ಪ್ರಚಲಿತ

ಇನ್ನೆಷ್ಟು ಹಿಂದೂಗಳ ರಕ್ತ ಬೇಕು ಪಿನರಾಯಿ ವಿಜಯನ್? ಕೇರಳದಲ್ಲಾದ ಹಿಂದೂಗಳ ಕಗ್ಗೊಲೆಗೆ ಕಾರಣಕರ್ತ ನೀನೇ ಎಂಬುದನ್ನು ಮರೆತು ಮೋಹನ್ ಭಾಗವತ್ ವಿರುದ್ಧ ಬೊಗಳಿದೆಯಾ?

ಹಿಂದೂಗಳ ರಕ್ತ ಕುಡಿಯುತ್ತಿರುವ ಕೇರಳದ ಮುಖ್ಯಮಂತ್ರಿ ಪಿನರಾಯಿ ವಿಜಯನ್‍ನ ರಕ್ತದಾಹ ಇನ್ನೂ ಆರಿಲ್ಲ ಕಾಣಬೇಕು.. ಮುಸ್ಲಿಂ ಭಯೋತ್ಪಾದಕರಿಗಿಂತಲೂ ಕಮ್ಮಿ ಇಲ್ಲದಂತೆ ನೂರಾರು ಹಿಂದೂಗಳನ್ನು ಕೊಂದ, ಮುಸ್ಲಿಂ ಮತೀಯವಾದಿಗಳಿಗೆ ಬಹಿರಂಗವಾಗಿಯೇ ಬೆಂಬಲ ನೀಡುತ್ತಿರುವ ರಕ್ತಪಿಪಾಸು ಪಿನರಾಯ್ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಜೀ ಭಾಗವತ್ ವಿರುದ್ಧ ಯಾವ ನಾಲಿಗೆಯಿಂದ ಮಾತಾಡುತ್ತಾನೋ ಗೊತ್ತಿಲ್ಲ. ದೇಶದಲ್ಲೆಲ್ಲಾ ದೊಂಬಿ, ಗಲಾಟೆ, ಹಿಂಸಾಚಾರ ನಡೆಸುತ್ತಿದ್ದ ಕಮ್ಯುನಿಸ್ಟ್ ಪಕ್ಷ ಇಂದು ಅಸ್ತಿತ್ವದಲ್ಲಿರುವುದು ಕೇರಳದಲ್ಲಿ ಮಾತ್ರ. ಇಂದು ಆ ಪಕ್ಷ ನೆಲಕಚ್ಚಿಕೊಳ್ಳುತ್ತಿರುವುದನ್ನು ಕಂಡು ಉರಿ ಹತ್ತಿಸಿಕೊಂಡಿರುವ ಪಿನರಾಯಿ ವಿಜಯನ್ ಇಂದು ನಾಯಿಯಂತೆ ಬಡಿದಾಡಿಕೊಳ್ಳುತ್ತಿದ್ದಾನೆ.

ನೀನು ಮಾಡಿದ್ದ ಕ್ರೂರ ಕೆಲಸವನ್ನು ನೋಡಿಕೊಂಡು ಮೋಹನ್ ಭಾಗವತ್ ಸುಮ್ಮನಿರಬೇಕಿತ್ತಾ….ಮಿಸ್ಟರ್ ಪಿನರಾಯಿ…? ಒಂದಷ್ಟು ಸಂಘಪರಿವಾರದವರನ್ನು
ಕೊಂದು ರಕ್ತವನ್ನೆಲ್ಲಾ ಮೈಗಂಟಿಸಿಕೊಂಡಿರುವ ನಿನ್ನ ಪಕ್ಷ, ಸಂಘಟನೆ ಏನು ಮಾಡಿದೆ ಎಂದು ಬಿಡಿಸಿ ಹೇಳಬೇಕಾ? ನೀನು ಪಿಎಫ್‍ಐ ಉಗ್ರರಿಗೆ ಸಹಾಯ ಮಾಡುತ್ತಾ ಇಂದು ಆ ಸಂಘಟನೆ ಎಷ್ಟು ಮಂದಿ ಹಿಂದೂಗಳನ್ನು ಕೊಂದಿದೆ ಗೊತ್ತಾ… ಇಂದು ಅದೇ ಸಂಘಟನೆ ನಿಷೇಧದ ಹತ್ತಿರ ಬಂದಿದೆ ಎಂದರೆ ನೀನು ಕೂಡಾ ಆ ಸಂಘಟನೆಯ ಅಭಿಮಾನಿ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ ಬಿಡು. ನಿನ್ನ ರಾಜ್ಯದಲ್ಲಿ ಎಷ್ಟು ಮಂದಿ ಹುಡುಗಿಯರು ಲವ್ ಜಿಹಾದ್‍ಗೆ ಬಲಿಯಾಗಿದ್ದಾರೆ, ಎಷ್ಟು ಮಂದಿ ಐಸಿಸ್‍ಗೆ ಸೇರಿದ್ದಾರೆ ಎಂದು ಒಮ್ಮೆ ನಿನ್ನ ರಾಜ್ಯದ ಗೃಹಮಂತ್ರಿಯನ್ನು ಕರೆದುಕೊಂಡು ಪರಿಶೀಲನೆ ನಡೆಸು. ಆಗ ನಿನಗೇ ಗೊತ್ತಾಗುತ್ತದೆ ನೀನೆಷ್ಟು ದೊಡ್ಡ ರಾಕ್ಷಸ ಎಂದು..

