ಪ್ರಚಲಿತ

ಅತೀ ದೊಡ್ಡ ವಿವಾದಕ್ಕೆ ಕಾರಣವಾಯ್ತಾ ರಮ್ಯಾ ಮಾಡಿದ ಟ್ವೀಟ್?!

ರಾಹುಲ್ ಗಾಂಧಿ ಕಾಶೀ ವಿಶ್ವನಾಥನ ಮಂದಿರಕ್ಕೆ ತೆರಳಿ ಪೂಜೆಯ ವೇಳೆ ಮುಸ್ಲಿಂರು ನಮಾಜ್ ಮಾಡುವ ರೀತಿ ಕುಳಿತು ಅಲ್ಲಿನ ಪುರೋಹಿತರಿಂದಲೇ ತೀವ್ರ ಬೈಗುಳಕ್ಕೆ ಕಾರಣರಾಗಿದ್ದರು. “ಇದು ಮಸೀದಿ ಅಲ್ಲವಯ್ಯಾ, ದೇವಸ್ಥಾನ. ನಮಾಜ್ ಮಾಡುವ ರೀತಿ ಕುಳಿತುಕೊಳ್ಳಬೇಡ” ಎಂದು ತರಾಟೆಗೆ ತೆಗೆದುಕೊಂಡಿದ್ದರು. ಇದನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಬಹಿರಂಗ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದ ರಾಹುಲ್ ಗಾಂಧಿ ತೀವ್ರ ಮುಜುಗರಕ್ಕೀಡಾಗುವಂತಾಗಿತ್ತು. ಸಾಮಾಜಿಕ ಜಾಲತಾಣ ಹಾಗೂ ಪ್ರಮುಖ ಮಾಧ್ಯಮಗಳು ರಾಹುಲ್ ಗಾಂಧಿಯ ಈ ನಡೆಯನ್ನು ತೀವ್ರವಾಗಿ ಖಂಡಿಸಿದ್ದವು.

ಇದನ್ನೆಲ್ಲ ನೋಡಿ ನಮ್ಮ ಮೋಹಕ ತಾರೆ, ರಾಹುಲ್ ಗಾಂಧಿಯ ಆಪ್ತೆ, ಯಾಕಿನ್ನೂ ಸುಮ್ಮನಿದ್ದಾರೆ ಎಂದು ಅಂದುಕೊಂಡಿದ್ದರು ದೇಶದ ಜನತೆ. ಬಂದೇ ಬಿಟ್ಟರಲ್ಲ ನಮ್ಮ ರಮ್ಯಾ ಮೇಡಂ. ರಾಹುಲ್ ಗಾಂಧಿಯ ಮೈನಲ್ಲಿ ಸೊಳ್ಳೆ ಕುಂತುಬಿಟ್ಟರೂ ಅದನ್ನು ದೊಡ್ಡ ಸುದ್ಧಿ ಮಾಡುವ ರಮ್ಯಾ ಈ ವಿಷಯವನ್ನು ಬಿಡ್ತಾರಾ…!!!

ರಾಹುಲ್ ಗಾಂಧಿಯ ವೈಭವೀಕರಣಕ್ಕೋಸ್ಕರ ರಮ್ಯಾಳಿಗೆ ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣದ ಜವಬ್ಧಾರಿಯನ್ನು ನೀಡಿತ್ತು ಕಾಂಗ್ರೆಸ್. ಆ ಜವಬ್ಧಾರಿಯನ್ನು ಸರಿಯಾಗಿಯೇ ಮಾಡಿದ್ದಳು ಮೋಹಕ ತಾರೆ..!!! ರಾಷ್ಟ್ರ ಮಟ್ಟದಲ್ಲಿ ರಾಹುಲ್ ಗಾಂಧಿಯನ್ನು ಎತ್ತರಕ್ಕೆ ಕೊಂಡೊಯ್ದು ನಿಲ್ಲಿಸಿತ್ತು ಸಾಮಾಜಿಕ ಜಾಲತಾಣದ ಕೆಲಸಗಳು. ಆದರೆ ಸತ್ಯ ಗೊತ್ತಾಗಲು ತುಂಬಾ ಸಮಯ ಬೇಕಾಗಿರಲಿಲ್ಲ. ಆವಾಗ ತಾನೆ ಹೊರಬಂದ ಸತ್ಯದಲ್ಲಿ “ರಾಹುಲ್ ಗಾಂಧಿಯನ್ನು ಹಿಂಬಾಲಿಸುತ್ತಿದ್ದ ಟ್ವೀಟಾಪತಿಗಳು ನಕಲಿಗಳು” ಎಂಬುವುದು ಬಟಬಯಲಾಯಿತು. ಅಂದಿನಿಂದ ರಮ್ಯಾ ಮೇಡಂರದ್ದು ಸುದ್ಧಿನೇ ಇರಲಿಲ್ಲ. ಅದೆಲ್ಲಿಗೆ ಹೋಗಿದ್ದರೋ ಗೊತ್ತೇ ಆಗಲಿಲ್ಲ.

