ಪ್ರಚಲಿತ

ಇನ್ಮುಂದೆ ಪಪ್ಪುವನ್ನು ಪಪ್ಪು ಅಂತ ಕರೆದ್ರೆ ಹುಷಾರ್!!! 

ರಾಹುಲ್ ಗಾಂಧಿ ಎನ್ನುವುದಕ್ಕಿಂತ ಹೆಚ್ಚಾಗಿ ಪಪ್ಪು ಎನ್ನುವ ಹೆಸರಿನಿಂದ ಇವರು ಪ್ರಸಿದ್ದಿ ಹೊಂದಿರುವುದೇ ಜಾಸ್ತಿ! ಆದರೆ ಚುನಾವಣಾ ಆಯೋಗ ಈಗ ಪಪ್ಪು ಎನ್ನುವ ಹೆಸರನ್ನು ಸೂಚಿಸದಂತೆ ತಿಳಿಸಿದೆ. ಗುಜರಾತ್ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ತನ್ನ ಜಾಹೀರಾತುಗಳಲ್ಲಿ ಪಪ್ಪು ಎಂಬ ಪದವನ್ನು ಬಳಸದಂತೆ ಚುನಾವಣಾ ಆಯೋಗ ತಿಳಿಸಿದೆ. ಚುನಾವಣೆಯಲ್ಲಿ ಬಳಸುವ ಎಲ್ಲಾ ಜಾಹೀರಾತುಗಳ ಸ್ಟ್ರಿಪ್ಟ್‍ನ್ನು ಒಂದು ತಿಂಗಳ ಮುಂಚಿತವಾಗಿಯೇ ಚುನಾವಣಾ ಆಯೋಗದ ಮಾಧ್ಯಮ ಕಮೀಟಿಗೆ ಕಳುಹಿಸಲಾಗಿತ್ತು . ಆದರೆ ಮಾಧ್ಯಮ ಕಮೀಟಿ ಪಪ್ಪು ಎಂಬ ಪದದ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದೆ. ಪಪ್ಪು ಪದದ ಬಳಕೆ ಅಗೌರವ ತೋರಿಸುತ್ತದೆ. ಹಾಗಾಗಿ ನಮ್ಮ ಜಾಹೀರಾತಿನ ಸ್ಕ್ರಿಪ್ಟ್‍ನಲ್ಲಿ ಪಪ್ಪು ಪದವನ್ನು ತೆಗೆಯುವಂತೆ ಚುನಾವಣಾ ಆಯೋಗ ತಿಳಿಸಿದೆ.

ಜಾಹೀರಾತಿನ ಸ್ಟ್ರಿಪ್ಟ್‍ನಲ್ಲಿಯ ಪಪ್ಪು ಪದವನ್ನು ತೆಗೆದು ಮತ್ತೊಮ್ಮೆ ಹಾಜರುಪಡಿಸಲು ಚುನಾವಣಾ ಆಯೋಗ ಹೇಳಿದೆ. ಸ್ಕ್ರಿಪ್ಟ್‍ನಲ್ಲಿಯ ಪಪ್ಪು ಎಂಬ ಪದ ಯಾವುದೇ ವ್ಯಕ್ತಿಗೆ ಸಂಬಂಧಿಸಿಲ್ಲ ಹಾಗೂ ಈ ಪದದ ಮೂಲಕ ಯಾವುದೇ ವ್ಯಕ್ತಿಯ ಹೆಸರನ್ನು ಹೇಳಲಾಗುತ್ತಿಲ್ಲ. ಚುನಾವಣಾ ಆಯೋಗದ ಮನವಿಯಂತೆ ಪದದ ಬಳಕೆಗೆ ಇನ್ನೊಂದು ಸಾರಿ ಚರ್ಚೆ ನಡೆಸೋಣ ಎಂದರೂ ಅದನ್ನು ಆಯೋಗ ರದ್ದುಪಡಿಸಿದೆ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ. ಪಪ್ಪು ಪದದ ಬಳಕೆ ಬಗೆಗಿನ ಬೆಳವಣಿಗೆಯ ಬಗ್ಗೆ ನನಗೆ ಯಾವುದೇ ಯಾವುದೇ ಮಾಹಿತಿ ಬಂದಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿಯನ್ನು ಪಡೆದುಕೊಳ್ಳತ್ತೇನೆ ಎಂದು ಹೇಳಿದ್ದಾರೆ.

