ಪ್ರಚಲಿತ

ಅಮೇಥಿಯಲ್ಲಿ ಸೋಲೇ ಇಲ್ಲ ಎಂದು ಬೀಗುತ್ತಿದ್ದ ರಾಹುಲ್ ಗಾಂಧಿಗೆ ದೇವರ ನೆನಪಾಗಿದ್ದಾದರೂ ಯಾಕೆ? ಸ್ವ ಕ್ಷೇತ್ರದಲ್ಲೂ ಟೆಂಪಲ್ ರನ್ ಶುರುವಿಟ್ಟ ನೆಹರೂ ಕುಡಿ!!

ಕಳೆದ ಗುಜರಾತ್ ಚುನಾವಣೆ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೃದು ಹಿಂದುತ್ವದತ್ತ ವಾಲಿದ್ದಲ್ಲದೇ ಸೋಮನಾಥ ದೇಗುಲ ಸೇರಿದಂತೆ ಗುಜರಾತಿನಲ್ಲಿ ಹೋದಲ್ಲೆಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡಿ ಸುದ್ದಿಯಾಗಿದ್ದರು. ಅಷ್ಟೇ ಅಲ್ಲದೇ ದೇವಸ್ಥಾನಗಳಿಗೆ ಬೇಟಿ ನೀಡುವ ವೇಳೆ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸುವ ಮೂಲಕ ಮೃದು ಹಿಂದುತ್ವ ಧೋರಣೆ ತೋರ್ಪಡಿಸಿ ಹಿಂದೂ ಮತಗಳನ್ನು ಸೆಳೆಯಲೆತ್ನಿಸಿದ್ದರು. ಆದರೆ ಇದೀಗ ರಾಹುಲ್ ಗಾಂಧಿ, ಉತ್ತರಪ್ರದೇಶದಲ್ಲೂ ಇದೇ ಮಂತ್ರ, ತಂತ್ರ ಅನುಸರಿಸುವ ಸುಳಿವು ನೀಡಿದ್ದಾರೆ.

ಗುಜರಾತ್ ಚುನಾವಣಾ ಆಧಾರದಲ್ಲೇ ಇತರೆ ಚುನಾವಣೆಗಳಲ್ಲಿ ಸೆಣೆಸಲು ಕಾಂಗ್ರೆಸ್ ಚಿಂತನೆ ನಡೆಸುತ್ತಿದ್ದು, ಗುಜರಾತ್ ಚುನಾವಣೆಯಲ್ಲಿ ರಾಹುಲ್ ಗಾಂಧಿ ಟೆಂಪಲ್ ರನ್ ಭಾರಿ ಸುದ್ದಿಯಾಗಿತ್ತು. ಆದರೆ, ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳಿಗೆ ತೆರಳಿದ್ದು ಗೌಣವಾಗಿ, ಹಿಂದೂ ದೇಗುಲಗಳಲ್ಲಿ ರಾಹುಲ್ ಕಾಣಿಸಿಕೊಳ್ಳುವುದು ವಿಶೇಷ ಫೆÇಕಸ್ ಆಗುವಂತೆ ಸ್ವತಃ ಕಾಂಗ್ರೆಸ್ ನೋಡಿಕೊಂಡಿತ್ತು. ಹಿಂದುಗಳ ಮತದ ಮೂಲಕ ಗುಜರಾತ್ ಅನ್ನು ಭದ್ರಕೋಟೆ ಮಾಡಿಕೊಂಡಿದ್ದ ಬಿಜೆಪಿಗೆ ಸವಾಲೊಡುವ ಕಾಂಗ್ರೆಸಿನ ತಂತ್ರದಲ್ಲಿ ಸ್ವಲ್ಪ ಯಶಸ್ಸನ್ನೂ ಕಂಡಿತು. ಇದು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಹಿಂದುಗಳ ಬಗ್ಗೆ ಮೃದು ಧೋರಣೆ ತಳೆಯುವಂತೆ ಮಾಡಿದೆಯೆಂದು ಹೇಳಲಾಗುತ್ತಿದೆ.