ಅದೆಲ್ಲಿದ್ದರೋ… ಈಗ ರಾಹುಲ್ ಗಾಂಧಿ ಕಾಶೀ ವಿಶ್ವನಾಥನ ಸನ್ನಿಧಿಯಲ್ಲಿ ಮುಜುಗರಕ್ಕೀಡಾಗಿದ್ದ ವಿಷಯ ಕೇಳಿ ಓಡೋಡಿ ಬಂದಿದ್ದಾರೆ. ಎಷ್ಟು ವೇಗವಾಗಿ ಓಡಿ ಬಂದಿದ್ದಾರೋ ಅಷ್ಟೇ ವೇಗವಾಗಿ ವಾಪಾಸ್ ಆಗಿದ್ದಾರೆ. ರಾಹುಲ್ ಗಾಂಧಿಯಯನ್ನು “ಪಪ್ಪು” ಅಲ್ಲ ಎಂದು ಬಿಂಬಿಸಲು ಶತ ಪ್ರಯತ್ನ ನಡೆಸುತ್ತಿದ್ದ ರಮ್ಯಾಳ ಆಟ ನಡೆಯಲಿಲ್ಲವಾದರೂ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದಾಳೆ ಈ ರಮ್ಮು.

ಅದೂ ಆಕೆ ಮಾತನಾಡಿದ್ದು ಫೈರ್ ಬ್ರಾಂಡ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಗ್ಗೆ. ಇವಳ ಈ ಹೇಳಿಕೆ ವಿವಾದದ ಗೂಡಾಗಿದ್ದು ತೀವ್ರ ಟೀಕೆಯನ್ನು ಎದುರಿಸುವಂತಾಗಿದೆ. ಇತ್ತೀಚೆಗೆ ರಾಹುಲ್ ಗಾಂಧಿಯ ಕಾಶೀ ವಿಶ್ವನಾಥನ ಸನ್ನಿಧಾನದ ಭೇಟಿಯ ಕುರಿತಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟೀಕಿಸಿದ್ದರು. ಮಂದಿರದಲ್ಲಿ ರಾಹುಲ್ ನಮಾಜ್ ಮಾಡಿದ ಶೈಲಿಯಲ್ಲಿ ಕುಳಿತಿದ್ದನ್ನು ಯೋಗಿ ಟೀಕಿಸಿದ್ದರು. ಇದನ್ನು ಕೇಳಿ ಕೆಂಡಾಮಂಡಲವಾದ ರಮ್ಯಾ ಅವಸರದಲ್ಲೇ ಟ್ವೀಟ್ ಮಾಡಿದ್ದಾರೆ. “ಯೋಗಿ ಆದಿತ್ಯನಾಥ್ ಸುಳ್ಳುಗಾರ ಎಂದು ದೇವರು ಹೇಳಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.

ಈಯವ್ವಾಳಿಗೆ ಅದ್ಯಾವ ದೇವರು ಹೇಳಿದ್ದಾರೋ ಗೊತ್ತಿಲ್ಲ. ಬಹುಷಃ ಅದು ರಾಹುಲ್ ದೇವರಾಗಿರಬಹುದು. ಬೇರಾವ ದೇವರನ್ನೂ ಕಾಂಗ್ರೆಸ್ ಪಕ್ಷ ದೇವರೆಂದು ಸ್ವೀಕರಿಸಲ್ಲ ತಾನೇ. ಹೀಗಾಗಿ ಅದು ರಾಹುಲ್ ದೇವರೇ ಆಗಿರಬೇಕು.