ಅಲ್ಲಿಯವರೆಗೂ ನಾನು ಹೇಳಲಾರೆ ಎಂದು ಗುಜರಾತ್ ಚುನಾವಣಾ ಆಯೋಗದ ಮುಖ್ಯ ಆಯುಕ್ತೆ ಬೀಬೀ ಸ್ಪೈನ್ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪಪ್ಪು ಪದವನ್ನು ಬಳಸಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಟಾರ್ಗೆಟ್ ಮಾಡಿ ಲೇವಡಿ ಮಾಡುತ್ತಿದ್ದಾರೆ ಎನ್ನುವ ಮಾತು ಈಗ ಎಲ್ಲೆಡೆ ಕೇಳಿ ಬರುತ್ತಿರುವ ವಿಷಯವಾಗಿದೆ. ಇವರು ಮಾಡಿರುವ ಎಡವಟ್ಟು ಗಮನಿಸಿದಾಗ ಪಪ್ಪುವನ್ನು ಪಪ್ಪು ಎಂದು ಕರೆಯದೆ ಬೇರೇನಾದರೂ ಕರೆಯಲು ಸಾಧ್ಯವೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದೆ. ರಾಹುಲ್ ಗಾಂಧಿ ಮಾಡಿದ ಎಡವಟ್ಟು ಒಂದಾ ಎರಡಾ ಹೇಳಲು ಸಾಧ್ಯವಿಲ್ಲ ಅಷ್ಟೊಂದು ಎಡವಟ್ಟನ್ನು ಮಾಡಿಕೊಂಡು ತೇಟ್ ಪಪ್ಪು ಬುದ್ದು ತರಹ ವರ್ತಿಸುತ್ತಾರೆ. ಅದಕ್ಕಾಗಿ ಎಲ್ಲಾ ಜನರು ಇವರನ್ನು ಪಪ್ಪು ಎಂದು ನಾಮಕರಣ ಮಾಡಿದ್ದಾರೆ.

ಗುಜರಾತ್‍ನ ಪ್ರವಾಸದಲ್ಲಿದ್ದ ಸಮಯದಲ್ಲಿ ಗುಜರಾತ್ ಛೋಟಾ ಉದೆಪುರ್ ಜಿಲ್ಲೆಯಲ್ಲಿ ರಾಹುಲ್ ಮಾಡಿದ ಎಡವಟ್ಟು ಇನ್ನೂ ಅಚ್ಚಳಿಯದೆ ನೆನೆಪಿನಲ್ಲಿದೆ..ಪುರುಷರ ಶೌಚಾಲಯ ಯಾವುದು ಮಹಿಳೆಯರ ಶೌಚಾಲಯ ಯಾವುದು ಎನ್ನುವ ಸಾಮಾನ್ಯ ಜ್ಞಾನ ಕೂಡಾ ಅವರಿಗಿಲ್ಲದೆ ಮಹಿಳೆಯರ ಶೌಚಾಲಯಕ್ಕೆ ನುಗ್ಗಿರುವವರನ್ನು ಪಪ್ಪು ಎನ್ನದೇ ಅವರಿಗೆ ಬೇರೆ ಹೆಸರಿದೆಯೇ? ಆದರೆ ಅದನ್ನೇ ಮಾಧ್ಯಮದಲ್ಲಿ ಮಹಿಳೆಯರ ಶೌಚಾಲಕ್ಕೆ ನುಗ್ಗಲು ಶೌಚಾಲಯದ ಹೊರಗೆ ಗುಜರಾತಿ ಭಾಷೆಯಲ್ಲಿ ಬರೆದ ಕಾರಣ ಅವರಿಗೆ ಅರ್ತವಾಗದೆ ಒಳನುಗ್ಗಿರುವಂತಹದ್ದು ಎನ್ನುವ ಸಮರ್ಥನೆಯನ್ನೂ ಕೊಟ್ಟರು. ಆದರೆ ಭಾಷೆ ಅರ್ಥವಾಗದೆ ಇದ್ದರೇನು ಅವರಿಗೆ ಬೋರ್ಡ್ ಮೇಲೆ ಇದ್ದ ಚಿತ್ರ ಗಮನಿಸದಷ್ಟು ಸಾಮಾನ್ಯ ಜ್ಞಾನ ಅವರಿಗಿಲ್ಲವೇ?

