ಪ್ರಚಲಿತ

ಇಂಟರ್‍ನೆಟ್ ಸಮಸ್ಯೆಯಿಂದ ಕಂಗಾಲಾಗಿದ್ದ 1,01,370 ಗ್ರಾಮ ಪಂಚಾಯತ್‍ಗಳಿಗೆ ಮೋದಿ ಮಾಡಿದ್ದೇನು ಗೊತ್ತಾ?!

ಭಾರತದ ನಾಗರಿಕರನ್ನು, ಮಹಿಳೆಯರನ್ನು ಸಬಲೀಕರಣಗೊಳಿಸಿ, ಗ್ರಾಮೀಣ ಭಾರತವನ್ನು ಸಂಪೂರ್ಣ ಡಿಜಿಟಲ್ ಭಾರತವನ್ನಾಗಿ ಮಾಡಲು ಕೇಂದ್ರ ಸರಕಾರವು “ಡಿಜಿಟಲ್ ಇಂಡಿಯಾ” ಯೋಜನೆಯನ್ನು ಜಾರಿಗೆ ತಂದಿತ್ತು.. ಇದರ ಮೂಲಕ ಪ್ರತಿಯೊಬ್ಬ ನಾಗರಿಕನೂ ಇ-ಗವರನ್ಸ್, ಆಧಾರ ಸೀಡಿಂಗ್, ಸಕಾಲ, ಗ್ರಾಮೀಣ ಡಿಜಿಟಲ್ ಸೇವೆಯ ಅರಿವು ಮೂಡಿಸುವುದೇ ಇದರ ಮುಖ್ಯ ಗುರಿಯಾಗಿದ್ದು, ಇದರ ಲಕ್ಶ್ಯವೇ ಭಾರತ ದೇಶಕ್ಕೆ ವಿಶ್ವದಲ್ಲೇ ಒಂದು ಅತ್ಯುತ್ತಮ ಸ್ಥಾನಮಾನವನ್ನು ನೀಡುವುದಾಗಿದೆ.

ಭಾರತದ ಪ್ರತಿಯೊಂದು ಗ್ರಾಮಗಳನ್ನು ಡಿಜಿಟಲೀಕರಣ ಮಾಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಇದರ ಅಭಿಯಾನ ಪ್ರಸಿದ್ದ ಉದ್ಯೊಗಪತಿಗಳ ಸಮ್ಮುಖದಲ್ಲಿ 1 ಜುಲೈ 2015 ರಂದು ಇಂಧೋರ್ ನ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಪ್ರಾರಂಭವಾಯಿತು!! ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸಾಗಿರುವ ಈ ಯೋಜನೆಗಾಗಿ ಒಂದು ಲಕ್ಷ ಕೋಟಿ ರೂಪಾಯಿಯನ್ನು ಇದಕ್ಕಾಗಿ ಅನುಮೋದಿಸಿದ್ದಾರೆ. ಇದು 2019 ರ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆಯನ್ನು ಹೊಂದಿದ್ದು, ಇದು ಸಂಪೂರ್ಣಗೊಂಡಲ್ಲಿ ಭಾರತವು ವಿಶ್ವದಲ್ಲೇ ಸುಪ್ರಸಿದ್ಧ ರಾಷ್ಟ್ರವಾಗಲಿದೆ!! ಭಾರತೀಯ ನಾಗರಿಕರ ಡಿಜಿಟಲ್ ಸಬಲೀಕರಣ ಮಾಡುವುದು ಹಾಗೂ ಮಾಹಿತಿಯನ್ನು ಡಿಜಿಟಲೀಕರಣ ಗೊಳಿಸುವುದು ಇದರ ಪ್ರಮುಖ ಉದ್ಧೇಶವಾಗಿದೆ.