ಜಗತ್ತಿನಲ್ಲೇ ಕಾಮಿಡಿ ಪೀಸ್ ಆಗಿ ಹೋಗಿದ್ದ ರಾಹುಲ್ ಗಾಂಧಿಯನ್ನು ವಿಶ್ವಮಟ್ಟದಲ್ಲಿ ನಾಯಕನ ಸ್ಥಾನದಲ್ಲಿ ಕೂರಿಸಬೇಕೆಂಬ ಉದ್ದೇಶದಿಂದ ನಟಿ ರಮ್ಯಾಳನ್ನು ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿ ಜವಬ್ಧಾರಿ ನೀಡಲಾಗಿತ್ತು. ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದರೂ ನಂತರ ಅದು ನಕಲಿ ಎಂದು ಗೊತ್ತಾಗಿ ಛೀಮಾರಿ ಹಾಕಿಸಿಕೊಂಡಿದ್ದಳು. ಇದರಿಂದ ಬೆಕ್ಕಸ ಬೆರಗಾಗಿದ್ದ ರಮ್ಯಾ ಮೌನದ ಮೊರೆ ಹೋಗಿದ್ದಳು. ಮಾತ್ರವಲ್ಲ ಈ ಜವಬ್ಧಾರಿ ನನಗೆ ಬೇಡ ಎಂದು ರಾಹುಲ್ ಗಾಂಧಿಯ ಬಳಿಯೇ ಪಟ್ಟು ಹಿಡಿದಿದ್ದಳು ಎಂದು ಬಲ್ಲ ಮೂಲಗಳು ಹೇಳಿತ್ತು.

ಈ ಕಾರಣದಿಂದಾಗಿಯೇ ರಮ್ಯಾ ರಾಜ್ಯ ರಾಜಕಾರಣಕ್ಕೆ ಎಂಟ್ರಿಯಾಗಿದ್ದು. ಮಂಡ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಯೋಚನೆಯಲ್ಲಿಯೇ ರಾಜ್ಯಕ್ಕೆ ಎಂಟ್ರಿಯಾಗಿದ್ದರು ರಮ್ಯಾ. ಆದರೆ ಅದ್ಯಾವಾಗ ರಮ್ಯಾ ಈ ಒಂದು ಆಸೆಯನ್ನು ಇಟ್ಟುಕೊಂಡು ರಾಜ್ಯಕ್ಕೆ ಕಾಲಿಟ್ಟರೋ ಆವಾಗಲೇ ಅಂಬಿ ಅಂಕಲ್ ತುಂಬಾನೆ ಗರಂ ಆಗಿಬಿಟ್ಟಿದ್ದರು. ಕಾಂಗ್ರೆಸ್‍ನ್ನೇ ತ್ಯಜಿಸುವುದಾಗಿ ಬೆದರಿಸಿದರು. ಅಂಬರೀಶ್‍ರನ್ನು ಕಳೆದುಕೊಂಡರೆ ಅಲ್ಪ ಸ್ವಲ್ಪ ಇದ್ದ ಸ್ಥಾನವೂ ಕಳೆದುಕೊಳ್ಳಬೇಕಾದೀತು ಎಂಬ ಭಯದಿಂದ ಅಂಬಿಗೆ ತೇಪೆ ಹಚ್ಚುವ ಕಾರ್ಯ ನಡೆದಿತ್ತು. ಆ ಕೂಡಲೇ ಅಂಬರೀಶ್‍ಗೆ ಕರೆ ಮಾಡಿದ್ದ ಕೈಕಮಾಂಡ್, “ದಯವಿಟ್ಟು ಪಕ್ಷ ತೊರೆಯಬೇಡಿ. ಮಂಡ್ಯದ ಸೀಟು ನಿಮಗೆಂದೇ ಇರುತ್ತದೆ. ದಯವಿಟ್ಟು ಪಕ್ಷ ತೊರೆಯುವ ಯೋಚನೆಯನ್ನು ಮಾಡಬೇಡಿ” ಎಂದು ವಿನಂತಿಸಿದ ಬಳಿಕ ಮಂಡ್ಯದ ಗಂಡು ಮೆತ್ತಗಾಗಿದ್ದರು.

ಇದರಿಂದ ಧಿಕ್ಕು ದೋಚದ ರಮ್ಯಾ, ಮತ್ತೆ ರಾಹುಲ್ ಗಾಂಧಿಯ ಬಳಿ ಮೊರೆಯಿಡುತ್ತಾಳೆ. ಆವಾಗ ರಾಹುಲ್ ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಕರೆ ಮಾಡಿ, “ನಮ್ಮ ರಮ್ಯಾಳಿಗೊಂದು ಸೀಟು ಇಡಪ್ಪಾ” ಎಂದು ಆದೇಶ ಮಾಡಿದ ನಂತರ ಸಿದ್ದರಾಮಯ್ಯ ಎಚ್ಚೆತ್ತುಕೊಂಡಿದ್ದಾರೆ. ಬೆಂಗಳೂರಿನ ವಿಧಾನ ಸಭಾ ಕ್ಷೇತ್ರವೊಂದನ್ನು ಆಯ್ಕೆ ಮಾಡಿ ಅದರಲ್ಲಿ ರಮ್ಯಾಳಿಗೆ ಸೀಟು ಕೊಡುವ ಪ್ಲಾನಿಂಗ್ ಸಿದ್ದರಾಮಯ್ಯರದ್ದು.

