ಪ್ರಚಲಿತ

ಬಿಜೆಪಿಯನ್ನು ಕತ್ತಿ ದೊಣ್ಣೆ ಹಿಡಿದು ಓಡಿಸಿ, ಆದಾಗದಿದ್ದರೆ ಬುಲೆಟ್, ಗನ್ ಬಳಸಿ !!

ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿದಿದ್ದೆ ಒಂದು ದೊಡ್ಡ ತಲೆನೋವಾದಂತೆ ಚಡಪಡಿಸುತ್ತಿರುವ ಬುದ್ದಿಜೀವಿಗಳು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಮಾಡುತ್ತಿರುವ ಹರಸಾಹಸಗಳನ್ನು ನೋಡುತ್ತಿದ್ದರೆ ತೀವ್ರ ಸ್ವರೂಪ ಪಡೆದಂತೆ ಕಾಣುತ್ತಿದೆ!! ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಗೆ ನೇರವಾಗಿ ಚುನಾವಣೆ ಎದುರಿಸಲಾಗದೇ, ಬಿಜೆಪಿ ಕಾರ್ಯಕರ್ತರನ್ನು ಹೆದರಿಸಿ, ಬೆದರಿಸಿ ನಿಯಂತ್ರಣದಲ್ಲಿಟ್ಟುಕೊಳ್ಳುವ ಹುನ್ನಾರ ನಡೆಸುತ್ತಿರುವ ಬೆನ್ನಲ್ಲೇ ಛತ್ತೀಸ್ ಗಡದಲ್ಲಿ ಇಂತಹದ್ದೇ ಅನಾಹುತ ನಡೆಯಲಿದೆಯೇ ಎನ್ನುವ ಪ್ರಶ್ನೆ ಇದೀಗ ಎದ್ದಂತೆ ಕಾಣುತ್ತಿದೆ!!

ಹೌದು… ದೇಶಾದ್ಯಂತ ಬಿಜೆಪಿ ಅಲೆಯ ಪರಿಣಾಮದಿಂದ ಕಾಂಗ್ರೆಸ್ ನೆಲಕಚ್ಚಿ ಹೋಗುತ್ತಿದ್ದು, ಈ ಸೋಲನ್ನು ಸಹಿಸಲಾಗದ ಕಾಂಗ್ರೆಸ್ಸಿಗರು ಮಾಡುತ್ತಿರುವ ಅವಾಂತರಗಳು, ನಾಟಕೀಯ ಪ್ರವೃತ್ತಿಗಳು ಒಂದೊಂದಾಗಿ ಹೊರಬರುತ್ತಿರುವ ಬೆನ್ನಲ್ಲಿಯೇ ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ನಾಯಕರು, ಜನರ ಮಧ್ಯೆ ದ್ವೇಷ ಬಿತ್ತುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈಗಾಗಲೇ ವಿಧಾನಸಭಾ ಚುನಾವಣೆಯ ಬಿಸಿ ದೇಶಾದ್ಯಂತ ಹಬ್ಬಿದ್ದು, ತ್ರಿಪುರಾದಲ್ಲಿ ಬಿಜೆಪಿ ಭರ್ಜರಿಯಾಗಿ ಜಯ ಸಾಧಿಸುವ ಮೂಲಕ ಕಾಂಗ್ರೆಸ್ಸಿಗರಿಗೆ ನಡುಕ ಸೃಷ್ಟಿಸಿತ್ತು!! ಅಷ್ಟೇ ಅಲ್ಲದೇ ಈಗಾಗಲೇ ಭಾರತೀಯ ಜನತಾ ಪಕ್ಷವು ಗರಿಷ್ಠ ಸಂಖ್ಯೆಯಲ್ಲಿ ವಿಜಯಪತಾಕೆಯನ್ನು ಹಾರಿಸಿದ್ದರೆ ಇತ್ತ ಶತಾಯಗತಾಯ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಸಲು ಕಾಂಗ್ರೆಸ್ಸಿಗರು ಹರಸಾಹಸ ಪಡುತ್ತಿದ್ದಾರೆ.

