ಪ್ರಚಲಿತ

ಇಲ್ಲಿ ವಾಹನಗಳು ರಸ್ತೆಯಲ್ಲಿ ಹೋಗಲ್ಲ, ನೀರಲ್ಲಿ ತೇಲುವುದಿಲ್ಲ, ಆಕಾಶದಲ್ಲಿ ಹಾರುವುದೂ ಇಲ್ಲ..! ಪರಿಕಲ್ಪನೆಗೂ ಮೀರಿದ ಸಂಚಾರ ವ್ಯವಸ್ಥೆಗೆ ಮೋದಿ ನಾಂದಿ ಹಾಡಿದ್ದು ಹೇಗೆ ಗೊತ್ತಾ?!

ದೇಶದ ಮೊಟ್ಟ ಮೊದಲ ಬುಲೆಟ್ ಟ್ರೈನ್ ಯೋಜನೆಗೆ ಚಾಲನೆ ನೀಡಿದ್ದಾಯ್ತು. ಜಗತ್ತಿನ ಅತೀ ಎತ್ತರದ ಸೇತುವೆಗೂ ಚಾಲನೆ ನೀಡಿದ್ದಾಯ್ತು ಅದಲ್ಲದೆ ದೇಶದ ಬಹುಮಹತ್ವಾಕಾಂಕ್ಷೆಯ ಬಹು ನಿರೀಕ್ಷಿತ ರೋರೋ ಸಮುದ್ರಯಾನ ಸೇವೆ ಕೂಡಾ ಆರಂಭಿಸಿದ್ದಾಯ್ತು…ಇದೀಗ ಭಾರತದಲ್ಲಿ ಮೊದಲ ಬಾರಿಗೆ ಪಾಡ್ ಟ್ಯಾಕ್ಸಿ ಎಂಬ ಹೊಸ ಯೋಜನೆಯೊಂದನ್ನು ಆರಂಭಿಸಲಾಗಿದ್ದು, ಈ ಯೋಜನೆಯನ್ನು ಆಧುನಿಕ ತಂತ್ರಜ್ಞಾನದಿಂದ ನಿರ್ಮಾಣ ಮಾಡಲಾಗಿದೆ!!! ಈ ಯೋಜನೆಯು ಮೋದಿಯವರ ಕನಸಿನ ಯೋಜನೆಯಾಗಿದೆ.!!
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಭಾರತದ ಮೊದಲ ಪಾಡ್ ಟ್ಯಾಕ್ಸಿಯನ್ನು ಅನಾವರಣಗೊಳಿಸಿದೆ. !! ಇದು ಭಾರತದ ಮೊದಲ ಪಾಡ್ ಟ್ಯಾಕ್ಸಿಯಾಗಿದೆ.!! ಈ ಯೋಜನೆಗೆ ಮುಂದಿನ ತ್ರೈಮಾಸಿಕ ಅವಧಿಯಲ್ಲಿ ಜಾಗತಿಕ ಬಿಡ್ ಕರೆಯಲಾಗುವುದು.. ಈ ವ್ಯವಸ್ಥೆಯನ್ನು 4,000 ರೂ. ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಮೆಟ್ರಿನೋ ಎಂದು ಹೆಸರಿಸಲಾಗಿರುವ ಯೋಜನೆಯಲ್ಲಿ ಯೋಜನೆಯಲ್ಲಿ ಕಂಬದ ಆಧಾರದಲ್ಲಿ ನಿಂತ ಕಬ್ಬಿಣದ ಕಂಬಿಗಳ ಮೇಲೆ ಪಾಡ್‍ಗಳು ನೇತಾಡುತ್ತಾ ಚಲಿಸುತ್ತವೆ. ಪ್ರತೀ ಪಾಡ್‍ಗಳಲಿಳೀವರು ಪ್ರಯಾಣಿಕರನ್ನು ಕರೆದೊಯ್ಯಬಹುದು. ಪ್ರಾಯೋಗಿಕ ದಾರಿಗೆ ಆಂಬಿಯನ್ಸ್ ಮಾಲ್‍ನಿಂದ ಆರಂಭಿಸಿ 16 ನಿಲ್ದಾಣಗಳನ್ನು ಯೋಜಿಸಲಾಗಿದೆ.

