ಪ್ರಚಲಿತ

ಇದು ಗಾಂಧಿ ಭಾರತವಲ್ಲ, ಮೋದಿ ಭಾರತ!!! ಪಾಕಿಸ್ಥಾನದ ಬಗೆಗೆ ಮೃದು ಧೋರಣೆ ತೋರುವ ಯಾವುದೇ ನಿರೀಕ್ಷೆಯೂ ಬೇಡ!!!

ಭಾರತವೀಗ ಬದಲಾಗಿದೆ’ ಈ ಮಾತನ್ನು ಹಲವಾರು ಮಂದಿ ಹೇಳುತ್ತಾರೆ. ಭಾರತವನ್ನು 70 ವರ್ಷಗಳ ಕಾಲ ಕಾಂಗ್ರೆಸ್ ಆಳಿದ ಕಾರಣ, ಭಾರತದ ಬಗ್ಗೆ ಯಾರೇ ಏನೇ ಹೇಳಿದ್ದರೂ ಸಹಿಸಿಕೊಂಡು ಬರಲಾಗಿತ್ತು. ಭಾರತವಿರೋಧಿ ಕೃತ್ಯದಲ್ಲಿ ತೊಡಗಿದವರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಪರೋಕ್ಷವಾಗಿ
ಪ್ರೋತ್ಸಾಹಿಸಲಾಗುತ್ತಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗ ಎಗ್ಗಿಲ್ಲದೆ ನಡೆಯುತ್ತಿತ್ತು…. ಆದರೆ ಇದೀಗ ಭಾರತ ಮುಂಚಿನ ಹಾಗೆಯೇ ಇಲ್ಲ. ಭಾರತ
ವಿರೋಧಿ ಕೃತ್ಯದಲ್ಲಿ ತೊಡಗಿದರೆ ಅವರ ವಿರುದ್ಧ ಪ್ರಕರಣ ದಾಖಲಾಗುತ್ತದೆ. ಭಾರತದ ವಿರುದ್ಧ ಯಾರು ಮಾತಾಡಿದರೂ ಅವರ ಜನ್ಮ ಜಾಲಾಡಿಸುವ ಕೆಲಸವನ್ನು ಭಾರತೀಯರು ಮಾಡಲಾರಂಭಿಸಿದ್ದಾರೆ

ಅದಕ್ಕಾಗಿಯೇ ಇಂದಿನ ಭಾರತವನ್ನು `ಇದು ಗಾಂಧಿ ಭಾರತವಲ್ಲ, ಮೋದಿ ಭಾರತ’ ಎಂದು ಕರೆಯಲಾಗುತ್ತದೆ.

ನಾನು ನಿಮಗೊಂದು ಘಟನೆಯ ಬಗ್ಗೆ ನೆನಪಿಸಲೇಬೇಕಿದೆ. ಕಾಶ್ಮೀರದ ಪಕ್ಷೇತರ ಶಾಸಕ ಇಂಜಿನಿಯರ್ ರಶೀದ್ ಎಂಬಾತ ಇತ್ತೀಚೆಗೆ ಗೋಮಾಂಸ ಪಾರ್ಟಿ ಪೆಟ್ಟು ತಿಂದಿದ್ದ. ಪೆಟ್ಟು ತಿಂದು ಮುಖಮೂತಿ ಊದಿಸಿಕೊಂಡಿದ್ದ ಆತ ಕೊನೆಗೆ ಹೇಳಿದ್ದು ಹೀಗೆ. `ಭಾರತವು ಇನ್ನು ಮುಂದೆ ಗಾಂಧೀ ಭಾರತವಾಗಿ ಉಳಿಯುವುದಿಲ್ಲ ಮೋದಿ ಭಾರತವಾಗಲಿದೆ’ ಎಂದು ಹೇಳಿದ್ದ. ಭಾರತೀಯರೆಲ್ಲಾ ರಾಷ್ಟ್ರೀಯವಾದವನ್ನು ಬೆಳೆಸುತ್ತಿದ್ದು, ಪ್ರತ್ಯೇಕವಾದಿಗಳಿಗೆ ಅರಗಿಸಿಕೊಳ್ಳದಂತಾಗಿದೆ.

