ಪ್ರಚಲಿತ

ಅಂದು ಹುಡುಗಿಯರನ್ನು ಚುಡಾಯಿಸಲು ದೇವಸ್ಥಾನಕ್ಕೆ ಯುವಕರು ಹೋಗುತ್ತಾರೆ ಎಂದ ರಾಹುಲ್..ಇಂದು ದೇವಸ್ಥಾನಕ್ಕೆ ಹೋದರೆ…..

ದೇವಸ್ಥಾನಗಳಿಗೆ ಹೋಗಬೇಡಿ.! ಹೋದರೆ ನೀವು ದಡ್ಡರಾಗುತ್ತೀರಿ.! ರಾಮ ದೇವರಲ್ಲ! ಅಂತ ಪ್ರಗತಿಪರ ಚಿಂತಕ ಪೆÇ್ರ.ಕ ಎ.ಎಸ್ ಭಗವಾನ್ ವಿವಾದಿತ ಹೇಳಿಕೆಯನ್ನು ನೀಡಿದ್ದಾರೆ. ಅಂದು ಹುಡುಗಿಯರನ್ನು ಚುಡಾಯಿಸಲು ದೇವಸ್ಥಾನಕ್ಕೆ ಯುವಕರು ಹೋಗುತ್ತಾರೆ ಎಂದ ರಾಹುಲ್.., ಅದೇ ಇಂದು ದೇವಸ್ಥಾನಕ್ಕೆ ಹೋದರೆ ದಡ್ಡರಾಗುತ್ತೀರಿ ಎಂದು ವಿವಾದಿತ ಹೇಳಿಕೆಯನ್ನು ನೀಡಿದ್ದಾರೆ ಭಗವಾನ್!..ಹಿಂದೂಗಳು ಮತ್ತು ಹಿಂದೂಗಳ ದೇವರು ಎಂದರೆ ಇವರು ಏನೆಂದು ಅಂದುಕೊಂಡಿದ್ದಾರೆ? ಭಗವಾನ್ ಒಂದಲ್ಲ ಒಂದು ವಿವಾದಗಳನ್ನು ಸೃಷ್ಟಿ ಮಾಡುತ್ತಾ ಸುದ್ಧಿಯಲ್ಲಿರುತ್ತಾರೆ ಎಂದು ಎಲ್ಲರಿಗೂ ತಿಳಿದ ವಿಷಯ ಈಗ ಮತ್ತೆ ವಿವಾದಿತ ಹೇಳಿಕೆಯನ್ನು ಕೊಡುವ ಮೂಲಕ ಮತ್ತೆ ಸುದ್ಧಿಯಲ್ಲಿದ್ದಾರೆ.!!

83ನೇ ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಯಲ್ಲಿ ಪೆÇ್ರ.ಕೆ.ಎಸ್.ಭಗವಾನ್ ಇಂದು ಭಾಗವಹಿಸಿ, ರಾಮನ ವಿಚಾರ ಪ್ರಸ್ತಾಪ ಮಾಡಿದ್ದಕ್ಕೆ ಸದ್ದು ಗದ್ದಲ ಏರ್ಪಟ್ಟಿತ್ತು. ಮೈಸೂರಿನ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಅಲಕ್ಷಿತ ಸಮುದಾಯಗಳು ಎಂಬ ವಿಷಯದ ಕುರಿತ ವಿಚಾರಗೋಷ್ಠಿಯಲ್ಲಿ ಭಗವಾನ್ ರಾಮನ ಬಗ್ಗೆ ಪ್ರಸ್ತಾಪ ಮಾಡಿದ್ದರು.

