ಅಂಕಣಇತಿಹಾಸದೇಶಪ್ರಚಲಿತ

“ಅವರು ಕಾಶ್ಮೀರದ ಮೇಲೆ ಕಣ್ಣು ಹಾಕಿದರೆ ನೀವು ಲಾಹೋರಿನ ಮೇಲೆ ಕಣ್ಣಷ್ಟೇ ಅಲ್ಲ, ಕಾಲು ಹಾಕಿ!!!”

ನೆಹರುವಿನ ಹಿಂದಿಚೀನಿಭಾಯಿಭಾಯಿ ಮಂತ್ರದಿಂದ 1962 ರ ಯುದ್ಧದಲ್ಲಿ ಚೀನಾ ವಿರುದ್ಧ ಸೋಲಬೇಕಾಯಿತು. ಆ ಸೋಲಿನ ಸುಳಿಯಿಂದ ಹೊರಬರೋಕು ಮುಂಚೆಯೇ ಮತ್ತೆ ಭಾರತದ ಮೇಲೆ ದಾಳಿ ನಡೆಸಿದರೆ ಭಾರತ ಸಲೀಸಾಗಿ ಸೋಲೊಪ್ಪಿಕೊಳ್ಳುತ್ತೆ ಅಂತ 1965 ರಲ್ಲಿ ಪಾಪಿ ಪಾಕಿಸ್ತಾನ ಒಮ್ಮಿಂದೊಮ್ಮೆಲೇ ಕಾಶ್ಮೀರದ ಮೇಲೆ ದಾಳಿಗೈದು ಕಾಶ್ಮೀರದ 250 Sq.Miles ಪ್ರದೇಶವನ್ನು ವಶಪಡಿಸಿಕೊಂಡಿತ್ತು.

ಪಾಕಿಸ್ತಾನದ ಈ ಅಪ್ರಚೋದಿತ ದಾಳಿಯನ್ನ ನಿರೀಕ್ಷಿಸದ ಭಾರತೀಯ ಸೈನ್ಯ ಕಂಗಾಲಾಗಿತ್ತು. ಇನ್ನೇನು ಕಾಶ್ಮೀರವನ್ನ ಕಳೆದುಕೊಂಡೇ ಬಿಟ್ಟೆವು ಅಂದಾಗ ಭಾರತದ ಪ್ರಧಾನಿಯಾಗಿದ್ದ ವಾಮನ ಮೂರ್ತಿ ಲಾಲ್ ಬಹದ್ದೂರ್ ಶಾಸ್ತ್ರೀ ಜೀ ಯವರು ಎದೆಗುಂದಲಿಲ್ಲ.

ಅವರು ಅಪ್ರಚೋದಿತವಾಗಿ ಕಾಶ್ಮೀರದ ಮೇಲೆ ದಾಳಿ ಮಾಡ್ತಾರೆಂದರೆ ನೀವ್ಯಾಕೆ ಅವರ ಜೊತೆ ಸೆಣೆಸುತ್ತೀರ? ಹೋಗಿ ಪಂಜಾಬಿನ ಮೂಲಕ ಅವರ ಲಾಹೋರಿಗೆ ನುಗ್ಗಿ ಅಂತ ಭಾರತೀಯ ಸೈನ್ಯಕ್ಕೆ ಸೂಚನೆ ಕೊಟ್ಟರು.