ಇತ್ತೀಚೆಗೆ ಮತ್ತೊಂದು ಘಟನೆ ಪಾಕಿಸ್ತಾನದಲ್ಲಿ ನಡೆಯಿತು. ಪಾಕಿಸ್ತಾನದ ಟಿ.ವಿ ಕಾರ್ಯಕ್ರಮವೊಂದರಲ್ಲಿ ಒಬ್ಬಾತ ಭಾರತದ ಬಗ್ಗೆ ಹೇಳಿದ್ದು ಹೀಗೆ… `ಭಾರತವನ್ನು ಇದು ಮೂದಲಿಸುವ ಸಮಯವಲ್ಲ, ಬದಲಿಗೆ ಭಾರತಕ್ಕೀಗ ಹೆದರುವ ಕಾಲ ಬಂದಿದೆ ಯಾಕೆಂದರೆ ಅದಕ್ಕೆ ಕಾರಣ ಮೋದಿ. ಇಂದಿರಾ ನಂತರ ಮೋದಿಯಿಂದ ಭಾರತ ಬದಲಾಗುತ್ತಿದೆ… ಭಾರತವನ್ನು ಹಂಗಿಸಿ ಪೆಟ್ಟುತಿಂದು ಬೆನ್ನುಮೂಳೆ ಮುರಿಸಿಕೊಳ್ಳಬೇಡಿ….’ ಎಂದು ಸೂಕ್ತ ಎಚ್ಚರಿಕೆ ನೀಡಿದ್ದ. ಪಾಕಿಸ್ತಾನ ಭಾರತವನ್ನು ಶತ್ರುರಾಷ್ಟ್ರವೆಂದೇ ತಿಳಿದಿದೆ. ಆದರೂ ಅಲ್ಲಿನ ಕೆಲವೊಂದು ಮಾಧ್ಯಮಗಳು, ನಾಗರಿಕರು ಮೋದಿಯ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದಾರೆ.

ಒಂದು ಕಾಲದಲ್ಲಿ ಭಾರತ ಬೇರೆ ಬೇರೆ ತುಂಡುಗಳಾಗುವ ಭಯವಿತ್ತು. ಈ ಭಯ ಉಂಟಾಗಲು ಕಾರಣವೂ ಇದೆ. ಯಾಕೆಂದರೆ ಪ್ರತ್ಯೇಕತಾವಾದಿ ಮುಖಂಡರೆಲ್ಲಾ ಸೇರಿ ಕಾಶ್ಮೀರವನ್ನು ಭಾರತದಿಂದ ತುಂಡರಿಸಿ ಪ್ರತ್ಯೇಕ ರಾಷ್ಟ್ರವನ್ನಾಗಿಸುವ ಕನಸನ್ನು ಕಾಣುತ್ತಿದ್ದರು. ಪಾಕಿಸ್ತಾನ ಇವರಿಗೆ ಕುಮ್ಮಕ್ಕು ನೀಡುತ್ತಿತ್ತು. ಭಾರತದಲ್ಲಿ ಕಾಂಗ್ರೆಸ್ ಇರುವವರೆಗೆ ತಿಗಣೆ ತರ ಭಾರತದ ರಕ್ತ ಹೀರಿಕೊಂಡು ಸುಖವಾಗಿದ್ದ ಪಾಕಿಸ್ತಾನಕ್ಕೆ ಮೋದಿ ಬಂದ ಬಳಿಕ ಪ್ರತಿದಿನವೂ ಆತಂಕಪಡುವಂತಾಗಿದೆ. ಯಾಕೆಂದರೆ ಭಾರತವನ್ನು ತುಂಡುಮಾಡಲು ಬಯಸುತ್ತಿದ್ದ ಪಾಕಿಸ್ತಾನಕ್ಕೆ ಇದೀಗ ಪಾಕಿಸ್ತಾನವೇ ತುಂಡು ತುಂಡಾಗುವ ಭಯ ಕಾಣಿಸಿದೆ. ಬಲೂಚಿಸ್ತಾನ, ಸಿಂಧ್‍ನಲ್ಲಿ ಹೋರಾಟ ಆರಂಭವಾಗಿದ್ದು, ಅವರೆಲ್ಲಾ ಭಾರತದ ಭಾಗವಾಗಲು ಬಯಸಿದ್ದಾರೆ. ಪಾಕಿಸ್ತಾನದ ಬೆನ್ನುಮೂಳೆಗೆ ಏಟು ಬಿದ್ದಿದೆ ಎಂದರೆ ಇದೇ ಅಲ್ವಾ?