ಹಾಗಾಗಿ ಅಧಿಕಾರಕ್ಕಾಗಿ ಯಾವುದೇ ಹೀನ ಕೃತ್ಯಕ್ಕೂ ಇಳಿಯಲು ಸಿದ್ಧರಾಗಿದ್ದೇವೆ ಎನ್ನುವುದನ್ನು ನಿರೂಪಿಸುತ್ತಲೇ ಬರುತ್ತಿರುವ ಕಾಂಗ್ರೆಸ್ಸಿಗರ ನೀಚ ಮನಸ್ಥಿತಿಗೆ ಮತ್ತೊಂದು ಗರಿ ಎನ್ನುವಂತೆ ಛತ್ತೀಸ್ ಗಡದ ಕಾಂಗ್ರೆಸ್ ಶಾಸಕರೊಬ್ಬರು ಹಿಂಸಾತ್ಮಕ, ಪ್ರಚೋಧಾತ್ಮಕ ಹೇಳಿಕೆ ನೀಡಿ, ದ್ವೇಷ ಬಿತ್ತಿರುವ ವಿಚಾರ ಇದೀಗ ಎಲ್ಲೆಡೆ ವೈರಲ್ ಆಗಿದೆ!! ಹೌದು.. ”ಛತ್ತೀಸ್‍ಗಢದಲ್ಲಿ ಅಧಿಕಾರ ರೂಢವಾಗಿರುವ ಭಾರತೀಯ ಜನತಾ ಪಕ್ಷವನ್ನು ಹೊಡೆದೋಡಿಸಲು ಅಗತ್ಯವಿದ್ದರೆ ದೊಣ್ಣೆ ಮತ್ತು ಬುಲೆಟ್ ಉಪಯೋಗಿಸಲು ಕೂಡ ನಾವು ಹಿಂಜರಿಯವುದಿಲ್ಲ” ಎಂದು ಕಾಂಗ್ರೆಸ್ ಶಾಸಕ ರಾಮದಯಾಳ್ ಉಯಿಕೆ ಹೇಳಿರುವ ಮಾತುಗಳು ಈಗ ವೈರಲ್ ಆಗಿವೆ. ಅಷ್ಟೇ ಅಲ್ಲದೇ ಇದು ವಿವಾದಕ್ಕೂ ಕಾರಣವಾಗಿವೆ.

ಇತ್ತೀಚೆಗಷ್ಟೆ, “2019ರಲ್ಲಿ ನರೇಂದ್ರ ಮೋದಿ ಅವರು ಸ್ವಾತಂತ್ರೋತ್ಸವದ ಭಾಷಣ ಮಾಡುವುದಿಲ್ಲ” ಎಂದು ತೃಣ ಮೂಲ ಕಾಂಗ್ರೆಸ್ ನಾಯಕ ಡೆರೆಕ್ ಓ ಬ್ರಯನ್ ಹೇಳಿಕೆಯನ್ನು ನೀಡಿ ಸುದ್ದಿಯಾಗಿದ್ದರು. ಅಷ್ಟೇ ಅಲ್ಲದೇ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡೆರೆಕ್ ಓ ಬ್ರಯನ್ ಈ ವರ್ಷ ಮೋದಿ ಅವರು ಕೆಂಪುಕೋಟೆಯಲ್ಲಿ ಮಾಡುವ ಭಾಷಣವೇ ಅವರ ಕೊನೆಯ ಭಾಷಣ, ಇದನ್ನು ನಿಮ್ಮ ಮನೆಯ ಗೋಡೆಗಳ ಮೇಲೆ ಬರೆದಿಟ್ಟುಕೊಳ್ಳಿ ಎನ್ನುವ ಮೂಲಕ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿ ನರೇಂದ್ರ ಮೋದಿಯವರ ಹತ್ಯೆಗೆ ಸಂಚು ರೂಪಿಸುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಹುಟ್ಟುಹಾಕುವಂತೆ ಹೇಳಿಕೆ ನೀಡಿದ್ದರು!!

ಆದರೆ ಇದೀಗ ಬುಲೆಟ್ ಮತ್ತು ಕೋಲು ಬಳಸಿಯಾದರೂ ಬಿಜೆಪಿಯನ್ನು ಛತ್ತೀಸ್ ಗಢದ ಅಧಿಕಾರದಿಂದ ಕಿತ್ತೊಗೆಯಲಾಗುವುದು ಎಂಬ ಹೇಳಿಕೆಯ ಮೂಲಕ ಕಾಂಗ್ರೆಸ್ ಶಾಸಕ ರಾಮದಯಾಳ್ ಉಯಿಕೆ ಜನರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಛತ್ತೀಸ್ ಗಢದ ಕೋರ್ಬಾ ಜಿಲ್ಲೆಯ ಸೆಂಥಿಯಾ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಾಸಕ “ಶತಾಯಗತಾಯ ಬಿಜೆಪಿಯನ್ನು ರಾಜ್ಯದಿಂದ ಹೊಡೆದೋಡಿಸಬೇಕಿದೆ. ಅದಕ್ಕೆ ಕಾರ್ಯಕರ್ತರು ಯಾವುದೇ ಮಾರ್ಗವಿಡಿದರೂ ಸರಿ” ಎಂಬರ್ಥದಲ್ಲಿ ಭಾಷಣ ಬಿಗಿದಿದ್ದಾರೆ.