ಪಾಕಿಸ್ತಾನ ಕಾಶ್ಮೀರ 250 Sq.Miles ವಶಪಡಿಸಿಕೊಂಡಿದ್ದರೆ  ಭಾರತೀಯ ಸೈನ್ಯ ಪಾಕಿಸ್ತಾನದ ಲಾಹೋರಿಗೆ ನುಗ್ಗಿ ಪಾಕಿಸ್ತಾನದ 710 Sq.Miles ವಶಪಡಿಸಿಕೊಂಡು ಪಾಕಿಸ್ತಾನಕ್ಕೆ ಮರ್ಮಾಘಾತವನ್ನೇ ಕೊಟ್ಟಿತ್ತು. ಇದರಿಂದ ಕಂಗಾಲಾದ ಪಾಕಿಸ್ತಾನ ಮತ್ತೆ ಅಮೇರಿಕದೆದುರು ಮಂಡಿಯೂರಿ ಭಾರತಕ್ಕೆ ಯುದ್ಧ ನಿಲ್ಲಿಸುವಂತೆ ಸೂಚಿಸಿ ನಮ್ಮ ಲಾಹೋರ್ ನಮಗೆ ವಾಪಸ್ ಮಾಡಲು ಹೇಳಿ ಅಂತ #ದೇಹಾತಿ_ಔರತ್ ತರಹ ಗೋಗರೆಯಿತು!! ಮೊದಲಿನಿಂದಲೂ ದ್ವಿಮುಖ ನೀತಿಯಿಂದ ಭಾರತ ಪಾಕಿಸ್ತಾನದ ಸಮಸ್ಯೆಯನ್ನ ಸಮಸ್ಯೆಯನ್ನಾಗೇ ಇಡಲು ಪ್ರಯತ್ನಿಸುವ ಅಮೇರಿಕ ಆಗಲೂ ಅದೇ ಕೆಲಸವನ್ನ ಮುಂದುವರೆಸಿತ್ತು. ಶಾಸ್ತ್ರೀ ಜೀ ಮಾತ್ರ ಲಾಹೋರಿನಿಂದ ಸೈನ್ಯವನ್ನ ವಾಪಸ್ ಕರೆಸಲು ಸುತಾರಾಂ ಸಿದ್ಧರಿರಲಿಲ್ಲ!!

USA & USSR(ರಷ್ಯಾ ಒಕ್ಕೂಟ) ರಷ್ಯಾದ ತಾಷ್ಕೆಂಟ್’ಗೆ ಭಾರತದ ಪ್ರಧಾನಿ ಶಾಸ್ತ್ರೀಜೀ ಹಾಗು ಪಾಕಿಸ್ತಾನದ ಅಧ್ಯಕ್ಷ ಅಯ್ಯೂಬ್ ಖಾನ್’ನ್ನ ಕರೆಸಿ ಕದನ ವಿರಾಮ ಮಾಡಿಸಿ ಶಾಂತಿ ಸ್ಥಾಪಿಸುವಂತೆ ಕರೆ ನೀಡಿದರು. ಶಾಸ್ತ್ರೀಜೀ ಮಾತ್ರ ಈ ಒಪ್ಪಂದಕ್ಕೆ ಸುತಾರಾಂ ಸಿದ್ಧರಿರಲಿಲ್ಲ, ಶಾಸ್ತ್ರಿಜೀ ಯವರ ಜೊತೆಗೆ ಇಂದಿರಾ ಗಾಂಧಿಯೂ ತಾಷ್ಕೆಂಟಿಗೆ ಹೋಗಿದ್ದರು. ಒಲ್ಲದ ಮನಸ್ಸಿನಿಂದ ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಿದರು ಶಾಸ್ತ್ರೀಜೀ. ಪಾಕಿಸ್ತಾನ ವಶಪಡಿಸಿಕೊಂಡಿದ್ದ ಕಾಶ್ಮೀರ & ಭಾರತ ವಶಪಡಿಸಿಕೊಂಡಿದ್ದ ಲಾಹೋರನ್ನ ಮತ್ತೆ ಅವರವರ ದೇಶಕ್ಕೆ ವಾಪಸ್ ಬಿಟ್ಟುಕೊಡಬೇಕೆನ್ನುವುದು ತಾಷ್ಕೆಂಟ್ ಒಪ್ಪಂದದ ಉದ್ದೇಶವಾಗಿತ್ತು!!ಅದೇನಾಯಿತೋ ಏನೋ ಗೊತ್ತಿಲ್ಲ, ತಾಷ್ಕೆಂಟ್ ಒಪ್ಪಂದ ಸಹಿ ಮಾಡಿದ ನಂತರ ರಾತ್ರಿ ತಮ್ಮ ಕೋಣೆಗೆ ಮಲಗಲು ಹೋದ ಶಾಸ್ತ್ರೀಜೀ ಮತ್ತೆ ಏಳಲೇ ಇಲ್ಲ!!ಬೆಳಿಗ್ಗೆ ಶಾಸ್ತ್ರೀ ಜೀ ನಿಧನರಾಗಿದ್ದಾರೆ ಅನ್ನೋ ಸುದ್ಧಿ ಭಾರತಕ್ಕೆ ಬರಸಿಡಿಲಿನಂತೆ ಬಂದೆರಗಿತ್ತು!!