`ನರೇಂದ್ರ ಮೋದಿ ವಿಶ್ವದ ಹಲವು ದೇಶಗಳನ್ನು ಭೇಟಿ ಮಾಡಿ ಸಾರ್ವಜನಿಕರ ತೆರಿಗೆಯ ಹಣವನ್ನು ಹಾಳು ಮಾಡುತ್ತಿದ್ದಾರೆ…’ ಇಂಥದೊಂದು ಪ್ರಶ್ನೆಯನ್ನು ಕೆಲವು ಬುದ್ಧಿ ಇಲ್ಲದ ಲದ್ದಿಜೀವಿಗಳು ಕೇಳುವುದನ್ನು ಕೇಳಿರಬಹುದು. ಆದರೆ ಮೋದಿಯ ವಿಶ್ವಪರ್ಯಟನೆ ಇಂದಿಗೆ ಫಲಗೂಡಿರುವುದು ಯಾರ ಕಣ್ಣಿಗೂ ಕಾಣುವುದೇ ಇಲ್ಲ. ಯಾಕೆಂದರೆ ಇಂದು ಪಾಕಿಸ್ತಾನವನ್ನು ಇಡೀ ವಿಶ್ವದೊಂದಿಗೆ ದೂರ ಇಡುವ ಕೆಲಸವನ್ನು ಮೋದಿ ಯಶಸ್ವಿಯಾಗಿ ಮಾಡಿದ್ದಾರೆ. ಉದಾಹರಣೆಗೆ ಅಮೆರಿಕಾ ಪಾಕಿಸ್ತಾನಕ್ಕೆ ನೀಡುತ್ತಿದ್ದ ನೆರವು ನಿಂತಿದೆ. ಚೀನಾದಲ್ಲಿ ನಡೆದ ಶೃಂಗಸಭೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳನ್ನು ಹೆಸರು ಹೇಳಿ ಉಲ್ಲೇಖಿಸಿ ಅರದ ವಿರುದ್ಧ ಹೋರಾಡುವಂತೆ ಕರೆ ನೀಡಲಾಗಿದೆ.

ದೋಕಲಂ ಗಡಿವಿಚಾರದಲ್ಲಿ ಚೀನಾ ಭಾರತದ ಜೊತೆ ಯುದ್ಧಕ್ಕೆ ಬಂದಾಗ ಇಡೀ ವಿಶ್ವದ ಬಲಾಢ್ಯ ರಾಷ್ಟ್ರಗಳು ಚೀನಾಕ್ಕೆ ಗುಟುರು ಹಾಕಿದಾಗ ಚೀನಾದ ಸೈನಿಕರು ಹೇಡಿಯಂತೆ ಓಡಿಲ್ಲವೇ? ಇದು ಮೋದಿಯ ವಿದೇಶಿ ಪ್ರವಾಸದ ಯಶಸ್ಸಲ್ಲವೇ?

