ಪ್ರಚಲಿತ

ಅಮಿತ್ ಶಾ ಕೊಟ್ಟ ಒಂದೇ ಏಟಿಗೆ ಹಾರ್ದಿಕ್ ಪಟೇಲ್ ಮಖಾಡೆ ಮಲಗಿದ್ದು ಹೇಗೆ? ಮತ್ತೊಮ್ಮೆ ತೀವ್ರ ಮುಖಭಂಗ ಅನುಭವಿಸಿದ ಹಾರ್ದಿಕ್ ಪಟೇಲ್.!!

ಹಾರ್ದಿಕ್ ಪಟೇಲ್. ಧರ್ಮವನ್ನು ಒಡೆದು ಒಂದು ಜಾತಿಯ ಸ್ವಘೋಷಿತ ನಾಯಕನಾಗಿ, ದೇಶದ್ರೋಹಿ ಚಟುವಟಿಕೆಗಳನ್ನು ಮಾಡುತ್ತಾ, ಸಿಕ್ಕ ಸಿಕ್ಕ ಹುಡುಗಿಯರೊಂದಿಗೆ ಚಕ್ಕಂದವಾಡಿ, ಕಾಂಗ್ರೆಸ್‍ನೊಂದಿಗೆ ರಾಜಕೀಯ ಲಾಭಕ್ಕಾಗಿ ಕೈಜೋಡಿಸಿಕೊಂಡು ಕೊನೆಗೆ ಸೋತು ಸುಣ್ಣವಾಗಿ ಮನೆಗೆ ಹೋಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಪ್ರಧಾನಿ ನರೇಂದ್ರ ಮೋದಿಯನ್ನು ಗುಜರಾತಿನಲ್ಲಿ ಮಣಿಸಲು ಗುಜರಾತಿನ ಪ್ರಬಲ ಜಾತಿಯೊಂದನ್ನು ಅಸ್ತ್ರವಾಗಿ ಇಟ್ಟುಕೊಂಡು ಕಾರ್ಯನಿರ್ವಹಿಸಿ ಅದರಲ್ಲಿ ಸೋಲುಕಂಡ ಸೋಗಲಾಡಿ ನಾಯಕ.

ಗುಜರಾತಿನ ಪ್ರಬಲ ಜಾತಿಯಾದ ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಪ್ರತಿಭಟನೆಗಳನ್ನು ನಡೆಸುತ್ತಾ ಬಂದ ಈ ನಾಯಕ ಕೊನೆಗೆ ಸೇರಿದ್ದು ದೇಶವನ್ನು 60 ವರ್ಷಗಳ ಕಾಲ ಆಳಿ, ದೇಶವನ್ನು ಪಾತಾಳಕ್ಕೆ ತಳ್ಳಿದ್ದ ಕಾಂಗ್ರೆಸ್ ಪಕ್ಷದೊಂದಿಗೆ. ಪಾಟೀದಾರ್ ಹೋರಾಟ ಸಂಘಟನೆಯೊಂದನ್ನು ಜಾರಿಗೆ ತಂದು, ಅದನ್ನು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಎತ್ತಿಕಟ್ಟಿ ರಾಜಕೀಯ ರಂಗದಲ್ಲಿ ತಾನೊಬ್ಬ ಮೋದಿಗೆ ಸಮನಾದ ನಾಯಕ ಎಂದು ಬಿಂಬಿಸಲು ಹೊರಟ ವಿಫಲ ನಾಯಕ ಈ ಹಾರ್ದಿಕ್ ಪಟೇಲ್.

