ಪ್ರಚಲಿತ

ಶ್ರೀ ರಾಮನೆಂದರೆ ಮೈಯೆಲ್ಲಾ ಸುಡುವಂತಾಡುವ ಹಿಂದೂ ದ್ವೇಷಿ ಭಾಸ್ಕರ್ ಘೋಸ್ ಎಂಬ ಎಡಪಂಥೀಯ ರಾಮಾಯಣದ ಪ್ರಸಾರವನ್ನೇ ನಿಲ್ಲಿಸಲು ಮುಂದಾಗಿದ್ದ ಗೊತ್ತೆ?!

ಭಾರತದ ಪ್ರತಿ ಹಿಂದೂವಿನ ಆರಾಧ್ಯ, ಪ್ರಭು ಶ್ರೀ ರಾಮನೆಂದರೆ “ಸೆಕ್ಯೂಲರ್-ಲಿಬರಲ್ “ಗಳಿಗೆ ಮೈಯೆಲ್ಲಾ ಉರಿ. ರಾಮ ಏಕತೆಯ ಪ್ರತೀಕ. ದೇಶವನ್ನು ಒಂದೇ ಸೂತ್ರದಲ್ಲಿ ಬೆಸೆಯುವುದೇ ರಾಮ ನಾಮ. ರಾಮನೆಂದರೆ ಭಾರತ, ಭಾರತವೆಂದರೆ ರಾಮ. ರಾಮಾಯಣವಿಲ್ಲದ ಮನೆಯಿಲ್ಲ, ರಾಮನಿಲ್ಲದ ಮನವಿಲ್ಲ. ದೇಶದ ಅಖಂಡತೆಯ ಪ್ರತೀಕವಾದ ರಾಮನನ್ನು, ದೇಶ ವಿಭಜಿಸಲು ಸದಾ ಹಾತೊರೆಯುತ್ತಿರುವ ಎಡಪಂಥಿಗಳಿಗೆ ಕಂಡರಾಗದು. ಎಲ್ಲಿವರೆಗೆ ಭಾರತೀಯರ ಹೃದಯದಲ್ಲಿ ರಾಮನ ಆದರ್ಶಗಳ ನೆಲೆಯಿರುವುದೋ ಅಲ್ಲಿವರೆಗೆ ಅವರ “ಟುಕುಡೇ ಟುಕುಡೇ” ದುರುದ್ದೇಶ ಈಡೇರದು.

ನೆಹರೂವಿನ ಛತ್ರ ಛಾಯೆಯಲ್ಲಿ ಕೊಬ್ಬಿದ ಕುರಿಯಂತಾದ ಎಡಪಂಥೀಯರು, ದೇಶದ ಹಿಂದೂ ಬಹು ಸಂಖ್ಯಾತರನ್ನು ಪಾಶ್ಚಾತ್ಯರ ಮಾನಸಿಕ ಗುಲಾಮತನದೆಡೆಗೆ ಕೊಂಡೊಯ್ಯುತ್ತಿರುವಾಗಲೇ ರಮಾನಂದ ಸಾಗರ್ ಎಂಬ ಅಪ್ಪಟ ಹಿಂದು, ರಾಮಾಯಣವೆಂಬ ಅದ್ಭುತವನ್ನು ಪರದೆಯ ಮೇಲೆ ತಂದರು. ಎಂಬತ್ತರ ದಶಕದಲ್ಲಿ ಕಿರುತೆರೆಗೆ ಅಪ್ಪಳಿಸಿದ ರಾಮಾಯಣವನ್ನು ಕಂಡು ಹಿಂದೂಗಳೆಲ್ಲ ಹುಚ್ಚೆದ್ದು ಕುಣಿದರು. ತಮ್ಮ ಪ್ರಾಣ ಪ್ರಿಯ ರಾಮನನ್ನು ಸಾಕ್ಷಾತ್ಕಾರಿಸಲು ವಾರವಿಡೀ ಕಾಯುತ್ತಿದ್ದರು ಜನರು. ಆದಿತ್ಯವಾರ ಬಂತೆಂದರೆ ಸಾಕು ಆವತ್ತು ರಾಮನ ದರ್ಶನವಾಗುತ್ತಿತ್ತು. ತಮ್ಮ ಕೆಲಸ ಕಾರ್ಯಗಳನ್ನೆಲ್ಲ ಬಿಟ್ಟು ರಾಮ ಧ್ಯಾನ ಮಾಡುತ್ತಿದ್ದರು ಭಾರತೀಯರು. ವಿದೇಶೀ ಆಕ್ರಮಣದಿಂದಾಗಿ ಸ್ಮೃತಿಯಿಂದ ದೂರ ಸರಿದ ರಾಮನನ್ನು ಹೃದಯದಲ್ಲಿ ಪ್ರತಿಷ್ಟಾಪಿಸಿಬಿಟ್ಟರು ಸಾಗರ್.