ಕೇರಳ ಮತ್ತು ಪಶ್ವಿಮ ಬಂಗಾಳದಲ್ಲಿ ಜಿಹಾದಿ ಶಕ್ತಿಗಳು ಹಿಂಸಾ ಕೃತ್ಯಗಳಲ್ಲಿ ತೊಡಗಿವೆ. ಜನ ಸಾಮಾನ್ಯರು ಅದನ್ನು ಪ್ರತಿರೋಧಿಸುತ್ತಿದ್ದರೆ ರಾಜ್ಯ ಸರಕಾರಗಳು ತಮ್ಮ ಕರ್ತವ್ಯಗಳನ್ನು ನಿಭಾಯಿಸದಿರುವ ಮೂಲಕ ದೇಶದ್ರೋಹಿ ಶಕ್ತಿಗಳನ್ನು ಬೆಂಬಲಿಸುತ್ತಿವೆ. ಈ ಎರಡೂ ಸರ್ಕಾರಗಳೂ ಜಿಹಾದಿ ಶಕ್ತಿಗಳ ಪರವಾಗಿ ಕೆಲಸ ಮಾಡುತ್ತಿವೆ. ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಅಂತಹ ಶಕ್ತಿಗಳನ್ನು ಪೆÇೀಷಿಸುವ ಕೆಲಸ ಮಾಡುತ್ತಿವೆ ಎಂದು ಮೋಹನ್ ಜೀ ನಿನ್ನ ಬಗ್ಗೆ ನಾಗಪುರದಲ್ಲಿ ಸತ್ಯವನ್ನೇ ಹೇಳಿದ್ದಾರೆ…

ಸತ್ಯವನ್ನು ಹೇಳಿದರೆ ನಿನಗೆ ಕೆಂಡದಂತೆ ಕೋಪ ಬರುತ್ತದೆ ಅಲ್ವಾ ಪಿನರಾಯ್. ದೇಶದಲ್ಲಿ ಆರ್‍ಎಸ್‍ಎಸ್ ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ಸೃಷ್ಟಿಸುತ್ತಿದೆ.
ಸ್ವಾತಂತ್ರ್ಯ ಹೋರಾಟಕ್ಕೆ ಬೆನ್ನು ತೋರಿಸಿ ಓಡಿ ಹೋದ ಆರ್‍ಎಸ್‍ಎಸ್‍ನಿಂದ ನಾವು ದೇಶಪ್ರೇಮದ ಪಾಠವನ್ನು ಕಲಿಯಬೇಕಿಲ್ಲ ಎಂದು ಬೊಗಳುತ್ತೀಯಲ್ಲಾ ನಿನಗೆ ಆರ್‍ಎಸ್‍ಎಸ್ ಬಗ್ಗೆ ಏನು ಗೊತ್ತಿದೆ. ನೀನು ಜಿಹಾದಿ ಹಂದಿಗಳಿಗೆ ಸಹಾಯ ಮಾಡುತ್ತಾ ಇರುವುದರಿಂದ ನಿನ್ನ ರಾಜ್ಯದಲ್ಲಿ ಆ ಹಂದಿಗಳು ಇಂದು ದೇಶದ ಭದ್ರತೆಗೆ ಸವಾಲಾಗಿದ್ದಾರೆ ಎಂದು ನೀನು ಯಾವಾಗ ಒಪ್ಪಿಕೊಳ್ಳುತ್ತೀಯಾ… ಆರ್‍ಎಸ್‍ಎಸ್ ದೇಶಪ್ರೇಮದ ಬಗ್ಗೆ ನಿನಗೆ ಮಾತಾಡಲು ಯಾವ ನೈತಿಕ ಹಕ್ಕೇ ಇಲ್ಲ. ಯಾಕೆಂದರೆ ನಿನ್ನ ಪಕ್ಷ ಸ್ವಾತಂತ್ರ್ಯ ಚಳುವಳಿ ಸಂದರ್ಭ ಬ್ರಿಟಿಷರಿಗೆ ಸಹಾಯ ಮಾಡಿದ್ದು ಗುಟ್ಟಾಗಿ ಉಳಿದಿಲ್ಲ.

ಇಂದು ನಿನ್ನ ರಾಜ್ಯದಲ್ಲಿ ಪಿಎಫ್‍ಐ ಉಗ್ರರು ಎಷ್ಟು ಹುಲುಸಾಗಿ ಬೆಳೆದಿದ್ದಾರೆಂದರೆ ಕರ್ನಾಟಕದಲ್ಲಿ ಯಾವುದೇ ಗಲಭೆ ನಡೆದರೂ ಅದಕ್ಕೆ ನಿನ್ನ ರಾಜ್ಯದ ಪಿಎಫ್‍ಐ
ಉಗ್ರರ ಸಹಾಯ ಇರುತ್ತದೆ. ಅಂದು ಕೊಡಗಿನಲ್ಲಿ ನಡೆದ ಟಿಪ್ಪು ಜಯಂತಿ, ಮಂಗಳೂರಿನಲ್ಲಿ ನಡೆದ ಕೋಮುಗಲಭೆಗೆ ಮುನ್ನುಡಿ ಬರೆಯುವುದೇ ನಿನ್ನ ಕೇರಳದ
ಪಿಎಫ್‍ಐ ಉಗ್ರರು. ನಿನ್ನ ಉಗ್ರವಾದದ ಬಗ್ಗೆ ಆರ್‍ಎಸ್‍ಎಸ್ ಇಂದು ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಇಂದು ನಿನ್ನ ಕೆಲವು ಸಂಘಟನೆಗಳು ಐಸಿಸ್ ಮತ್ತು ಇನ್ನಿತರ ಭಯೋತ್ಪಾದಕ ಸಂಘಟನೆಗಳ ಪರವಾಗಿ ಕೆಲಸ ಮಾಡುತ್ತಿರುವುದನ್ನು ಎನ್‍ಐಎ ಪತ್ತೆ ಹಚ್ಚಿದೆ. ಇಂದು ಕೇರಳದಲ್ಲಿ ಕಮ್ಯುನಿಸ್ಟ್ ಮುಳುಗುತ್ತಿರುವ ಹಡಗು. ಜನರೆಲ್ಲಾ ಆರೆಸ್ಸೆಸ್ ಕಡೆಗೆ ಹರಿದು ಬರುತ್ತಿರುವುದನ್ನು ಕಂಡು ಸಹಿಸಲಾರದ ನೀನು ಆರೆಸ್ಸೆಸ್ ಬಗ್ಗೆ ಬಾಯಿಗೆ ಬಂದಂತೆ ಬೊಗಳುತ್ತೀಯಾ… ನಿನಗೆ ನಾಚಿಕೆಯಾಗುವುದಿಲ್ಲವೇ?