ಇತ್ತಿಚೆಗೆ ಟ್ವಿಟರ್‍ನಲ್ಲಿ ರಾಹುಲ್ ಗಾಂಧೀ ಸಕ್ರೀಯವಾಗಿರೋದರ ಕುರಿತು ಭಾರೀ ಚರ್ಚೆಗಳು ನಡೆಯುತ್ತಿತ್ತು. ತನಗಾಗಿ ನಾಯಿ ಟ್ವೀಟ್ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಟ್ವಿಟರ್‍ನಲ್ಲಿ ಪೋಸ್ಟ್ ಹಾಕಿ ಎಡವಟ್ಟಿಗೆ ಸಿಕ್ಕಿ ಬಿದ್ದಿದ್ದರು. ರಾಹುಲ್ ಗಾಂಧಿಯ ಟ್ವಿಟರ್ ಖಾತೆಯನ್ನು ಯಾರು ನಿಭಾಯಿಸುತ್ತಾರೆ ಅನ್ನೋ ಪ್ರಶ್ನೆ ಯಾವಾಗಲೂ ಜನರಿಗೆ ಕಾಡುತ್ತಲೇ ಇರುತ್ತಿತ್ತು ಅದು ಬೇರೆ ಯಾರೂ ಅಲ್ಲ ನನ್ನ ನಾಯಿ ಪಿಡಿ ಅಂತ ರೀ ಟ್ವೀಟ್ ಮಾಡಿ ನನಗಿಂತ ನನ್ನ ನಾಯಿ ಸ್ಮಾರ್ಟ್ ಆಗಿದೆ ಎಂದಿದ್ದರು. ಹಾಗಾದರೆ ರಾಹುಲ್‍ಗಿಂತ ಅವರ ನಾಯಿ ಪಿಡಿ ಸ್ಮಾರ್ಟ್ ಇದೆ ಎಂದರೆ ನಮಗೆ ಏನು ಅರ್ಥವಾಗುತ್ತದೆ? ಈಗ ಉತ್ತರಿಸಿ ಅವರು ಪಪ್ಪು ಅಲ್ಲದೇ ಮತ್ತೆ ಏನೆಂದು ಕರೆಯಲು ಸಾಧ್ಯ ನೀವೇ ಹೇಳಿ.

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ವ್ಯಾಖ್ಯಾನವೊಂದನ್ನು ಮಾಡಿ ಈ ಪ್ರಕಾರ ಕಾಂಗ್ರೆಸ್ ಪಕ್ಷ ಹುಟ್ಟಿಕೊಂಡಿದ್ದೇ ಎನ್‍ಆರ್‍ಐ ಚಳುವಳಿಯಿಂದ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ಮೂಲ ಕಾಂಗ್ರೆಸ್‍ನ ಚಳುವಳಿ ಎನ್‍ಆರ್‍ಐ ಚಳುವಳಿಯೇ ಆಗಿತ್ತಲ್ಲದೇ ಮಹತ್ಮಾ ಗಾಂಧಿ ಅನಿವಾಸಿ ಭಾರತೀಯರಾಗಿದ್ದರು. ಜವಾಹರ್‍ಲಾಲ್ ನೆಹರು ಇಂಗ್ಲೆಂಡ್‍ನಿಂದ ಭಾರತಕ್ಕೆ ವಾಪಸ್ ಬಂದರು, ಅಂಬೇಡ್ಕರ್ ಅಜಾದ್ ಪಟೇಲ್ ಇವರೆಲ್ಲರೂ ವಿದೇಶದಿಂದ ಭಾರತಕ್ಕೆ ಸ್ವಾತಂತ್ರ್ಯ ಚಳುವಳಿಗಾಗಿ ವಾಪಸ್ ಬಂದಿದ್ದರು. ಆದ್ದರಿಂದ ಕಾಂಗ್ರೆಸ್ ಚಳುವಳಿ ಮೂಲತಃ ಎನ್‍ಆರ್‍ಐಗಳ ಚಳುವಳಿ ಎಂದು ರಾಹುಲ್ ಗಾಂಧಿ ಹೇಳಿದ್ದರು. ಇದನ್ನೆಲ್ಲಾ ನೋಡಿದಾಗ ಇವರು ಪಪ್ಪುವಲ್ಲದೆ ಬೇರೆನೆಂದು ಕರೆಯಲು ಸಾಧ್ಯ?