ಆದರೆ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಗುಜರಾತ್ ವಿಧಾನಸಭಾ ಚುನಾವಣೆ ವೇಳೆ ಹಲವು ದೇಗುಲಗಳಿಗೆ ಭೇಟಿ ನೀಡುವ ಮೂಲಕ ಹಿಂದೂಗಳ ಓಲೈಕೆ ಮಾಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಉತ್ತರಪ್ರದೇಶದಲ್ಲೂ ಇದೇ ಮಂತ್ರ, ತಂತ್ರ ಅನುಸರಿಸುವ ಸುಳಿವು ನೀಡಿದ್ದಾರೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ಚುಕ್ಕಾಣಿಯನ್ನು ಅಧಿಕೃತವಾಗಿ ಹಿಡಿದ ಬಳಿಕ ಮೊದಲ ಬಾರಿಗೆ ಎರಡು ದಿನಗಳ ಪ್ರವಾಸ ಹೊರಟಿದ್ದಾರೆ. ಲಖನೌದಿಂದ ಅಮೇಥಿ ಮಾರ್ಗವಾಗಿ ಹೊರಟ ಅವರು ಹನುಮಾನ್ ಮಂದಿರಕ್ಕೆ ಭೇಟಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಬಿಳಿಯ ಕುರ್ತಾ-ಪೈಜಾಮಾ ಧರಿಸಿದ್ದ ರಾಹುಲ್, ಹಣೆಗೆ ದೊಡ್ಡದಾದ ಕುಂಕುಮ ತಿಲಕವನ್ನು ಇಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಈ ಬಗ್ಗೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತ ರಾಮ್ ಕುಮಾರ್ ಮಾತಾನಾಡಿ, ‘ಕಾಂಗ್ರೆಸ್ ಅಧ್ಯಕ್ಷರು ತಮ್ಮ ಲೋಕಸಭಾ ಕ್ಷೇತ್ರ ಅಮೇಥಿಗೆ ಆಗಾಗ್ಗೆ ಭೇಟಿ ನೀಡುತ್ತಿರುತ್ತಾರೆ. ಆದರೆ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ಪ್ರವಾಸ ಆರಂಭಿಸಿದ್ದು ಇದೇ ಮೊದಲು ಇರಬಹುದು’ ಎನ್ನುವ ವಿಚಾರವನ್ನು ಹೇಳಿದ್ದಾರೆ.

ಈಗಾಗಲೇ ಗುಜರಾತ್‍ನ ಉದ್ದಗಲಕ್ಕೂ 27 ಮಂದಿರಗಳಿಗೆ ರಾಹುಲ್ ಯಾತ್ರೆ ಕೈಗೊಂಡಿದ್ದರು. ಇದರಿಂದ ಮೃದು ಹಿಂದುತ್ವ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಆರೋಪಕ್ಕೂ ರಾಹುಲ್ ಗುರಿಯಾಗಿದ್ದರು. ಅಷ್ಟೇ ಅಲ್ಲದೇ, ಸೋಮನಾಥ ದೇವಸ್ಥಾನಕ್ಕೆ ರಾಹುಲ್ ನೀಡಿದ ಭೇಟಿಯ ಸಂದರ್ಭದಲ್ಲಿ ಅವರ ಹೆಸರನ್ನು ಹಿಂದೂಯೇತರರ ಪಟ್ಟಿಯಲ್ಲಿ ಬರೆದಿರುವುದು ವಿವಾದ ಸೃಷ್ಟಿಸಿತು.

