ಪ್ರಚಲಿತ

ಲವ – ಕುಶರ ಜನ್ಮಸ್ಥಾನದ ಸಂರಕ್ಷಣೆಗೆ ಸಿದ್ಧವಾದ ಯುಪಿ ಸರ್ಕಾರ

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿ ಹಲವು ಶತಕಗಳ ಬಳಿಕ ಇದೀಗ ಭವ್ಯ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕಳೆದ ಒಂಬತ್ತು ವರ್ಷಗಳ ಹಿಂದೆ ನಡೆದ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ನೀಡಿದ ಭರವಸೆಯಂತೆ ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆ ಮೂಲಕ ಕೋಟಿ ಕೋಟಿ ರಾಮ ಭಕ್ತರ ಕನಸು ನನಸಾಗುತ್ತಿದೆ.

ಮುಂದಿನ ವರ್ಷದ ಜನವರಿ ತಿಂಗಳಿನಲ್ಲಿ ಈ ರಾಷ್ಟ್ರ ಮಂದಿರದಲ್ಲಿ ಪ್ರಭು ಶ್ರೀರಾಮ ಚಂದಿರ ಭಕ್ತರಿಗೆ ದರುಶನ ಭಾಗ್ಯ ಕರುಣಿಸಲಿದ್ದಾನೆ. ಆ ಮೂಲಕ ಅಯೋಧ್ಯೆಗೆ ಮತ್ತೆ ಕಳೆ ತಂದು ಕೊಡುವ ಕೆಲಸವನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ನೇತೃತ್ವದ ಉತ್ತರ ಪ್ರದೇಶದ ಸರ್ಕಾರ ಮಾಡುತ್ತಿದೆ.

ಶ್ರೀ ರಾಮ ನಿಗೆ ಆತನ ಜನ್ಮ ಸ್ಥಾನವನ್ನು ಮತ್ತೆ ದೊರೆಯುವಂತೆ ಮಾಡಲಾಗಿದೆ‌. ಈಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಅವರ ಸರ್ಕಾರ ಮತ್ತೊಂದು ಮಹತ್ವದ ಕೆಲಸಕ್ಕೆ ಕೈ ಹಾಕುವ ನಿರ್ಣಯ ಮಾಡಿದೆ. ಶ್ರೀರಾಮನ ಮಕ್ಕಳಾದ ಲವ ಮತ್ತು ಕುಶರ ಜನ್ಮ ಸ್ಥಾನವನ್ನು ಪುನರುಜ್ಜೀವನ ಮಾಡುವುದು ಮತ್ತು ಅದನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಂಡಿದೆ.

ಮಹರ್ಷಿ ವಾಲ್ಮೀಕಿ ಅವರ ಆಶ್ರಮದಲ್ಲಿ ಶ್ರೀರಾಮನ ಪತ್ನಿ ಸೀತಾ ಮಾತೆ ಲವ – ಕುಶರೆಂಬ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಳು ಎಂದು ರಾಮಾಯಣ ಹೇಳುತ್ತದೆ. ಕಾನ್ಪುರದ ಬಿಥೂರ್ ಸಮೀಪ ಮಹರ್ಷಿ ವಾಲ್ಮೀಕಿ ಆಶ್ರಮವಿದೆ. ಈ ಆಶ್ರಮದ ಜೊತೆಗೆ ಮಥುರೆಯ ರಾಜಾ ಸೀತಾರಾಮ ಮಹಲ್, ಫತೇಪುರದಲ್ಲಿರುವ ರಾಸಿಕ್ ಬಿಹಾರಿ ದೇವಾಲಯಗಳನ್ನು ಪುನರುಜ್ಜೀವನ ಮಾಡುವುದು ಮತ್ತು ಅವುಗಳನ್ನು ಸಂರಕ್ಷಣೆ ಮಾಡಲು ಸಿಎಂ ಯೋಗಿ ಆದಿತ್ಯ ನಾಥ್ ಅವರ ಸರ್ಕಾರ ಮುಂದಾಗಿದೆ.

ಈ ಸಂಬಂಧ ಸವಿವರವಾದ ಕಾರ್ಯ ಯೋಜನೆಗಳನ್ನು ಸಹ ರೂಪಿಸಲಾಗಿದೆ. ಉತ್ತರ ಪ್ರದೇಶದ ಪುರಾತತ್ವ ಇಲಾಖೆ ಈ ಸಂಬಂಧ ಇ ಟೆಂಡರ್ ಪ್ರಕ್ರಿಯೆಗಾಗಿ ಆಸಕ್ತ‌ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ. ಹಾಗೆಯೇ ಲವ ಕುಶರು ಜನ್ಮ ಪಡೆದ ವಾಲ್ಮೀಕಿ ಮಹರ್ಷಿಗಳ ಆಶ್ರಮದ ಪುನರುಜ್ಜೀವನ ಕೆಲಸಕ್ಕೆ ಒಂದೂವರೆ ಕೋಟಿಗೂ ಹೆಚ್ಚು ಹಣವನ್ನು ಮೀಸಲಿಟ್ಚಿರುವುದಾಗಿ ಮೂಲಗಳು ತಿಳಿಸಿವೆ.

ಅದರಂತೆಯೇ ಮಥುರೆಯ‌ಸೀತಾ ರಾಮ ಮಹಲ್ ನವೀಕರಣಕ್ಕೆ ಒಂದು ಕೋಟಿ ಇಪ್ಪತ್ತೊಂಬತ್ತು ಸರ್ವ ರೂ. ವೆಚ್ಚವಾಗಲಿದ್ದು, ಇಎಂಡಿ ಮೊತ್ತವನ್ನು ಎರಡು ಕೋಟಿಯ ಅರವತ್ತಾರು ಲಕ್ಷಕ್ಕೆ ನಿಗದಿ ಮಾಡಲಾಗಿದೆ. ರಾಸಿಕ್ ಬಿಹಾರಿ ದೇಗುಲದ ಸಂರಕ್ಷಣೆಗೆ ಒಂದು ಕೋಟಿಯ ತೊಂಬತ್ತೇಳು ಲಕ್ಷ ರೂ. ಗಳನ್ನು ಯೋಗಿ ಸರ್ಕಾರ ವೆಚ್ಚ ಮಾಡಲಿದ್ದು, ಇಡಿಯಂ ಮೊತ್ತವನ್ನು ವೆಚ್ಚ ಮಾಡಲಿದೆ ಎಂದು ಮೂಲಗಳು ಹೇಳಿವೆ.

Tags

Related Articles

Close