ನೀನೆಂತಹಾ ರಕ್ತಪಿಪಾಸು ಎಂದು ಗೊತ್ತಿದೆ ಪಿನರಾಯ್…

ಕೇರಳದ ಮಲಬಾರ್, ಕಣ್ಣೂರಿನಲ್ಲಿ ಎಷ್ಟು ಮಂದಿ ಸಂಘಪರಿವಾರದ ಕಾರ್ಯಕರ್ತರು ಕೊಲೆಯಾಗಿದ್ದಾರೆ, ಎಷ್ಟು ರಾಜಕೀಯ ಘರ್ಷಣೆ ನಡೆದಿದೆ ಎಂದು ನಮಗೆ
ಚೆನ್ನಾಗಿ ಗೊತ್ತಿದೆ. ಕೆಂಪು ಉಗ್ರರ ರಕ್ತದಾಹಕ್ಕೆ ಸುಮಾರು 70ಕ್ಕೂ ಅಧಿಕ ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಬಹಳಷ್ಟು ಮಂದಿ ಕೈಕಾಲು ಕಳೆದುಕೊಂಡಿದ್ದಾರೆ.
ಇಂತಹಾ ಹೇಯ ಕೃತ್ಯದ ಮುನ್ನುಡಿ ಬರೆದವನೇ ಈ ಪಿನರಾಯ್ ವಿಜಯನ್. ಕಣ್ಣೂರಿನ ರಕ್ತಚರಿತ್ರೆ ಹೊರಜಗತ್ತಿಗೆ ಗೊತ್ತಾದಾಗ ಇದಕ್ಕೆಲ್ಲಾ ಅಡಿಪಾಯ ಹಾಕಿದವನು ಕೂಡಾ ನೀನೇ ಎಂಬ ಸತ್ಯವೂ ಗೊತ್ತಾಯಿತು ಬಿಡು.

ನಿನಗೆಷ್ಟು ರಕ್ತದಾಹ ಇದೆ ಎಂದು ನಿನ್ನದೇ ಮಾತುಗಳಲ್ಲಿ ಹೇಳುವುದಾದರೆ, `ನಾವು ವಿರೋಧಿಗಳನ್ನು ಹೇಗೆ ಕೊಲ್ಲಬೇಕು ಎನ್ನುವುದನ್ನು ಬಂಗಾಳಿಗಳಿಂದ
ಕಲಿಯಬೇಕು. ಅವರು ರಕ್ತದ ಒಂದು ಹನಿಯೂ ಸಿಗದ ಹಾಗೆ ಮುಗಿಸಿಬಿಡುತ್ತಾರೆ. ತಮಗಾಗದವರನ್ನು ಅಪಹರಿಸಿ ಹೊಂಡ ತೋಡಿ ಜೀವಂತ ಸಮಾಧಿ ಮಾಡಿ ಉಪ್ಪು ಹಾಕಿ ಬಿಡುತ್ತಾರೆ. ಜಗತ್ತಿಗೆ ರಕ್ತದ ಕಲೆಯಾಗಲೀ, ವ್ಯಕ್ತಿಯ ಚಿತ್ರ ಅಥವಾ ಸುದ್ದಿಯಾಗಲೀ ತಿಳಿಯುವುದೇ ಇಲ್ಲ…. ಅಬ್ಬಾ ಎಂಥಾ ಹೇಳಿಕೆ ಮಾರಾಯಾ ನಿನ್ದು… ನಿನ್ನ ಗುರು ಸ್ಟಾಲಿನ್ ಕೂಡಾ ಈ ರೀತಿ ಹೇಳಿರಲಿಕ್ಕಿಲ್ಲ.

ನಿನ್ನದು ಬಂಗಾಳ ಮೋಡೆಲ್ ಅಂದ್ರೆ ಇದೇ ಅಲ್ವಾ….

ಬಿಜೆಪಿ ಸಂಸದರು ಸಂಸತ್ತಿನಲ್ಲಿ ಕೇರಳದ ಕಮ್ಯುನಿಸ್ಟ್ ರಕ್ತ ಚರಿತ್ರೆಯ ಬಗ್ಗೆ ದನಿಯೆತ್ತುತ್ತಿರುವ ವಿಷಯ ಚರ್ಚೆಗೆ ಬಂದಾಗ ಸಿಪಿಎಂನ ರಾಜ್ಯ ಕಾರ್ಯದರ್ಶಿಯಾಗಿದ್ದ ನೀನು ಇತರೆ ಕಾಮ್ರೇಡುಗಳನ್ನು ಉದ್ದೇಶಿಸಿ, ನಾವು “ಬಂಗಾಳ ಮಾಡೆಲ್” ಅನ್ನು ಅನುಸರಿಸಿದರೆ ಈ ಸಮಸ್ಯೆಯಿರುವುದಿಲ್ಲ ಎಂದಿರಲಿಲ್ಲವೇ…?