ಈ ಬಗ್ಗೆ ಬೇರೊಂದು ದೇಶದಲ್ಲಿ ಮರ್ಯಾದೆ ಕಳೆದುಕೊಳ್ಳುವ ಇಂತಹ ಮಂದಬುದ್ಧಿಯ ಕಾಂಗ್ರೆಸ್‍ನ ಉಪಾಧ್ಯಕ್ಷನೆಂದೆನಿಸಿರುವ ರಾಹುಲ್ ಗಾಂಧಿಗೆ ಲೋಕಸಭೆಯಲ್ಲಿ ಎಷ್ಟು ಸದಸ್ಯರಿದ್ದಾರೆ ಎನ್ನುವುದೇ ಗೊತ್ತಿಲ್ಲ!! ಯಾಕೆಂದರೆ ಈ ಹಿಂದೆ ಅಮೇರಿಕಾದ ಪ್ರತಿಷ್ಠಿತ ವಿಶ್ವವವಿದ್ಯಾನಿಲಯದಲ್ಲಿ 546 ಸದಸ್ಯರಿದ್ದಾರೆ ಎಂದು ತಪ್ಪಾಗಿ ಹೇಳುವ ಮೂಲಕ ಸುದ್ಧಿಯಲ್ಲಿದ್ದರು. ಒಬ್ಬ ಭಾರತ ಕಾಂಗ್ರೆಸ್‍ನ ಉಪಾಧ್ಯಕ್ಷನಾಗಿ ಈ ಬಗ್ಗೆಯೇ ಸರಿಯಾದ ಮಾಹಿತಿ ಇಲ್ಲ ಪಾಪ!!!

ಅದಲ್ಲದೆ ಆರ್‍ಎಸ್‍ಎಸ್‍ನಲ್ಲಿ ಪುರುಷರು ಚಡ್ಡಿ ಹಾಕುತ್ತಾರೆ ಆದರೆ ಆರ್‍ಎಸ್‍ಎಸ್‍ನಲ್ಲಿ ಮಹಿಳೆಯರು ಯಾಕೆ ಚಡ್ಡಿ ಹಾಕಲ್ಲ ಎಂಬ ಸಣ್ಣತನದ ಮಾತನ್ನಾಡಿ ವಿವಾದಕ್ಕೆ ಗುರಿಯಾಗಿದ್ದರು. ರಾಹುಲ್ ಗಾಂಧಿಯ ತಾಯಿ ಅಂದು ಇಟಲಿಯಲ್ಲಿ ಚಡ್ಡಿ ಹಾಕಿ ತಿರುಗುತ್ತಿದ್ದನ್ನು ನೋಡಿ ನೋಡಿ ಇಲ್ಲಿಯ ಹೆಣ್ಣು ಮಕ್ಕಳನ್ನೂ ಅದೇ ರೀತಿ ಮಾಡುತ್ತಾರೆ ಎಂದು ಕೊಂಡರೆ ಅದು ನಿಮ್ಮ ದಡ್ಡತನ. ಹೆಣ್ಣಿಗೆ ಯಾವ ರೀತಿ ಗೌರವ ಕೊಡಬೇಕು ಎನ್ನುವ ಸಾಮಾನ್ಯ ಜ್ಞಾನವೂ ರಾಹುಲ್ ಗಾಂಧಿಯಲ್ಲಿಲ್ಲ.

