ. ಈ ನಿಮಿತ್ತ ದೆಹಲಿಯಲ್ಲಿ ಭಾರತೀಯ ಜನತಾ ಪಕ್ಷದ ವಿಜಯೀ ಯಾತ್ರೆಯನ್ನು ಹಮ್ಮಿಕೊಂಡಿತ್ತು. ಈ ವೇಳೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆರಂಭಿಕ ಭಾಷಣವನ್ನು ಮಾಡಿದ್ದಾರೆ. ನಂತರ ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ನಿಂತಿದ್ದಾರೆ. ಪ್ರಧಾನಿ ಮೋದಿ ಭಾಷಣ ಆರಂಭಿಸುತ್ತಲೇ ಅತ್ತ ಹೊರಗಡೆಯಿಂದ ಮುಸ್ಲಿಮರ ಪ್ರಾರ್ಥನೆ ಸಲ್ಲಿಸುವ ವೇಳೆ.

ಈ ವೇಳೆಯಲ್ಲಿ ಮೋದಿ ಭಾಷಣದ ಮಧ್ಯೆ ಮುಸ್ಲಿಮರ ಅಝಾನ್ ಕೇಳಿ ಬರುತ್ತದೆ. ಎಲ್ಲರೂ ಮೋದಿ ಅಝಾನ್‍ಗೆ ಗೌರವ ನೀಡೋದಿಲ್ಲ ಎಂದೇ ತಿಳಿದಿದ್ದರು. ಆದರೆ ಭಾಷಣದ ಮಧ್ಯೆ ಬಂದಂತಹ ಅಝಾನ್‍ಗೆ ಮೋದಿ ತಮ್ಮ ಭಾಷಣವನ್ನೇ ನಿಲ್ಲಿಸಿ ಗೌರವ ನೀಡಿದ್ದರು. ಅತ್ತ ಅಝಾನ್ ಕೇಳುತ್ತಲೇ ಕೆಲ ಕಾಲ ಭಾಷಣವನ್ನು ಮೊಟಕುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅಝಾನ್‍ಗೆ ಗೌರವ ನೀಡಿದರು. ಇದು ಭಾರತೀಯ ಜನತಾ ಪಕ್ಷ ಹಾಗೂ ಸಮಸ್ತ ಮುಸ್ಲಿಂ ಬಾಂಧವರಿಗೆ ಭಾರೀ ಸಂತಸವನ್ನೇ ತಂದಿದ್ದರೆ, ವಿರೋಧಿಗಳು ಮಾತ್ರ ಉರಿದುಬೀಳುವಂತೆ ಮಾಡಿದೆ.

ಮೋದಿಯನ್ನು ಟೀಕಿಸಲು ಸದಾ ಮುಸ್ಲಿಂ ಅಸ್ತ್ರವನ್ನು ಪ್ರಯೋಗಿಸುತ್ತಿದ್ದ ವಿರೋಧಿಗಳು ಮೋದಿಯ ಇಂದಿನ ನಡೆಯನ್ನು ನೋಡಿ ಕಕ್ಕಾಬಿಕ್ಕಿಯಾಗಿವೆ. ತಾನು ಪ್ರಧಾನಿಯಾದ ನಂತರ ತಲಾಖ್ ನಿಷೇಧ, ಮುಸ್ಲಿಂ ಮಕ್ಕಳಿಗೆ ವಿದ್ಯಾರ್ಹತೆ ಹಾಗೂ ಆ ಜನಾಂಗದ ಹೆಣ್ಣು ಮಕ್ಕಳ ಮದುವೆಯ ಸಹಿತ ಅನೇಕ ವಿಚಾರಗಳ ಬಗ್ಗೆ ಆಸಕ್ತಿ ವಹಿಸಿ ಅವರಿಗೆ ನ್ಯಾಯ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಇಂದು ನಮಾಝ್‍ಗೆ ಗೌರವ ನೀಡಿ ಅಝಾನ್ ವೇಳೆ ಭಾಷಣವನ್ನು ನಿಲ್ಲಿಸುವ ಮೂಲಕ ತಮ್ಮ ಮತ್ತೊಂದು ಮುಖವನ್ನು ಪ್ರದರ್ಶಿಸಿದ್ದಾರೆ.