ರಾಮ ಒಬ್ಬ ಜಾತಿವಾದಿ, ಅವನು ದೇವರಲ್ಲ, ಹೆಂಡತಿಯನ್ನು ತುಂಬು ಗರ್ಭಿಣಿಯಾಗಿದ್ದಾಗ ಕಾಡಿಗೆ ಕಳುಹಿಸಿದವನು, ಕೆಲವರ ತಲೆ ಕಡಿದವನು ಇಂಥವನ ದೇವಸ್ಥಾನ ಕಟ್ಟಲು ಈಗ ಮುಂದಾಗಿದ್ದಾರೆ ಎಂದು ಭಗವಾನ್ ಪ್ರಸ್ತಾಪಿಸಿ ವಿವಾದಿತ ಹೇಳಿಕೆಯನ್ನು ನೀಡುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ವೇಳೆ ಸಭಾಂಗಣದಲ್ಲಿದ್ದ ಕೆಲವರು ನೀನು ಮಾತಾಡುತ್ತಿರೋದು ತಪ್ಪು ಎಂದು ಗದ್ದಲ ಸೃಷ್ಟಿಸಿದಾಗ ಇನ್ನು ಕೆಲವರು ಭಗವಾನ್ ಪರ ನಿಂತು ಭಗವಾನ್ ಮಾತಾಡಿರೋದು ಸರಿ ಎಂದು ಕೂಗಾಡಿದ್ದರು. ಭಗವಾನ್ ಭಾಷಣ ಮುಗಿಯುವವರೆಗೂ ಸಭಾಂಗಣದಲ್ಲಿ ಮಾತ್ರ ಪರ ವಿರೋಧಗಳ ಬಗ್ಗೆ ಸದ್ದು ಗದ್ದಲ ಉಂಟಾಯಿತು. ನಂತರ ಕಾರ್ಯಕ್ರಮ ಮುಗಿದ ಮೇಲೆ ಪೆÇಲೀಸ್ ಭದ್ರತೆಯೊಂದಿಗೆ ಭಗವಾನ್ ರನ್ನು ಕರೆದೊಯ್ಯಲಾಯ್ತು. ದೇವಸ್ಥಾನದ ದುಡ್ಡನ್ನು ಮಾತ್ರ ತೆಗೆದುಕೊಂಡು ಹೋಗಿ ಸಾಬರಿಗೆ ಕೊಡಿ. ಆಗ ಬುದ್ಧಿವಂತರಾಗ್ತೀರಿ. ಅವರ ಓಟು ನಿಮಗೆ ಬರುತ್ತೆ.

ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಅವರು, ದೇವಸ್ಥಾನಗಳಲ್ಲಿ ಮೌಢ್ಯ, ಕಂದಾಚಾರ ಇವುಗಳನ್ನು ಬೆಳೆಸುತ್ತಾರೆ ಹೊರತು ಬುದ್ಧಿ ಬೆಳೆಸುವುದಿಲ್ಲ. ಹೀಗಾಗಿ ಬುದ್ಧಿ ಬೆಳೆಸದೇ ಇದ್ದರೆ ಜನ ಭಕ್ತಿ ಅನ್ನೋ ಹೆಸರಿನಲ್ಲಿ ದಡ್ಡರಾಗುತ್ತಾರೆ. ದೇವಸ್ಥಾನ `ದೆವ್’ ಎಂಬ ಧಾತುವಿನಿಂದ ಬಂದಿದೆ. `ದೆವ್’ ಅಂದ್ರೆ ಬೆಳಕು ಎಂದರ್ಥ. ಆದ್ರೆ ದೇವಸ್ಥಾನದಲ್ಲಿ ಬೆಳಕು ಎಲ್ಲಿದೆ. ಅದಕ್ಕೆ ನಾನು ದೇವಸ್ಥಾನಕ್ಕೆ ಹೋಗುತ್ತಿಲ್ಲ ಎಂದು ವಿವಾದವನ್ನು ಸೃಷ್ಟಿಸಿದ್ದಾರೆ.

ದೇವಸ್ಥಾನದಲ್ಲಿ ತಾರತಮ್ಯ, ಮೇಲು-ಕೀಳು ಇದೆ. ಹೀಗಾಗಿ ನಾನು ಕಳೆದ 58 ವರ್ಷಗಳಿಂದ ದೇವಸ್ಥಾನಕ್ಕೆ ಹೋಗುತ್ತಿಲ್ಲ. ವಾಲ್ಮೀಕಿ ರಾಮಾಯಣದಲ್ಲಿ ರಾಮ ದೇವರಲ್ಲ ಎಂದಿದ್ದಾನೆ. ಅದಕ್ಕೆ ನಾನು ರಾಮ ದೇವರಲ್ಲ ಎನ್ನುತ್ತಿದ್ದೇನೆ. ದೇವಸ್ಥಾನಗಳಿಗೆ ಹೋದರೆ ನಮ್ಮಲ್ಲಿ ಮೌಢ್ಯ ಬೆಳೆಯುತ್ತದೆ.

ಆದ್ದರಿಂದ ನಾನು ದೇವಸ್ಥಾನಕ್ಕೆ ಹೋಗಲ್ಲ ನೀವೂ ಹೋಗಬೇಡಿ ಅಲ್ಲಿ ದೇವರಿಲ್ಲ ಎಂಬ ವಿವಾದಿತ ಹೇಳಿಕೆಯನ್ನು ನೀಡಿದ್ದಾರೆ.. ಕೇವಲ ಒಂದು ಬಾರಿ ಅಲ್ಲ ಇದಕ್ಕಿಂತ ಮುಂಚೆಯೂ ವಿವಾದಿತ ಹೇಳಿಕೆಯನ್ನು ನೀಡುವ ಮೂಲಕ ಹಿಂದೂಗಳನ್ನು ಮತ್ತು ರಾಮ ದೇವರನ್ನು ದೂಷಿಸಿದ್ದಾರೆ.