ನೀನು ಬಂಗಾಳದ ಉದಾಹರಣೆ ಯಾಕೆ ಕೊಡುತ್ತೀ ಗೊತ್ತಾ? ಇಲ್ಲಿ ಕೆಂಪು ಉಗ್ರರು ತಮ್ಮ ರಾಜಕೀಯ ಎದುರಾಳಿಗಳನ್ನು ಅಪರಿಸಿಕೊಂಡು ಸೆರೆಯಲ್ಲಿರಿಸಿ ಜೀವಂತ ಹೂತು ಹಾಕಿ ಬಳಿಕ ನಾಪತ್ತೆಯಾಗಿದ್ದಾನೆ ಎಂದು ಸುದ್ದಿ ಹಬ್ಬಿಸುವುದು ಚಾಳಿಯಲ್ಲವೇ? ಪಶ್ಚಿಮ ಬಂಗಾಳದಲ್ಲಿ 1970ರಲ್ಲಿ ಸೈನ್ ಸಹೋದರರನ್ನು ಕೊಂದು ಆ ರಕ್ತದಲ್ಲಿ ಅವರ ತಾಯಿಗೆ ಬಲವಂತವಾಗಿ ಅನ್ನವನ್ನು ಅದ್ದಿ ತಿನ್ನಿಸಿ ಹುಚ್ಚಿಯನ್ನಾಗಿಸಿದ ಸೈನ್ ಬಾರಿ ಹತ್ಯಾಕಾಂಡ, 1979ರಲ್ಲಿ ಬಾಂಗ್ಲಾದಿಂದ ಮತಾಂತರಗೊಳ್ಳುವುದರಿಂದ ತಪ್ಪಿಸಿ ಆಶ್ರಯಕ್ಕಾಗಿ ಭಾರತಕ್ಕೆ ಓಡಿ ಬಂದು ಸುಂದರ ಬನದಲ್ಲಿದ್ದ 60 ಸಾವಿರ ಹಿಂದೂಗಳ ಸರಕಾರೀ ಪ್ರಾಯೋಜಿತ ಮರೀಚ್ ಝಾಪಿ ಹತ್ಯಾಕಾಂಡ, ಹದಿನೇಳು ಜನ ಆನಂದಮಾರ್ಗಿ ಸನ್ಯಾಸಿ, ಸನ್ಯಾಸಿನಿಗಳನ್ನು ಜೀವಂತವಾಗಿ ಸುಟ್ಟ ಘಟನೆ, ನಾನೂರ್ ಹಾಗೂ ಇತಿಹಾಸ ಪ್ರಸಿದ್ಧ ನಂದಿಗ್ರಾಮದ ಹತ್ಯಾಕಾಂಡದ ಘಟನೆಗಳು ಇವೆಲ್ಲಾ ಕೆಂಪು ಉಗ್ರರ ಹತ್ಯಾಕಾಂಡ ಸಾಕ್ಷಿಗಳು. ಪಿನರಾಯ್ ಇದೆಲ್ಲಾ ನಿನ್ನದೇ ಪಕ್ಷಗಳು ಮಾಡಿರುವ ಹತ್ಯಾಕಾಂಡಗಳು….

ಪಿನರಾಯ್ ವಿಜಯನ್ ನಾನು ನಿನ್ನ ಪಕ್ಷ ಮಾಡಿದ ಒಂದೊಂದೋ ಹತ್ಯಾಕಾಂಡವನ್ನು ಬಿಚ್ಚಿಡುತ್ತೇನೆ ಕೇಳು….

ವಡಿಕ್ಕಲ್ ರಾಮಕೃಷ್ಣನ್ ನಿನಗೆ ಏನು ತಪ್ಪು ಮಾಡಿದ್ರು ಪಿನರಾಯ್… ಅವರ ಕೊಲೆಗೆ ನೇತೃತ್ವ ವಹಿಸಿದವನು ನೀನೇ ಅಲ್ಲವೇ… ರಾಮಕೃಷ್ಣನ್ ತಮ್ಮ ಹೊಲಿಗೆ
ಅಂಗಡಿಯನ್ನು ಬಂದ್ ಮಾಡಿ ಮನೆಗೆ ತೆರಳುತ್ತಿದ್ದಾಗ ವಕ್ಕರಿಸಿದ ಕಮ್ಯುನಿಸ್ಟರು ಅವನ್ನು ಹೊಡೆದು ಕೊಂದೇಬಿಟ್ಟಿರಲ್ಲ…. ಕಮ್ಯುನಿಸ್ಟ್ ಆಗಿದ್ದ ರಾಮಕೃಷ್ಣನ್
ಸಂಘಪರಿವಾರ ಸೇರಿದರೆಂಬ ಕಾರಣಕ್ಕೆ ನಡೆದ ಕೊಲೆ ಅದು. ಕೆಂಪು ಉಗ್ರರಿಂದ ಹಲ್ಲೆಗೊಳಗಾಗಿದ್ದ ಸ್ವಯಂಸೇವಕನ ಆರೋಗ್ಯ ವಿಚಾರಿಸಲು ಹೋಗುತ್ತಿದ್ದ ಕರಿಂಬಿಲ್ ಸತೀಶನ್ ಅವರನ್ನು ಕೊಡಿಯೇರಿ ಬಾಲಕೃಷ್ಣನ್ ಹತ್ಯೆಗೈದ.

ಕೊಡಿಯೇರಿ ಬಾಲಕೃಷ್ಣನನ ಅಳಿಯ ಶಾಖೆಯ ಮೇಲೆ ದಾಳಿ ಮಾಡಿದ ನಂತರ ಕೊಡಿಯೇರಿಯ ಎಂಗಾಯಿಲ್ಪೀಡಿಕಾದಲ್ಲಿ ಶಾಖೆ ನಡೆಸಲು ಅವಕಾಶವನ್ನೇ
ಕೊಟ್ಟಿರಲಿಲ್ಲ. ಜೈಶ್ರೀರಾಮ್ ಎಂದರೆ, ಕೆಂಪು ವಸ್ತ್ರ ಧರಿಸಿದರೆ, ಒಟ್ಟಾಗಿ ಕಾಣಿಸಿಕೊಂಡರೆ ಹಲ್ಲೆ ನಡೆಸುವಷ್ಟು ಹೇಯ ಕೃತ್ಯವನ್ನು ಮಾಡುತ್ತಲೇ ಬಂದಿದ್ದಾರೆ ಕೆಂಪು ಉಗ್ರರು.