ಸಣ್ಣ ಸ್ವಯಂಚಾಲಿತ ವಾಹನಗಳು ಒಂದರ ಹಿಂದೆ ಮತ್ತೊಂದರಂತೆ ಚಲಿಸುತ್ತಾ ನಿಲ್ದಾಣದಿಂದ ಪ್ರಯಾಣಿಕರನ್ನು ಹತ್ತಿಸುವುದು ಇಳಿಸುವುದು ಮಾಡುತ್ತದೆ..ಈವರೇ ಒಂದು ಪಾಡ್‍ನಲ್ಲಿ ಚಲಿಸಬೇಕು ಎಂದೇನಿಲ್ಲ.. ಸಂಪೂರ್ಣ ಪಾಡನ್ನೇ ಬಾಡಿಗೆಗೆ ಪಡೆದುಕೊಂಡು ಹೋಗಬಹುದು. ಅಂತಹ ಪಾಡ್ ಪ್ರಯಾಣಿಕರನ್ನು ನೇರವಾಗಿ ಗುರಿಯ ಕಡೆಗೆ ಕರೆದೊಯ್ಯತ್ತದೆ. ಪ್ರತೀ ಪಾಡ್‍ನ ಸರಾಸರಿ ವೇಗ ಗಂಟೆಗೆ 60 ಕಿಲೋ ಮೀಟರ್ ಸಾಗುವ ಸಾಮಧ್ರ್ಯವನ್ನು ಹೊಂದಿರುತ್ತದೆ..ಈ ಯೋಜನೆಯನ್ನು ಆದಷ್ಟು ಬೇಗ ಜಾರಿಗೊಳಿಸಲಾಗುವುದು ಎಂದು ನಿತಿನ್ ಗಡ್ಕರಿಯವರು ಹೇಳಿದ್ದಾರೆ.

Image result for pod taxi

ಬೆಂಗಳೂರಲ್ಲಿ ಇನ್ನುಮುಂದೆ ಕಾರುಗಳು ಪ್ರತ್ಯೇಕ ಮೇಲ್ಸೇತುವೆ ಮೇಲೆ ಸಂಚರಿಸಲಿವೆ. ರಸ್ತೆ ಗುಂಡಿ, ಸಂಚಾರ ದಟ್ಟಣೆ ಸಮಸ್ಯೆಯಿಲ್ಲದೆ ಜನ ಸಂಚರಿಸಬಹುದು. ಏಕೆಂದರೆ, ಬೆಂಗಳೂರಿನ 6 ಮಾರ್ಗಗಳಲ್ಲಿ ಪಾಡ್ ಟ್ಯಾಕ್ಸಿ (ಕೇಬಲ್ ಕಾರ್) ಯೋಜನೆ ಜಾರಿಗೆ ತರಲು ನಿರ್ಧರಿಸಿದೆ.

ಸಂಚಾರದಟ್ಟಣೆ ಮತ್ತು ವಾಯುಮಾಲಿನ್ಯ ಕಡಿಮೆ ಮಾಡಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದಕ್ಕೆ ಹೊಸ ಸೇರ್ಪಡೆ ಎನ್ನುವಂತೆ ಪಾಡ್ ಟ್ಯಾಕ್ಸಿಯನ್ನು ಬೆಂಗಳೂರಿನಲ್ಲಿ ಆರಂಭಿಸಲು ಹಲವು ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಖಾಸಗಿ ಸಂಸ್ಥೆಗಳು ನೀಡಿರುವ ಸಮಗ್ರ ಯೋಜನಾ ವರದಿ (ಡಿಪಿಆರ್) ಅಧ್ಯಯನ ನಡೆಸಲಾಗುತ್ತಿದೆ.