ಕಾಂಗ್ರೆಸ್ ಕಾಲದಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನಾ ಕೃತ್ಯ ನಡೆದು ಎಷ್ಟೋ ನಾಗರಿಕರು, ಸೈನಿಕರು ಬಲಿಯಾಗುತ್ತಿದ್ದರು. ಆದರೆ ಮೋದಿ ಸೈನಿಕರಿಗೆ ಸಂಪೂರ್ಣ ಅಧಿಕಾರ ಕೊಟ್ಟು ಭಯೋತ್ಪಾದಕರನ್ನು ಮಟ್ಟ ಹಾಕಲು ಸೂಚಿಸಿಸದ್ದರು. ಆಗ ಹಲವರು ಮಂದಿ ಭಯೋತ್ಪಾದಕರ ಹೆಣಗಳು ಉರುಳಿದ್ದೇ ಉರುಳಿದ್ದು…! ಭಾರತದ ಸೈನ್ಯವನ್ನು ಮೇಲ್ದರ್ಜೆಗೇರಿಸಿ ಭಾರತದ ಸೈನ್ಯ ವಿಶ್ವದ ನಾಲ್ಕನೇ ಬಲಾಢ್ಯ ಸೇನೆ ಎಂದು ಗುರುತಿಸುವಂತೆ ಮಾಡಿದರು. ಪಾಕಿಸ್ತಾನದ ನೆರೆಯ ರಾಷ್ಟ್ರಗಳೊಡನೆ ಉತ್ತಮ ಬಾಂಧವ್ಯ ಸೃಷ್ಟಿಸಿ ಪಾಕಿಸ್ತಾನಕ್ಕೆ ಪರೋಕ್ಷವಾಗಿ ನಡುಕ ಹುಟ್ಟಿಸಿದರು. ಭಾರತದ ಪಠಾಣ್‍ಕೋಟ್ ಮೇಲೆ ದಾಳಿ ನಡೆದಾಗ ನೇರವಾಗಿ ಭೇಟಿ ಮಾಡಿದ ಮೋದಿ ನೈತಿಕ ಬಲ ತುಂಬಿದರು.

ಪಾಕಿಸ್ತಾನ ಒಂದು ಮುಸ್ಲಿಂ ರಾಷ್ಟ್ರ. ಅದೇ ರೀತಿ ಸೌದಿ ಅರೆಬಿಯಾದಂತಹಾ ಮುಸ್ಲಿಂ ರಾಷ್ಟ್ರಗಳನ್ನು ಭೇಟಿ ಮಾಡಿ ತನ್ನ ಬುಟ್ಟಿಗೆ ಹಾಕಿಕೊಂಡಿರುವುದು ಮೋದಿಯ ಸಾಧನೆ. ಅಮೆರಿಕಾ ಇಂದು ಭಾರತದ ಪರಮಾತ್ಮ ಮಿತ್ರ ರಾಷ್ಟ್ರವಾಗಲು ನಮ್ಮ ಮೋದಿ. ಮೋದಿ ರಾಜತಾಂತ್ರಿಕ ನಡೆಯಿಂದ ವಿಶ್ವದ ಹಲವು ರಾಷ್ಟ್ರಗಳ ಜೊತೆ ಸೇರಿ ಭಾರತದ ಮಿತ್ರರನ್ನಾಗಿಸಿದ್ದಾರೆ.

ಚೀನಾ ಪಾಕಿಸ್ತಾನದ ಮಿತ್ರ ರಾಷ್ಟ್ರ. ಚೀನಾ ಮತ್ತು ಪಾಕಿಸ್ತಾನ ಜೊತೆಗೂಡಿ ಭಾರತದ ಮೇಲೆ ಯುದ್ಧಹೂಡಲು ಇನ್ನಿಲ್ಲದ ತಂತ್ರ ಹೂಡುತ್ತಿದೆ ಎಂದು ಎಲ್ಲರಿಗೂ
ಗೊತ್ತಿರುವ ವಿಚಾರ. ಆದರೆ ಭಾರತದ ಮೇಲೆ ಯುದ್ಧ ಹೂಡಲು ಈ ಎರಡು ರಾಷ್ಟ್ರಗಳಿಗೆ ಧೈರ್ಯವಿಲ್ಲ. ಯಾಕೆಂದರೆ ದಕ್ಷಿಣ ಸಮುದ್ರಭಾಗದ ಮೇಲೆ ಚೀನಾ ಇನ್ನೂ ನಿಯಂತ್ರಣ ಸಾಧಿಸಿಲ್ಲ. ಅದಕ್ಕಾಗಿಯೇ ಮೋದಿ ವಿಯೆಟ್ನಾಂ, ಜಪಾನ್, ಥೈಲಾಂಡ್ ಮುಂತಾದ ಚೀನಾ ವೈರಿ ರಾಷ್ಟ್ರಗಳ ಜೊತೆ ಮಿತೃತ್ವ ಸಾಧಿಸಿ ಚೀನಾಕ್ಕೆ ದಕ್ಷಿಣ ಸಮುದ್ರದ ಮೇಲೆ ಕಣ್ಣು ಹಾಕದಂತೆ ಮಾಡಿದರು. ಒಂದು ವೇಳೆ ಚೀನ ಭಾರತ ಯುದ್ಧ ನಡೆದರೆ ಚೀನಾಕ್ಕೆ ತನ್ನ ಯುದ್ಧೋಪಕರಣಗಳನ್ನು ಯಾವ ಸಮುದ್ರದಲ್ಲಿ ಇಡಬೇಕು ಎಂದೇ ಗೊತ್ತಾಗುತ್ತಿಲ್ಲ.