ಕೊಡಿಯೇರಿ ಇಂದು ಕೇರಳದ ಹಿರಿಯ ನೇತಾರ. ನೀನು ಮುಖ್ಯಮಂತ್ರಿ ಆಗಿದ್ದೀಯಾ… ನೀನು ಮುಖ್ಯಮಂತ್ರಿ ಆದಾಗ ಗಹಗಹಿಸಿದ ಕೆಂಪು ಉಗ್ರರು ಎಷ್ಟು
ಮಂದಿಯನ್ನು ಕತ್ತರಿಸಿ ಹಾಕಿದ್ದಾರೆ… ಈ ಎಲ್ಲಾ ಕೊಲೆಗಳ ನೈತಿಕ ಹೊಣೆಯನ್ನು ಹೊರಲು ನೀನು ತಯಾರಿದ್ದೀಯಾ…

ಸದಾನಂದ ಮಾಸ್ತರ್ ಅವರ ಕಾಲು ಕಡಿದಿರಲ್ಲ…

ಅವರೇನು ತಪ್ಪು ಮಾಡಿದ್ದಾರೆ ಎಂದು ಹೇಳು… ಕಮ್ಯುನಿಸ್ಟ್ ತೊರೆದು ಸಂಘಪರಿವಾರ ಸೇರಿದ್ದಕ್ಕೆ ಅವರಿಗೆ ಇಂದು ಈ ಶಿಕ್ಷೆ. ಶಿಕ್ಷಕರಾಗಿದ್ದ ಸದಾನಂದ ಮಾಸ್ಟರರ ತಂದೆ ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿದ್ದರು. ತಂದೆಯಿಂದ ಪ್ರೇರಣೆ ಪಡೆದು ಸದಾನಂದರೂ ಸಹಜವಾಗಿ ಕಮ್ಯುನಿಷ್ಟ್ ಪಕ್ಷವನ್ನು ಸೇರಿಕೊಂಡಿದ್ದರು. ಸಂಘದ ಬಗ್ಗೆ ಕುತೂಹಲದಿಂದ ರಕ್ಷಾಬಂಧನದ ಬೌದ್ಧಿಕ್ ಭಾಷಣ ಕೇಳಿ ಪ್ರೇರಣೆ ಪಡೆದರು. ಕೇಸರಿ ಪತ್ರಿಕೆಯ ಚಂದಾದಾರರಾದರು. ಕೊನೆಗೆ ಆರೆಸ್ಸೆಸ್ಸ್ ಸಂಘಟನೆಯನ್ನು ಅಪ್ಪಿಯೇ ಬಿಟ್ಟರು. ಆದರೆ ಇದು ಕಮ್ಯುನಿಸ್ಟ್ ಉಗ್ರರಿಗೆ ಸಹಿಸಲಾಗಲಿಲ್ಲ. ಮೊದಲಿಗೆ ಅವರಿಗೆ ಸೇರದಂತೆ ಪ್ರೀತಿಯ ಉಪದೇಶ ನೀಡಿದರು. ಆದರೆ ಸದಾನಂದ ಮಾಸ್ತರ್ ಇದನ್ನೆಲ್ಲಾ ಕೇಳಲೇ ಇಲ್ಲ.

ಅದಕ್ಕಾಗಿ ಸದಾನಂದ ಮಾಸ್ತರ್‍ಗೆ ಕೊಟ್ಟ ಶಿಕ್ಷೆ ಏನು ಗೊತ್ತಾ… ಇದು ಕೇಳಿದ್ರೆ ಖಂಡಿತಾ ಸಹಿಸಲು ಸಾಧ್ಯವೇ ಇಲ್ಲ….

ಸದಾನಂದ್‍ಗೆ ಕೊಡುವ ಶಿಕ್ಷೆಯ ಬಳಿಕ ಯಾರೂ ಕೂಡಾ ಆರೆಸ್ಸೆಸ್ ಸೇರಬಾರದು ಎಂದು ಅವರ ಕಾಲು ಕತ್ತರಿಸುವ ನಿರ್ಧಾರ ಕೈಗೊಳ್ಳಲಾಯಿತು. ಪೂರ್ವ
ಸಿದ್ಧತೆಯಂತೆ ಮನೆಗೆ ನುಗ್ಗಿದ ಕೆಂಪು ಉಗ್ರರ ಪೈಕಿ ಕೆಲವರು ಸದಾನಂದ್ ಅವರ ಕೈಯ್ಯನ್ನು ಗಟ್ಟಿ ಹಿಡಿದರು. ಉಳಿದವರು ಅವರ ಕಾಲನ್ನು ಕತ್ತರಿಸಿ ಹಾಕಿ ಗಾಯದ ಮೇಲೆ ಸೆಗಣಿ ಹಾಗೂ ಮಣ್ಣು ಮೆತ್ತಲಾಯಿತು. ಎಷ್ಟು ನೋವಾಗಿತ್ತೋ ಏನೋ… ಸದಾನಂದ್ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು, ಗಾಯಕ್ಕೆ ಮೆತ್ತಿದ್ದ ಸಗಣಿ, ಮಣ್ಣು ತೆಗೆಯುವುದಕ್ಕೆ ನಾಲ್ಕು ಗಂಟೆ ತೆಗೆದುಕೊಂಡಿತು ಎಂದಿದ್ದರು.

ಜಯಕೃಷ್ಣ ಮಾಸ್ತರ್ ಏನು ಮಾಡಿದರು?