ದಯವಿಟ್ಟು ಗೂಗಲ್ ತೆರೆದು ಅದರಲ್ಲಿ ರಾಹುಲ್ ಗಾಂಧಿ ಫನ್ನಿ ಎಂದು ಬರೆಯಿರಿ. ಆಗ ಇಡೀ ಭಾರತ ರಾಹುಲ್ ಬಗ್ಗೆ ಏನು ಯೋಚಿಸುತ್ತದೆ ಎಂದು ಅದರಲ್ಲಿ ಸಿಗುತ್ತದೆ. ರಾಹುಲ್ ಗಾಂಧಿ ಆತನ ಪಕ್ಷಕ್ಕೆ ಮಾತ್ರ ಅತ್ಯಮೂಲ್ಯ ವ್ಯಕ್ತಿ . ಆದರೆ ಭಾರತಕ್ಕೇನೂ ಅಲ್ಲ. ಅವರ ಬಗ್ಗೆ ಎಲ್ಲಾ ಮಾಧ್ಯಮಗಳಲ್ಲೂ ಸುದ್ಧಿ ಪ್ರಕಟಿಸುತ್ತವೆ. ಯಾಕೆಂದರೆ ಅವರ ಹೆಸರಲ್ಲಿ ಗಾಂಧಿ ಇದೆ. ಆದರೆ ಆತನ ಕೆಲಸ, ಕೌಶಲ್ಯ ನಾಯಕತ್ವದ ಗುಣದಿಂದ ಅಲ್ಲ. ರಾಹುಲ್ ಗಾಂಧಿಗೆ ನಿಜವಾದ ಭಾರತ ಎಂದರೇನು, ನಿಜವಾದ ಭಾರತೀಯರೆಂದರೇನು ಎಂದು ಆತನಿಗೆ ಗೊತ್ತಿಲ್ಲ.. ತನ್ನ ಜೀವನ ಮತ್ತು ಕುಟುಂಬಕ್ಕಾಗಿ ಮಾತ್ರ ಜನರ ಮುಂದೆ ಹೋಗುತ್ತಾರೆ. ಅಲ್ಲದೆ ರಾಷ್ಟ್ರದ ಬಗ್ಗೆ ಯಾವ ಮಹತ್ವಾಕಾಂಕ್ಷೆಯನ್ನೂ ಹೊಂದಿಲ್ಲ. ಇವರು ದೇಶದ ಹಳೆ ಪಕ್ಷದ ದೇಶದ ಉಪಾಧ್ಯಕ್ಷನಾಗಿರುವ ಕಾರಣ ಆತನಿಗೆ ಜ್ಞಾನ ,ಕೌಶಲ್ಯ ಇರಬೇಕಿತ್ತು. ಆದರೆ ಅದ್ಯಾವೂದೂ ಇಲ್ಲ. ದೇಶವನ್ನು ಮುಂದಕ್ಕಕೆ ಕೊಂಡೊಯ್ಯುವ ಯಾವುದೇ ಕೌಶಲ್ಯವಿಲ್ಲ. ಭಾರತ ಒಂದು ಕಂಪ್ಯೂಟರ್ ಇದ್ದಂತೆ ಅದರಲ್ಲಿ ಕಾಂಗ್ರೆಸ್ ಡೀಫಾಲ್ಟ್ ಪ್ರೋಗ್ರಾಂ. ಖಂಡಿತವಾಗಿಯೂ ನೀವು ಕಂಪ್ಯೂಟರ್ ಸಿಸ್ಟಮ್ ಹಾಳು ಮಾಡುವ ಮಾಲ್ವೇರ್ ವೈರಸ್.. ಯಾಕೆಂದರೆ ವೈರಸ್ ಯಾವತ್ತೂ ಸಾಯುವುದಿಲ್ಲ ಈ ಮಾತು ನಿಜವಾಗಲೂ ಸತ್ಯ!.. ಇಂತಹ ಎಡವಟ್ಟು ಸಾಹೇಬನ್ನು ಪಪ್ಪು ಎನ್ನದೆ ಬೇರೆ ಏನು ಹೆಸರಿಡಲು ಸಾಧ್ಯ? ರಾಹುಲ್ ಗಾಂಧಿಯವರೇ ನಿಮಗೆ ಪಪ್ಪು ಹೆಸರೇ ಸೂಟ್ ಆಗುವಂತಹದ್ದು.