ಇಂದು ಶಾಸ್ತ್ರೀಜೀ ನಮ್ಮನಗಲಿ 50 ವರ್ಷ ಕಳೆದುಹೋಗಿವೆ, ಅವರ ಸಾವಿನ ನಿಗೂಢತೆ ಮಾತ್ರ ಇನ್ನೂ ಬೆಳಕಿಗೆ ಬಂದಿಲ್ಲ.

ಇಲ್ಲಿ ಇನ್ನೊಂದು ಇಂಟರೆಸ್ಟಿಂಗ್ ವಿಷ್ಯ ಅಂದ್ರೆ ರಷ್ಯಾದ ತಾಷ್ಕೆಂಟಿಗೆ ಶಾಸ್ತ್ರೀಜೀ ತೆರಳುವಾಗ ಭಾರತದ ಜನರಿಗೊಂದು ಮಾತನ್ನ ಹೇಳಿ ಹೊರಟಿದ್ದರು.

“ನಾನು ಭಾರತಕ್ಕೆ ವಾಪಸ್ಸಾಗುವಾಗ ರಷ್ಯಾದಿಂದ ಒಬ್ಬ ವ್ಯಕ್ತಿಯನ್ನು ಕರೆ ತರುತ್ತೇನೆ.” ಆ ವ್ಯಕ್ತಿ ಯಾರು ಗೊತ್ತೆ? ಅದೇ ನಮ್ಮ ಕ್ರಾಂತಿಕಾರಿ ಕಣ್ಮಣಿ ಸುಭಾಷ್ ಚಂದ್ರ ಬೋಸರು!!

ಇಲ್ಲಿ ಒಂದಕ್ಕೊಂದು ವಿಷಯಗಳನ್ನು ಲಿಂಕ್ ಮಾಡಿ ನೋಡಿದಾಗ ಅರ್ಥವಾಗುವ ವಿಷ್ಯ ಏನಂದ್ರೆ “ಭಾರತದ ಪ್ರಧಾನಿ ಶಾಸ್ತ್ರೀಜೀ ಪ್ರಧಾನಿಯಾಗಿ ಮುಂದುವರೆದರೆ ನಮ್ಮ ಆಟ ನಡೆಯಲ್ಲ ಅನ್ನೋ ಪಾಕಿಸ್ತಾನ!”

ಈತನೇ ಪ್ರಧಾನಿಯಾಗಿದ್ದರೆ ಈತನ ಪ್ರಖ್ಯಾತಿ ಹೀಗೆ ಮುಂದುವರೆದರೆ, ನೆಹರೂನ ಮಗಳಾಗಿರೋ ನಾನು ಪ್ರಧಾನಿಯಾಗೋದು ಯಾವಾಗ? ಅಂದುಕೊಂಡಿದ್ದ ಇಂದಿರಾ ಗಾಂಧಿ!!