ಇತ್ತೀಚೆಗೆ ನಡೆದ ಗುಜರಾತ್ ವಿಧಾನ ಸಭಾ ಚುನಾವಣೆಯಲ್ಲಿ ಈ ಹಾರ್ದಿಕ್ ಎಂಬ ಎಳೆಯ ಕೂಸು ಭಾರೀ ಸದ್ದು ಮಾಡಿತ್ತು. ಗುಜರಾತ್‍ನಲ್ಲಿ ಏಳಲೇ ಆಗದ ಪರಿಸ್ಥಿತಿಯಲ್ಲಿದ್ದ ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷವನ್ನು ತೂರಿಕೊಂಡು ಬಂದಿದ್ದ ಈ ಹಾರ್ದಿಕ್ ಎಂಬ ಆಗ ತಾನೇ ಹುಟ್ಟಿದ ಕೂಸು. ಅತ್ತ ಕಡೆ ದಲಿತರನ್ನು ಮೋದಿ ವಿರುದ್ಧ ಎತ್ತಿ ಕಟ್ಟಿ ಭಾರತೀಯ ಜನತಾ ಪಕ್ಷವನ್ನು ಸೋಲಿಸಲು ಕಟಿಬದ್ಧವಾಗಿ ನಿಂತಿದ್ದ ಜಿಗ್ನೇಶ್ ಮೇವಾನಿ, ಮತ್ತೊಂದು ಕಡೆ ಪಾಟೀದಾರ್ ಸಮುದಾಯವನ್ನು ಎತ್ತಿಕಟ್ಟಿ ಮೋದಿಯನ್ನು ಸೋಲಿಸಲು ಶಸ್ತ್ರ ಸನ್ನದ್ಧರಾಗಿ ನಿಂತಿದ್ದ ಹಾರ್ದಿಕ್ ಪಟೇಲ್. ಇವರಿಬ್ಬರನ್ನೂ ತನ್ನ ಪಕ್ಷಕ್ಕೆ ಸೆಳೆದು ಮೋದಿ ಹಾಗೂ ಭಾರತೀಯ ಜನತಾ ಪಕ್ಷದ ವಿರುದ್ಧ ತೊಡೆತಟ್ಟಿ ನಿಂತಿದ್ದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ.

ಆದರೆ ಅದೆಷ್ಟೇ ಪ್ರಯತ್ನ ಪಟ್ಟರೂ ಮೋದಿ ಎಂಬ ಕೋಟ್ಯಾಂತರ ಜನರ ಹೃದಯ ಸಾಮ್ರಾಟನನ್ನು ಮೆಟ್ಟಿ ನಿಲ್ಲಲು ವಿರೋಧಿಗಳಿಗೆ ಆಗಲೇ ಇಲ್ಲ. ದಲಿತರು ಹಾಗೂ ಪಾಟೀದಾರ್ ಸಮುದಾಯವನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡು ಆಟವಾಡುತ್ತಿದ್ದರು ಈ ಕಾಂಗ್ರೆಸ್ ಹಾಗೂ ಸೋಗಲಾಡಿ ಜಾತಿ ನಾಯಕರು. ನಿಜವಾಗಿಯೂ ಅವರಿಗೆ ಅವರ ಜಾತಿಯ ಹಿತಾಸಕ್ತಿಗಿಂತ, ತಾನು ರಾಜಕೀಯದಲ್ಲಿ ಮೋದಿಗೆ ಸಮನಾಗಿ ಬೆಳೆಯಬೇಕು ಎಂಬ ಆಸೆ ಮೊದಲಿತ್ತು ಎಂಬುವುದು ಅಷ್ಟೇ ಸತ್ಯ.

ಸೋತು ಮಖಾಡೆ ಮಲಗಿದ್ದ ವಿರೋಧಿಗಳು…

ಗುಜರಾತ್ ಅಂದರೆ ಇಡೀ ವಿಶ್ವವೇ ಒಮ್ಮೆ ತಿರುಗಿ ನೋಡುತ್ತೆ. “ಓಹ್… ದಾಟ್ ಈಸ್ ಮೋದಿ ಸ್ಟೇಟ್” ಎಂದು ಉಧ್ಘರಿಸುತ್ತಾರೆ. ಮೋದಿಯನ್ನೇ ಹಾಡಿ ಹೊಗಳುವ ಜಗತ್ತಿನ ನಾಯಕರು ಅವರ ರಾಜ್ಯವನ್ನೂ ಅಷ್ಟೇ ತಿಳಿದಿರುತ್ತಾರೆ. ಹೀಗಾಗಿ ಗುಜರಾತ್ ಎಂದರೆ ಪಕ್ಕನೆ ಒಮ್ಮೆ ಮೋದಿ ಕಣ್ಣ ಮುಂದೆ ನಿಲ್ಲುತ್ತಾರೆ ಎನ್ನುವುದು ಖಂಡಿತವಾಗಿಯೂ ಉತ್ಪ್ರೇಕ್ಷೆಯಲ್ಲ.