1,01,370 ಗ್ರಾಮಗಳಿಗೆ ನೆಟ್ ಯೋಜನೆ

ಸರ್ಕಾರ ಮತ್ತು ಖಾಸಗಿ ವಲಯಗಳ ಒಕ್ಕೂಟದಿಂದಾಗಿ ಈ ಯೋಜನೆಗೆ ಆವೇಗ ಹತ್ತಿಕೊಳ್ಳುತ್ತಿದ್ದು, ಹಳ್ಳಿಗಳನ್ನು ಹೊಂದಿರುವ ಹಿಂದುಳಿದ ಪ್ರದೇಶಗಳನ್ನು ಡಿಜಿಟಲೀಕರಣ ಗೊಳಿಸುವುದರಿಂದಾಗಿ ಆ ಹಳ್ಳಿಗಳ ಅಭಿವೃದ್ಧಿ ಸಾಧ್ಯವಾಗಲಿದೆ ಹಾಗೂ ಭಾರತದ ಎಲ್ಲಾ ನಗರ, ಪಟ್ಟಣ ಮತ್ತು ಹಳ್ಳಿ ಹೆಚ್ಚು ತಾಂತ್ರಿಕವಾಗಿ ಮುಂದುವರಿಯುತ್ತದೆ. ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬರುತ್ತಲೇ ಸ್ವಚ್ಛ ಭಾರತದ ಜತೆಗೆ ಡಿಜಿಟಲ್ ಇಂಡಿಯಾ ಯೋಜನೆ ಜಾರಿಗೊಳಿಸಿತ್ತು. ಆರಂಭದಲ್ಲಿ ಇದರಿಂದ ಜನರಿಗೆ ಏನು ಪ್ರಯೋಜನ ಎಂಬ ಟೀಕೆಗಳು ಸಹ ವ್ಯಕ್ತವಾಗಿದ್ದವು. ಆದರೆ ಆ ಟೀಕೆಗಳಿಗ ಮೌನ ತಾಳುವ ಸಮಯ ಬಂದೊದಗಿದೆ.

ಹೌದು, ಕೇಂದ್ರ ಸರಕಾರ ಭಾರತ್ ನೆಟ್ ಪೆÇ್ರೀಗ್ರಾಂ ಯೋಜನೆ ಸಾಫಲ್ಯ ಸಾಧಿಸಿದ್ದು, ಇದುವರೆಗೆ ದೇಶದ ಒಂದು ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಇಂಟರ್ ನೆಟ್ ಸಂಪರ್ಕ ಕಲ್ಪಿಸಲಾಗಿದೆ. ಈ ಕುರಿತು ಕೇಂದ್ರ ಟೆಲಿಕಾಂ ಸಚಿವ ಮನೋಜ್ ಸಿನ್ಹಾ ಮಾಹಿತಿ ನೀಡಿದ್ದು, 2017ರ ಡಿಸೆಂಬರ್ 28ವರೆಗೆ ದೇಶಾದ್ಯಂತ 1,01,370 ಗ್ರಾಮ ಪಂಚಾಯಿತಿಗಳಿಗೆ ಜಿಪಿಎಸ್ ಮೂಲಕ ಅಂತರ್ಜಾಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಮೊದಲ ಹಂತವಾಗಿ ಒಂದು ಲಕ್ಷ ಗ್ರಾಮ ಪಂಚಾಯತ್‍ಗಳಿಗೆ ಅಂತರ್ಜಾಲ ಸೌಲಭ್ಯ ಕಲ್ಪಿಸಲಾಗಿದ್ದು, ಇದು ಮೊದಲು 70 ಸಾವಿರ ಪಂಚಾಯಿತಿಗಳಿಗೆ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿತ್ತು. ಆದರೆ ಯೋಜನೆ ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿದ ಹಿನ್ನೆಲೆಯಲ್ಲಿ ಎರಡನೇ ಹಂತದಲ್ಲಿ 2018ರ ಡಿಸೆಂಬರ್ ವೇಳೆಗೆ ಸುಮಾರು 1.5 ಲಕ್ಷ ಗ್ರಾಮ ಪಂಚಾಯತ್‍ಗಳಿಗೆ ಅಂತರ್ಜಾಲ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದರು.