ಎಂಬತ್ತರ ದಶಕದಲ್ಲಿ ಎಲ್ಲರ ಮನೆಯಲ್ಲೂ ದೂರದರ್ಶನವಿರಲಿಲ್ಲ. ಆರ್ಥಿಕವಾಗಿ ಸ್ಥಿತಿವಂತರಾಗಿರುವವರ ಮನೆಯಲ್ಲಷ್ಟೇ ದೂರದರ್ಶನವಿರುತ್ತಿತ್ತು. ಆಗೆಲ್ಲ ಒಂದಿಡೀ ಊರಿಗೇ ಒಂದು ಟಿ.ವಿ. ಆ ಟಿ.ವಿಯಲ್ಲಿ ಪ್ರತಿ ಭಾನುವಾರದಂದು ಪ್ರಸಾರವಾಗುತ್ತಿತ್ತು ರಾಮಾಯಣ. ಈ ರಾಮಾಯಣವನ್ನು ನೋಡಲು ಇಡಿಯ ಊರಿಗೆ ಊರೇ ಒಟ್ಟಾಗುತ್ತಿತ್ತು. ಯಾರ ಮನೆಯಲ್ಲಿ ಟಿವಿ ಇತ್ತೋ ಆ ಮನೆಯ ಸುತ್ತ ಜನ ಜಂಗುಳಿ. ಕೂತು-ನಿಂತು, ಕಿಟಿಕಿ-ಬಾಗಿಲುಗಳಲ್ಲಿ ನೇತಾಡುತ್ತಾ ರಾಮಾಯಣವನ್ನು ನೋಡುತ್ತಿದ್ದರು ಜನರು. ಮೈಲಿಗಟ್ಟಲೆ ನಡೆದು ಯಾರದೋ ಮನೆಗೆ ಹೋಗಿ ರಾಮನನ್ನು ನೋಡಲು ಮನೆ ಯಜಮಾನನಿಗೆ ದಂಬಾಲು ಬಿದ್ದಿದ್ದರು ಹಲವರು.

ದೇಶದಲ್ಲಿ ಹಿಂದೂ ರಾಷ್ಟ್ರವಾದ ಮತ್ತೆ ಪುಟಿದೆದ್ದ ಕಾಲವದು. ಯಾವಾಗ ಜಾತಿ-ಭೇದವೆನ್ನದೆ ಇಡಿಯ ದೇಶವೇ ರಾಮಾಯಣವನ್ನು ಮತ್ತು ರಾಮನನ್ನು ಅಪ್ಪಿಕೊಂಡಿತೋ, ಎಡಪಂಥೀಯರು ಹೌಹಾರಿದರು. ಯಾವುದು ಆಗಬಾರದೆಂದು ಅವರು ಕುತಂತ್ರ ಮಾಡಿದ್ದರೋ ಅದೇ ಆಗುವುದನ್ನು ಅವರು ಹೇಗೆ ತಾನೆ ಸಹಿಸುವರು? ರಾಮನ ಹೆಸರಿನಲ್ಲಿ ದೇಶದ ಜನತೆ ಒಗ್ಗಟ್ಟಾದದ್ದು ಕಾಂಗ್ರೆಸ್-ಕಮ್ಮ್ಯೂನಿಷ್ಟರ ನಿದ್ದೆಗೆಡಿಸಿತ್ತು. ಆ ಸಮಯದಲ್ಲಿ ದೂರದರ್ಶನದ ನಿರ್ದೇಶಕರಾಗಿದ್ದದ್ದು ಕಟ್ಟರ್ ಮಾರ್ಕ್ಸ್ ವಾದದ ಪ್ರತಿಪಾದಕರಾದ ಭಾಸ್ಕರ್ ಘೋಸ್. ಈ ಭಾಸ್ಕರ್ ಘೋಸ್ ಯಾರೆಂದು ತಿಳಿಯಿತೇ? ಅದೇ ಹಿಂದೂ ಗಳ ಬಗ್ಗೆ ಕೇವಲವಾಗಿ ಮಾತನಾಡುತ್ತಾ ಹಿಂದೂ ದೇವ-ದೇವಿಯರ ಅವಮಾನ ಮಾಡುತ್ತಾ ತನ್ನ ಬಕೇಟ್ ತುಂಬಿಕೊಳ್ಳುವ ಗಂಜಿ ಗಿರಾಕಿ ಸಾಗರಿಕಾ ಘೋಸ್ ಇದ್ದಾಳಲ್ಲ, ಅವಳ ತಂದೆ.

