ಪ್ರಚಲಿತ

ಅಲ್ಪಸಂಖ್ಯಾತರ ಕೇಸ್ ರದ್ದತಿ ವಿಚಾರ, ಹಿಂದೂಗಳ ಆಕ್ರೋಷಕ್ಕೆ ಬೆಚ್ಚಿಬಿದ್ದ ಗೃಹ ಸಚಿವ ಕ್ಷಮೆ ಕೇಳಿ ಹೇಳಿದ್ದೇನು ಗೊತ್ತಾ..?!

ಕಾಂಗ್ರೆಸ್ ಪಕ್ಷ ಈ ದೇಶದಲ್ಲಿ ಅಲ್ಪಸಂಖ್ಯಾತರ ಪಕ್ಷ ಎನ್ನುವುದೇನೂ ಗುಟ್ಟಾಗಿ ಉಳಿದಿಲ್ಲ. ದೇಶದಲ್ಲಿ ಜಾತ್ಯಾತೀತತೆ ಎನ್ನುವ ಸೋಗನ್ನು ಹುಟ್ಟುಹಾಕಿ, ಹಿಂದೂಗಳ ಧಮನವನ್ನೇ ತನ್ನ ಅಸ್ತ್ರವಾಗಿರಿಸಿಕೊಂಡು ಪ್ರತಿಯೊಂದು ವಿಷಯದಲ್ಲೂ ಅಲ್ಪಸಂಖ್ಯಾತರೇ ನಮ್ಮ ಸರ್ವಸ್ವ ಎಂದು ತಿಳಿದಿರುವ ದೇಶ ವಿರೋಧಿ ಪಕ್ಷ.

ಸಧ್ಯ ಈ ಪಕ್ಷ ತನ್ನ ಇಬ್ಬಗೆ ನೀತಿಯಿಂದಲೇ ನೆಲೆಕಳೆದುಕೊಳ್ಳುತ್ತಿದೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯ ಎಫೆಕ್ಟ್ ಕಾಂಗ್ರೇಸ್ ಪಕ್ಷಕ್ಕೆ ಭಾರೀ ಸಿಡಿಲಾಘಾತವನ್ನೇ ನೀಡಿದ್ದು ಆಗಲೇ ಕಾಂಗ್ರೆಸ್ ಪಕ್ಷ ಮುಳುಗುವ ದೋಣಿ ಎಂಬ ಕುಖ್ಯಾತಿಗೆ ಪಾತ್ರವಾಗಿತ್ತು.

ರಾಜ್ಯದಲ್ಲೂ ನೆಲೆಕಳೆದುಕೊಳ್ಳುತ್ತಾ ಕಾಂಗ್ರೆಸ್..?

ಈವರೆಗಿನ ಎಲ್ಲಾ ಸಮೀಕ್ಷೆಗಳು ಈ ಪ್ರಶ್ನೆಗೆ ಹೌದು ಎಂಬ ಉತ್ತರವನ್ನೇ ನೀಡುತ್ತಿದೆ. ಕಾಂಗ್ರೆಸ್ ಸರ್ಕಾರವಿರುವ ಏಕೈಕ ರಾಜ್ಯ ಕರ್ನಾಟಕದಲ್ಲೂ ತನ್ನ ನೆಲಕಳೆದುಕೊಳ್ಳುವ ಭೀತಿ ಎದುರಾಗಿದೆ.ಇದಕ್ಕೂ ಪ್ರಮುಖ ಕಾರಣ ಅಲ್ಪ ಸಂಖ್ಯಾತರ ಓಲೈಕೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದೊಡನೆಯೇ ಅಲ್ಪಸಂಖ್ಯಾತರ ಓಲೈಕೆಯನ್ನೇ ಮಾಡಿಕೊಂಡು ಬಂದ ಕಾಂಗ್ರೆಸ್ ಈಗ ನಾಶದ ಹಂತವನ್ನು ತಲುಪಿದೆ.

ಅಲ್ಪಸಂಖ್ಯಾತರ ಕೇಸ್ ವಾಪಾಸ್…

ಅಧಿಕಾರಕ್ಕೆ ಬಂದದ್ದೇ ತಡ ರಾಜ್ಯದ ಅಲ್ಪಸಂಖ್ಯಾತರ ಮೇಲಿರುವ ಎಲ್ಲಾ ಪ್ರಕರಣಗಳನ್ನು ರದ್ದು ಮಾಡಿತ್ತು. ಈ ಮೂಲಕ ಉಗ್ರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಮುಸಲ್ಮಾನರ ಕೇಸ್ ವಾಪಾಸ್ ಆಗಿತ್ತು. ಕೋಮು ಗಲಭೆಗಳು ಮತ್ತೆ ಆರಂಭವಾದವು. ಒಂದಲ್ಲಾ ಎರಡಲ್ಲಾ… ಬರೋಬ್ಬರಿ 23 ಹಿಂದೂ ಕಾರ್ಯಕರ್ತರ ಹತ್ಯೆಗಳು ರಾಜ್ಯದಲ್ಲಿ ನಡೆಯಿತು. ಕುಂಕುಮ ಧಾರಣೆ ಮಾಡಿ ಕೇಸರೀ ಶಲ್ಯ ಧರಿಸಿದರೆಂದರೆ ಸಾವನ್ನು ಅಪ್ಪಿಕೊಂಡ ಸ್ಥಿತಿ ರಾಜ್ಯದ್ದಾಗಿತ್ತು. ಕರ್ನಾಟಕ ಕೇರಳವಾಗಿತ್ತು.