ಇಂತಹ ಗುಜರಾತಿನಲ್ಲಿ ಮೋದಿ ಪ್ರಧಾನಿಯಾದ ನಂತರ ಮೊದಲ ಬಾರಿಗೆ ವಿಧಾನ ಸಭಾ ಚುನಾವಣೆ ನಡೆದು ಹೋಗಿತ್ತು. ಈ ಚುನಾವಣೆಯಲ್ಲಿ ಮೋದಿ ಎಂಬ ವಿಶ್ವನಾಯಕನನ್ನು ಸೋಲಿಸಲು ದೇಶದ ಎಲ್ಲಾ ವಿರೋಧಿಗಳೂ ಒಂದಾಗಿ ಕೆಲಸ ಮಾಡಿದ್ದರು. ಜಾತಿಜಾತಿಗಳನ್ನು ಎತ್ತಿಕಟ್ಟಿ ಧರ್ಮದ ವಿಷಭೀಜ ಬಿತ್ತಿ ಒಡೆದು ಆಳುವ ನೀತಿಯನ್ನು ಅನುಸರಿಸಿ, ಭಾರತೀಯ ಜನತಾ ಪಕ್ಷವನ್ನು ಸೋಲಿಸಲು ಸಾಧ್ಯವಾದಷ್ಟು ಪ್ರಯತ್ನವನ್ನು ಪಟ್ಟರೂ ಅದರಲ್ಲಿ ವಿಫಲವನ್ನು ಕಾಣುತ್ತಾರೆ ಕಾಂಗ್ರೆಸ್ ಹಾಗೂ ಇತರೆ ಒಡೆದು ಆಳಲು ಹೊರಟ ನಾಯಕರು.

Image result for nitin patel

ಹಾರ್ದಿಕ್ ಪಟೇಲ್ ಎಂಬ ಸ್ವಘೋಷಿತ ನಾಯಕನೂ ಈ ಚುನಾವಣೆಯಲ್ಲಿ ಹೀನಾಯವಾಗಿ ಸೋತು ಸುಣ್ಣವಾಗಿ ಹೋಗುತ್ತಾರೆ. ತಾನೊಬ್ಬ ಪ್ರಬಲ ಜಾತಿಯ ಪ್ರಬಲ ನಾಯಕನೆಂದು ಬಿಂಬಿಸಿಕೊಂಡಿದ್ದರೂ ಅದೇ ಜಾತಿಯ ಮತದಾರರು ಆತನಿಗೆ ತಕ್ಕ ಪಾಠವನ್ನು ಕಲಿಸಿದ್ದರು. ಏನೇ ಕುಸ್ತಿಪೆಟ್ಟು ನಡೆಸಿದರೂ ಆ ವಿಧಾನ ಸಭಾ ಚುನಾವಣೆಯಲ್ಲಿ ಆತನನ್ನು ಸ್ವತಃ ಆತನ ಸಮುದಾಯದ ಮತದಾರರೇ ಹಿಗ್ಗಾಮುಗ್ಗವಾಗಿ ಸೋಲಿಸಿದ್ದರು.

ಕೇಸರೀ ಪಡೆಗೆ ಕೈಹಾಕಿದ್ದ ಹಾರ್ದಿಕ್…

ಹೌದು. ಮೊನ್ನೆ ಮೊನ್ನೆ ತಾನೇ ರಚನೆಯಾಗಿದ್ದ ಗುಜರಾತ್ ಸರ್ಕಾರದಲ್ಲಿ ಭಿನ್ನಮತ ಸ್ಪೋಟಗೊಂಡಿತ್ತು. ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ನಿತಿನ್ ಪಟೇಲ್‍ರ ಅಸಮಧಾನ ಸ್ಪೋಟಗೊಂಡಿತ್ತು. ತನಗೆ ಉಪಮುಖ್ಯಮಂತ್ರಿಯ ಹೊರತಾಗಿ ಬೇರಾವ ಪ್ರಮುಖ ಹುದ್ದೆಯನ್ನೂ ನೀಡಿಲ್ಲ ಎಂಬ ಬೇಸರ ನಿತಿನ್ ಪಟೇಲ್ ಮೇಲಿತ್ತು. ಹೀಗಾಗಿ ಸಹಜವಾಗಿಯೇ ಅವರು ಬಿಜೆಪಿ ವರಿಷ್ಟರ ಮೇಲೆ ಮುನಿಸಿಕೊಂಡಿದ್ದರು.