ಗ್ರಾಮ ಪಂಚಾಯಿತಿಗಳಿಗೆ ಅಂತರ್ಜಾಲ ಸೌಲಭ್ಯ ಕಲ್ಪಿಸುವುದರಿಂದ ಕಡತಗಳ ಗಣಕಯಂತ್ರೀಕರಣ, ಸೌಲಭ್ಯಗಳ ಸಮರ್ಪಕ ವಿತರಣೆ ಮಾಹಿತಿ ಸಂಗ್ರಹ, ಪಾರದರ್ಶಕತೆ, ಆಧಾರ್ ಜೋಡಣೆ, ಆನ್ ಲೈನ್ ವ್ಯವಹಾರ ಸೇರಿ ಹಲವು ಉಪಯೋಗಗಳಾಗಲಿದೆ. ಅಲ್ಲದೆ ಇದು ಡಿಜಿಟಲ್ ಇಂಡಿಯಾ ಯೋಜನೆಗೆ ಪೂರಕವಾಗಿ ಕೆಲಸ ಮಾಡುವುದರಿಂದ ಗ್ರಾಮೀಣ ಜನರೂ ಅಂತರ್ಜಾಲ ಸಾಕ್ಷರರಾಗಲು ಅನುಕೂಲ. ಇದರಿಂದಾಗಿ ಅನೇಕರಿಗೆ ಲಾಭವಾಗುದಂತೂ ಖಂಡಿತ!!

ದೇಶಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ 2019 ರ ಮಾರ್ಚ್ ವೇಳೆಗೆ ಹೈಸ್ಟೀಡ್ ಇಂಟರ್ ನೆಟ್ ಒದಗಿಸುವ, ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯು ಒಟ್ಟು 45 ಸಾವಿರ ಕೋಟಿ ರೂ.ಮೌಲ್ಯದ ಯೋಜನೆಯ 2 ನೇ ಹಂತದ ಭಾಗವಾಗಿ 1.5 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಇಂಟರ್ ನೆಟ್ ಸಂಪರ್ಕ ಕಲ್ಪಿಸಲಾಗುವುದು.

ಒಂದು ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಇಂಟರ್ ನೆಟ್ ಒದಗಿಸುವ ಉದ್ದೇಶದ ಮೊದಲ ಹಂತದ ಯೋಜನೆ ಪೂರ್ಣಗೊಂಡಿದ್ದು ಮೊದಲನೇ ಹಂತಕ್ಕೆ 11 ಸಾವಿರ ಕೋಟಿ ಖರ್ಚು ಮಾಡಲಾಗಿದ್ದು, 2 ನೇ ಹಂತಕ್ಕೆ 34 ಸಾವಿರ ಕೋಟಿ ರೂ. ತೆಗೆದಿರಿಸಲಾಗಿದೆ.