ಕೇವಲ ಇದಲ್ಲದೆ ಮೈಸೂರಿನ ಸರ್ಕಾರಿ ಕಲಾ ಮಂದಿರದಲ್ಲಿ ಜೂನ್ 25ರಂದು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ಬುದ್ಧಿಜೀವಿಗಳೆಂದು ಹೇಳಿಕೊಂಡು ತಿರುಗಾಡುವ ಭಗವಾನ್, ಮಹೇಶ್ ಚಂದ್ರಗುರು ಹಾಗೂ ಇತರರು ಗೋಮಾಂಸ ತಿಂದಿದ್ದು, ಬೇರೆಯವರಿಗೂ ಅದನ್ನು ತಿನ್ನುವಂತೆ ಪ್ರಚೋದಿಸಿದ್ದಾರೆ. ಜತೆಗೆ ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಭಾಷಣ ಮಾಡಿದ್ದಾರೆ’. ಹೆಸರಿನಲ್ಲಿಯೇ ಭಗವಾನ್ ಎಂದು ಹೇಳಿಕೊಂಡು ತಿರುಗುವ ಈಗ ಈಗ ಹಿಂದೂ ಧರ್ಮಕ್ಕೆ ಹಿಂದೂ ದೇವರುಗಳಿಗೆ ನಿಂದನೆಗಳನ್ನು ಮಾಡುವುದು ಎಷ್ಟ ಮಟ್ಟಿಗೆ ಸರಿ?

ಕಾವೇರಿ ನದಿ ಹಲವು ರಾಜ್ಯಗಳಿಗೆ ಸೇರಿದ್ದು ಎಂದು ಭಗವಾನ್ ಹೇಳಿದ್ದು, ಇದರಿಂದ ಕನ್ನಡಿಗರ ಮನಸ್ಸಿಗೆ ನೋವುಂಟಾತ್ತು. ಹಿಂದೂ ದೇವರಾದ ಶ್ರೀ ರಾಮಚಂದ್ರನ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಶ್ರೀರಾಮ ಒಬ್ಬ ವ್ಯಭಿಚಾರಿ ನರಮಾನವ, ಎಂದು ಹೇಳಿದ್ದರು ಇದರಿಂದ ಕೋಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿತ್ತು. ಅನೇಕ ವರ್ಷಗಳಿಂದ ಇದೇ ರೀತಿಯ ಹೇಳಿಕೆಯನ್ನು ನೀಡುತ್ತಿರುವ ಈತನ್ನು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಬಾರದಿತ್ತು…

ಅದಲ್ಲದೆ ನಿನ್ನೆಯ ಸಮ್ಮೇಳನದಲ್ಲಿ ಚಂಪಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಭಾಷೆಯನ್ನು ಬೆಳೆಸುವ ಬಗ್ಗೆ ಕನ್ನಡಕ್ಕೆ ಒಳಿತಾಗುವ ಬಗ್ಗೆ ಮಾತನಾಡದೆ ಪಕ್ಕಾ ರಾಜಕೀಯವನ್ನು ತೋರಿಸಿದ್ದಾರೆ… ಇಲ್ಲವಾದರೆ ದೇಶದ ಪ್ರದಾನಿ ನರೇಂದ್ರ ಮೋದಿಯನ್ನು ಅಣಕಿಸುವ ಕಾರ್ಯವನ್ನು ಮಾಡುತ್ತಿರಲಿಲ್ಲ. ಈ ಮಹಾಪುರುಷ ಮಾತನಾಡಿದ್ದಲ್ಲದೆ ಸಿದ್ದರಾಮಯ್ಯನವರ ಪಕ್ಷಕ್ಕೆ ಓಟು ಹಾಕಿ ಎಂದು ಬಹಿರಂಗವಾಗಿ ಮತಯಾಚನೆ ಕೂಡಾ ಮಾಡಿದ್ದರು. ಎಸ್ ಎಲ್ ಭೈರಪ್ಪ, ಶತವಧಾನಿ ಗಣೇಶ್, ಚಿದಾನಂದ ಮೂರ್ತಿಯಂಥವರು ಮಾತಾಡುವಾಗ ಉರಿದು ಬೀಳುವ ಚಂಪಾ ತನ್ನ ಸಿದ್ಧಾಂತವೇ ಶ್ರೇಷ್ಠ ಎಂದು ನಂಬಿದ್ದಾರೆ. ಉತ್ತರ ಕರ್ನಾಟಕಕ್ಕೆ ಹೋದಾಗ ಸ್ವಾಮೀಜಿಗಳ ಕಾಲಿಗೆ ಬೀಳುವ ಚಂಪಾ, ಬೆಂಗಳೂರಿಗೆ ಬಂದ ಅಪ್ಪಟ ಜಾತ್ಯತೀತರಂತೆ ಸೋಗು ಹಾಕುತ್ತಾರೆ.