ಅಪ್ಪನೇ ಘೋರ ಹಿಂದೂ ವಿರೋಧಿ, ಇನ್ನು ಮಗಳು ಹೇಗೆ ಹಿಂದುತ್ವವನ್ನು ಪ್ರೀತಿಸುತ್ತಾಳೆ? ಈ ಹಿಂದೂ ವಿರೋಧಿ ಭಾಸ್ಕರ್ ಘೋಸ್ ರಾಮಾಯಣದ ಪ್ರಸಾರವನ್ನು ತಡೆಹಿಡಿಯಲು ರಮಾನಂದ ಸಾಗರರಿಗೆ ಮಾನಸಿಕ ಕಿರುಕುಳ ಕೊಡಲು ಶುರುವಿಟ್ಟುಕೊಳ್ಳುತ್ತಾನೆ. ರಾಮಾಯಣದ ಮುಂದಿನ 26 ಕಂತುಗಳನ್ನು ಪ್ರಸಾರ ಮಾಡಲು ಹೆಚ್ಚುವರಿ ಸಮಯವನ್ನು ಕೊಡಲು ನಿರಾಕರಿಸುತ್ತಾನೆ ಘೋಸ್. ಆತನ ಲೆಕ್ಕಾಚಾರದ ಪ್ರಕಾರ ಹೀಗೆ ಮಾಡಿದರೆ ರಾಮಾಯಣ ಅರ್ಧದಲ್ಲೆ ನಿಂತು ಹೋಗುತ್ತದೆ ಎಂಬುದಾಗಿತ್ತು.

ಆದರೆ ದೇಶದಲ್ಲಿ ಜನರು ಅದಾಗಲೇ “ರಾಮಾಯಣ ವ್ಯಸನಿ” ಗಳಾಗಿದ್ದರು!! ರಾಮಾಯಣದ ಗುಂಗಿನಲ್ಲಿ ಜನರು ಅದೆಷ್ಟು ಮುಳುಗಿ ಹೋಗಿದ್ದರೆಂದರೆ ರಾಮಾಯಣವೇನಾದರೂ ಅರ್ಧದಲ್ಲೇ ನಿಂತು ಹೋಗಿದ್ದರೆ ಜನರು ದಂಗೆ ಏಳುತ್ತಿದ್ದರು ಮತ್ತು ದೇಶಕ್ಕೆ ದೇಶವೇ ಹೊತ್ತಿ ಉರಿಯುತ್ತಿತ್ತು. ಅತ್ತ ರಮಾನಂದ ಸಾಗರರೂ ಸುಲಭಕ್ಕೆ ಸೋಲೊಪ್ಪಿಕೊಳ್ಳುವವರಾಗಿರಲಿಲ್ಲ. ಅವರು ಸೀದಾ ಆಗಿನ ಕಾಲದ ಸೂಚನೆ ಮತ್ತು ಪ್ರಸಾರಣ ಮಂತ್ರಿಯಾಗಿದ್ದ ಎಚ್.ಕೆ.ಎಲ್ ಭಗತ್ ಅವರ ಆಫೀಸಿನ ಕದ ತಟ್ಟಿದರು. ಅವರ ಪುಣ್ಯವೋ, ರಾಮನ ಭಕ್ತರ ಪುಣ್ಯವೋ ಅಂತೂ ಭಗತ್ ರಾಮಾಯಣದ ಪೂರ್ಣ ಪ್ರಸಾರಣಕ್ಕೆ ಅನುಮತಿ ಇತ್ತರು. ಭಗತ್ ರಿಂದಾಗಿ ಯಾವುದೇ ತೊಡಕಿಲ್ಲದೆ ರಾಮಾಯಣ ಪ್ರಸಾರವಾಗುವಂತಾಗುತ್ತದೆ.