ಮೋದಿಯನ್ನು ನಕಲು ಮಾಡಿ ತಾನಿನ್ನೂ ಪಪ್ಪುವಲ್ಲ ಸೀನಿಯಾರಿಟಿಗೆ ಬಂದಿದ್ದೇನೆ ಎಂಬುವುದನ್ನು ಬಿಂಬಿಸಿಕೊಳ್ಳಲು ಗಡ್ಡ ಇಟ್ಟರೂ, ಹಿಂದೂ ಧರ್ಮ ವಿರೊಧಿ ಎಂಬ ಪಟ್ಟವನ್ನು ಕಳಚಿಕೊಳ್ಳಲು ದೇವಾಸ್ಥಾನಕ್ಕೆ ಹೋಗಿ ಕುಂಕುಮವನ್ನು ಹಚ್ಚಿಕೊಂಡರೂ, ಪಾಶ್ವಿಮಾತ್ಯ ದಿರಿಸುಗಳನ್ನು ತ್ಯಜಿಸಿ ಜುಬ್ಬ ಪೈಜಾಮುಗಳನ್ನು ಹಾಕಿದರೂ, ಮೈಕ್ ಹಿಡಿದು ಜನ ಸಂವಾದಕ್ಕಾಗಿ ಸಭೆಗೆ ಧಾವಿಸಿದರೂ, ಅಮೇರಿಕಾದಲ್ಲಿ ಹೋಗಿ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ಭಾಷಣ ಮಾಡಿದರೂ ಕರಾಟೆ ದಿರಿಸಿನಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಅನ್ನು ನಕಲು ಮಾಡಿ ಬ್ಲ್ಯಾಕ್‍ಬೆಲ್ಟ್ ಪಡೆದವ ಎಂದು ಫೋಸು ಕೊಟ್ಟರೂ, ಮಲ್ಲಿಕಾರ್ಜುನ ಸಹಿತ ಅನೇಕ ಕಾಂಗ್ರೆಸ್ ನಾಯರನ್ನು ಹಿಂದಿಕ್ಕಿ ಮುಂದೆ ಬಂದು ಭಾಷಣ ಮಾಡಿದರೂ, ಟ್ವಿಟರ್‍ನಲ್ಲಿ ಸಾವಿರಾರು ಮಂದಿ ನಕಲಿ ಹಿಂಬಾಲಕರನ್ನು ಸೃಷ್ಠಿ ಮಾಡಿದರೂ, ಪ್ರತಿಷ್ಠಿತ ಗಾಂಧಿ ಪರಿವಾರದ ಸಂತಾನದಲ್ಲಿ ಜನಿಸಿದರೂ ದೇಶದ ಧೀಮಂತ ವ್ಯಕ್ತಿ ಎಂದು ಅದೆಷ್ಟೋ ಬಾರಿ ಗುರುತಿಸಲ್ಪಟ್ಟರೂ ದೀಪಾಳಿಗೆ ಬಿಟ್ಟ ಟುಸ್ ಪಟಾಕಿ ತರಹ ಭಾರತ ಕಂಡ ಗುಡ್ ಜೋಕರ್ ಆಗಿ ಹೋದ್ರು ರಾಹುಲ್ ಗಾಂಧಿ….

source:http://publictv.in/bjp-will-not-be-able-to-use-the-term-pappu/

-ಪವಿತ್ರ

Tags

Related Articles

Close