ಭಾರತದಲ್ಲಿ ಪ್ರತಿಶತ 10ರಷ್ಟು ಮಂದಿ ಅಂತರ್ಜಾಲ ಬಳಸಿದರೆ ಶೇ. 3.3 ಜಿಡಿಪಿ ಏರಿಕೆಯಾಗುತ್ತದೆ ಎಂಬ ಅಂದಾಜಿದೆ. ಅದರಂತೆ 4.50 ಲಕ್ಷ ಕೋಟಿ ರೂ. ಮೊತ್ತದ ಭಾರತ್‍ನೆಟ್ ಯೋಜನೆಯಿಂದ ಜಿಡಿಪಿಯಲ್ಲಿ ಮಹತ್ತರ ಏರಿಕೆ ಕಾಣಬಹುದು ಎಂದು ಟೆಲಿಕಾಂ ಕಾರ್ಯದರ್ಶಿ ಅರುಣಾ ಸುಂದರರಾಜನ್ ಅಭಿಪ್ರಾಯಪಟ್ಟಿದ್ದಾರೆ. ದೇಶದ ಕಟ್ಟಕಡೆಯ ಗ್ರಾಮಕ್ಕೂ ಬ್ರಾಡ್ ಬ್ಯಾಂಡ್ ಸೇವೆ ತಲುಪಿಸಿಯೇ ಸಿದ್ಧ ಎಂಬ ಭಾರತ್ ನೆಟ್ ಗುರಿ ಸಾಕಾರಕ್ಕೆ ಟೆಲಿಕಾಂ ಸಚಿವಾಲಯ ಹೆಚ್ಚುವರಿಯಾಗಿ 3600 ಕೋಟಿ ರೂ. ಗ್ಯಾಪ್ ಫಂಡಿಂಗ್ ಮೀಸಲಿಟ್ಟಿದೆ. ಟೆಲಿಕಾಂ ಕಂಪನಿಗಳು ಸೇವೆ ಒದಗಿಸಲು ಅಸಾಧ್ಯ ಎಂದು ನಿರ್ಧರಿಸುವ ಸ್ಥಳಗಳಿಗೆ ವೈರ್‍ಲೆಸ್ ಸೇವಾದಾರರ ಮೂಲಕ ಅಂತರ್ಜಾಲ ಸಂಪರ್ಕ ತಲುಪಿಸಲು ಸರ್ಕಾರ ಸಿದ್ಧತೆ ನಡೆಸಿದೆ.

ಏನಿದು ಭಾರತ್ ನೆಟ್

2011ರಲ್ಲಿ ಯುಪಿಎ ಸರ್ಕಾರ ಗ್ರಾಮ ಪಂಚಾಯಿತಿಗಳನ್ನು ಬ್ರಾಡ್ ಬ್ಯಾಂಡ್‍ನಿಂದ ಸಂರ್ಪಸುವ ಉದ್ದೇಶದಿನಂದ `ರಾಷ್ಟ್ರೀಯ ಆಪ್ಟಿಕಲ್ ಫೈಬರ್ ನೆಟ್‍ವರ್ಕ್’ (ಎನ್‍ಒಎಫ್‍ಎನ್) ಹೆಸರಿನ ಯೋಜನೆ ಆರಂಭಿಸಿತ್ತು. ಆದರೆ ಆಮೆಗತಿಯಲ್ಲಿ ಸಾಗಿದ ಈ ಯೋಜನೆ ಮೂರು ವರ್ಷದಲ್ಲಿ ಕೇವಲ ನೂರು ಕಿ.ಮೀ ನಷ್ಟು ಆಪ್ಟಿಕಲ್ ಫೈಬರ್ ಜಾಲ ನಿರ್ವಿಸುವಲ್ಲಿ ಕೂಡಾ ಪ್ರಯತ್ನಿಸಿದರೂ ಅದರಲ್ಲಿ ವಿಫಲರಾಗಿರುವುದು ಎಲ್ಲರಿಗೂ ತಿಳಿದ ವಿಷಯ!! 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಡಿಜಿಟಲ್ ಇಂಡಿಯಾ ಯೋಜನೆ ಅಡಿಯಲ್ಲಿ ಈ ಯೋಜನೆಗೆ ಬಲ ತುಂಬಿತು. ಹಲವು ಮಾರ್ಪಾಡುಗಳೊಂದಿಗೆ ಯೋಜನೆಯನ್ನು `ಭಾರತ್ ನೆಟ್’ ಹೆಸರಲ್ಲಿ ಮರುಘೋಷಿಸಿ ಸಂಪರ್ಕ ಕಾರ್ಯಕ್ಕೆ ವೇಗ ನೀಡಿತು. 42 ಸಾವಿರ ಕೋಟಿ ರೂ. ಅನುದಾನವನ್ನು ಎರಡೂ ಹಂತಗಳಿಗೆ ಕೇಂದ್ರ ಸರ್ಕಾರ ಮೀಸಲಿರಿಸಿದೆ.

ಪವಿತ್ರ

Tags

Related Articles

Close