ರಾಜ್ಯವೆಲ್ಲಾ ಅಲ್ಲೋಲ ಕಲ್ಲೋಲವಾಗೆದ್ದರೂ ಸಿದ್ದರಾಮಯ್ಯ ಮಾತ್ರ ಗಡದ್ದಾಗಿ ನಿದ್ದೆ ಮಾಡುತ್ತಿದ್ದರು. ಇನ್ನೂ ಏನೂ ಆಗಿಲ್ಲವೆಂಬಂತೆ ಚಿಂತಿಸದೆ ಮತ್ತೆ ಮುಸಲ್ಮಾನರ ಓಲೈಕೆಗೆ ಮುಂದಾಗಿದ್ದರು. ಪರಿಣಾಮ ಮತ್ತೆ ಅಲಪಸಂಖ್ಯಾತರ ಕೇಸ್ ವಾಪಾಸಿಗೆ ನಿರ್ಧರಿಸಲಾಗುತ್ತೆ. ಸಚಿವರು ಹಾಗೂ ಪೊಲೀಸ್ ಅಧಿಕಾರಿಗಳ ಪತ್ತ ವಿನಿಮಯವಾಗುತ್ತೆ. ಹಿಂದೂ ಸಮಾಜ ಮತ್ತೆ ಆಕ್ರೋಷಗೊಳ್ಳುತ್ತೆ. ಟೀಕೆಗಳ ಸುರಿಮಳೆಯೇ ಗೈಯಲಾಗುತ್ತೆ.ಗೃಹ ಸಚಿವ ರಾಮಲಿಂಗಾ ರೆಡ್ಡಿ ಅಕ್ಷರಷಃ ಬೆಚ್ಚಿ ಬೀಳುತ್ತಾರೆ. ತನ್ನ ಪ್ರಮಾದವನ್ನು ಒಪ್ಪಿಕೊಂಡ ಗೃಹಸಚಿವ ತಾವು ಮಾಡಿಕೊಂಡ ಅವಾಂತರಕ್ಕೆ ಸಮಜಾಯಿಷಿ ನೀಡಿದ್ದಾರೆ.

ಅಲ್ಪಸಂಖ್ಯಾಕ ಸಮುದಾಯದವರ ವಿರುದ್ಧದ ಪ್ರಕರಣ ವಾಪಸ್ ಪಡೆಯುವ ಸುತ್ತೋಲೆಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸರಕಾರ ಯೂಟರ್ನ್ ಹೊಡೆದಿದ್ದು, ಎಲ್ಲ ಸಮುದಾಯದ ಮುಗ್ಧರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು ಎಂದಿದೆ.

ಕೋಮುಗಲಭೆಗೆ ಜಾತಿ-ಧರ್ಮ ಅಡ್ಡ ಬರಲ್ಲ ಎಂದ ಅವರು, ಕಣ್ತಪ್ಪಿನಿಂದ “ಅಲ್ಪಸಂಖ್ಯಾಕ’ ಸಮುದಾಯ ಎಂದಾಗಿದೆ ಎಂದು ಗೃಹ ಸಚಿವ ರಾಮ ಲಿಂಗಾರೆಡ್ಡಿ ಸಮಜಾಯಿಷಿ ನೀಡಿದ್ದಾರೆ. ಈ ಹಿಂದೆ 2017 ಡಿಸೆಂಬರ್ 22ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿದ್ದ “ಕೋಮು ಗಲಭೆಗಳಲ್ಲಿ ಮತ್ತು ಇತರೆ ಪ್ರಕರಣಗಳಲ್ಲಿ ಮುಗ್ಧ ಅಲ್ಪಸಂಖ್ಯಾಕ ಸಮುದಾಯದವರ ವಿರುದ್ಧ ದಾಖ ಲಾಗಿರುವ ಪ್ರಕರಣಗಳನ್ನು ಅಭಿ ಯೋಜನೆಯಿಂದ ಹಿಂಪಡೆಯುವ ಬಗ್ಗೆ’ ಎಂದಿದ್ದ ವಾಕ್ಯವನ್ನು “ಕೋಮು ಗಲಭೆಗಳಲ್ಲಿ ಮತ್ತು ಇತರ ಪ್ರಕರಣಗಳಲ್ಲಿ ಮುಗ್ಧ ಜನರ ವಿರುದ್ಧ ದಾಖ ಲಾಗಿರುವ ಪ್ರಕರಣಗಳನ್ನು ಅಭಿ ಯೋಜನೆಯಿಂದ ಹಿಂಪಡೆಯುವ ಬಗ್ಗೆ’ ಎಂದು ಬದಲಾಯಿಸಿ ಹೊಸದಾಗಿ ಶನಿವಾರ ಸುತ್ತೋಲೆ ಹೊರಡಿಸಲಾಗಿದೆ.