ಈತ ಹೇಳಿದಂತೆ ಸುಭಾಷರನ್ನ ಭಾರತಕ್ಕೆ ಕರೆದೊಯ್ದರೆ, ನಮ್ಮಪ್ಪ ನೆಹರು ಸುಭಾಷರ ವಿರುದ್ಧ ನಡೆಸಿದ್ದ ಸಂಚು & 1943 ರಲ್ಲೇ ವಿಮಾನ ಅಪಘಾತದಲ್ಲಿ ಅವರು ತೀರಿ ಹೋದರು ಅನ್ನೋ ಸುಳ್ಳು ದೇಶದ ಜನರಿಗೆ ತಿಳಿದರೆ, ನಮ್ಮ ಕುಟುಂಬದ ಮರ್ಯಾದೆ ಏನು? ಅನ್ನೋ ಪ್ರಶ್ನೆ ಇಂದಿರಾಗೆ ಕಾಡಿತ್ತು!!

ಇನ್ನು ರಷ್ಯಾದ ವಿಚಾರಕ್ಕೆ ಬಂದರೆ ಸುಭಾಷರನ್ನ ತಮ್ಮ ಸೆರೆಬಂಧಿಯಾಗಿಟ್ಟುಕೊಂಡ ವಿಚಾರ ಜಗತ್ತಿಗೆ ತಿಳಿದರೆ ನಮ್ಮ ಮಾನ ಹರಾಜಾಗುತ್ತೆ ಅನ್ನೋದು ರಷ್ಯಾದ ಚಿಂತೆಯಾಗಿತ್ತು!!

ಒಟ್ಟನಲ್ಲಿ #ಪಾಕಿಸ್ತಾನ+#ಇಂದಿರಾ+#ರಷ್ಯಾ ಕೂಡಿಕೊಂಡು ಶಾಸ್ತ್ರೀಜೀಯವರ ಹತ್ಯೆಯನ್ನ ವ್ಯವಸ್ಥಿತವಾಗಿಯೇ “Heart Attack” ಮಾಡಿಮುಗಿಸಿಬಿಟ್ಟಿದ್ದವು! ಈ ವಿಷಯಗಳೆಲ್ಲ ತನಿಖೆಯ ಮೂಲಕ ಮುಂದೆ ಬಂದಾಗ ಪಾಕಿಸ್ತಾನ ಅಂದರೆ ಯಾವ ರೀತಿಯಲ್ಲಿ ಮೈ ಉರಿದುಕೊಳ್ಳೋ
ನಮ್ಮ ಜನ, ಕಾಂಗ್ರೆಸ್ ಅಂದ್ರು ಕೂಡ ಮೈ ಉರಿದುಕೊಳ್ಳೋ ಕಾಲ ದೂರವಿಲ್ಲ! ಅದೇನೇ ಇರಲಿ ನಾವು ಮಾತ್ರ ದೇಶದ ಅಮೂಲ್ಯ ರತ್ನವಾದ ಶಾಸ್ತ್ರೀಜೀಯನ್ನ
ಕಳೆದುಕೊಂಡೆವು!

ಶಾಸ್ತ್ರೀಜೀ ಗೆ ಇದ್ದ ಜೀವಕಂಟಕ ನಮ್ಮ ಈಗಿನ ಪ್ರಧಾನಿ ನರೇಂದ್ರ ಮೋದಿಜೀಗೂ ಇದೆ. ಒಮ್ಮೆ ಆದ ತಪ್ಪು ಮತ್ತೆ ಮರುಕಳಿಸದಿರಲಿ, ಆ ಭಗವಂತ
ಶಾಸ್ತ್ರೀಜೀಯವರ ಆತ್ಮಕ್ಕೆ ಶಾಂತಿ ನೀಡಿ ಮೋದಿಜೀಯವರಿಗೆ ಆಯುರ್ ಆರೋಗ್ಯ ಕರುಣಿಸಿ ಭಾರತವನ್ನ ವಿಶ್ವಗುರುವಾಗಿಸುವ ಶಕ್ತಿ ನೋಡಲು ಅನ್ನೋದೇ ಈ ದೇಶದ ಪ್ರಜೆಯಾಗಿ ನನ್ನಾಸೆ!

postcard team

Tags

Related Articles

Close