ಭಾರತೀಯ ಜನತಾ ಯುವಮೋರ್ಚಾದ ಕೇರಳ ರಾಜ್ಯ ಉಪಾಧ್ಯಕ್ಷರಾಗಿದ್ದ ಜಯಕೃಷ್ಣನ್ ಮಾಸ್ಟರ್ ಕಣ್ಣೂರು ಜಿಲ್ಲೆಯ ಶಾಲೆಯೊಂದರಲ್ಲಿ ಎಂದಿನಂತೆ 6ನೇ
ತರಗತಿಯ ಮಕ್ಕಳಿಗೆ ಪಾಠ ಮಾಡುತಿದ್ದರು. ಇವರ ಅಂಗರಕ್ಷಕನನ್ನು ಅಪಹರಿಸಿದ ಬಳಿಕ ಏಳು ಜನ ಕಮ್ಯುನಿಸ್ಟ್ ಉಗ್ರರು ಮಾರಕಾಸ್ತ್ರಗಳನ್ನು ಝಳಪಿಸುತ್ತ
ನೇರವಾಗಿ ತರಗತಿಯೊಳಗೆ ನಡೆದು ಬಂದರು. ಮಕ್ಕಳನ್ನು ಕೂತ ಜಾಗದಿಂದ ಕದಲದಂತೆ ಬೆದರಿಸಿ, ಮಕ್ಕಳ ಕಣ್ಣೆದುರೇ ಜಯಕೃಷ್ಣನ್ ಮಾಸ್ತರರಿಗೆ 48 ಭೀಕರವಾಗಿ ಇರಿದರು. ಘಟನೆಯನ್ನು ಕಣ್ಣಾರೆ ಕಂಡ ಮಕ್ಕಳು ಮಾನಸಿಕವಾಗಿ ಜರ್ಝರಿತರಾಗಿದ್ದರು. ಅವರನ್ನು ಸಹಜ ಸ್ಥಿತಿಗೆ ತರಲು ಕೌನ್ಸೆಲಿಂಗ್ ಮಾಡಬೇಕಾಯಿತು. ಉತ್ತಮ ವಾಗ್ಮಿಯಾಗಿದ್ದ ಜಯಕೃಷ್ಣನ್ ಭಾಷಣ ಕೇಳಲು ಜನರು ಉತ್ಸಾಹದಿಂದ ಸೇರುತ್ತಿದ್ದರು. ಇವರಿಂದಾಗಿ ಕೇರಳದಲ್ಲಿ ಬಿಜೆಪಿ ಬೆಳೆಯಲಾರಂಭಿಸಿತು. ಇದೇ ಬೆಳವಣಿಗೆ ಜಯಕೃಷ್ಣನ್ ಮಾಸ್ತರ್ ಕೊಲೆಗೆ ಕಾರಣ. ಕೊಲೆಗಟುಕರಿಗೆ ಶಿಕ್ಷೆ ವಿಧಿಸಿದಾಗ ನ್ಯಾಯಾಧೀಶರಿಗೆ ನ್ಯಾಯಾಲಯದ ಎದುರಲ್ಲೇ ಕೊಲೆ ಬೆದರಿಕೆಯೊಡ್ಡಿದ್ದರೆಂದರೆ ಇವರೆಷ್ಟು ಕ್ರೂರಿಗಳೆಂದು ಅಂದಾಜಿಸಬಹುದು…

ಎಬಿವಿಪಿ ಸೇರಿದಕ್ಕೆ ಆ ವಿದ್ಯಾರ್ಥಿಗಳಿಗೆ ಶಿಕ್ಷೆ ಏನು ಗೊತ್ತೇ..?

ಇದು ಕೇರಳದ ಪರುಮಲ ಜಿಲ್ಲೆಯಲ್ಲಿ ದೇವಸ್ವಮ್ ಕಾಲೇಜಿನಲ್ಲಿ 1996ರ ಸೆ.17ರಂದು ನಡೆದ ಘಟನೆ. ಕಾಲೇಜಿಗೆ ನುಗ್ಗಿದ ಕೆಂಪು ಉಗ್ರರು ಮೂವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದರು. ಇವರಿಂದ ತಪ್ಪಿಸಿಕೊಂಡು ಓಡಿದ ಈ ಹುಡುಗರು ಪ್ರಾಣ ಉಳಿಸಿಕೊಳ್ಳಲು ಪಂಪಾ ನದಿಗೆ ಹಾರಿದರು. ಅಲ್ಲಿಗೂ ಬಂದ ಕೆಂಪು ಉಗ್ರರು ವಿದ್ಯಾರ್ಥಿಗಳ ಮೇಲೆ ಕಲ್ಲೆಸೆಯಲಾರಂಭಿಸಿದರು. ನದಿಯ ಇನ್ನೊಂದು ತೀರದಲ್ಲಿ ಬಟ್ಟೆಯೊಗೆಯುತ್ತಿದ್ದ ಹೆಂಗಸರು ಕಮ್ಯುನಿಸ್ಟರ ಕಲ್ಲಿನೇಟಿಗೆ ತುತ್ತಾಗಿ ಮುಳುಗುತ್ತಿದ್ದ ಹುಡುಗರತ್ತ ಸೀರೆಗಳನ್ನೆಸೆದು ಅವರ ಪ್ರಾಣ ಉಳಿಸಲು ಮುಂದಾದಾಗ ಕೆಂಪು ಉಗ್ರರು ಹೆಣ್ಣುಮಕ್ಕಳತ್ತ ಕಲ್ಲು ತೂರಿದರು. ಮೂವರು ಉಗ್ರರು ನೀರಲ್ಲಿ ಮುಳುಗಿ ಪ್ರಾಣವನ್ನೇ ಬಿಟ್ಟರು.

ತಂದೆ-ತಾಯಿ ಎದುರೇ ಕೊಲೆ…

ಕಳೆದ ವರ್ಷ ಫೆಬ್ರವರಿಗೆ ಮನೆಗೆ ನುಗ್ಗಿದ್ದ ಕಮ್ಯುನಿಸ್ಟರು ಆರೆಸ್ಸೆಸ್ ಕಾರ್ಯಕರ್ತ ಸುಜಿತ್ ಎಂಬಾತನನ್ನು ವಯೋವೃದ್ಧ ತಂದೆ ತಾಯಿಯ ಎದುರೇ ಕೊಚ್ಚಿ ಕೊಂದು ಹಾಕಿದರು. ಅಡ್ಡ ಬಂದ ಅಣ್ಣ,ತಂದೆ-ತಾಯಿಗೂ ಮಚ್ಛಿನಿಂದಲೇ ಹೊಡೆದರು. ಈ ಘಟನೆಯಾಗಿ ಮತ್ತೆ ಒಂದು ತಿಂಗಳನಂತರ ಬಿಜು ಎಂಬ ಮತ್ತೊಬ್ಬ ಸಂಘ ಪರಿವಾರದ ಕಾರ್ಯಕರ್ತನನ್ನು ಆತನ ಆಟೋದಿಂದ ಹೊರಗೆಳೆದು ಮಾರಕಾಸ್ತ್ರಗಳಿಂದ ಹೊಡೆದಿದ್ದಾರೆ. ಸಂಘದ ಕಾರ್ಯಕರ್ತ ಮನೋಜ್ ಹತ್ಯೆಯ ಆರೋಪದಲ್ಲಿ ಕಮ್ಯುನಿಸ್ಟ್ ನಾಯಕ ಜಯರಾಜನ್ ಶರಣಾಗಿದ್ದ.