ಛತ್ತೀಸ್‍ಗಢದಲ್ಲಿ ಈ ವರ್ಷಾಂತ್ಯ ವಿಧಾನಸಭಾ ಚುನಾವಣೆಗಳು ನಡೆಯಲಿಕ್ಕಿವೆ. ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದೇ ತಿರುವೆವು ಎಂಬ ಶಪಥವನ್ನು ಪಕ್ಷದ ಕಾರ್ಯಕರ್ತರಿಗೆ ಬೋಧಿಸುವ ಕಾರ್ಯಕ್ರಮ ಸಿಂಥಿಯಾ ಗ್ರಾಮದಲ್ಲಿ ನಡೆದಿದ್ದಾಗ ಪಾಲಿತನಖರ್ ಕ್ಷೇತ್ರದ ಶಾಸಕರಾಗಿರುವ ಉಯಿಕೆ ಅವರು ಆಳುವ ಬಿಜೆಪಿಯನ್ನು ರಾಜ್ಯದಿಂದ ಹೊಡೆದೋಡಿಸಲು ದೊಣ್ಣೆ ಮತ್ತು ಬುಲೆಟ್ ಉಪಯೋಗಿಸುವ ಮಾತುಗಳನ್ನು ಆಡಿದರು. ಈ ಕಾರ್ಯಕ್ರಮದಲ್ಲಿ ಹಾಜರಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕಾಂಗ್ರೆಸ್‍ನ ಛತ್ತೀಸ್‍ಗಢ ವ್ಯವಹಾರಗಳ ಪ್ರಭಾರಿಯಾಗಿರುವ ಪಿ ಎಲ್ ಪುಣಿಯಾ ಅವರು, ಶಾಸಕ ಉಯಿಕೆ ಅವರು ಮಾತುಗಳನ್ನು ಸಮರ್ಥಿಸಿ “ಪ್ರಾಸಬದ್ಧತೆಗಾಗಿ ಉಯಿಕೆ ಅವರು – ಬುಲೆಟ್ ಪದಪುಂಜವನ್ನು ಉಪಯೋಗಿಸಿಕೊಂಡಿದ್ದಾರೆ’ ಎಂದು ಹೇಳಿ ಶಾಸಕನ ಹೇಳಿಕೆಯನ್ನು ತಿರುಚಲು ಯತ್ನಿಸಿದ್ದಾರೆ!!

ಹಾಗಾಗಿ ಕಾಂಗ್ರೆಸ್ ಛತ್ತೀಸಘಡ್ ಉಸ್ತುವಾರಿ ಪಿಎಲ್ ಪುನಿಯಾ ಅವರು ರಾಮದಯಾಳ್ ಉಯಿಕೆಯವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಮುಖಂಡರ ಹಿಂಸಾ ಪ್ರಚೋಧಕ ಮನಸ್ಥಿತಿಯನ್ನು ಹೊರಹಾಕಿದ್ದಾರೆ. ಈಗಾಗಲೇ 2019 ರ ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ಸೆಡ್ಡು ಹೊಡೆಯಲು ಸರ್ವರೀತಿಯಲ್ಲೂ ಸನ್ನದ್ಧವಾಗಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ದಂಡಯಾತ್ರೆಗೆ ಬ್ರೇಕ್ ಹಾಕೋಕೆ ಮಾಸ್ಟರ್ ಪ್ಲಾನ್ ಮಾಡಿದ್ದು ಗೊತ್ತೇ ಇದೆ!! ಅಷ್ಟೇ ಅಲ್ಲದೇ ಬಿಜೆಪಿ ಕಾರ್ಯಕರ್ತರ ಮೇಲೆ ಬಾಂಬ್ ದಾಳಿ ನಡೆಸಿರುವ ವಿಡಿಯೋ ಕೂಡ ಈ ಹಿಂದೆ ವೈರಲ್ ಆಗಿತ್ತು!!

ಆದರೆ ಇದೀಗ ”ಛತ್ತೀಸ್‍ಗಢದಲ್ಲಿ ಅಧಿಕಾರರೂಢವಾಗಿರುವ ಭಾರತೀಯ ಜನತಾ ಪಕ್ಷವನ್ನು ಹೊಡೆದೋಡಿಸಲು ಅಗತ್ಯವಿದ್ದರೆ ದೊಣ್ಣೆ ಮತ್ತು ಬುಲೆಟ್ ಉಪಯೋಗಿಸಲು ಕೂಡ ನಾವು ಹಿಂಜರಿಯವುದಿಲ್ಲ” ಎಂದಿರುವ ಕಾಂಗ್ರೆಸ್ ಶಾಸಕನ ಹೇಳಿಕೆ ಬಹಿರಂಗವಾಗಿಯೇ ಹೊರಬಿದ್ದಿದ್ದು, ಈ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ!! ಈಗಾಗಲೇ ಬಿಜೆಪಿಯನ್ನು ಮಣಿಸಲು ನಾನಾ ಕಸರತ್ತುಗಳನ್ನು ನಡೆಸುತ್ತಿರುವ ಕಾಂಗ್ರೆಸ್ಸಿಗರು ನರೇಂದ್ರ ಮೋದಿಯ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ಟೀಕಾ ಪ್ರಹಾರಗಳನ್ನು ಹರಿಸುತ್ತಲೇ ಇರುವ ಕಾಂಗ್ರೆಸ್ಸಿಗರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧ ಎನ್ನುವುದನ್ನು ಪದೇ ಪದೇ ನಿರೂಪಿಸುತ್ತಲೇ ಇರುವುದಂತೂ ಅಕ್ಷರಶಃ ನಿಜ.

ಮೂಲ: https://www.indiatoday.in/india/story/if-needed-sticks-and-bullets-will-be-used-to-dislodge-bjp-govt-in-chhattisgarh-1209412-2018-04-11

– ಅಲೋಖಾ

Tags

Related Articles

Close