ಪಾಡ್ ಟ್ಯಾಕ್ಸಿಯನ್ನು ಪ್ರಮುಖವಾಗಿ ಮೆಟ್ರೋ ಫೀಡರ್ ಸೇವೆಯನ್ನಾಗಿ ಆರಂಭಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿಯೇ, ಪ್ರಮುಖ ಮೆಟ್ರೋ ನಿಲ್ದಾಣಗಳನ್ನು ಸಂರ್ಪಕಿಸುವ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅದಕ್ಕೆ ತಕ್ಕಂತೆ ಸಿಂಗಾಪುರ ಮೂಲದ ಅಲ್ಟ್ರಾ ಫೈರ್‍ವುಡ್ ಗ್ರೀನ್ ಟ್ರಾನ್ಸ್‍ಪೆÇೀರ್ಟ್ ಲಿ., ಅಮೆರಿಕದ ಜೆಪಾಡ್ಸ್ ಇನ್ಕ ಮತ್ತು ಸ್ಕೈಟ್ರಾನ್ ಏಷ್ಯಾ ಎಂಬ ಮೂರು ಸಂಸ್ಥೆಗಳು ಡಿಪಿಆರ್ ಸಿದ್ಧಪಡಿಸಿ ಸಲ್ಲಿಸಿವೆ.

Related image

ಮೂರು ಸಂಸ್ಥೆಗಳು ಸಲ್ಲಿಸಿರುವ ಡಿಪಿಆರ್ ಅಧ್ಯಯನ ನಡೆಸಲು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‍ಸಿ) ವಿಜ್ಞಾನಿಗಳ ನೆರವು ಪಡೆಯಲಾಗುತ್ತಿದೆ. ಡಿಪಿಆರ್‍ಗಳಲ್ಲಿ ಯಾವುದು ಸೂಕ್ತ ಎಂಬುದನ್ನು ಐಐಎಸ್‍ಸಿ ವಿಜ್ಞಾನಿಗಳು ನಿರ್ಧರಿಸುತ್ತಾರೆ .

ಟ್ಯಾಕ್ಸಿ ಹೇಗೆ ಕೆಲಸ ಮಾಡಲಿದೆ?

ಪಾಡ್‍ಟ್ಯಾಕ್ಸಿ ಚಿಕ್ಕ ಆಟೋಮ್ಯಾಟಿಕ್ ಕಾರ್ ಆಗಿದ್ದು, ಗರಿಷ್ಠ 5 ರಿಂದ 6 ಪ್ರಯಾಣಿಕರನ್ನು ಒಯ್ಯುವ ಸಾಮಥ್ರ್ಯ ಹೊಂದಿರಲಿದೆ. ಮೆಟ್ರೋ ರೈಲು ಮಾದರಿಯಲ್ಲಿ ಎಲಿವೇಟೆಡ್ ಮಾರ್ಗದಲ್ಲಿ ಹಳಿ ಅಥವಾ ಕೇಬಲ್‍ಗಳ ಮೂಲಕ ಸಂಚರಿಸಲಿದೆ. ಟ್ಯಾಕ್ಸಿಗೆ ಪ್ರಯಾಣಿಕರು ಹತ್ತಲು ಮತ್ತು ಇಳಿಯಲು ಪ್ರತ್ಯೇಕ ನಿಲ್ದಾಣವನ್ನು ನಿರ್ಮಿಸಬೇಕಿದೆ.