ಆದರೆ ಇದನ್ನೇ ಬಂಡವಾಳವಾಗಿಟ್ಟುಕೊಂಡ ಹಾರ್ದಿಕ್ ಪಟೇಲ್ ಮುನಿಸಿಕೊಂಡಿದ್ದ ನಿತಿನ್ ಪಟೇಲ್‍ಗೆ ಬುಲಾವ್ ನೀಡಿದ್ದರು. ನಿಮ್ಮ 10 ಶಾಸಕರನ್ನು ಕರೆದುಕೊಂಡು ಬನ್ನಿ ನಿಮ್ಮನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂಬ ಸಂದೇಶವನ್ನು ರವಾನಿಸಿಬಿಟ್ಟಿದ್ದರು ಹಾರ್ದಿಕ್ ಪಟೇಲ್. ಈ ಮೂಲಕ ಭಾರತೀಯ ಜನತಾ ಪಕ್ಷದಲ್ಲಿ ಆದಂತಹ ಭಿನ್ನಾಭಿಪ್ರಾಯಗಳನ್ನು ತಾನು ಉಪಯೋಗಿಸಿಕೊಳ್ಳಲು ಮುಂದಾಗುತ್ತಾರೆ.

ಶಾ ಕೊಟ್ಟರು ಕೊಡಲಿಯೇಟು..!!!

ಭಾರತೀಯ ಜನತಾ ಪಕ್ಷ ಅಂದರೆ ಸುಮ್ನೇನಾ. ಅದೂ ಮೋದಿ ಹಾಗೂ ಅಮಿತ್ ಶಾ ತವರಲ್ಲಿ ವಿರೋಧಿಗಳ ಕುತಂತ್ರ ದೂರದ ಮಾತು. ನಿತಿನ್ ಪಟೇಲ್ ಪಕ್ಷದ ವಿರುದ್ಧ ಬಂಡೆದ್ದಿದ್ದಾರೆ ಎಂಬ ಮಾಹಿತಿ ತಿಳಿದ ಶಾ ಆ ಕೂಡಲೇ ಆ ಬಗ್ಗೆ ಗಮನ ಹರಿಸುತ್ತಾರೆ. ನಿತಿನ್ ಪಟೇಲ್ ಅಸಮಧಾನ ಹಾಗೂ ಹಾರ್ದಿಕ್ ಪಟೇಲ್ ಕ್ರಿಮಿನಲ್ ಐಡಿಯಾವನ್ನು ಒಂದೇ ಸಮನೆ ಶಮನ ಮಾಡುತ್ತಾರೆ. ನಿತಿನ್ ಪಟೇಲ್ ಜೊತೆ ಮಾತನಾಡಿ ಅವರನ್ನು ಸರಿಯಾಗಿಯೇ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಮಾತ್ರವಲ್ಲದೆ ಭಾರತೀಯ ಜನತಾ ಪಕ್ಷದ ವಿಚಾರದಲ್ಲಿ ಮೂಗುತೂರಿಸಿದರೆ ನಿಮಗೆ ಉಳಿಗಾಲವಿಲ್ಲ ಎಂಬ ಸಂಧೇಶವನ್ನು ಹಾರ್ದಿಕ್ ಪಟೇಲ್ ಸಹಿತ ವಿರೋಧಿಗಳಿಗೆ ನೀಡುತ್ತಾರೆ.

Related image

ಇದರಿಂದ ಕಂಗಾಲಾದ ಹಾರ್ದಿಕ್ ಪಟೇಲ್ ಮತ್ತೊಮ್ಮೆ ಸಪ್ಪೆ ಮೊರೆ ಹಾಕಿಕೊಂಡು ಮನೆಯಲ್ಲಿಯೇ ಕೂರುತ್ತಾರೆ. ತಾನು ಮಾಡಿದ ತಂತ್ರಗಾರಿಕೆ ಚುನಾವಣೆ ನಂತರವೂ ವಿಫಲವಾಗಿದ್ದು ಆತನಿಗೆ ಮುಖಭಂಗವಾಗಿದ್ದು ಮಾತ್ರವಲ್ಲದೆ ಮತ್ತೊಮ್ಮೆ ಆಡಳಿತ ಪಕ್ಷದ ವಿಚಾರ ಹಾಗೂ ಮೋದಿ ಮತ್ತು ಅಮಿತ್ ವಿಚಾರಕ್ಕೆ ತಲೆನೇ ಹಾಕಿ ಮಲಗದಂತಹ ಪರಿಸ್ಥಿತಿ ಎದುರಾಗಿದೆ.

-ಸುನಿಲ್ ಪಣಪಿಲ

Tags

Related Articles

Close