ಸಿಪಿಐಎಂನ ಕೊಲೆಕೃತ್ಯ ಘಟನೆಗಳು 1940ರ ಆರಂಭದಿಂದಲೇ ಕೇರಳದಲ್ಲಿ ಪ್ರಾರಂಭವಾಗಿತ್ತು. ಆರೆಸ್ಸೆಸ್‍ನ ಸಾಂಘಿಕ್ ಒಂದರಲ್ಲಿ ಆಗಿನ ಸರಸಂಘಚಾಲಕರಾದ ಶ್ರೀ ಗುರೂಜೀ ಗೋಳವಲ್ಕರ್ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗಲೇ ಈ ಹಲ್ಲೆ ನಡೆದಿತ್ತು. ಆರೆಸ್ಸೆಸ್‍ನ ಈಗಿನ ಹಿರಿಯ ಸ್ವಯಂ ಸೇವಕರಾಗಿರುವ ಪಿ. ಪರಮೇಶ್ವರನ್ ಆಗ ಸಾಂಘಿಕ್‍ನ ಮುಖ್ಯ ಶಿಕ್ಷಕರಾಗಿದ್ದರು. ಸಂಘದ ಮೇಲೆ ನಡೆದ ಈ ದಾಳಿಯನ್ನು ಸ್ವಯಂಸೇವಕರು ಸಮರ್ಥವಾಗಿಯೇ ಎದುರಿಸಿದ್ದರು. ಕಾರ್ಯಕ್ರಮಕ್ಕೆ ಯಾವುದೇ ತಡೆಯಾಗಲಿಲ್ಲ. ಗುರೂಜಿಯವರು ಏನೂ ಆಗದವರಂತೆ ತಮ್ಮ ಭಾಷಣ ಮುಂದುವರೆಸಿದ್ದರು. ಆದಾದ ಬಳಿಕ 1952 ರಲ್ಲಿ ಗುರೂಜಿಯವರು ಅಳಪ್ಪುರದಲ್ಲಿ ಇಂತಹದೇ ಇನ್ನೊಂದು ಸಭೆಯಲ್ಲಿ ಮಾತನಾಡುತ್ತಿರುವಾಗ ಮತ್ತೆ ಸಿಪಿಐ ಗೂಂಡಾಗಳು ಹಲ್ಲೆ ನಡೆಸಿದ್ದರು. ಆಗಲೂ ಕಾರ್ಯಕ್ರಮಕ್ಕೆ ಯಾವುದೇ ತಡೆಯುಂಟಾಗಲಿಲ್ಲ.

1969 ರಲ್ಲಿ ತ್ರಿಶ್ಶೂರ್ ಕೇರಳವರ್ಮ ಕಾಲೇಜು ಆವರಣದಲ್ಲಿ ಸ್ವಾಮಿ ಚಿನ್ಮಯಾನಂದರ ಪ್ರವಚನ ನಡೆಯುತ್ತಿದ್ದಾಗ ಹಲ್ಲೆ ನಡೆಸಲು ಯತ್ನಿಸಿದರೂ ಆರೆಸ್ಸೆಸ್
ಸ್ವಯಂಸೇವಕರ ಸರ್ಪಕಾವಲಿ ನಿಂದಾಗಿ ಅದು ವಿಫಲಗೊಂಡಿತು. ಸ್ವಾಮೀಜಿಯವರಿಗೆ ಕಿಂಚಿತ್ತೂ ಧಕ್ಕೆಯಾಗದಂತೆ ಸ್ವಯಂ ಸೇವಕರು ನಿಗಾವಹಿಸಿದ್ದರು.

ಕೊಟ್ಟಾಯಂ ಜಿಲ್ಲೆಯ ಪೆÇಂಕುನ್ನಮ್ ಎಂಬಲ್ಲಿ ನಡೆದ ಆರೆಸ್ಸೆಸ್ ಕಾರ್ಯಕರ್ತ ಶ್ರೀಧರನ್ ನಾಯರ್ ಕೊಲೆ, ಪಾಲಕ್ಕಾಡ್‍ನ ರಾಮಕೃಷ್ಣನ್ ಹತ್ಯೆಯ ಹಿಂದೆಯೂ ಪಿನರಾಯಿ ಮತ್ತು ಕೊಡಿಯೇರಿ ಮೇಲೆ ಆರೋಪವಿದೆ. ಎರ್ನಾಕುಲಂ ಜಿಲ್ಲೆಯ ಪಾರೂರುನಲ್ಲಿ ಆರೆಸ್ಸೆಸ್ ಕಾರ್ಯಕರ್ತ ಹಾಗೂ ಮಾಜಿ ಪ್ರಚಾರಕ ವೆಲಿಯುತುನಾಡು ಚಂದ್ರನ್, ನಲ್ಲೆಂಕರ ಎಂಬಲ್ಲಿ ಸಂಘದ ಮಂಡಲ ಕಾರ್ಯ ವಾಹಕ ಶಂಕರನಾರಾಯಣನ್ ಸುಧೀಂದ್ರನ್ ಹೀಗೆ ಹಲವಾರು ಮಂದಿಯನ್ನು ಕೊಲೆ ನಡೆಸಲಾಯಿತು.