ಐದು ಸಾವಿರ ವರ್ಷಗಳಿಂದ ನಮ್ಮನ್ನಾಳುತ್ತಿರುವ ವೈದಿಕ ಬ್ರಾಹ್ಮಣರು, ವೀರಶೈವ ಮತ್ತು ಲಿಂಗಾಯತರು ಕೋಮುವಾದ ತರಲು ಹೆಗಲುಗಳಾಗಿ ಪರಿಣಮಿಸಿದ್ದಾರೆ ಎಂದು ಒಮ್ಮೆ ಹೇಳಿರುವುದು ಚಂಪಾರಿಗೆ ಮರೆತುಹೋಯಿತೇ? ಸ್ವಾತಂತ್ರ್ಯ ಬಂದಾಗಿನಿಂದ ಬ್ರಾಹ್ಮಣ ಬನಿಯಾಗಳೇ ದೇಶದ ಆಳ್ವಿಕೆ ನಡೆಸುವ ಮೂಲಕ ದೇಶದಲ್ಲಿ ನಡೆಯುತ್ತಿರುವ ಅನಾಹುತಗಳಿಗೆ ಸಾಕ್ಷಿಯಾಗಿ ನಿಂತಿದ್ದಾರೆ ಎಂಬ ಗಂಭೀರ ಆರೋಪವನ್ನು ಮಾಡಿದ್ದರು. ಒಂದು ಜಾತಿಯನ್ನು ಎಳೆದು ತಂದು ಆ ಜಾತಿಯ ಮೇಲೆ ಆರೋಪ ಮಾಡುವ ಅಪ್ಪಟ ಜಾತೀವಾದಿಯಾಗಿದ್ದಾರೆ ಚಂಪಾ. ರಾಮಾಯಣ ಓದುವವರೆಲ್ಲಾ ಭಯೋತ್ಪಾದಕರು ಎಂದು ತನ್ನ ನಾಲಗೆಯನ್ನು ತನಗೆ ಬೇಕಾದಂತೆ ಹರಿಯಬಿಟ್ಟಿದ್ದ ಚಂಪಾ ಮೇಲೆ ಈ ಮುಂಚೆ ಪ್ರಕರಣ ದಾಖಲಾಗಿತ್ತು. ಇಂತಹಾ ಚಂಪಾರನ್ನು ಸಮ್ಮೇಳನಾಧ್ಯಕ್ಷ ಮಾಡಿದ್ದು ಎಷ್ಟು ಸರಿ? ಕರ್ನಾಟಕದಲ್ಲಿ ಬೇರೆ ಯಾರು ಸಾಹಿತಿಗಳೇ ಇರಲಿಲ್ಲವೇ?

ನಿನ್ನೆಯ ಸಮ್ಮೇಳದಲ್ಲಿ ಅವಾಂತರ ಸಾಕಾಗಿಲ್ಲವೆಂದು ಇಂದು ಮತ್ತೊಬ್ಬ ಬುದ್ಧಿ ಜೀವಿ ಎಂದು ಅನಿಸಿಕೊಂಡು ತಿರುಗಾಡುತ್ತಿರುವ ಮತ್ತೊಬ್ಬ ಪೆÇ್ರ.ಕೆ.ಎಸ್.ಭಗವಾನ್ ವಿವಾದಗಳನ್ನು ಸೃಷ್ಟಿಸ¯್ದಂದೇ ಇಂತಹ ಕಾರ್ಯಕ್ರಮಗಳಿಗೆ ಹೋಗುತ್ತಾರೋ ಏನೋ ?ಅಲ್ಲ ಇವರೆಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಏನಂದು ಕೊಂಡಿದ್ದಾರೆ? ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿರುವ ಉದ್ಧೇಶವನ್ನು ಬಿಟ್ಟು ಒಂದು ಕಡೆಯಲ್ಲಿ ರಾಜಕೀಯ ಮಾಡುತ್ತಾ, ಇನ್ನೊಂದು ಕಡೆಯಲ್ಲಿ ರಾಮ ದೇವರು ಸುಳ್ಳು ಎಂದು ಜನರ ಹಾದಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇಂತಹವರನ್ನೆಲ್ಲಾ ಇಂತಹ ಕಾರ್ಯಕ್ರಮಗಳಿಗೆ ಆಹ್ವಾನ ಮಾಡುವುದೇ ತಪ್ಪು!!!

source:http://publictv.in/mysuru-kannada-sahitya-sammelana-prof-ks-bhagwan-controversial-statement-on-rama-and-temple/

-ಪವಿತ್ರ

Tags

Related Articles

Close