ಪಾಕಿಸ್ತಾನದ ಮಾಜಿ ಪ್ರಧಾನಿ ಕಾಶ್ಮೀರ ವಿಚಾರವನ್ನು ತೆಗೆದುಕೊಂಡು ಯಾವಾಗ ವಿಶ್ವಸಂಸ್ಥೆಗೆ ಹೋಯಿತೋ ಅದೇ ವೇಳೆ ಮೋದಿ ಸಿಂಧ್, ಬಲೂಚಿಸ್ಥಾನದ
ವಿಷಯವನ್ನು ಪ್ರಸ್ತಾಪಿಸಿದರು. ಇದೇ ಸಂದರ್ಭದಲ್ಲಿ ಬಲೂಚಿಸ್ಥಾನದ ನಾಗರಿಕರು ಭಾರತದ ತ್ರಿವರ್ಣಧ್ವಜ ಹಾರಿಸಿ ಮೋದಿ ಪರ ಘೋಷಣೆ ಕೂಗಿದರು. ಪಾಕಿಸ್ತಾನ ಈ ವಿಚಾರದಲ್ಲಿ ಎಷ್ಟೊಂದು ವಿಲವಿಲ ಒದ್ದಾಡಿತೆಂದರೆ ವಿಶ್ವಸಂಸ್ಥೆಯೇ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಳ್ಳುವಷ್ಟರ ಮಟ್ಟಿಗೆ ಹೋಗಿತ್ತು. ಭಯೋತ್ಪಾದನೆ ವಿಶ್ವಕ್ಕೇ ಶತ್ರು ಎಂದು ಬಣ್ಣಿಸಿ, ಉಗ್ರಪೋಷಕ ಪಾಕಿಸ್ತಾನದ ಮುಖವನ್ನು ಜಗತ್ತಿನಲ್ಲೆಡೆ ತೋರಿಸಿದ ಕಾರಣ ಇಂದು ಪಾಕಿಸ್ತಾನ ಮೂಲೆಗುಂಪಾಗಿದೆ.

ಮೋದಿ ತನ್ನ ನಾಯಕತ್ವ ಗುಣದಿಂದ ಇಡೀ ವಿಶ್ವದಲ್ಲೇ ಭಾರತಕ್ಕೆ ಒಂದು ದೊಡ್ಡ ಸ್ಥಾನಮಾನವನ್ನು ತಂದುಕೊಟ್ಟಿದ್ದಾರೆ. ಪಾಕಿಸ್ತಾನ, ಚೀನಾ ಕೂಡಾ ಭಾರತವನ್ನು ಗಮನಿಸುತ್ತಲೇ ಇದ್ದು, ಭಾರತದ ಇತ್ತೀಚಿನ ಬೆಳವಣಿಗೆಯನ್ನು ನೋಡಿ ಭಾರ\ತಕ್ಕೆ ಭಯಪಡುವಂತಾಗಿದೆ.

ಅದಕ್ಕಾಗಿಯೇ ಹೇಳಿದ್ದು, ಇದು ಗಾಂಧಿ ಭಾರತವಲ್ಲ, ಮೋದಿ ಭಾರತ ಎಂದು….

-ಚೇಕಿತಾನ

Tags

Related Articles

Close