ಕರ್ನಾಟಕ ಕಾಂಗ್ರೆಸ್ ವಿರುದ್ಧ ಮೋದಿ ಕಹಳೆ…

ತನ್ನ ಮಾತನ್ನು ಮುಂದುವರೆಸುತ್ತಲೇ ಕರ್ನಾಟಕವನ್ನು ಉಲ್ಲೇಖಿಸಲು ಮರೆಯಲೇ ಇಲ್ಲ. ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರ ತನ್ನ ರಾಜ್ಯದಲ್ಲಿ ಎರಡು ಡಜನ್ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡುವ ಮೂಲಕ ತಮ್ಮ ಸರ್ಕಾರದ ಸಾಧನೆ ಏನು ಎಂಬುವುದನ್ನು ತೋರಿಸಿದ್ದಾರೆ. ಇದು ಅವರು ಅನುಭವಿಸುತ್ತಿರುವ ಕಾಂಗ್ರೆಸ್ಸಿನ ಕೊನೆಯ ಸರ್ಕಾರವಾಗಲಿದೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕರ್ನಾಟಕ ಕೇಸರಿಮಯವಾಗಲಿದೆ’ ಎಂದರು.

ಕೇಸರಿಮಯವಾದ ಭಾರತ..

ಈವರೆಗೆ ಸೂರ್ಯ ಹುಟ್ಟುವಾಗ ಹಾಗೂ ಮುಳುಗುವಾಗ ಮಾತ್ರ ದೇಶ ಕೇಸರಿಮಯವಾಗಿ ಗೋಚರಿಸುತ್ತಿತ್ತು. ಆದರೆ ಇನ್ನುಮುಂದೆ ಪ್ರತಿ ಸಮಯದಲ್ಲೂ ರಾಷ್ಟ್ರ ಕೇಸರಿಮಯವಾಗಿ ಗೋಚರಿಸಲಿದೆ ಎಂದು ಹೇಳಿದ್ದಾರೆ. ಇರುವ 29 ರಾಜ್ಯಗಳಲ್ಲಿ ಈಗಾಗಲೇ 21 ರಾಜ್ಯಗಳನ್ನು ಜಯಿಸಿರುವ ಭಾರತೀಯ ಜನತಾ ಪಕ್ಷ ಈಗ 22ನೇ ರಾಜ್ಯಕ್ಕಾಗಿ ಕರ್ನಾಟಕಕ್ಕೆ ಲಗ್ಗೆ ಇಟ್ಟಿದ್ದಾರೆ. ಮುಂದಿನ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಮೋದಿ ಕಾಂಗ್ರೆಸ್ ಮುಕ್ತ ಕರ್ನಾಟಕವನ್ನು ಸಾಕಾರಗೊಳಿಸಲು ಸಂಕಲ್ಪ ತೊಟ್ಟಿದ್ದಾರೆ.

ಒಟ್ಟಾರೆ ಈ ಬಾರಿಯ ಕರ್ನಾಟಕ ರಾಜ್ಯ ವಿಧಾನ ಸಭೆಯ ಚುನಾವಣೆಯಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿರುವುದು ಮಾತ್ರವಲ್ಲದೆ ಮುಸ್ಲಿಂ ಅಝಾನ್ ಗೆ ತನ್ನ ಭಾಷಣವನ್ನೇ ನಿಲ್ಲಿಸಿ ಮಸಲ್ಮಾನ ಸಮುದಾಯವನ್ನು ಗೌರವಿಸಿದ್ದಾರೆ. ಎಲ್ಲಾ ಮುಸಲ್ಮಾನರ ಮೇಲೆ ನಮಗೆ ಧ್ವೇಷವಿಲ್ಲ ಆದರೆ ದೇಶದ ಆಂತರಿಕ ಭದ್ರತೆಗೆ ಅಡ್ಡಿಯಾದರೆ ಅದನ್ನು ಸಹಿಸಲ್ಲ ಎಂಬ ಸಂದೇಶವನ್ನೂ ಸಾರಿದ್ದಾರೆ…

-ಸುನಿಲ್ ಪಣಪಿಲ

 

Tags

Related Articles

Close