ಸುತ್ತೋಲೆಯನ್ನು ಪ್ರಧಾನ ಕಾರ್ಯದರ್ಶಿ ಒಳಾಡಳಿತ ಇಲಾಖೆ, ಡಿಜಿಪಿ, ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆ ನಿರ್ದೇಶಕರಿಗೆ ಕಳುಹಿಸಲಾಗಿದೆ. ಈ ಹಿಂದೆ 2017 ಡಿಸೆಂಬರ್ 22ರಂದು ಹೊರಡಿಸಿದ್ದ ಸುತ್ತೋಲೆ ಹಿಂಪಡೆಯಲಾಗಿದೆ.

ಶನಿವಾರ ವಿಕಾಸಸೌಧದಲ್ಲಿ ಹಿರಿಯ ಪೆÇಲೀಸ್ ಅಧಿಕಾರಿಗಳ ಸಭೆ ನಡೆಸಿದ ಅನಂತರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಪ್ರಕರಣ ವಾಪಸ್ ಪಡೆಯುವ ಸಂಬಂಧ ಅಲ್ಪಸಂಖ್ಯಾಕ ಸಮುದಾಯ ಎಂಬ ಪದ ನನ್ನ ಇಲಾಖೆಯ ಕಾರ್ಯದರ್ಶಿ ಗಮನಕ್ಕೆ ಬಂದಿಲ್ಲ ಎಂದು ಹೇಳಿದರು.

ರೈತ ಚಳವಳಿ, ವಿದ್ಯಾರ್ಥಿ ಚಳವಳಿ, ಕನ್ನಡ ಹೋರಾಟ ಸಂದರ್ಭದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯಲು ಸರಕಾರ ಸಿದ್ಧ ಎಂದು ತಿಳಿಸಿದರು. ಚಳವಳಿಗಳ ಸಂಬಂಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ದಾಖಲೆ ಹಾಗೂ ಅಭಿಪ್ರಾಯ ನೀಡುವಂತೆ ಎಲ್ಲ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

3,164 ಆರೋಪಿಗಳು ಮುಕ್ತ

2015ರಿಂದ 2017ರ ವರೆಗೆ ಪ್ರಕರಣ ವಾಪಸ್ ಪಡೆದಿರುವ ಮಾಹಿತಿಯನ್ನೂ ಗೃಹ ಸಚಿವ ರಾಮಲಿಂಗಾರೆಡ್ಡಿ ಬಿಡುಗಡೆ ಮಾಡಿದ್ದು, ಒಟ್ಟು 414 ಪ್ರಕರಣಗಳಲ್ಲಿ 3,164 ಆರೋಪಿಗಳ ವಿರುದ್ಧದ ಪ್ರಕರಣ ಕೈ ಬಿಡಲಾಗಿದೆ. ಆ ಪೈಕಿ 2,806 ಹಿಂದೂಗಳು ಹಾಗೂ 358 ಮುಸ್ಲಿಮರು ಎಂದು ತಿಳಿಸಿದರು. 2017 ಫೆ. 2ರಂದು 94 ಪ್ರಕರಣ, 2016 ಜು. 29ರಂದು 123 ಪ್ರಕರಣ, 2015 ಮೇ 6 ರಂದು 32 ಪ್ರಕರಣ, 2015 ಮಾರ್ಚ್ 12 ರಂದು 175 ಪ್ರಕರಣ ವಾಪಸ್ ಪಡೆಯಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.

ಒಟ್ಟಿನಲ್ಲಿ ಹಿಂದೂಗಳ ಆಕ್ರೋಷಕ್ಕೆ ಮಣಿದ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ತನ್ನ ತಪ್ಪನ್ನು ಒಪ್ಪಿಕೊಂಡು ಹಿಂದೂಗಳಿಗೆ ಶರಣಾಗಿದೆ. ಹಿಂದೂ ಸಮಾಜದ ಶಕ್ತಿ ಮತ್ತೊಮ್ಮೆ ಸಾಭೀತಾಗಿದೆ. ಈ ಎಲ್ಲಾ ಬೆಳವಣಿಗೆಗಳೂ ಮುಂದಿನ ಚುನಾವಣೆಯಲ್ಲಿ ಪರಿಣಾಮ ಬೀರುವುದಂತೂ ಸುಳ್ಳಲ್ಲ.

-ಸುನಿಲ್ ಪಣಪಿಲ

Tags

Related Articles

Close