Image result for pod taxi
ಕೇಬಲ್ ಕಾರುಗಳನ್ನು ಪ್ರವಾಸೋದ್ಯಮ ಮತ್ತು ನಗರ ಸಾರಿಗೆ ವ್ಯವಸ್ಥೆಯಲ್ಲಿ ಬಳಸಲಾಗುತ್ತದೆ. ಪೆÇೀಮಾ ಸಂಸ್ಥೆ ಈಗಾಗಲೆ ಅಮೆರಿಕ, ಫ್ರಾನ್ಸ್, ಕೊಲಂಬಿಯಾ, ರಷ್ಯಾ, ಈಜಿಪ್ತ್ ಸೇರಿ 10ಕ್ಕೂ ಹೆಚ್ಚು ದೇಶಗಳಲ್ಲಿ ಪಾಡ್‍ಟ್ಯಾಕ್ಸಿಯನ್ನು ಅಳವಡಿಕೆ ಮಾಡಿದೆ.

ಪಾಡ್‍ಟ್ಯಾಕ್ಸಿ ವಂಡರ್‍ಲಾನಲ್ಲಿ ಸಾಮಾನ್ಯವಾಗಿ ಕಂಡುಬರುವ ಡ್ಯಾಷಿಂಗ್ ಕಾರುಗಳಂತೆಯೇ ಇರುವ ಈ ಪಾಡ್ ಟ್ಯಾಕ್ಸಿಗಳು ಮ್ಯಾಗ್ನೆಟಿಕ್ ವ್ಹೀಲ್ ಮೂಲಕ ಕಾರ್ಯಾಚರಣೆ ಮಾಡುತ್ತವೆ. ಇವುಗಳ ಉದ್ದ 4 ಮೀ. ಇರುತ್ತದೆ. ಮಾರ್ಗದಲ್ಲಿ ಪ್ರತಿ 10 ಮೀಟರ್ ಅಂತರದಲ್ಲಿ ಒಂದರಂತೆ ಕಾರ್ಯಾಚರಣೆ ಮಾಡುತ್ತದೆ.

ಪ್ರಯಾಣ ದರ ಕಡಿಮೆ! ಆಟೋ, ಆಪ್ ಆಧಾರಿತ ಟ್ಯಾಕ್ಸಿಗಳಿಗೆ ಹೋಲಿಸಿದರೆ, ಪಿಆರ್‍ಟಿಎಸ್ ಟ್ಯಾಕ್ಸಿಗಳ ದರ ಅರ್ಧಕ್ಕರ್ಧ ಕಡಿಮೆ ಎನ್ನಲಾಗಿದೆ. ಆಟೋ ಪ್ರತಿ ಕಿ.ಮೀ.ಗೆ 20 ರೂ. ಆಗುತ್ತದೆ. ಟ್ಯಾಕ್ಸಿಗಳಲ್ಲಿ ಕಿ.ಮೀಗೆ 18 ರೂ. ಆಗುತ್ತದೆ. ಆದರೆ, ಪಾಡ್ ಟ್ಯಾಕ್ಸಿ ಪ್ರಯಾಣ ದರ ಕಿ.ಮೀಗೆ 9ರಿಂದ 10 ರೂ. ಇರಲಿದೆ ಎಂದು ಅಂದಾಜಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಸರಕಾರವು ದೇಶದ ಅಭಿವೃದ್ಧಿಗಾಗಿ ಅತ್ಯಂತ ವೇಗದಲ್ಲಿ ಕೆಲಸ ಮಾಡುತ್ತಿದೆ.. ಭಾರತವನ್ನು ಅಭಿವೃದ್ಧಿಯ ಕಡೆಗೆ ನಡೆಸುವುದೇ ಮೋದಿಜೀಯವರ ಮೊದಲ ಕನಸು!!…ಭಾರತ ಬೃಹತ್ ಕ್ರಾಂತಿಯ ಅಂಚಿನಲ್ಲಿದೆ ಎಂದು ಹೇಳಬಹುದು….ನಾವು ಒಬ್ಬ ಪ್ರದಾನಿಯನ್ನು ಆಯ್ಕೆ ಮಾಡಬೇಕಂದರೆ ಇಂತಹ ಪ್ರಧಾನಿಯನ್ನು ಆಯ್ಕೆ ಮಾಡಬೇಕು..

-ಪವಿತ್ರ

Tags

Related Articles

Close