ಆದರೆ ಈಗಾಗಲೇ ಅಲ್ಲಿರುವ ಆಕಾಂಕ್ಷಿಗಳು ಸುಮ್ಮನಿರುತ್ತಾರೆಯೇ. ಮುಂದಿನ ಚುನಾವಣೆಯಲ್ಲಿ ತನಗೆ ಸೀಟ್ ಗ್ಯಾರಂಟಿ ಎಂದು ಹೊಸ ಪೈಜಾಮು ಹೊಲಿಸಿ, ಇಸ್ತ್ರಿ ಹಾಕಿಟ್ಟ ಟಿಕೆಟ್ ಆಕಾಂಕ್ಷಿಗಳಿಗೆ ಏನು ಹೇಳುವುದು..? ಮತ್ತೆ ಗೊಂದಲ ಸೃಷ್ಟಿಯಾಗುವುದರಲ್ಲಿ ಸಂದೇಹವೇ ಇಲ್ಲ. ತಿಪ್ಪರಲಾಗ ಹಾಕಿದರೂ ಬೆಂಗಳೂರಿನ ಸೀಟು ರಮ್ಯಾಳಿಗೆ ದಕ್ಕಲ್ಲ ಅನ್ನೋದು ಅಷ್ಟೇ ಸತ್ಯ. ಹೀಗೆ ಮತ್ತೆ ಆಕೆ ರಾಹುಲ್ ಗಾಂಧಿಯತ್ತ ಮೊರೆಯಿಡುತ್ತಾ ಹೋಗಬೇಕಾಗುತ್ತದೆ.

ರಾಹುಲ್ ಗಾಂಧಿಯನ್ನು ಅಟ್ಟಕ್ಕೇರಿಸುವ ಭರದಲ್ಲಿ ಹಾಗೂ ಗಾಂಧಿ ಕುಟುಂಬವನ್ನು ಒಲಿಸಿಕೊಳ್ಳುವ ಭರದಲ್ಲಿ ಅದೇನೇನೋ ಮಾಡಲು ಹೋಗಿ ಮತ್ತೇನೋ ಮಾಡಿಕೊಳ್ಳುವ ಈ ರಮ್ಯಾಗೆ ಜನರು ಬುದ್ಧಿ ಕಲಿಸಲು ತಯಾರಾಗಿ ನಿಂತಿದ್ದಾರೆ. ಜನ, ಸಿದ್ದರಾಮಯ್ಯನ ದುರಾಡಳಿತವನ್ನಾದರೂ ಕ್ಷಮಿಸಿಯಾರು. ಆದರೆ ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ರವನ್ನು ನಿಂದಿಸಿದರೆ ಸುಮ್ಮನಿರೋಲ್ಲ. ಯಾಕೆಂದರೆ ಸತ್ಯ ಯಾವುದೆಂದು ಜನರಿಗೆ ಚೆನ್ನಾಗಿ ಗೊತ್ತಿದೆ.

ಕಳೆದ ಬಾರಿಯ ಸಂಸತ್ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ರಮ್ಯಾ ನಂತರ ಕೆಲವು ತಿಂಗಳುಗಳ ಕಾಲ ಭಾರತದಿಂದಲೇ ಪರಾರಿಯಾಗಿದ್ದರು. ಹೀಗೇ ಆಕೆಯ ರಂಪಾಟ ಮುಂದುವರೆದರೆ ಶಾಶ್ವತವಾಗಿ ಮನೆಯಲ್ಲೇ ಕೂರುವ ಪರಿಸ್ಥಿತಿ ಎದುರಾಗುವುದರಲ್ಲಿ ಅನುಮಾನವೇ ಇಲ್ಲ. ನಂತರ ಮತ್ತೆ ಛಾನ್ಸ್ ಕೇಳಿಕೊಂಡು ಚಿತ್ರ ನಿರ್ದೇಶಕರ ಕೈಕಾಲು ಹಿಡಿಯಲು ಹೋಗಬೇಕಾದ ದೌರ್ಭಾಗ್ಯ ಬಂದರೂ ಅಚ್ಚರಿಯಿಲ್ಲ…

-ಸುನಿಲ್ ಪಣಪಿಲ

Tags

Related Articles

Close