ಅಷ್ಟೇ ಅಲ್ಲದೇ, ಈಗಾಗಲೇ 19 ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್, ಕರ್ನಾಟಕದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸಲು ಹಿಂದೂತ್ವ ಮತ್ತು ರಾಷ್ಟ್ರೀಯ ಚಿಂತನೆಯನ್ನೇ ಬಂಡವಾಳ ಮಾಡಿಕೊಳ್ಳುವ ಲಕ್ಷಣಗಳು ಕಾಣುತ್ತಿವೆ. ಇನ್ನು , ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ಯಶಸ್ವಿಯಾಗಿ ಅಲ್ಪಸಂಖ್ಯಾತ ಓಲೈಕೆ ರಾಜಕಾರಣವನ್ನು ಕಾಂಗ್ರೆಸ್ ಮಾಡಿಕೊಂಡು ಬಂದಿದೆ. ಆದರೆ ಈಗಿನ ಪರಿಸ್ಥಿತಿ ಭಿನ್ನವಾಗಿದ್ದು ಭಾಜಪವನ್ನು ಸಮರ್ಥವಾಗಿ ಎದುರಿಸಲು ಹಿಂದೂ ಪರ ನಿಲುವು ತಳೆಯಲೇಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಇದೆ.

ಹಾಗಾಗಿ ಅಲ್ಪಸಂಖ್ಯಾತರನ್ನು ದೂರ ಮಾಡದೆ ಅಂತರ ಕಾಯ್ದುಕೊಳ್ಳುವ ತಂತ್ರಕ್ಕೆ ಮೊರೆಹೋಗಲು ಕಾಂಗ್ರೆಸ್ ಉದ್ದೇಶಿಸಿದೆ..!! ಇದು ಗುಜರಾತಿನಲ್ಲಿ ಕೊಂಚ ಮಟ್ಟಿಗೆ ಫಲ ನೀಡಿದೆ ಎಂದು ಕಾಂಗ್ರೆಸ್ ನಂಬಿದೆ. ಕರ್ನಾಟಕದಲ್ಲೂ ಇದೇ ರೀತಿ ರಣತಂತ್ರವನ್ನು ಕಾಂಗ್ರೆಸ್ ಮುಂದುವರಿಸಲಿದೆಯಲ್ಲದೇ ಇದೀಗ ಉತ್ತರಪ್ರದೇಶದಲ್ಲೂ ಇದೇ ಮಂತ್ರ, ತಂತ್ರ ಅನುಸರಿಸುವ ಸುಳಿವು ನೀಡಿದ್ದಾರೆ.

“ಇಂದು ಮಕರ ಸಂಕ್ರಾಂತಿ. ತಮ್ಮ ತಾಯಿ ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯ್‍ಬರೇಲಿ ಕ್ಷೇತ್ರಕ್ಕೆ ತೆರಳಲು ಹಬ್ಬದ ದಿನವನ್ನೇ ಆರಿಸಿಕೊಂಡಿರುವುದು ವಿಶೇಷವಾಗಿದೆ. ಇದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಟ್ಟರ್ ಹಿಂದುತ್ವವಾದದ ವಿರುದ್ಧ ಕಾಂಗ್ರೆಸ್‍ನ ‘ಮೃದು ಹಿಂದುತ್ವ ನೀತಿ'” ಎಂದು ಪಕ್ಷದ ಆಂತರಿಕ ಮೂಲಗಳು ಅಭಿಪ್ರಾಯ ಪಡುತ್ತಿವೆ.

ಎರಡು ದಿನಗಳ ಉತ್ತರಪ್ರದೇಶ ಪ್ರವಾಸಕ್ಕಾಗಿ ಸೋಮವಾರ ಲಖನೌಗೆ ಬಂದಿಳಿದ ರಾಹುಲ್ ಗಾಂಧಿ ಅಲ್ಲಿಂದ ತಾವು ಲೋಕಸಭೆಯನ್ನು ಪ್ರತಿನಿಧಿಸುವ ಅಮೇಠಿ ಕ್ಷೇತ್ರಕ್ಕೆ ತೆರಳುವ ವೇಳೆ ಹನುಮಂತನ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿರುವುದೇ ವಿಶೇಷ. ಯಾಕೆಂದರೆ ಹಿಂದೂ ಧೋರಣೆಗಳನ್ನೇ ಕಂಡಿಸಿದ್ದವರು ಇದೀಗ ಹಿಂದೂ ದೇವಾಲಯಗಳಿಗೆ ಬೇಟಿ ನೀಡುತ್ತಿದ್ದಾರೆ ಎಂದರೆ ಅದು ಅಚ್ಚರಿಯಲ್ಲದೇ ಬೇರೆನೂ??

ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ರಾಹುಲ್ ಗಾಂಧಿ ಆ ಬಳಿಕ ಲಖನೌ- ರಾಯ್‍ಬರೇಲಿ ರಸ್ತೆಯಲ್ಲಿರುವ ಚೂರ್ವಾ ಹನುಮಾನ್ ಮಂದಿರಕ್ಕೆ ಭೇಟಿ ನೀಡಿದ್ದಲ್ಲದೇ, ಹೊರಗೆ ಬರುವಾಗ ಹಣೆಯ ಮೇಲೆ ತಿಲಕ ಇಟ್ಟುಕೊಂಡಿದ್ದು ಗಮನ ಸೆಳೆದಿದ್ದಾರೆ. 2016ರಲ್ಲಿ ಸೆಪ್ಟೆಂಬರ್ 9ರಂದು ರಾಹುಲ್ ಅಯೋಧ್ಯೆಗೆ ಭೇಟಿ ನೀಡಿದ್ದ ವೇಳೆ ವಿವಾದಿತ ರಾಮಮಂದಿರ – ಬಾಬ್ರಿ ಮಸೀದಿಗೆ ಸಮೀಪವೇ ಇರುವ ಹನುಮಾನ್ ದೇಗುಲಕ್ಕೆ ಭೇಟಿ ನೀಡಿದ್ದರು. ಅದು 1992 ರಲ್ಲಿ ಬಾಬ್ರಿ ಮಸೀದಿ ಧ್ವಂಸಗೊಂಡ ಬಳಿಕ ಗಾಂಧೀ-ನೆಹರೂ ಕುಟುಂಬದ ವ್ಯಕ್ತಿಯೊಬ್ಬರು ಅಯೋಧ್ಯೆಗೆ ಭೇಟಿ ನೀಡಿದ ಮೊದಲ ಘಟನೆಯಾಗಿತ್ತು.

ಇತ್ತೀಚಿನ ಗುಜರಾತ್ ಚುನಾವಣೆ ವೇಳೆ ಸುಮಾರು 27 ಮಂದಿರಗಳಿಗೆ ರಾಹುಲ್ ಭೇಟಿ ನೀಡಿದ್ದರು. ಬಿಜೆಪಿಯ ಹಿಂದುತ್ವ ರಾಜಕೀಯವನ್ನು ಎದುರಿಸಲು ರಾಹುಲ್ ಉದ್ದೇಶಪೂರ್ವಕವಾಗಿ ಈ ತಂತ್ರದ ಮೊರೆ ಹೋಗಿದ್ದ ಇವರು ಗುಜರಾತ್ ಫಲಿತಾಂಶ ಬಂದ ಬಳಿಕ ರಾಹುಲ್ ಸೋಮನಾಥ ಮಂದಿರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದರು. ಆದರೆ ಕೇವಲ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ತಾವೊಬ್ಬ ಶಿವಭಕ್ತ, ಜನಿವಾರಧಾರಿ ಬ್ರಾಹ್ಮಣ ಎಂದೆಲ್ಲ ರಾಹುಲ್ ಹೇಳಿಕೊಂಡಿರುವುದು ಮಾತ್ರ ನಿಜಕ್ಕೂ ಹಾಸ್ಯಾಸ್ಪದ ವಿಚಾರ ಎಂದನಿಸುತ್ತದೆ.

– ಅಲೋಖಾ

Tags

Related Articles

Close