ಆದರೆ ಘೋಸ್ ತೆಪ್ಪಗೆ ಕುಳಿತುಕೊಳ್ಳುವವನಲ್ಲ. ಅವನು ರಮಾನಂದ ಸಾಗರರಿಗೆ ರಾಮಾಯಣದಲ್ಲಿ “ಹಿಂದುತ್ವ”ವನ್ನು ಕಡಿಮೆ ಮಾಡಿ “ಜಾತ್ಯಾತೀತತೆ”ಯನ್ನು ಹೆಚ್ಚಿಸಬೇಕು, ಹೀಗೆ ಮಾಡುವುದರಿಂದ ದೇಶದ ಎಲ್ಲಾ “ಮತ”ದವರೂ ರಾಮಾಯಣ ನೋಡುವಂತಾಗುವುದು ಎಂದು ಕಿರುಕುಳ ಕೊಡಲು ಶುರು ಮಾಡುತ್ತಾನೆ. ಆದರೆ ರಮಾನಂದ ಸಾಗರರು ಭಾಸ್ಕರ್ ಘೋಸಿನ ಕುತಂತ್ರ, ಬೆದರಿಕೆಗಳಿಗೂ ಮಣಿಯುವುದಿಲ್ಲ. ಯಾವುದೇ ಬದಲಾವಣೆ ಮಾಡದೆ ಯಥಾವತ್ ರಾಮಾಯಣವನ್ನು ಪ್ರಸಾರ ಮಾಡುತ್ತರೆ. ಮೊದಲೇ ಕಳುಹಿಸಿದರೆ ಎಲ್ಲಿ ಘೋಸ್ ಕತ್ತರಿ ಹಾಕುವನೋ ಎಂದು ರಾಮಾಯಣದ ವಿಡಿಯೋ ಟೇಪನ್ನು ಪ್ರಸಾರಣದ ಕೆಲವೇ ನಿಮಿಷಗಳ ಮೊದಲು ದೂರದರ್ಶನ ಕೇಂದ್ರಕ್ಕೆ ಕಳುಹಿಸಿಕೊಡುತ್ತಿದ್ದರು ಸಾಗರ್!! ಧನ್ಯೋಸ್ಮಿ ಸಾಗರರೇ. ಅವತ್ತೇನಾದರೂ ಅವರು ಘೋಸನ ಬೆದರಿಕೆಗಳಿಗೆ ಹೆದರಿ ಕುಳಿತಿದ್ದರೆ ರಾಮನ ಆದರ್ಶಗಳು ಮನೆ ಮನೆಗೆ ತಲುಪುತ್ತಲೇ ಇರಲಿಲ್ಲ.

ಭಾರತದ ಕಣ ಕಣದಲ್ಲಿಯೂ ರಾಮನಿದ್ದಾನೆ. ಇಲ್ಲಿನ ಮಣ್ಣಿನಲ್ಲಿ ರಾಮ ನಡೆದಾಡಿದ್ದಾನೆ. ಆದ್ದರಿಂದಲೇ ಕಾಶ್ಮೀರದಿಂದ ಶ್ರೀಲಂಕಾವರೆಗೂ ರಾಮನೆಂದರೆ ತನ್ನವನೆಂಬ ಭಾವನೆ ಜನರಲ್ಲಿ ಮನೆ ಮಾಡಿದೆ. ಸತ್ತೇ ಹೋಗಿದ್ದ ಹಿಂದುತ್ವವನ್ನು ಮತ್ತೆ ಬಡಿದೆಬ್ಬಿಸಿದ್ದು ರಾಮಾಯಣ ಮತ್ತು ಮಹಾಭಾರತವೆಂಬ ಅದ್ಭುತ ಕಥಾನಕಗಳು. ಈ ಎರಡೂ ಮಹಾಕಾವ್ಯಗಳನ್ನು ಮೆನೆ-ಮನೆಗೆ, ಮನ-ಮನಕ್ಕೆ ತಲುಪಿಸಿದವರು ರಮಾನಂದ ಸಾಗರರು. ಅವರ ದಿಟ್ಟ ನಿರ್ಧಾರಗಳನ್ನು ದೇಶದ ಜನತೆ ಎಂದೂ ಮರೆಯಬಾರದು. ದೇಶದ ಪ್ರತಿ ರಾಮ ಭಕ್ತನೂ ಸಾಗರರಿಗೆ ಚಿರ ಋಣಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರಂತಹ ಹಿಂದೂ ವೀರರು ಇನ್ನಷ್ಟು ಹುಟ್ಟಿ ಬರಲಿ… ಜೈ ಶ್ರೀ ರಾಮ್… ಜೈ ಬಜರಂಗ್ ಬಲಿ…..

source: https://www.quora.com/Whatre-some-funny-stories-of-Indian-politics-politicians-state-or-central-govt

Tags

Related Articles

Close