ಕಳೆದ ವರ್ಷ ಅಕ್ಟೋಬರ್‍ನಂದು ಕಣ್ಣೂರು ಜಿಲ್ಲೆಯ ಪಿಣರಾಯಿ ಎಂಬಲ್ಲಿ ಆರೆಸ್ಸೆಸ್ ಸ್ವಯಂಸೇವಕ ರಮಿತ್ ಎಂಬ ಯುವಕನನ್ನು ಕಮ್ಯುನಿಸ್ಟ್ ಕಾರ್ಯಕರ್ತರು
ಹಾಡುಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ಹಾಕಿದರು. ಕೇರಳ ಮುಖ್ಯಮಂತ್ರಿಯ ಸ್ವಗ್ರಾಮದಲ್ಲಿ ನಡೆದ ಈ ಭೀಕರ ಹತ್ಯೆಗೆ ದೇಶಾದ್ಯಂತ ಖಂಡನೆ
ವ್ಯಕ್ತವಾಯಿತು. ಇದಕ್ಕೂ ಮುನ್ನ 2002ರ ಮೇ 22ರಂದು ರಮಿತ್‍ನ ತಂದೆ ಹಾಗೂ ಆರೆಸ್ಸೆಸ್ ಸ್ವಯಂಸೇವಕರಾಗಿದ್ದ ಉತ್ತಮನ್ ಅವರನ್ನು ಕೊಲೆಗೈಯಲಾಗಿತ್ತು. ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷ ಅಧಿಕಾರಕ್ಕೆ ಬಂದ ಸಂಭ್ರಮದಲ್ಲಿ ಕಮ್ಯುನಿಸ್ಟ್ ಕಾರ್ಯಕರ್ತರು ರಮಿತ್ ನ ಮನೆಗೆ ದಾಳಿ ನಡೆಸಿದ್ದರು. ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಕಿ ಖುಷಿ ಆಚರಿಸಿದ್ದರು. ತಡೆಯಲು ಬಂದ ತಾಯಿ ನಾರಾಯಣಿ ಮೇಲೆ ಹಲ್ಲೆ ನಡೆಸಿದ್ದರ ಪರಿಣಾಮವಾಗಿ ಆಕೆ ಒಂದು ವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಇದೀಗ ರಮಿತ್‍ನ ತಾಯಿ ನಾರಾಯಣಿ ಗಂಡನನ್ನೂ, ಮಗನನ್ನೂ ಕಮ್ಯುನಿಸ್ಟ್ ಹಿಂಸಾಚಾರಕ್ಕೆ ಕಳೆದುಕೊಂಡಿದ್ದಾರೆ.

ಆರೆಸ್ಸೆಸ್ ಕಾರ್ಯಕರ್ತರನ್ನು ಮಚ್ಚು, ಲಾಂಗುಗಳಿಂದ ಬೆದರಿಸಲಾಗದಿದ್ದರೆ ಬಾಂಬ್ ಪ್ರಯೋಗಕ್ಕೂ ಮುಂದಾದದರು. ಪಿನಾರಾಯಿ ಅಧಿಕಾರಕ್ಕೆ ಬಂದ ನಂತರ
ಕೇರಳದಲ್ಲಿ ಅನೇಕ ಸಂಘಿಗಳ ಕೊಲೆ ನಡೆಯಿತು. ಜುಲೈಯಲ್ಲಿ ನಡೆದ ಆರೆಸ್ಸೆಸ್ ಕಾರ್ಯಕರ್ತ ರಾಜೇಶ್ ಎಂಬವರ ಕೊಲೆ ನಡೆಯಿತು. ಪಿನರಾಯ್ ಅಧಿಕಾರಕ್ಕೆ ಬಂದ ನಂತರ 50ಕ್ಕೂ ಅಧಿಕ ಕೊಲೆ ನಡೆದಿದೆ. ಇದರಲ್ಲಿ ಅತಿ ಹೆಚ್ಚು ನಡೆದಿರುವುದು ಕಣ್ಣೂರಿನಲ್ಲಿ. ಇದುವರೆಗೆ 280ಕ್ಕೂ ಹೆಚ್ಚು ಮಂದಿ ಸಂಘಪರಿವಾರದವರು ಕೇರಳದಲ್ಲಿ ಬಲಿಯಾಗಿದ್ದಾರೆ.

ಆರೆಸ್ಸೆಸ್ಸ್ ಮುಖ್ಯಸ್ಥ ಮೋಹನ್ ಭಾಗವತ್ ಮಾತಾಡುವಾಗ ಈ ಪಿನರಾಯಿಗೆ ಯಾಕೆ ಉರಿ ಹತ್ತುತ್ತದೆಂದು ಅರ್ಥ ಮಾಡಿಕೊಳ್ಳಬಹುದು. ಕೇರಳ ಸರ್ಕಾರ
ಜಿಹಾದಿಗಳಿಗೆ ನೆಲೆಯನ್ನು ನೀಡುವ ಮೂಲಕ ಉಗ್ರವಾದಕ್ಕೆ ಬೆಂಬಲ ನೀಡುತ್ತಿದೆ ಎಂಬ ಸತ್ಯವನ್ನು ಒಪ್ಪಿಕೊಳ್ಳಿ ಎಂದು ಆರೆಸ್ಸೆಸ್ ಮುಖಕ್ಕೆ ಹೊಡೆದಂತೆ ಹೇಳುವಾಗ ಉರಿಯದೆ ಇರುತ್ತದೆಯೇ… ಇದನ್ನು ಬಿಟ್ಟು ಬೆಂಕಿಯ ಜೊತೆ ಆಟವಾಡಬೇಡಿ ಎಂದು ಆರ್‍ಎಸ್‍ಎಸ್ ಎಚ್ಚರಿಕೆ ನೀಡುತ್ತಿದೆಯೆಂದರೆ ಇಂದು ಕೇರಳದಲ್ಲಿ ಕಮ್ಯುನಿಸ್ಟ್ ಮುಳುಗುತ್ತಿರುವ ಹಡಗು ಎಂಬುವುದಂತೂ ಸತ್ಯ. ಪಿನರಾಯಿ ನೀನೇನಂದರೂ ನೀನು ಮಾಡಿದ ಮಾಪ ನಿನಗೆ ತಟ್ಟದೆ ಹೋಗುವುದಿಲ್ಲ. ಯಾಕೆಂದರೆ ನೂರಾರು ಕುಟುಂಬಗಳು ಇಂದು ನಿನ್ನಿಂದಾಗಿ ಕಣ್ಣೀರು ಹಾಕುತ್ತಿದೆ ಎನ್ನುವುದನ್ನು ಮರೆಯಬೇಡ…

-ಚೇಕಿತಾನ

Tags

Related Articles

Close